ಸೆಕೆಂಡ್ ಹ್ಯಾಂಡ್ ಕಾರುಗಳ ಬೆಲೆ ಇಲ್ಲಿ 1ಲಕ್ಷದಿಂದ ಪ್ರಾರಂಭ, ಇಲ್ಲಿ ಪಕ್ಕ ಲೋನ್ ಆಗುತ್ತೆ

0 3

ಪ್ರತಿಯೊಬ್ಬರಿಗೂ ತಮ್ಮದೇ ಆದ ಒಂದು ವಾಹನವನ್ನು ಖರೀದಿಸಬೇಕು ಎಂಬ ಆಸೆ ಇರುತ್ತದೆ ಆದರೆ ಹಣಕಾಸಿನ ಕೊರತೆಯಿಂದಾಗಿ ವಾಹನವನ್ನು ತೆಗೆದುಕೊಳ್ಳುವ ಕನಸನ್ನು ನನಸಾಗಿಸಿಕೊಳ್ಳುವ ದಕ್ಕೆ ಸಾಧ್ಯವಾಗುವುದಿಲ್ಲ ಅಂತವರಿಗೆ ನಾವಿಂದು ಸೆಕೆಂಡ್ ಹ್ಯಾಂಡ್ ಶೋರೂಮ್ ಬಗ್ಗೆ ತಿಳಿಸಿಕೊಡುತ್ತದೆ. ಇಲ್ಲಿ ನೀವು ಒಳ್ಳೆಯ ಕಾರುಗಳನ್ನು ಖರೀದಿಸಬಹುದಾಗಿದೆ. ನಾವು ನಿಮಗೆ ದೇವನಹಳ್ಳಿಯಲ್ಲಿರುವ ಸಾನ್ವಿ ಆಟೋಸ್ ಬಗ್ಗೆ ತಿಳಿಸಿಕೊಡುತ್ತೇವೆ. ಇವರ ಶೋರೂಂನಲ್ಲಿ ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ಗಾಡಿಗಳು ಸಿಗುತ್ತವೆ ಜೊತೆಗೆ ಇವರೇ ವಾಹನದ ಸರ್ವಿಸ್ ಕೂಡ ಮಾಡಿಕೊಡುತ್ತಾರೆ ಇವರ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಗಾಡಿಗಳಿವೆ ಅವುಗಳ ಬೆಲೆ ಯಾವ ಮಾಡೆಲ್ ವಾಹನದ ಕಂಡೀಶನ್ ಯಾವ ರೀತಿ ಆಗಿದೆ ಎಂಬುದನ್ನು ತಿಳಿದುಕೊಳ್ಳೋಣ.

ಮೊದಲಿಗೆ ಅಲ್ಟೋ ಎಲ್ ಎಕ್ಸ್ ಐ ಇದು 2017ರ ಮೊಡೆಲ್ಲಾಗಿದ್ದು ಸೆಕೆಂಡ್ ಓನರ್ ಆಗಿದೆ ಇದರ ಇನ್ಸೂರೆನ್ಸ್ ಚಾಲ್ತಿಯಲ್ಲಿದ್ದು ಎಸಿ ಕೂಡ ಚೆನ್ನಾಗಿದೆ. ಇದು ಎಂಬತ್ತೊಂದು ಸಾವಿರ ಕಿಲೋಮೀಟರ್ ಒಡಿದೆ ಈ ಗಾಡಿಗೆ ಅವರು ಒಂದು ಲಕ್ಷದ ಅರವತ್ತೈದು ಸಾವಿರ ರೂಪಾಯಿ ಬೆಲೆಯನ್ನು ನಿಗದಿ ಮಾಡಿದ್ದಾರೆ. ಮುಂದಿನ ದಾಗಿ ಆಲ್ಟೊ ಕೆ ಟೆನ್ ಇದು ಸೆಕೆಂಡ್ ಒನರ್ ಆಗಿದ್ದು 2012ರ ಮೊಡೆಲ್ಲಾಗಿದೆ

