SBI ಭಾರತದ ಪ್ರತಿಷ್ಠ ಬ್ಯಾಂಕುಗಳಲ್ಲಿ ಒಂದು. ಈ ಬ್ಯಾಂಕು ತನ್ನದೇ ಆದ ವಿಶೇಷತೆಯಿಂದ ಅನೇಕ ಗ್ರಾಹಕರನ್ನ ತನ್ನತ್ತ ಸೆಳೆದುಕೊಳ್ಳುತ್ತಿದೆ ಈ ಬ್ಯಾಂಕುಗಳಲ್ಲಿ ಅನೇಕ ರೀತಿಯ ಸೇವೆಗಳು ಲಭ್ಯವಿದ್ದು ಜನರು ಉಳಿತಾಯ ಮಾಡಲು, ಸಾಲ ಪಡೆಯಲು, ತಮ್ಮ ಆಭರಣಗಳ ಭದ್ರತೆ ಮಾಡಲು ಹಾಗೂ ಇತ್ಯಾದಿ ನೀವೇಗಳನ್ನು SBI ನಿಂದ ಪಡೆಯುತ್ತಾರೆ ಅಷ್ಟೇ ಅಲ್ಲದೆ ಇಲ್ಲಿನ ಸೇರುಗಳಲ್ಲಿ ಹೂಡಿಕೆ ಮಾಡುವುದರಿಂದ ಲಾಭವನ್ನು ಪಡೆಯುತ್ತಾರೆ.

ವ್ಯಕ್ತಿಯು ತನ್ನ ಜೀವನದಲ್ಲಿ ಹಣವನ್ನ ಕೂಡಿಡಲು ಬಯಸುತ್ತಾನೆ ತಾನು ದುಡಿದ ಕೆಲವು ಹಣಗಳಲ್ಲಿ ಸ್ವಲ್ಪವನ್ನು ಕೂಡಿಟ್ಟರೆ ಮುಂದಿನ ಭವಿಷ್ಯಕ್ಕೆ ಸಹಾಯಕವಾಗಬಹುದು ಎಂಬು ಉದ್ದೇಶದಿಂದ ಬ್ಯಾಂಕಿನ ಮೊರೆ ಹೋಗುತ್ತಾನೆ. ಬ್ಯಾಂಕುಗಳು ತನ್ನ ಗ್ರಾಹಕರಿಗೆ ಈ ವಿಷಯಗಳಲ್ಲಿ ಹಣವನ್ನು ಉಳಿತಾಯ ಮಾಡಲು ಸಹಾಯ ಮಾಡುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಉಳಿತಾಯ ಮಾಡುವುದರ ಜೊತೆಗೆ ಹೂಡಿಕೆಯ ಬಗ್ಗೆ ಕೂಡ ಆಸಕ್ತಿ ತೋರಿಸುತ್ತಿದ್ದಾರೆ.

ಮ್ಯೂಚುವಲ್ ಫಂಡ್ಗಳು, ಸೆಕ್ಯೂರಿಟೀಸ್ ಗಳು, ಹಾಗೂ ಇನ್ನಿತರ ವಿಭಿನ್ನ ಕ್ಷೇತ್ರಗಳಲ್ಲಿ ಹಣವನ್ನು ಹೂಡಿಕೆ ಮಾಡುವುದರ ಮೂಲಕ ಲಾಭ ಗಳಿಸಲು ಆಸಕ್ತಿ ತೋರಿಸುತ್ತಾರೆ ಆದರೆ ಈ ವಿಚಾರದಲ್ಲಿ ಪೋಸ್ಟ್ ಆಫೀಸ್ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಕೊಡುವ ಗ್ಯಾರಂಟಿಯನ್ನು ಬೇರೆ ಬೇರೆ ಹಣಕಾಸಿನ ಸಂಸ್ಥೆಗಳು ನೀಡುವುದಿಲ್ಲ ಆದ್ದರಿಂದ SBI ನಂತಹ ಬ್ಯಾಂಕಿನಲ್ಲಿ ಸಿಗುವಂತಹ ವಿವಿಧ ರೀತಿಯ ಯೋಜನೆಗಳ ಮೇಲೆ ಹೂಡಿಕೆ ಮಾಡುವುದರಿಂದ ನೆಮ್ಮದಿಯಾಗಿ ಜೀವನಗಳಬಹುದು ಜೊತೆಗೆ ಒಳ್ಳೆಯ ಲಾಭವನ್ನು ಗಳಿಸಬಹುದು.

ಇದೀಗ SBI ಹೂಡಿಕೆದಾರರಿಗೆ ಉಪಯೋಗವಾಗುವಂತಹ ಅಮೃತ್ ಕಳಶ ಯೋಜನೆಯನ್ನು ಜಾರಿಗೆ ತಂದಿದ್ದು ಇದೇ ಏಪ್ರಿಲ್ 12 ,2013 ರಂದು ಈ ಯೋಜನೆ ಅಂಗೀಕೃತವಾಯಿತು ಇದು ಒಂದು ರೀತಿಯ FD ಯೋಜನೆ ಆಗಿದ್ದು ಇಲ್ಲಿ ಹೂಡಿಕೆ ಮಾಡುವುದರಿಂದ ಬೇರೆ ಬೇರೆ ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿ ದರವನ್ನು ಗ್ರಾಹಕರು ಪಡೆಯಬಹುದು. ಮೊದಲು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆಗಸ್ಟ್ 15,2023 ರ ವರೆಗೆ ಮಾತ್ರ ಕಾಲಾವಕಾಶ ನೀಡಲಾಗಿತ್ತು ಆದರೆ ಈಗ ಕೆಲವು ಕಾರಣಗಳಿಂದ ಡಿಸೆಂಬರ್ 31, 2023 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ ಈ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳೋಣ.

ಇದು 400 ದಿನಗಳ ಹೂಡಿಕೆಯ ಯೋಜನೆಯಾಗಿದ್ದು ಈ ಯೋಜನೆಯ ಅಡಿಯಲ್ಲಿ ಠೇವಣಿ ಇಟ್ಟರೆ ಆದಾಯ ತೆರಿಗೆ ಕಾಯ್ದೆಯ ಅನ್ವಯ TDS ದರವನ್ನು ವಿಧಿಸಲಾಗುತ್ತದೆ TDS ಕಡಿತಗೊಳಿಸಿ ತೀರ ಠೇವಣಿಯ ಮೇಲೆ ಮಾಸಿಕ ತ್ರೈಮಾಸಿಕ ಹಾಗೂ ಅರ್ಧ ವಾರ್ಷಿಕವಾಗಿ ಪರಿಷ್ಕೃತಗೊಂಡ ಬಡ್ಡಿಯನ್ನು ನೀಡಲಾಗುತ್ತದೆ. ಹೂಡಿಕೆದಾರರಿಗೆ 7.10% ನಷ್ಟು ಬಡ್ಡಿ ಸಿಗುತ್ತದೆ ಒಂದು ವೇಳೆ ಹಿರಿಯ ನಾಗರಿಕರು ಈ ಯೋಜನೆಯ ಅಡಿಯಲ್ಲಿ ಠೇವಣಿ ಇಟ್ಟರೆ 7.60 ಪರ್ಸೆಂಟ್ ಬಡ್ಡಿಯನ್ನು ನೀಡುತ್ತದೆ ಇದರ ಜೊತೆಯಲ್ಲಿ. ಅಮೃತ ಕಳಶ ಯೋಜನೆಯ ಅಡಿಯಲ್ಲಿ ಅವಧಿ ಪೂರ್ವ ಸಾಲ ಸೌಲಭ್ಯವನ್ನು ಕೂಡ ಪಡೆಯಬಹುದು.

ಎರಡು ಕೋಟಿ ಹೂಡಿಕೆ ಮಾಡಿದರೆ ಮುಂಚಿತವಾಗಿ ಸಾಲ ತೆಗೆದುಕೊಳ್ಳುವ ಅವಕಾಶ ಕೂಡ ಇದೆ ಒಂದು ಲಕ್ಷ ರೂಪಾಯಿಗೆ ಯೋಜನೆಯನ್ನು ಖರೀದಿ ಮಾಡಿದರೆ ವಾರ್ಷಿಕವಾಗಿ 8017 ರೂಪಾಯಿ ಬಡ್ಡಿ ಸಿಗುತ್ತದೆ ಒಂದು ವೇಳೆ ಹಿರಿಯ ನಾಗರಿಕರಾದರೆ 8600 ಗಳ ಬಡ್ಡಿ ಸಿಗುತ್ತದೆ.

ಈ ಎಲ್ಲಾ ವಿಶೇಷತೆಗಳನ್ನ ಹೊಂದಿರುವ ಅಮೃತ್ ಕಲಶ FD ಯೋಜನೆಯ SBI ಯುನೋ ಬ್ಯಾಂಕಿಂಗ್ ಆಪ್ ಅನ್ನು ಬಳಸಬಹುದು. ಅಥವಾ ಹತ್ತಿರದ SBI ಬ್ಯಾಂಕ್ ಗಳಿಗೆ ಭೇಟಿ ಕೊಟ್ಟು ಈ ಯೋಜನೆಗೆ ರಿಜಿಸ್ಟರ್ ಮಾಡಿಕೊಳ್ಳಬಹುದು. ಇದನ್ನೂ ಓದಿ ಕರ್ನಾಟಕ ಬ್ಯಾಂಕ್ ನಲ್ಲಿ ಆಫೀಸರ್ ಹುದ್ದೆಗಳು ಖಾಲಿ ಇವೆ, ಆಸಕ್ತರು ಅರ್ಜಿಹಾಕಿ

By AS Naik

Leave a Reply

Your email address will not be published. Required fields are marked *