Ultimate magazine theme for WordPress.

ಶಂಕರ್ ನಾಗ್ ಅವರ ಆ ಕರಾಳ ರಾತ್ರಿ ಹೇಗಿತ್ತು ಗೊತ್ತೆ

0 4

ಅನೇಕ ಸಿನಿಮಾಗಳಲ್ಲಿ ನಟಿಸಿ ಜನರ ಮನಸನ್ನು ಗೆದ್ದ ಶಂಕರ್ ನಾಗ್ ಅವರು ಸಣ್ಣ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ವೇಗದ ನಟ ವೇಗದ ಪ್ರಯಾಣದಲ್ಲಿ ಮರಣ ಹೊಂದಿದ ದುರ್ಘಟನೆಯನ್ನು ಸಂಪೂರ್ಣವಾಗಿ ಈ ಲೇಖನದ ಮೂಲಕ ತಿಳಿಯೋಣ.

ಶಂಕರ್ ನಾಗ್ ಅವರು ನವೆಂಬರ್ 9, 1954 ರಂದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಸದಾನಂದ ನಾಗರಕಟ್ಟೆ. ಶಂಕರ್ ಅವರನ್ನು ಚಿಕ್ಕವಯಸ್ಸಿನಲ್ಲಿ ಅವರ ತಂದೆ ಪ್ರೀತಿಯಿಂದ ಭವಾನಿ ಶಂಕರ್ ಎಂದು ಕರೆಯುತ್ತಿದ್ದರು.

ಶಂಕರ್ ನಾಗ್ ಅವರ ವಿದ್ಯಾಭ್ಯಾಸದ ನಂತರ ಮುಂಬೈಗೆ ಹೋಗುತ್ತಾರೆ ಅಲ್ಲಿ ಮರಾಠಿ ನಾಟಕಗಳಲ್ಲಿ ಅಭಿನಯ ಮಾಡುತ್ತಿರುತ್ತಾರೆ. ನಂತರ ಗಿರೀಶ್ ಕಾರ್ನಾಡ್ ಅವರು ಒಂದಾನೊಂದು ಕಾಲದಲ್ಲಿ ಸಿನಿಮಾದಲ್ಲಿ ಅಭಿನಯಿಸಲು ಶಂಕರ್ ಅವರಿಗೆ ಅವಕಾಶ ಕೊಡುತ್ತಾರೆ. ನಂತರ ಕನ್ನಡದಲ್ಲಿ ಸುಮಾರು 90 ಚಿತ್ರಗಳಲ್ಲಿ ನಟಿಸುತ್ತಾರೆ. ಅವರು ನಿರ್ಮಾಪಕರಾಗಿಯೂ, ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

ಸೆಪ್ಟೆಂಬರ್ 30, 1990ರಂದು ಬಿಜಾಪುರ ಜಿಲ್ಲೆಯ ಲೋಕಾಪುರದಲ್ಲಿ ಚಂದ್ರಶೇಖರ್ ಕಂಬಾರ್ ಅವರ ರಚಿತ ಜೋಕುಮಾರಸ್ವಾಮಿ ಚಿತ್ರದ ಮುಹೂರ್ತಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದ್ದವು. ಗಿರೀಶ್ ಕಾರ್ನಾಡ್ ಚಿತ್ರದ ನಿರ್ದೇಶಕರಾಗಿದ್ದರು. ಈ ಸಿನಿಮಾದ ಹೀರೊ ಶಂಕರ್ ನಾಗ್. ಲೋಕಾಪುರದಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ಶಂಕರ್ ನಾಗ್ ಅವರು ಸೆಪ್ಟೆಂಬರ್ 29ರಂದು ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಬೇಗೂರು ಸಮೀಪವಿರುವ ತಮ್ಮ ಫಾರ್ಮ್ ಹೌಸ್ ನಿಂದ 8 ಗಂಟೆಗೆ ಅಂಬಾಸಿಡರ್ ಕಾರಿನಲ್ಲಿ ತನ್ನ ಪ್ರೀತಿಯ ಹಾಗೂ ಹಿರಿಯ ಡ್ರೈವರ್ ದಾಸ್ ಜೊತೆ ಲೋಕಾಪುರಕ್ಕೆ ತೆರಳಬೇಕೆಂಬ ಪ್ಲಾನ್ ಮಾಡಿದ್ದರು. ಬೆಳಗ್ಗೆ 8ಗಂಟೆಗೆ ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಸಂಕೇತ ಸ್ಟುಡಿಯೋದಿಂದ ಫೋನ್ ಬರುತ್ತದೆ. ಶಂಕರ್ ನಾಗ್ ಅವರು ಲೋಕಾಪುರಕ್ಕೆ ಹೋಗುವ ಬದಲು ಸ್ಟುಡಿಯೋಕ್ಕೆ ಹೋಗುತ್ತಾರೆ ನಂತರ ಲೋಕಾಪುರಕ್ಕೆ ಹೋಗುವ ಪ್ಲಾನ್ ಮಾಡುತ್ತಾರೆ ಆದರೆ ಸ್ಟುಡಿಯೋದಲ್ಲಿ ಕೆಲಸದ ನಿಮಿತ್ತ ಬಹಳಹೊತ್ತು ಕಳೆಯುವಂತಾಯಿತು.

