ಅಯ್ಯಪ್ಪ ಸ್ವಾಮಿಯು ಶನಿಮಹಾತ್ಮನಿಗೆ ನೀನು ನನ್ನ ಭಕ್ತರನ್ನು ಕಾಡಬೇಡ ಎಂದು ಹೇಳಿದ್ಯಾಕೆ?

0 907

Shabarimale ayyappa swami about Story: ಹಿಂದೂ ಧರ್ಮದ ಆಚರಣೆಗಳಲ್ಲಿ ಹಲವು ದೇವರ ಆರಾಧನೆಗಳಿವೆ ಅವುಗಳಲ್ಲಿ ದಕ್ಷಿಣ ಭಾರತದ ಪ್ರಮುಖ ದೇವಸ್ಥಾನಗಳಲ್ಲಿ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದೇವಸ್ಥಾನವು ಒಂದಾಗಿದೆ ಕೋಟ್ಯಾಂತರ ಭಕ್ತರನ್ನು ಹೊಂದಿರುವ ಸ್ವಾಮಿ ಅಯ್ಯಪ್ಪ ದೇಶವಿದೇಶಗಳಿಂದ ತನ್ನ ಭಕ್ತರನ್ನುಆಕರ್ಷಿಸುತ್ತಾನೆ. ಅಯ್ಯಪ್ಪ ಸ್ವಾಮಿಯ ವ್ರತ ಆಚರಣೆಗಳು ಹಾಗೂ ಪೂಜಾ ವಿಧಾನಗಳು ಬಹಳ ವಿಶೇಷವಾಗಿವೆ ಹಾಗೆ ಅಯ್ಯಪ್ಪ ಸ್ವಾಮಿಯ ವ್ರತಾಚರಣೆಗಳ ಹಿಂದೆ ಹಲವಾರು ರಹಸ್ಯಗಳು ಅಡಗಿವೆ ಅವುಗಳನ್ನು ನಾವು ಇಲ್ಲಿ ತಿಳಿಯೋಣ.

Shabarimale ayyappa swami ಅಯ್ಯಪ್ಪ ಸ್ವಾಮಿಯ ವ್ರತ ಆಚರಣೆಗಳು

ಶಬರಿಮಲೆ ಬೆಟ್ಟ ಎಂದರೆ ಅಯ್ಯಪ್ಪ ಸ್ವಾಮಿಯು ಭಕ್ತರ ಉದ್ಧಾರಕ್ಕಾಗಿ ಬಂದು ನೆಲೆಸಿದ ಬೆಟ್ಟವಾಗಿದೆ ಹಿಂದೆ ಈ ಬೆಟ್ಟದಲ್ಲಿ ಶಬರಿಯು ರಾಮನ ಬರುವುವಿಕೆಗಾಗಿ ಜೀವನವಿಡಿ ಕಾದು ಕುಳಿತಿದ್ದಳು ಹಾಗಾಗಿ ಶಬರಿಯು ವಾಸವಾಗಿದ್ದ ಈ ಬೆಟ್ಟವನ್ನು ಶಬರಿಮಲೈ ಎಂದು ಕರೆಯುತ್ತಾರೆ ಮಲೆ ಎಂದರೆ ಬೆಟ್ಟ ಎಂದು ಅರ್ಥ ಹಾಗೆಯೇ ಈ 14 ದಿನದ ವ್ರತದ ಹಿಂದೆ ಒಂದು ಕಥೆ ಇದೆ ಅಯ್ಯಪ್ಪ ಸ್ವಾಮಿಯು ಶನಿಮಹಾತ್ಮನಿಗೆ ನೀನು ನನ್ನ ಭಕ್ತರನ್ನು ಕಾಡಬೇಡ ಎಂದು ಹೇಳುತ್ತಾನೆ

