ರೈತರು ಇಡೀ ದಿನ ಬಿಸಿಲಿನಲ್ಲಿ ದುಡಿದರೂ ಮಾಡಿದ ಸಾಲವನ್ನು ತೀರಿಸಲು ಕಷ್ಟಪಡಬೇಕಾಗಿದೆ. ಕೆಲವು ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನಾವು ನೋಡಿದ್ದೇವೆ. ಎಸ್ ಬಿಐ ಬ್ಯಾಂಕ್ ರೈತರ ಕಷ್ಟವನ್ನು ಪರಿಹರಿಸಲು ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ರೈತರ ಕಷ್ಟ ರೈತರಿಗೆ ಮಾತ್ರ ಗೊತ್ತಿದೆ ಇಡಿ ದಿನ ಬಿಸಿಲಿನಲ್ಲಿ ಹೊಲದಲ್ಲಿ ದುಡಿಯುತ್ತಾರೆ. ರೈತರ ಸಂಕಷ್ಟ ಹರಿಹಾರಕ್ಕೆ ಎಸ್ ಬಿಐ ಬ್ಯಾಂಕ್ ಮುಂದಾಗಿದೆ.‌ ಕೃಷಿ ಕಾರ್ಯಕ್ಕಾಗಿ ಬಾಡಿಗೆ ಟ್ರ್ಯಾಕ್ಟರ್ ಗೆ ಹಣ ನೀಡಿ ಬೇಸತ್ತು ಹೊಸ ಟ್ರ್ಯಾಕ್ಟರ್ ಖರೀದಿಗೆ ಯೋಜಿಸುತ್ತಿರುವ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಟ್ರ್ಯಾಕ್ಟರ್‌ ಖರೀದಿ ಆಸೆಯಿದ್ದು ಹಣದ ಕೊರತೆಯಾಗಿದ್ದರೆ ದೇಶದ ಅತಿದೊಡ್ಡ ಸಾಲಗಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ರೈತರಿಗಾಗಿ ವಿಶೇಷ ಸಾಲ ಯೋಜನೆ ‘ತತ್ಕಾಲ್ ಟ್ರಾಕ್ಟರ್ ಸಾಲ’ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದೆ.

ಈ ಯೋಜನೆಯಡಿಯಲ್ಲಿ ಟ್ರಾಕ್ಟರ್ ಇನ್ಶೂರೆನ್ಸ್ ಮತ್ತು ನೋಂದಣಿ ಶುಲ್ಕ ಸೇರಿದಂತೆ ಟ್ರ್ಯಾಕ್ಟರ್ ವೆಚ್ಚದ 100% ವರೆಗೆ ಎಸ್ ಬಿಐ ಸಾಲವನ್ನು ನೀಡುತ್ತದೆ. ಎಸ್‌ಬಿಐ ತತ್ಕಾಲ್ ಟ್ರಾಕ್ಟರ್ ಸಾಲವು ಕೃಷಿ ಅವಧಿಯ ಸಾಲವಾಗಿದೆ. ಟ್ರ್ಯಾಕ್ಟರ್ ಪರಿಕರಗಳ ವೆಚ್ಚವನ್ನು ಎಸ್ ಬಿಐ ಬ್ಯಾಂಕ್ ನೀಡುವ ಸಾಲದಲ್ಲಿ ಸೇರಿಸಲಾಗುವುದಿಲ್ಲ. ರೈತರು 4 ರಿಂದ 5 ವರ್ಷಗಳಲ್ಲಿ ಟ್ರಾಕ್ಟರ್ ಸಾಲದಲ್ಲಿ ತೆಗೆದುಕೊಂಡ ಮೊತ್ತವನ್ನು ಬ್ಯಾಂಕ್ ಗೆ ಪಾವತಿಸಬಹುದಾಗಿದೆ ಇದು ಮುಖ್ಯವಾದ ವಿಷಯವಾಗಿದೆ. ಇನ್ನು ಬ್ಯಾಂಕಿನಿಂದ ಹಣಕಾಸು ಒದಗಿಸಿದ ಟ್ರಾಕ್ಟರ್ ಸಮಗ್ರ ವಿಮೆಯನ್ನು ಹೊಂದಿದೆ. 25/40/50 ಶೇಕಡಾ ಮೊತ್ತವನ್ನು ಹಾಗೂ ಟ್ರ್ಯಾಕ್ಟರ್ ವೆಚ್ಚವನ್ನು TDR ನಲ್ಲಿ ಶೂನ್ಯ ದರದ ಠೇವಣಿ ಮಾಡಬೇಕು.