ಸ್ಟುಡಿಯೋಕ್ಕೆ ಅನಂತನಾಗ್ ಅವರು ಕೂಡ ಬರುತ್ತಾರೆ, ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ ಆಗ ಅವರು ಲೋಕಾಪುರಕ್ಕೆ ಹೋಗುವ ವಿಷಯವನ್ನು ದಾಸ್ ಅವರು ನೆನಪಿಸಿದಾಗ ಶಂಕರ್ ನಾಗ್ ಅವರು ಅಂಬಾಸಿಡರ್ ಕಾರಿನಲ್ಲಿ ಅವರ ಜೊತೆ ಜೋಕುಮಾರ ಸಿನಿಮಾದಲ್ಲಿ ನಟಿಸುತ್ತಿರುವ ರಮೇಶ್ ಭಟ್ ಇನ್ನಿತರ ಕಲಾವಿದರನ್ನು ಮೊದಲು ಕಳುಹಿಸುತ್ತಾರೆ.

ಆಗ ಶಂಕರನಾಗ್ ಅವರು ಲೋಕಾಪುರಕ್ಕೆ ಹೊಸ ಕಾರಿನಲ್ಲಿ ಹೊಸ ಡ್ರೈವರ್ ಲಿಂಗಣ್ಣ ಅವರೊಂದಿಗೆ ಹೋಗಬೇಕಾಗುತ್ತದೆ. ಆವತ್ತು ರಾತ್ರಿ 8 ಗಂಟೆ ನಂತರ ಹೊಸ ಕಾರಿನಲ್ಲಿ ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್, ಮಗಳು ಕಾವ್ಯ ಮತ್ತು ಡ್ರೈವರ್ ಲಿಂಗಣ್ಣ ಲೋಕಾಪುರಕ್ಕೆ ಬೆಂಗಳೂರಿನಿಂದ ಪ್ರಯಾಣ ಬೆಳೆಸುತ್ತಾರೆ. ಬೆಳಗ್ಗೆ 5-30ಕ್ಕೆ ದಾವಣಗೆರೆ ರಸ್ತೆಯ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಿಂಚಿನ ಓಟದಲ್ಲಿ ಡ್ರೈವರ್ ಕಾರನ್ನು ಓಡಿಸುತ್ತಾರೆ.

ಬೆಳಗಿನ ಸಮಯದಲ್ಲಿ ಕಾರನ್ನು ಓಡಿಸುವುದು ಡ್ರೈವರ್ ಗೆ ಕಷ್ಟವಾಗುತ್ತದೆ. ಲಿಂಗಣ್ಣ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಕಾರು ಲಾರಿಗೆ ಡಿಕ್ಕಿ ಹೊಡೆದಿತ್ತು, ಡಿಕ್ಕಿ ಹೊಡೆದ ಸದ್ದು ಅಕ್ಕ ಪಕ್ಕದ ಗ್ರಾಮಗಳಿಗೆ ಕೇಳಿಸಿತು. ಆನುಗೊಡು ಗ್ರಾಮದ ಜನರು ಆಕ್ಸಿಡೆಂಟ್ ನಡೆದ ಸ್ಥಳಕ್ಕೆ ಧಾವಿಸಿದರು.

ಕಾರಿನಲ್ಲಿದ್ದ ಶಂಕರ್ ನಾಗ್ ಹಾಗೂ ಲಿಂಗಣ್ಣ ಸಾವನಪ್ಪಿದ್ದರು ಅರುಂಧತಿ ನಾಗ್ ಹಾಗೂ ಮಗಳು ಕಾವ್ಯ ಉಸಿರಾಡುತ್ತಿದ್ದರು ಅರುಂಧತಿ ಅವರು ಶಂಕರ್ ಶಂಕರ್ ಎಂದು ಕನವರಿಸುತ್ತಿದ್ದರು ಜನರಿಗೆ ಶಂಕರ್ ಎಂದರೆ ಯಾರು ಎಂದು ಗೊತ್ತಾಗುವುದಿಲ್ಲ ಆಗ ಅರುಂಧತಿ ನಾಗ್ ಅವರು ತಾನು ಯಾರು ಹಾಗೂ ಶಂಕರ್ ನಾಗ್ ಅವರು ಆಕ್ಸಿಡೆಂಟ್ ನಲ್ಲಿ ಮರಣ ಹೊಂದಿದ್ದಾರೆ ಎಂದು ಹೇಳಿ ಅಳುತ್ತಾರೆ. ಅರುಂಧತಿ ಹಾಗೂ ಕಾವ್ಯ ಅವರನ್ನು ದಾವಣಗೆರೆಯ ಆಸ್ಪತ್ರೆಗೆ ದಾಖಲಿಸುತ್ತಾರೆ. ಶಂಕರ್ ನಾಗ್ ಅವರಿಗೆ ಸಂಕೇತ್ ಸ್ಟುಡಿಯೋದಿಂದ ಫೋನ್ ಬರದೆ ಇದ್ದರೆ ಅವರು ಉಳಿಯುತ್ತಿದ್ದರು ಎಂಬುದು ಹಲವರ ಅಭಿಪ್ರಾಯ.

Leave A Reply

Your email address will not be published.