ಆದರೆ ಶನೇಶ್ವರ ನಾನು ದೇವರುಗಳನ್ನೇ ಬಿಟ್ಟಿಲ್ಲ ಇನ್ನು ಈ ಸಾಮಾನ್ಯ ಮಾನವರು ತನ್ನ ದೃಷ್ಟಿಗೆ ಬಿದ್ದೆ ಬೀಳುತ್ತಾರೆ ಇನ್ನು ಏಳು ವರ್ಷ ಅವರಿಗೆ ಕಷ್ಟ ತಪ್ಪಿದ್ದಲ್ಲ ಎಂದು ಹೇಳುತ್ತಾನೆ ಹಾಗಾಗಿ ಅಯ್ಯಪ್ಪ ಸ್ವಾಮಿ, ನೀನು 7 ವರ್ಷ ಕೊಡುವ ತೊಂದರೆಯನ್ನು ತನ್ನ ಭಕ್ತರಿಗೆ 41 ದಿನಗಳವರೆಗೆ ನೀಡು ಎಂದು ಹೇಳುತ್ತಾನೆ ಅದಕ್ಕೆ ಶನೇಶ್ವರನು ಒಪ್ಪಿಕೊಳ್ಳುತ್ತಾನೆ.

ಇನ್ನು ಅಯ್ಯಪ್ಪ ಸ್ವಾಮಿಯ ಭಕ್ತರು ಕಪ್ಪು ಬಟ್ಟೆಯನ್ನು ಧರಿಸುವ ಉದ್ದೇಶವೇನೆಂದರೆ ಅಯ್ಯಪ್ಪ ಸ್ವಾಮಿ ಹಾಗೆ ಶನೇಶ್ವರನ ಒಪ್ಪಂದದ ಪ್ರಕಾರ ಕಪ್ಪು ಬಟ್ಟೆಯನ್ನು ಭಕ್ತರು ವ್ರತದ ಸಮಯದಲ್ಲಿ ತೊಡಬೇಕಾಗುತ್ತದೆ ಹಾಗೂ ಇದಕ್ಕೆ ವೈಜ್ಞಾನಿಕ ಹಿನ್ನೆಲೆ ಇದೆ ಅಯ್ಯಪ್ಪನ ವ್ರತ ಚಳಿಗಾಲದಲ್ಲಿ ಪ್ರಾರಂಭವಾಗುತ್ತದೆ. ಈ ಕಾಲದಲ್ಲಿ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ದೇಹವನ್ನು ಇದು ಬೆಚ್ಚಗಿಡುತ್ತದೆ ದೇಹದ ಉಷ್ಣತೆಯನ್ನು ಸಮತೋಲನವಾಗಿ ಕಾಪಾಡುತ್ತದೆ ಹಾಗೂ ರಕ್ತ ಸಂಚಲನ ಸಹ ಸರಾಗವಾಗಿ ಆಗುತ್ತದೆ.

