ದಾವಣಗೆರೆ ವಿಶ್ವವಿದ್ಯಾನಿಲಯ ಹಮ್ಮಿಕೊಂಡಿದ್ದ ಪ್ರಾಡಕ್ಟ್ ಲಾಂಚ್ ಸ್ಪರ್ಧೆಯಲ್ಲಿ ಸದರಿ ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಮಾದರಿಯ ಉತ್ಪನ್ನ ತಯಾರಿಕೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಎಂ.ಕಾಂ ವಿಭಾಗದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಎಲ್ಲ ಜನಸಾಮಾನ್ಯರಿಗೆ ಅಳವಡಿಕೆಯಾಗುವಂತಹ ಅತ್ಯಮೂಲ್ಯ ವಸ್ತು ನೀರನ್ನು ತಮ್ಮ ಐಡಿಯಾ ಆಗಿ ಬಳಸಿಕೊಂಡು ಪ್ರಸ್ತುತ ಕಾಲಮಾನದಲ್ಲಿ ಆಗುತ್ತಿರುವ ನೀರಿನ ದುರ್ಬಳಕೆ ತಡೆಗಟ್ಟುವ ಸುಲಭ ವಿಧಾನವನ್ನು ತುಂಬಾ ಕಡಿಮೆ ಖರ್ಚಿನಲ್ಲಿ ಎಲ್ಲರ ಮನೆಯಲ್ಲಿ ಆಗುವಂತಹ ನೀರಿನ ಸೋರಿಕೆಯನ್ನು ಹೇಗೆ ತಡೆಯುವುದು ಎಂದು ತಮ್ಮ ಒಂದು ಸಣ್ಣ ಡೆಮೋ ಮುಲಕ ತಮ್ಮ ಪ್ರಯತ್ನವನ್ನು ಸಾಧಿಸಿ ತೋರಿಸಿದ್ದಾರೆ.

ಎಂ.ಕಾಂ B ವಿಭಾಗದ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಸಮಯದಲ್ಲಿ ಕಟ್ಟಡ ಮೇಲಿದ್ದಂತಹ ಓವರ್ ಟ್ಯಾಂಕ್ ತುಂಬಿ ನೀರು ಕೆಳಗೆ ಧಾರಾಕಾರವಾಗಿ ಸುರಿಯುತಿತ್ತು ಅದನ್ನು ನಿಲ್ಲಿಸಲು ಪ್ರಾದ್ಯಾಪಕರು ದಿನೇ ದಿನೇ ವಿದ್ಯಾರ್ಥಿಗಳನ್ನು ತರಗತಿ ಸಮಯದಲ್ಲಿ ಈ ಮೋಟಾರ್ ನಿಲ್ಲಿಸಲು ಕಳುಹಿಸುತ್ತಿದ್ದರು ಇದರಿಂದ ಬೇಸತ್ತಿದ್ದ ಹುಡುಗರು ಇದನ್ನೇ ಮಾದರಿಯಾಗಿ ಇಟ್ಟುಕೊಂಡು ಇದಕ್ಕೆ ಸಸ್ವಾತ ಪರಿಹಾರ ಕಂಡುಹಿಡಯಲು ಯೋಚಿಸುತ್ತಿರುವಾಗ ಇದೆ ಸಮಯಕ್ಕೆ ಕಾಲೇಜಿನಲ್ಲಿ ಪ್ರೋಡಕ್
ಲಾಂಚ್ ಸ್ಪರ್ಧೆ ಆಯೋಜನೆಗೊಂಡಿತ್ತು.

7 ವಿದ್ಯಾರ್ಥಿಗಳ ತಂಡವೊಂದು ಎಲ್ಲರೂ ತಮ್ಮ ತಮ್ಮ ಆಲೋಚನೆ ಪರಸ್ಪರ ಹಂಚಿಕೊಂಡು ಒಂದು ಸಾಧನವನ್ನು ತಯಾರಿಕೆ ಮಾಡುವತ್ತ ಮುಂದಾದರು ಅದುವೇ OVER TANK ALARM ಕೇವಲ 200 ರೂ ಬಳಸಿ ಒಂದು ಸಣ್ಣ ಪ್ಲಾಸ್ಟಿಕ್ ಡಬ್ಬ, 4 ವಿದ್ಯುತ್ ಸೆಲ್ಲು, ವಿದ್ಯುತ್ ತಂತಿ, ಹಾಗೂ ಗಡಿಯಾರದಲ್ಲಿ ಸಿಗುವಂತಹ ಅಲಾರಂ ಮಷೀನ್ ಅಳವಡಿಸಿಕೊಂಡು ಒಂದು ವಿದ್ಯುತ್ ವಾಹಕ ತಯಾರಿಸಿದರು ನೀರು ಆ ಡಬ್ಬದಲ್ಲಿ ಅರ್ಧ ತುಂಬಿದಾಗ ಒಂದು ಹಳದಿ ಬಲ್ಬ್ ಸಿಗ್ನಲ್ ಹಾಗೂ ಪೂರ್ತಿ ತುಂಬಿದಾಗ ರೆಡ್ ಬಲ್ಬ್ ಸಿಗ್ನಲ್ ಹಾಗೂ ಸೈರೆನ್ ಸೌಂಡ್ ಬರುವಹಾಗೆ ಆ ವಿದ್ಯುತ್ ಸಾಧನದಲ್ಲಿ ಅಳವಡಿಕೆ ಮಾಡಿ ಸ್ಪರ್ದೆಯಲ್ಲಿ ಡೆಮೋ ಮೂಲಕ ಪ್ರದರ್ಶಿಸಿ ಯಶಸ್ವಿಯಾದರು

ಇದನ್ನು ನಮ್ಮ ಮನೆಯ ಸಿಂಟೆಕ್ಸ್ ಗಳಲ್ಲಿ ಅಳವಡಿಸಿಕೊಳ್ಳುವುದರಿಂದ ನೀರು ತುಂಬಿಕೊಳ್ಳುವುದನ್ನು ಸುಲಭವಾಗಿ ಗೊತ್ತುಮಾಡಿಕೊಂಡು ತಕ್ಷಣ ಮೋಟಾರ್ ಆಟೋಮ್ಯಾಟಿಕ್ ಆಫ್ ಆಗುವಂತೆ ಅನ್ವೇಷಣೆ ಮಾಡಲಾಗಿತ್ತು ಇದರಿಂದ ಪ್ರತಿ ಮನೆಯಲ್ಲಿ ಆಗುವಂತಹ ನೀರಿನ ಸೋರಿಕೆಯ ಪ್ರಮಾಣವನ್ನು ನಿಲ್ಲಿಸಬಹುದು. ಇದರಿಂದ ನಮ್ಮ ಮುಂದಿನ ಪೀಳಿಗೆಗೂ ನಾವು ನೀರನ್ನು ಉಳಿಸಬಹುದು ಏಕೆಂದರೆ ಪ್ರತಿ ಜೀವಿಗೂ ನೀರು ಅತ್ಯಮೂಲ್ಯ ವಸ್ತು.

ಈ ಓವರ್ ಟ್ಯಾಂಕ್ ಅಲಾರಂ ಅನ್ನು ಕಂಡಂತಹ ದಾವಣಗೆರೆ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆದಂತಹ ಪ್ರೊಫೆಸರ್ ಅನಿತಾ ಅವರು ಇದನ್ನು ಕಂಡುಹಿಡಿದ ತಂಡವನ್ನು ಸ್ಲಾಗಿಸಿದರು ತಂಡದಲ್ಲಿ ಶಾಂತಾರಾಮ್, ಸಂದೀಪ್, ಪ್ರಸನ್ನ, ವಿನೋದ್, ರಂಗನಾಥ್, ವೀರೇಶ್, ಹಾಗೂ ರಾಮ್ ನಾಯ್ಕ್ ಅವರನ್ನು ಇಡೀ ವಿಶ್ವವಿದ್ಯಾನಿಲಯವು ಮೆಚ್ಚುಗೆ ವ್ಯಕ್ತಪಡಿಸಿ ಮುಂದೆ ಈ ಸಾಧನವನ್ನು ದೊಡ್ಡಮಟ್ಟದಲ್ಲಿ ಪ್ರದರ್ಶಿಸಿ ಜನರಿಗೆ ಇದರ ಉಪಯೋಗ ತಲಪುವಹಾಗೆ ಮಾರುಕಟ್ಟೆಯಲ್ಲಿ ಇದನ್ನು ತರಲು ಸೂಚಿಸಿದರು. ಈ ಪ್ರದರ್ಶನದ ಮೂಲಕ ಯುವ ಪೀಳಿಗೆಗೆ ಪ್ರತಿ ಸಮಸ್ಯೆಗೂ ಒಂದು ಪರಿಹಾರ ಇರುತ್ತದೆ ಎಂದು ತಿಳಿಸಿಕೊಟ್ಟರು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *