ವೃಶ್ಚಿಕ ರಾಶಿಯವರಿಗೆ 2023 ರಲ್ಲಿ ಮನೆ ನಿರ್ಮಾಣ ವಿವಾಹ ಯೋಗವಿದೆ ಆದ್ರೆ..

0 15,957

Scorpio Astrology On 2023: ಇದೇ 2023ನೆಯ ಹೊಸ ವರ್ಷದಲ್ಲಿ ವೃಶ್ಚಿಕ ರಾಶಿಯವ ರ ಜಾತಕವನ್ನು ಕಂಡಾಗ ಒಂದು ಉತ್ತಮವಾದಂತಹ ಯೋಗವನ್ನ ಕಾಣುವಂತಹ ಸಾಧ್ಯತೆಗಳು ಇವೆ ಅನೇಕ ಅವಕಾಶಗಳು ಕಚ್ಚಿಕ ರಾಶಿಯವರ ಬಳಿಗೆ ಈ ಸಮಯದಲ್ಲಿ ಬರಲಿವೆ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಏಳಿಗೆಯನ್ನು ಸಾಧಿಸುತ್ತೀರಿ.

Scorpio Astrology ವೃಶ್ಚಿಕ ರಾಶಿಯವರಿಗೆ

ಚಿಕ್ಕ ಪುಟ್ಟ ವ್ಯವಹಾರಗಳನ್ನು ನಡೆಸುವಂತವರು ಅಂದರೆ ತರಕಾರಿಗಳ ಮಾರಾಟ ಹಣ್ಣುಗಳ ಮಾರಾಟ ಅಥವಾ ಬೇರೆ ಬೇರೆಯಾಗಿರುವಂತಹ ಯಾವುದೇ ಒಂದು ವ್ಯವಹಾರದಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳುವುದು ಅಥವಾ ಸಣ್ಣಪುಟ್ಟ ಮಟ್ಟದ ಲೇವಾದೇವಿಯನ್ನ ಮಾಡುವುದು ಈ ರೀತಿಯಾದಂತಹ ವ್ಯವಹಾರ ಮಾಡುವವರಿಗೆ ಧನಾತ್ಮಕವಾಗಿ ಪರಿಣಾಮ ದೊರೆಯುತ್ತದೆ

ಹಾಗೆಯೇ ವೃಶ್ಚಿಕ ರಾಶಿಯವರು ಒಂದು ಚಿಕ್ಕ ಮನೆಯನ್ನ ಕಟ್ಟುವ ಆಸೆಯನ್ನು ಹೊಂದಿದ್ದರೆ ಅಂತಹ ಆಸೆಗಳು ಈ ಸಮಯದಲ್ಲಿ ಈಡೇರುತ್ತವೆ ಹಾಗೆಯೇ ಒಂದಿಷ್ಟು ಮಠದ ಆಸ್ತಿಯ ವಿವಾದಗಳು ಅಥವಾ ಕೋರ್ಟು ಕಚೇರಿಯ ಸಮಸ್ಯೆಗಳು ಅನೇಕ ವರ್ಷಗಳಿಂದ ಕೊರ್ಟಿನಲ್ಲಿ ದಾವೇ ಹೂಡಿದ್ದ ಒಳ್ಳೆಯ ಲಾಭ ತರುವಂತಹ ಆಸ್ತಿಗಳು ಇದ್ದಲ್ಲಿ ಅದು ನಿಮ್ಮ ಪಾಲಾಗುತ್ತದೆ.

ಹಾಗೆಯೇ ನೋಡಲು ಬಹಳ ಸುಂದರವಾಗಿರುವ ಹುಡುಗ ಅಥವಾ ಹುಡುಗಿ ಇನ್ನೂ ಕೂಡ ಮದುವೆಯಾಗದೇ ಇದ್ದರೆ ಅಂತಹ ಚಿಂತೆಗಳು ನಿಮ್ಮಿಂದ ದೂರವಾಗುತ್ತವೆ ಇದೇ 2023 ನೇ ಇಸ್ವಿಯಲ್ಲಿ ವಿವಾಹ ಭಾಗ್ಯಗಳನ್ನು ವೃಶ್ಚಿಕ ರಾಶಿ ಅವರು ಪಡೆದುಕೊಳ್ಳಲಿದ್ದಾರೆ ಇನ್ನು ಯಾವುದೇ ಒಂದು ಕ್ಷೇತ್ರದಲ್ಲಿ ನೀವು ಮಾಡಿದ ಹೂಡಿಕೆಯು ಕೆಲವೇ ಸಮಯಗಳಲ್ಲಿ ದ್ವಿಗುಣಗೊಳ್ಳುತ್ತದೆ ಇಂತಹ ಹೂಡಿಕೆಗಳಿಂದ ಒಳ್ಳೆಯ ಲಾಭವನ್ನು ನೀವು ಪಡೆಯುತ್ತೀರಿ ಇನ್ನು ದಾಂಪತ್ಯದ ಜೀವನದ ವಿಚಾರಕ್ಕೆ ಬಂದರೆ ಮದುವೆಯಾಗಿ ಅಥವಾ ಇದಕ್ಕಿಂತ ಹೆಚ್ಚು ವರ್ಷಗಳಾಗಿದ್ದು ಸಂತಾನ ಭಾಗ್ಯವೇ ದೊರಕದೇ ಇರುವ ಚಿಂತೆ ಈ ಸಮಯದಲ್ಲಿ ಮುಕ್ತಾಯಗೊಳ್ಳುತ್ತದೆ ಈ ಸಮಯದಲ್ಲಿ ನೀವು ಸಂತಾನ ಭಾಗ್ಯವನ್ನು ಪಡೆಯುತ್ತೀರಿ.