ಮುಖ್ಯವಾಗಿ ಇಡುಮುಡಿಯನ್ನ ಕಟ್ಟುವುದಕ್ಕೆ ಒಂದು ಪೌರಾಣಿಕ ಹಿನ್ನೆಲೆ ಇದೆ ಹಿಂದೆ ಅಯ್ಯಪ್ಪ ಸ್ವಾಮಿಯು ಹುಲಿಯ ಬೇಟೆಗೆಂದು ಕಾಡಿಗೆ ಹೋಗುವಾಗ ಒಂದೇ ಬಟ್ಟೆಯಲ್ಲಿ ಒಂದು ಕಡೆ ಪೂಜಾ ಸಾಮಗ್ರಿಗಳು ಹಾಗೆ ಇನ್ನೊಂದು ಕಡೆ ದಿನಬಳಕೆಯ ವಸ್ತುಗಳನ್ನು ಕಟ್ಟಿಕೊಂಡು ಹೋಗಿದ್ದನಂತೆ ಹಾಗಾಗಿ ಇಡುಮುಡಿಯನ್ನು ಈ ರೀತಿಯಲ್ಲಿ ಕಟ್ಟಿ ಅಯ್ಯಪ್ಪನ ಭಕ್ತರು ಹೊರುತ್ತಾರೆ ಎಂಬ ನಂಬಿಕೆ ಇದೆ. ಇದಲ್ಲದೆ ವೈಜ್ಞಾನಿಕವಾಗಿ ಹೇಳುವುದಾದರೆ ಮನುಷ್ಯನ ದೇಹ ಹಾಗೂ ವರ್ತನೆಗಳು ವ್ಯಕ್ತಿಯ ಮೆದುಳಿನ ಮೇಲೆ ಅವಲಂಬಿತವಾಗಿರುತ್ತದೆ ನಮ್ಮ ಮೆದುಳಿನಲ್ಲಿ ತಲೆಯ ಮುಂದಿನ ಭಾಗದಲ್ಲಿ cerebrumಮತ್ತು ತಲೆಯ ಹಿಂದಿನ ಭಾಗದಲ್ಲಿ cerebellum ಎಂಬ ಎರಡು ವ್ಯವಸ್ಥೆಗಳು ಇರುತ್ತವೆ ಇಡುಮುಡಿ ಕಟ್ಟಿ ತಲೆಯ ಮೇಲೆ ಇಟ್ಟುಕೊಳ್ಳುವ ವಿಧಾನದಿಂದ ಈ ಎರಡು ಗ್ರಂಥಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತವೆ.

ಇಡುಮುಡಿಯನ್ನು ಒಂದು ಬದಿಯಲ್ಲಿ ಅಕ್ಕಿ ಬರುವಂತೆ ಇನ್ನೊಂದು ಬದಿಯಲ್ಲಿ ಕಾಯಿ ಬರುವಂತೆ ಅದನ್ನು ಭುಜದ ಮೇಲೆ ಇಳಿಬಿಟ್ಟು ಕಟ್ಟಲಾಗುತ್ತದೆ ತುಂಬಾ ದಿನದವರೆಗೆ ಅಯ್ಯಪ್ಪನ ಭಕ್ತಾದಿಗಳು ಯಾತ್ರೆಯಲ್ಲೇ ಇರುವುದರಿಂದ ಆಹಾರ ಸಿಗದೇ ಆರೋಗ್ಯ ಹದಗೆಡುವ ಸಮಸ್ಯೆಗಳು ಬರಬಹುದು, ಈ ರೀತಿಯಾಗಿ ಇಡುಮುಡಿ ಕಟ್ಟುವುದರಿಂದ ಆರೋಗ್ಯವನ್ನು ಸಹ ಕಾಪಾಡಬಹುದು. ಇರುಮುಡಿ ಇಲ್ಲದ ಭಕ್ತರನ್ನ ಶಬರಿಮಲೆ ಅಯ್ಯಪ್ಪನ ದೇವಸ್ಥಾನದ 18 ಮೆಟ್ಟಿಲುಗಳನ್ನು ಏರೋದಕ್ಕೆ ಬಿಡುವುದಿಲ್ಲ.ಇನ್ನು ಗುರುಸ್ವಾಮಿ ಎಂದು ಕರೆಯುವುದು ಯಾರನ್ನು ಎಂದರೆ ಒಬ್ಬ ವ್ಯಕ್ತಿ ಐದು ವರ್ಷಗಳ ಕಾಲ ಸತತವಾಗಿ ಪ್ರತಿ ವರ್ಷ ಮಕರ ಸಂಕ್ರಾಂತಿಯ ದಿನದಂದು ಮಣಿಕಂಠನ ಮಕರ ಜ್ಯೋತಿಯ ದರ್ಶನವನ್ನು ಮಾಡಿರಬೇಕು.

ಐದು ವರ್ಷದ ನಂತರ ಅಯ್ಯಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಗುರು ದೀಕ್ಷೆಯನ್ನು ಪಡೆಯಬೇಕಾಗುತ್ತದೆ ಅಂತವರನ್ನು ಗುರುಸ್ವಾಮಿ ಎಂದು ಕರೆಯುತ್ತಾರೆ ಭಿಕ್ಷೆಯನ್ನು ಪಡೆದ ಮೇಲೆ ಗುರುಸ್ವಾಮಿ ಯಾದವರು ಕೆಲವು ಕರ್ತವ್ಯಗಳನ್ನು ಪಾಲಿಸಬೇಕು. ಅಯ್ಯಪ್ಪ ಸ್ವಾಮಿಯ ಮಾಲೆ ಹಾಕುವವರು ಗುರುಸ್ವಾಮಿಯ ಕೈಯಿಂದಲೇ ಮಾಲೆಯನ್ನು ಧರಿಸಬೇಕು ವ್ರತವನ್ನು ಗುರುಸ್ವಾಮಿಯ ಮಾರ್ಗದರ್ಶನದಲ್ಲಿಯೇ ಮಾಡಬೇಕು, ಅವರು ಪ್ರತಿ ವರ್ಷ ಒಂದು ಕನ್ಯಾ ಸ್ವಾಮಿಯನ್ನು ಕರೆದುಕೊಂಡು ಹೋಗಲೇಬೇಕು. ಅಂತಹ ಸಮಯದಲ್ಲಿ ಎಲ್ಲಾ ಸ್ವಾಮಿಗಳ ಜವಾಬ್ದಾರಿ ಅವರ ಮೇಲಿರುತ್ತದೆ ಇವರು ರಥದ ಎಲ್ಲಾ ನೀತಿ ನಿಯಮಗಳನ್ನು ಹೇಳಿ ಕೊಡಬೇಕಾಗುತ್ತದೆದಾರಿಯಲ್ಲಿ ಇರುಮುಡಿ ಇಳಿಸುವಾಗ ಗುರುಸ್ವಾಮಿಯೇ ಇಳಿಸಬೇಕು.

ಅಂತೆಯೇ ಅಯ್ಯಪ್ಪ ಸ್ವಾಮಿಯ ವಸ್ತ್ರ ಬಂಧನ ಎಂದರೆ ಏನು ಎಂಬ ಪ್ರಶ್ನೆಗೆ ಉತ್ತರವೇನೆಂದರೆ ಅಯ್ಯಪ್ಪ ಸ್ವಾಮಿ ಮಹೇಶಿಯನ್ನ ಸಂಹರಿಸಿದ ನಂತರ ಶಬರಿಮಲೆಯಲ್ಲಿ ಜ್ಞಾನಪೀಠದಲ್ಲಿ ಕುಳಿತು ಭಕ್ತರನ್ನು ಅನುಗ್ರಹಿಸುತ್ತಾನೆ. ಸ್ವಾಮಿ ಇರುವ ಶಬರಿ ಆಲಯಕ್ಕೆ ಸ್ವಾಮಿಗಳ ಆಭರಣವನ್ನು ಹೊತ್ತುಕೊಂಡು 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪ ಸ್ವಾಮಿಯ ತಂದೆ ಕನ್ನಡ ರಾಜ ಬರುವುದನ್ನು ನೋಡಿದ ಅಯ್ಯಪ್ಪ ಸ್ವಾಮಿ ಯೋಗಾಸನದಿಂದ ಎದ್ದು ನಿಲ್ಲಲು ಪ್ರಯತ್ನವನ್ನು ಮಾಡುತ್ತಾನೆ, ಅದನ್ನು ನೋಡಿದ ತಂದೆ ಪಂದಳ ರಾಜನು ಬೇಡ ನೀನು ಎದ್ದೇಳಬೇಡ ಎಂದು ಹೇಳಿ ತನ್ನ ಭುಜದಲ್ಲಿದ್ದ ರೇಷ್ಮೆ ವಸ್ತ್ರವನ್ನು ಅಯ್ಯಪ್ಪ ಸ್ವಾಮಿಯ ಕಾಲುಗಳಿಗೆ ಶಕ್ತಿ ಬಂಧನ ಮಾಡುತ್ತಾನೆ. ಅಯ್ಯಪ್ಪ ಸ್ವಾಮಿಯ ಆ ಭಂಗಿಯನ್ನು ನೋಡಿ ಕಣ್ತುಂಬಿ ಕೊಂಡ ರಾಜ ಉಳಿದ ಭಕ್ತರಲ್ಲ ನಿನ್ನನ್ನು ಇದೇ ರೀತಿಯಲ್ಲಿ ನೋಡಿ ಆರಾಧಿಸಬೇಕು ಎಂದು ಅಯ್ಯಪ್ಪ ಸ್ವಾಮಿಯನ್ನು ಬೇಡಿಕೊಳ್ಳುತ್ತಾನೆ.

ಇನ್ನೇನು ಹೊಸವರ್ಷ ಬಂತು, ಸಿಂಹ ರಾಶಿಯವರಿಗೆ ಇಲ್ಲಿಯವರೆಗೆ ಒಂದು ಲೆಕ್ಕ ಇನ್ನುಮೇಲೆ ಅದೃಷ್ಟದ ಲೆಕ್ಕ ಹೇಗಿರತ್ತೆ ನೋಡಿ ಇವರ ಲೈಫ್

ಇದಕ್ಕೆ ಸ್ವಾಮಿ ಒಪ್ಪಿಕೊಳ್ಳುತ್ತಾನೆ ಇದರಿಂದಾಗಿಯೇ ಅಯ್ಯಪ್ಪ ಸ್ವಾಮಿಯು ವಸ್ತ್ರ ಬಂಧನದಲ್ಲಿ ಕುಳಿತಿರುತ್ತಾನೆ ಹಾಗೆಯೇ ಕಾರ್ತಿಕ ಮಾಸದಲ್ಲಿ ಭಕ್ತಾದಿಗಳು ಮಾಲೆಯನ್ನು ಧರಿಸಿ ವ್ರತಗಳನ್ನು ಮಾಡಿ, ದೀಕ್ಷೆ ತೊಟ್ಟು ಇರುಮುಡಿ ಹೊತ್ತು ಕಲ್ಲು ಮುಳ್ಳು ಎನ್ನದೆ ಸ್ವಾಮಿಯ ಜಪ ಮಾಡುತ್ತಾ ಶಬರಿಮಲೆಯನ್ನು ದರ್ಶನಕ್ಕಾಗಿ 18 ಮೆಟ್ಟಿಲುಗಳನ್ನು ಏರಿ ಅಯ್ಯಪ್ಪನ ದರ್ಶನ ಪಡೆದ ತಕ್ಷಣವೇ ನಿಮ್ಮ 41 ದಿನಗಳ ಸಂಕಷ್ಟಗಳೆಲ್ಲ ಪರಿಹಾರವಾಗುತ್ತವೆ. ಮಕರ ಸಂಕ್ರಾಂತಿಯ ದಿನದಂದು ಸಾಯಂಕಾಲ ಕಾಣುವ ಮಕರ ಜ್ಯೋತಿಯನ್ನು ನೋಡಿದ ತಕ್ಷಣ ನಿಮ್ಮ ಜೀವನವೇ ಪಾವನವಾದಂತೆ ಎಲ್ಲಾ ಪಾಪಗಳನ್ನು ತೊಡೆದು ಒಳ್ಳೆಯ ಜೀವನಕ್ಕೆ ಸದ್ಮಾರ್ಗವನ್ನು ತೋರುವ ಅಯ್ಯಪ್ಪ ಸ್ವಾಮಿಯ ಸದಾ ಎಲ್ಲರಿಗೂ ಒಳಿತನ್ನು ಮಾಡುತ್ತಾನೆ.

Leave A Reply

Your email address will not be published.