ಇದು ಐವತ್ತೈದು ಸಾವಿರ ಕಿಲೋಮೀಟರ್ ಓಡಿದೆ ಇದರಲ್ಲಿ ಕೂಡ ಎಸಿ ಪವರ್ ಸ್ಟೇರಿಂಗ್ ಎಲ್ಲವೂ ಕೂಡ ಇದ್ದು ಗಾಡಿ ತುಂಬಾ ಚೆನ್ನಾಗಿದೆ. ಇದಕ್ಕೆ ಯಾವುದೇ ರೀತಿಯ ಸ್ಕ್ರ್ಯಾಚ್ ಅಥವಾ ಜಂಗ್ಸ್ ಇಲ್ಲ ಇದನ್ನ ಎರಡು ಲಕ್ಷದ ಐವತ್ತು ಸಾವಿರ ರೂಪಾಯಿ ಬೆಲೆಗೆ ಕೊಡುವುದಾಗಿ ಹೇಳಿದ್ದಾರೆ. ಮುಂದಿನ ದಾಗಿ ಪೋರ್ಟ ಫಿಗೋ ಇದು 2010ರ ಮೊಡೆಲ್ಲಾಗಿದೆ. ಇದು ಸಿಂಗಲ್ ಓನರ್ ಆಗಿದೆ ಇದು ಸುಮಾರು ಐವತ್ತು ಸಾವಿರ ಕಿಲೋಮೀಟರ್ ಓಡಿದೆ ಇದನ್ನು ಎರಡು ಲಕ್ಷದ ಅರವತ್ತು ಸಾವಿರ ರೂಪಾಯಿಗೆ ಕೊಡುವುದಾಗಿ ತಿಳಿಸಿದ್ದಾರೆ.

ಮುಂದಿನದಾಗಿ ರೆನಾಲ್ಟ್ ಫಲ್ಸ್ ಆರ್ ಎಕ್ಸ್ ಎಲ್ ಅಡಿಷನ ಆಗಿದ್ದು ಇದು 2012ರ ಮೊಡೆಲ್ಲಾಗಿದೆ ಇದು ಸೆಕೆಂಡ್ ಓನರ್ ಆಗಿದ್ದು ಒಂದು ಲಕ್ಷದ ಹತ್ತು ಸಾವಿರ ಕಿಲೋಮೀಟರ್ ಓಡಿದ್ದು ಡೀಸೆಲ್ ಇಂಜಿನ್ ಆಗಿದೆ ಇದರಲ್ಲಿ ಕೂಡ ಎಸಿ ಪವರ್ ಸ್ಟೇರಿಂಗ್ ಎಲ್ಲವೂ ಕೂಡ ಇದೆ ಇದು ಇಪ್ಪತ್ತರಿಂದ ಇಪ್ಪತ್ತೈದು ಮೈಲೆಜು ಕೊಡುತ್ತದೆ. ಇದರ ಇನ್ಸೂರೆನ್ಸ್ ಲ್ಯಾಪ್ಸ್ ಆಗಿದೆ ಇದನ್ನು ಎರಡು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿಗೆ ಕೊಡುವುದಾಗಿ ತಿಳಿಸಿದ್ದಾರೆ. ಮುಂದಿನದಾಗಿ ನಿಶಾನ್ ಸನ್ನಿ ಕಾರ್ ಇದು 2013ರ ಮೊಡೆಲ್ಲಾಗಿದ್ದು ಸಿಂಗಲ್ ಓನರ್ ಗಾಡಿ ಆಗಿದೆ.

ಈ ಗಾಡಿ ಒಂದು ಲಕ್ಷದ ಹತ್ತು ಸಾವಿರ ಕಿಲೋಮೀಟರ್ ಓಡಿದೆ. ಇದರ ಇನ್ಸೂರೆನ್ಸ್ ಅಕ್ಟೋಬರ್ ವರೆಗೂ ಚಾಲ್ತಿಯಲ್ಲಿರುತ್ತದೆ ಇದರಲ್ಲಿ ಎಸಿ ಪವರ್ ಸ್ಟೇರಿಂಗ್ ರಿಮೋಟ್ ಸೆಂಟ್ರಲ್ ಲಾಕಿಂಗ್ ಇನ್ ಬ್ಯುಲ್ಟ್ ವೀವ್ ಸಿಸ್ಟಮ್ ಏರ್ ಬ್ಯಾಗ್ ಎಲ್ಲವೂ ಕೂಡ ಬರುತ್ತದೆ ಇದಕ್ಕೆ ಇವರು ಎರಡು ಲಕ್ಷದ ಎಂಬತ್ತು ಸಾವಿರ ರುಪಾಯಿ ಬೆಲೆ ನಿಗದಿಪಡಿಸಿದ್ದಾರೆ. ಮುಂದಿನ ದಾಗಿ ಎಲ್ಟಿಕಾ 2014ರ ಮೊಡೆಲ್ಲಾಗಿದೆ ಇದು ಸಿಂಗಲ್ ಓನರ್ ಆಗಿದ್ದು ಒಂದು ಲಕ್ಷದ ನಲವತ್ಮುರು ಸಾವಿರ ಮೈಲೇಜ್ ದಾಖಲೆ ಇದೆ ಇದನ್ನ ಶೋ ರೂಮ್ನಲ್ಲಿ ಸರ್ವಿಸ್ ಮಾಡಿಸಲಾಗಿದೆ ಇದು ಡಿಸೈಲ್ ವೆಹಿಕಲ್ ಆಗಿದ್ದು ಉತ್ತಮ ಕಂಡೀಶನ್ ಹೊಂದಿದೆ ಇದಕ್ಕೆ ಇವರು ಆರು ಲಕ್ಷದ ಐವತ್ತು ಸಾವಿರ ರೂಪಾಯಿ ಬೆಲೆಯನ್ನು ನಿಗದಿ ಮಾಡಿದ್ದಾರೆ.

ಇವರ ಬಳಿ 2017ರ ಸ್ವೀಪ್ಟ್ 7 ಮೊಡೆಲ್ಲಾಗಿದೆ ಇದು ಸೆಕೆಂಡ್ ಒನರ್ ವಾಹನವಾಗಿದ್ದು ಎಂಬತ್ಮುರು ಸಾವಿರ ಕಿಲೋಮೀಟರ್ ಓಡಿದೆ. ಇದು ಪೆಟ್ರೋಲ್ ಇಂಜಿನ್ ಹೊಂದಿದೆ ಗಾಡಿಯ ಗುಣಮಟ್ಟ ಕೂಡ ತುಂಬಾ ಚೆನ್ನಾಗಿದೆ ಇದಕ್ಕೆ ಅವರು ಎರಡು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿ ಬೆಲೆಯನ್ನು ನಿಗದಿ ಮಾಡಿದ್ದಾರೆ. ಮುಂದಿನ ದಾಗಿ ಇವರ ಬಳಿ ಟಾಟಾ ನ್ಯಾನೋ ಟ್ವಿಸ್ಟ್ ಇದೆ ಇದರಲ್ಲಿ ಎಸಿ ಪವರ್ ಸ್ಟೇರಿಂಗ್ ಮ್ಯೂಸಿಕ್ ಸಿಸ್ಟಮ್ ಜೊತೆಗೆ ಎಲ್ಲ ಸೌಲಭ್ಯಗಳು ಇದ್ದು ಇದು 2014ರ ಮೊಡೆಲ್ಲಾಗಿದ್ದು ಇದು ಸೆಕೆಂಡ್ ಒನರ್ ವಾಹನವಾಗಿದೆ. ಇದು ನಲವತ್ತೆಂಟು ಸಾವಿರ ಕಿಲೋಮೀಟರ್ ಓಡಿದ್ದು ನೇರಳೆ ಬಣ್ಣದಲ್ಲಿದೆ ಇದಕ್ಕೆ ಇವರು ಒಂದು ಲಕ್ಷದ ಅರವತ್ತೈದು ಸಾವಿರ ರೂಪಾಯಿ ಬೆಲೆಯನ್ನು ನಿಗದಿ ಮಾಡಿದ್ದಾರೆ.

ನಿಮಗೆ ವಾಹನವನ್ನು ಕೊಂಡುಕೊಳ್ಳುವುದಕ್ಕೆ ಇವರು ಬ್ಯಾಂಕ್ ಕಡೆಯಿಂದ ಸಾಲವನ್ನ ತೆಗೆದುಕೊಳ್ಳುವುದಕ್ಕೆ ಸಹಾಯ ಕೂಡ ಮಾಡುತ್ತಾರೆ. ಅದಕ್ಕೆ ಬೇಕಾದಂತಹ ದಾಖಲೆಗಳನ್ನು ನೀವು ತೆಗೆದುಕೊಂಡು ಹೋದರೆ ಬ್ಯಾಂಕ್ನಿಂದ ನಿಮಗೆ ಸಾಲವನ್ನು ಕೊಡಿಸುತ್ತಾರೆ. ನೀವು ಕೂಡ ಕಡಿಮೆ ಬಜೆಟ್ ನಲ್ಲಿ ಉತ್ತಮ ಗುಣಮಟ್ಟದ ಕಾರುಗಳನ್ನು ಖರೀದಿಸಬೇಕು ಎಂದರೆ ನೀವು ಸಾನ್ವಿ ಆಟೋಸ್ ಗೆ ಭೇಟಿ ನೀಡಿ ಅಲ್ಲಿ ವಾಹನಗಳನ್ನು ಪರೀಕ್ಷಿಸಿ ಖರೀದಿಸಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ. video credit for Cars worlds

Leave A Reply

Your email address will not be published.