ಇನ್ನು ಒಂದೇ ಸಮನೆ ಯಾವಾಗಲೂ ಕೆಲಸದಲ್ಲಿ ನಿರತರಾಗಿರುವ ವ್ಯಕ್ತಿಗಳಿಗೆ ಯಾವುದಾದರೂ ಒಂದು ಕ್ಷೇತ್ರಕ್ಕೆ ಭೇಟಿ ನೀಡುವ ಆಸೆಯಿದ್ದು ಹೋಗಲು ಸಮಯ ಇಲ್ಲದೆ ಇರುವುದು ಅಥವಾ ಯಾವುದೇ ಒಂದು ಅಡೆತಡೆ ಬರುವುದು ಆಗಿರುವುದು ಉಂಟು ಈ ಸಮಯದಲ್ಲಿ ನಿಮಗೆ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳಲು ಅವಕಾಶಗಳು ಒದಗಿ ಬರುತ್ತವೆ. ಇದರಿಂದ ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ

ನಿಮ್ಮ ಮನಸ್ಸಿಗೆ ಶಾಂತಿ ದೊರೆಯುತ್ತದೆ ಇನ್ನು ಹೆಣ್ಣು ಮಕ್ಕಳಿಗೆ ಈ ವರ್ಷದಲ್ಲಿ ಒಡವೆ ಉಡುಪು ಹೀಗೆ ನಿಮಗೆ ಬೇಕಾದಂತಹ ವಸ್ತುಗಳನ್ನು ಖರೀದಿ ಮಾಡುವ ಭಾಗ್ಯ ದೊರಕಿ ಬರಲಿದೆ. ಹಾಗೆಯೇ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದವರು ಅಥವಾ ವಿದೇಶದಲ್ಲಿ ಕೆಲಸಕ್ಕೆ ಹೋಗ ಬಯಸುವವರಿಗೆ ಉದ್ಯೋಗಾವಕಾಶಗಳು ತಾನಾಗಿಯೇ ಒದಗಿ ಬರುತ್ತವೆ ಇದಲ್ಲದೆ ನಿಮ್ಮ ಬದುಕಿಗೆ ಅನೇಕ ವರ್ಷಗಳ ಸಂಬಂಧವು ಶುಭವಾದಂತಹ ವ್ಯವಸ್ಥೆಗಳನ್ನು ಉಂಟುಮಾಡುತ್ತದೆ.

ನಿಮ್ಮ ಶ್ರದ್ದೆಯಿಂದ ಮಾಡುವ ಯಾವುದೇ ಒಂದು ಕೆಲಸದಿಂದ ಯಶಸ್ಸನ್ನು ಕಾಣುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ ಉದಾಹರಣೆಗೆ ಯಾವುದೇ ಒಂದು ಕಾರ್ಯಕ್ರಮವನ್ನು ರೂಪಿಸುವುದು ಅಥವಾ ಸಂಘ ಸಂಸ್ಥೆಯನ್ನ ನಿಭಾಯಿಸುವುದು ಹೀಗೆ ಅನೇಕ ವಿಧದ ಕಾರ್ಯಗಳಲ್ಲಿ ನೀವು ಉನ್ನತಿಯನ್ನು ಕಾಣುತ್ತೀರಿ ಅವಕಾಶಗಳ ಸುರಿಮಳೆ ನಿಮ್ಮನ್ನ ಅರಸಿ ಬರುತ್ತದೆ.

ಈ ವರ್ಷದ ಕೊನೆ ವಾರ ಭವಿಷ್ಯ ನಿಮ್ಮ ಪಾಲಿಗೆ ಹೇಗಿರತ್ತೆ ತಿಳಿದುಕೊಳ್ಳಿ

ವೃಶ್ಚಿಕ ರಾಶಿಯವರು ಈ ವರ್ಷದಲ್ಲಿ ಬಹಳ ಮುಖ್ಯವಾಗಿ ಕುಲದೇವರ ಆರಾಧನೆ ಹಾಗೆ ವಿಘ್ನ ವಿನಾಯಕನಾದ ಗಣೇಶನ ಆರಾಧನೆಯನ್ನು ಮಾಡಬೇಕು ವಿಶೇಷವಾಗಿ ಪ್ರತಿ ಶುಕ್ರವಾರ ಲಕ್ಷ್ಮಿಯ ಆರಾಧನೆ ಮಾಡುವುದರಿಂದ ನಿಮ್ಮ ಮನೆಗೆ ಧನಾಗಮನ ಉಂಟಾಗುತ್ತದೆ.

Leave A Reply

Your email address will not be published.