Ultimate magazine theme for WordPress.

ನಟಿ ಉಮಾಶ್ರೀ ಬದುಕಿನ ಒಂದು ರೋಚಕ ಕಥೆ ನಿಮ್ಮ ಮುಂದೆ

0 13

ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ. ರಂಗಭೂಮಿಯ ತಾಜಾ ಪ್ರತಿಭೆಯಾದುದರಿಂದ, ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಕನ್ನಡ ಚಲನಚಿತ್ರಾಸಕ್ತರ ಒಕ್ಕೊರಲಿನ ಅಭಿಪ್ರಾಯವಾಗಿದೆ ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಆಕೆ ತನ್ನ ಕಂಗಳಲ್ಲೇ ತುಂಬಿ ಕೊಡುವ ನಟನೆಯ ಪೂರ್ಣತ್ವ ಅಪ್ರತಿಮವಾದದ್ದು ಉಮಾಶ್ರೀ ಅವರ ಬದುಕು ಒಂದು ರೋಚಕವಾದ ಕಥೆಯಾಗಿದೆ ಈ ಲೇಖನದ ಮೂಲಕ ಉಮಾಶ್ರೀ ಅವರ ಬದುಕಿನ ಕಥೆಯನ್ನುತಿಳಿಯೋಣ.

ಈ ಇವರು 350ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಅಷ್ಟೇ ಅಲ್ಲದೇ ಮೂವತ್ತೊಂದು ವರ್ಷಗಳ ಕಾಲ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ ಮತ್ತು ಆರು ರಾಜ್ಯಪ್ರಶಸ್ತಿ ವಿಜೇತ ರಾಗಿದ್ದಾರೆ ಅವರು ಸಿನೆಮಾ ಕ್ಷೇತ್ರದಲ್ಲಿ ಬಹು ದೊಡ್ಡ ಸಾಧನೆ ಮಾಡಿದ್ದಾರೆ ಆದರೆ ಅವರ ಬದುಕು ಚಿಂತಾಜನಕವಾಗಿತ್ತು ಇವರು ಜನಿಸಿದ್ದು 1957 ತುಮಕೂರಿನ ನೋಣವಿನ ಕೆರೆ ಎoಬಲ್ಲಿ ಜನಿಸಿದರು ಅವರಿಗೆ ಎರಡು ವರ್ಷ ವಿದ್ದಾಗ ಅಪ್ಪಾ ಅಮ್ಮ ಇಬ್ಬರೂ ಮರಣ ಹೊಂದುತ್ತಾರೆ ಅಷ್ಟು ಚಿಕ್ಕ ವಯಸ್ಸಿನಲ್ಲಿಯೆ ಅನಾಥರಾಗುತ್ತರೆ

ಆದರೆ ಅವರ ದೊಡ್ಡಮ್ಮ ಅವರನ್ನು ಬೆಂಗಳೂರಿಗೆ ಕರೆದು ಕೊಂಡು ಹೋಗುತ್ತಾರೆ ಅಲ್ಲಿ ಅವರನ್ನು ಚೆನ್ನಾಗಿ ಸಾಕುತ್ತಾರೆ ಅವರು ಮಹಾರಾಣಿ ಕಾಲೇಜಿನಲ್ಲಿ ಕಲಾ ವಿಭಾಗಕ್ಕೆ ಸೇರುತ್ತದೆ ಹಾಗೆ ಒಬ್ಬರನ್ನು ಪ್ರೀತಿಸುತ್ತಾರೆ ಅದು ಒಂದು ದಿನ ದೊಡ್ಡಮ್ಮ ದೊಡ್ಡಪ್ಪ ನಿಗೆ ಗೊತ್ತಾಗುತ್ತದೆ ಹಾಗೆ ಅವರು ಮಗಳು ಪ್ರೀತಿಸದ ಹುಡುಗನ ಜೊತೆವಿವಾಹ ಮಾಡಿಕೊಡುತ್ತಾರೆ ಇದು ಅವರ ಬದುಕಿನ ದುರಂತವಾಗಿದೆ ಹಾಗೆ ಮದುವೆ ಆಗಿ ಗಂಡನ ಮನೆಗೆ ಹೋಗುತ್ತಾರೆ ಅಲ್ಲಿ ಕೂಡು ಕುಟುಂಬವಾಗಿರುತ್ತದೆ ಆತನ ದುಡಿಮೆ ಏನು ಎಂಬುದೇ ಉಮಾಶ್ರೀ ಅವರಿಗೆ ಗೊತ್ತಿರುವುದಿಲ್ಲ

ಮದುವೆಯ ಹೊಸತರಲ್ಲಿ ಎಲ್ಲವೂ ಚೆನ್ನಾಗಿ ಇತ್ತು ನಂತರ ಅವರ ಗಂಡ ಕುಡಿತದ ಚಟ ಹೆಚ್ಚಾಗಿ ಬರುತ್ತ ಬರುತ್ತ ಉಮಾಶ್ರೀಯವರಿಗೆ ಟೋರ್ಚರ ಕೊಡುತ್ತಾನೆ ಹಾಗೂ ಅವರ ಮನೆಯಲೆಲ್ಲರಿಗು ಅಡುಗೆ ಮಾಡುವುದು ಉಮಾಶ್ರೀ ಅವರ ಕೆಲಸವಾಗುತ್ತದೆ ಹಾಗೂ ಮನೆ ಕಡೆ ಗಮನ ಹರಿಸದೇ ಇರುವ ಗಂಡ ಹಾಗೂಮನೆ ಕೆಲಸ ಎಷ್ಟೋ ದಿನ ಉಪವಾಸದಲ್ಲಿ ಇದ್ದರು ಹಾಗೂ ಅದರ ನಡುವೆ ಅವರಿಗೊಂದು ಮಗಳು ಜನಿಸುತ್ತಾರೆ ಬಹಳ ಸಂಕಷ್ಟದಲ್ಲಿ ದಿನವನ್ನು ದುಡಿದರು.

ಒಂದು ದಿನ ಉಮಾಶ್ರೀ ಅವರು ತಾಯಿಗೆ ಆರಾಮಿಲ್ಲದ ಕಾರಣ ತವರು ಮನೆಗೆ ಹೋಗುವ ಪ್ರಸಂಗ ಬಂದಾಗ ಅವರ ಗಂಡ ಹೋಗುವುದಕ್ಕೆ ವಿರೋಧ ವ್ಯಕಪಡಿಸುತ್ತಾರೆ ಆಗ ಉಮಾಶ್ರೀ ಅವರು ಹೇಳ್ದೆ ಕೇಳದೆ ತವರು ಮನೆಗೆ ಹೋಗುತ್ತಾರೆ ಆಗ ಅವರಿಬ್ಬರ ನಡುವೆ ಒಂದು ಬಿರುಕು ಕಾಣಿಸುತ್ತದೆ ಸ್ವಲ್ಪ ದಿನದ ನಂತರ ಗಂಡನ ಮನೆಗೆ ಬಂದಾಗ ಗಂಡನ ಮನೆಯಲ್ಲಿ ಸೇರಿಸುವುದಿಲ್ಲ ಹೇಗೋ ಗಂಡನ ಮನವೊಲಿಸಿ ಬೇರೆ ಕಡೆ ರೂಮ್ ಮಾಡುತ್ತಾರೆ ಆವಾಗ ಗಂಡ ಕುಡಿತ ಹೆಚ್ಚಾಗುತ್ತಿದ್ದು ಅವರಿಗೆ ದಿನೇ ದಿನೇ ಟಾರ್ಚರ್ ಹೆಚ್ಚಾಗುತ್ತದೆ ಆಗ ಅವರಿಗೆ ಹದಿನೆಂಟು ವರ್ಷ ಆದರೆ ಅವರಿಗೆ ಕಷ್ಟ ದ ಮೇಲೆ ಕಷ್ಟ ಪಡಬೇಕಾಗುತ್ತದೆ

ಅದೆನೆದರೆ ಅವರ ಗಂಡ ಬೇರೆ ಮದುವೆಯಾಗುತ್ತಾರೆ ಅವರಿಗೆ ಗಂಡನ ಜೊತೆ ಅವರ ಹೆಂಡತಿಯನ್ನು ನೋಡಿಕೊಳ್ಳುವ ಪರಿಸ್ಥಿತಿ ಬರುತ್ತದೆ ಮತ್ತೆ ಉಮಾಶ್ರೀ ಅವರು ಬಸುರಿಯಾಗುತ್ತಾರೆ ಆದರೆ ಅವರ ಗಂಡನು ನಿರ್ಲಕ್ಷ ಮಾಡುತ್ತಾರೆ ಜಗಳ ಮಾಡಿ ಮನೆಯಿಂದ ಹೊರಗೆ ಹಾಕುತ್ತಾನೆ ಗಂಡ ಮಾತ್ರ ತಾಯಿ ಮನೆಗೆ ಬರುತ್ತಾರೆ ಹಾಗೆ ಅವರಿಗೆ ಸುತಮುತ್ತಲಿನ ಜನರ ಗಂಡನ ಬಿಟ್ಟು ಬಂದವಳು ಎಂಬ ಚುಚ್ಚು ಮಾತುಗಳಿಂದ ನೊಂದುಕೊಳ್ಳುತ್ತಾರೆ

ಒಂದು ದಿನ ಉಮಾಶ್ರೀ ಅವರು ಇಡ್ಲಿ ಬಿಸ್ನೆಸ್ ಮಾಡಲು ಪ್ರಾರಂಭ ಮಾಡಿದರು ಹಾಗೊ ಹಿಗೋ ಸ್ವಲ್ಪ ದುಡ್ಡು ಮಾಡಿಕೊಂಡು ಮತ್ತೆ ಸ್ವಂತ ಉರಿಗೆ ಹೋಗುತ್ತಾರೆ ಅಲ್ಲಿ ಅಕ್ಕನಮನೆ ಇರುತ್ತದೆ ಅಲ್ಲಿ ನಾಟಕವನ್ನು ಮಾಡಿ ಸ್ವಲ್ಪ ದುಡ್ಡು ಸಂಪಾದಿಸುತ್ತಾರೆ ಆದರೆ ಅವರಿಗೆ ಮತೊಂದೂ ಮಗು ವಾಗುತ್ತದೆ ಆಗ ಮಗುವನ್ನು ಕರೆದುಕೊಂಡು ಊರು ಕೇರಿ ತಿರುಗುತ್ತಾರೆ ಅಲ್ಲಿನಾಟಕ ಕಿರುನಾಟಕ ಹೀಗೆ ಮಾಡಿ ಸ್ವಲ್ಪ ಹಣ ಸಂಪಾದನೆ ಮಾಡುತ್ತಾರೆ

ನಂತರ ಈ ನಾಟಕವೇ ಅವರಿಗೆ ಒಂದು ಲೈಫ್ ಅನ್ನು ಕೊಡುತ್ತದೆ ನಂತರ ಸಿನಿಮಾ ಗಳಲ್ಲಿ ಅಭಿನಯಿಸುವ ಅವಕಾಶ ದೊರಕುತ್ತದೆ ಬಂಗಾರದ ಜಿಂಕೆ ಎಂಬ ಸಣ್ಣ ಅವಕಾಶ ದೊರಕುತ್ತದೆ ನಂತರ ಬಂದ ಅನುಭವ ಸಿನಿಮಾ ಬದುಕನ್ನೇ ಬದಲಿಸುತ್ತದೆ ಆದರೂ ಸಹ ಜನರು ಕೆಟ್ಟದಾಗಿ ಮಾತಾಡಲು ಪ್ರಾರಂಭ ಮಾಡುತ್ತಾರೆ ಹೇಳುವರ ಮಾತಿಗೆ ಬೆಲೆ ಕೊಡದೆ ಉಮಾಶ್ರೀ ಅವರು ಮುಂದೆ ಸಾಗುತ್ತಾರೆ ಹಾಗಿರುವಾಗ ಸಿನಿಮಾಗಳಲ್ಲಿ ಹೆಚ್ಚಿನ ಅವಕಾಶ ದೊರಕುತ್ತದೆ

ಸುಮಾರು 350ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಯಾರಿಂದ ನಿಂದನೆಗೆ ಒಳಗಾಗಿದ್ರೋ ಅವರಲ್ಲಿ ದಿಟ್ಟ ನಿಲುವು ಇದೆ ಇಷ್ಟೆಲ್ಲಾ ಸಾಧನೆ ಮಾಡಿದರುಸಹ ಅವರಲ್ಲಿ ನೋವು ಇದೆ ಮನೆಯರಿಗೆಲ್ಲ ಉಮಾಶ್ರೀ ಅವರು ತುಂಬಾ ಪ್ರಿಯರಾದರು .

ಉಮಾಶ್ರಿ ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ಕಂಡ ಅಪರೂಪದ ನಟಿರಾಜಕೀಯದಲ್ಲೂ ಹೆಸರುವಾಸಿಯಾಗಿರುವ ಇವರು ಕರ್ನಾಟಕದ ಶಾಸನಸಭೆಯ ಸದಸ್ಯರಾಗಿದ್ದರುಹಲವು ವಿವಿಧ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸಿರುವ ಇವರು ಹಾಸ್ಯ ಪಾತ್ರಗಳಿಗೆ ತುಂಬಾ ಪ್ರಸಿದ್ಧರಾಗಿದ್ದಾರೆ.

Leave A Reply

Your email address will not be published.