ಬ್ಯಾಂಕ್ ನಿಂದ ಹಣಕಾಸು ಒದಗಿಸಿದ ಟ್ರಾಕ್ಟರ್ ಸಾಲವನ್ನು ಮರುಪಾವತಿಸುವವರೆಗೆ ಬ್ಯಾಂಕ್ ನೊಂದಿಗೆ ಇರುತ್ತದೆ ಅಂದರೆ ಅದು ಒಂದು ರೀತಿಯಲ್ಲಿ ಅಡಮಾನವಾಗಿರುತ್ತದೆ ಅಲ್ಲದೆ ಮಾರ್ಜಿನ್ ಮನಿ ಎಂದು ಸ್ವೀಕರಿಸಿದ ಟಿಡಿಆರ್ ಮೇಲೆ ಬ್ಯಾಂಕ್ ಹಕ್ಕನ್ನು ಹೊಂದಿರುತ್ತದೆ. ಎಸ್‌ಬಿಐ ಸಾಲವನ್ನು ಪಡೆಯಲು ಕೆಲವು ಅರ್ಹತೆ ಹೊಂದಿರಬೇಕು. ತತ್ಕಾಲ್ ಟ್ರಾಕ್ಟರ್ ಸಾಲ ಪಡೆಯಲು ರೈತರು ಕನಿಷ್ಟ 2 ಎಕರೆ ಭೂಮಿಯನ್ನು ಹೊಂದಿರಬೇಕು. ಈ ಯೋಜನೆಯಡಿ ಎಲ್ಲ ರೈತರು ಬ್ಯಾಂಕ್ ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

ಸಾಲದಲ್ಲಿ ಎಸ್‌ಬಿಐ ಉಲ್ಲೇಖಿಸಿದ ಸಂಬಂಧಿಗಳು ಮಾತ್ರ ಸಹ ಅರ್ಜಿದಾರರಾಗಬಹುದು. ಅರ್ಜಿಯೊಂದಿಗೆ ಕೆಲವು ಅಗತ್ಯವಿರುವ ದಾಖಲೆಗಳು ಅವಶ್ಯಕವಾಗಿವೆ. ಸಾಲಕ್ಕಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅದರಲ್ಲಿ ಯಾವುದೆ ಡೀಲರ್‌ನಿಂದ ಟ್ರ್ಯಾಕ್ಟರ್‌ನ ಉಲ್ಲೇಖವನ್ನು ಸಹ ಹಾಕಬೇಕು. ಗುರುತಿನ ಪುರಾವೆಯಾಗಿ ವೋಟರ್ ಐಡಿ, ಪ್ಯಾನ್, ಪಾಸ್‌ಪೋರ್ಟ್, ಆಧಾರ್ ಅಥವಾ ಚಾಲನಾ ಪರವಾನಗಿ ಯಾವುದಾದರೂ ಒಂದು, ವಿಳಾಸ ದೃಢೀಕರಣಕ್ಕಾಗಿ ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಅಥವಾ ಚಾಲನಾ ಪರವಾನಗಿ ಅಲ್ಲದೆ ಸಾಗುವಳಿ ಮಾಡಬಹುದಾದ ಭೂಮಿಯ ಪುರಾವೆಗಳನ್ನು ಹಾಜರುಪಡಿಸಬೇಕು. ಈ ದಾಖಲಾತಿಗಳನ್ನು ಎಸ್ ಬಿಐ ಬ್ಯಾಂಕ್ ಗೆ ಒದಗಿಸಿದ ನಂತರ ರೈತರಿಗೆ ಬ್ಯಾಂಕ್ ನಿಂದ ಸಾಲ ಸಿಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ರೈತ ಬಾಂಧವರಿಗೆ ತಿಳಿಸಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *