ನವರಾತ್ರಿಯ ದಿನದಂದು ಸರಸ್ವತಿ ಪೂಜೆಯನ್ನು ಮಕ್ಕಳಿಂದ ಹೀಗೆ ಮಾಡಿಸಿದ್ರೆ, ಸರಸ್ವತಿ ಮಾತೆಯ ಕೃಪಾಕಟಾಕ್ಷ ಸದಾ ಇರುತ್ತೆ

0 0

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನವರಾತ್ರಿಯ ಏಳನೇ ದಿನದಂದು ಸರಸ್ವತಿ ಪೂಜೆಯನ್ನು ಮಾಡಲಾಗುತ್ತದೆ. ಸರಸ್ವತಿ ಅಂದರೆ ವಿದ್ಯೆಯ ಅಧಿದೇವತೆ. ಹೀಗಾಗಿ ಆಕೆಯ ಪೂಜೆಯನ್ನು ಮಾಡುವುದು ಜ್ಞಾನ ಹಾಗೂ ವಿದ್ಯಾರ್ಜನೆ ಮಾಡುವುದಕ್ಕೆ ಶ್ರೀದೇವಿಯಿಂದಲೇ ನೇರವಾದ ಆಶೀರ್ವಾದ ಎಂದರು ಕೂಡ ತಪ್ಪಾಗಲಾರದು. ಹೀಗಾಗಿ ಇದು ಹಿರಿಯರಿಗಿಂತ ವಿಶೇಷವಾಗಿ ಚಿಕ್ಕ ಮಕ್ಕಳು ಮಾಡಿದರೆ ಅವರಿಗೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸರಸ್ವತಿ ಮಾತೆಯ ಕೃಪಾಕಟಾಕ್ಷ ಆಗುತ್ತದೆ.

ಮೊದಲಿಗೆ ಸರಸ್ವತಿ ವಿಗ್ರಹ ಇರಬೇಕು ಮನೆಯಲ್ಲಿ ಸರಸ್ವತಿ ವಿಗ್ರಹ ಇಲ್ಲದಿದ್ದರೆ ಅರಶಿನದಿಂದ ವಿಗ್ರಹವನ್ನು ಮಕ್ಕಳ ಕೈಯಲ್ಲಿಯೇ ತಯಾರಿಸಬೇಕು. ನಂತರ ಒಂದು ತಾಮ್ರದ ತಟ್ಟೆಯನ್ನು ಇಟ್ಟು ಅದಕ್ಕೆ ಎಂಟು ವೀಳ್ಯದೆಲೆಯನ್ನು ಹಾಕಿ ಅಕ್ಕಿಯನ್ನು ಸುರಿದು ಅಲ್ಲಿ ಗಣಪತಿಯ ಅಷ್ಟಮಂಡಲ ಚಿಹ್ನೆಯನ್ನು ರಚಿಸಬೇಕು. ಈ ಪೂಜೆಯನ್ನು ಪ್ರಾರಂಭಿಸುವ ಮೊದಲು ಮಕ್ಕಳಿಂದ ಓಂ ಗಂ ಗಣಪತಯೇ ನಮಃ ಎಂಬ ಮಂತ್ರವನ್ನು ಹೇಳಿಸಬೇಕು. ಇನ್ನು ಆ ಅಕ್ಕಿಯ ಮೇಲೆ ಒಂದು ಕಡೆ ಸರಸ್ವತಿಯ ವಿಗ್ರಹ ಅಥವಾ ಅರಿಶಿನ ಉಂಡೆಯಿಂದ ಮಾಡಿರುವ ವಿಗ್ರಹವನ್ನು ಇನ್ನೊಂದು ಕಡೆ ಗಣಪತಿಯ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು.

ನಂತರ ಹೂವನ್ನು ಅರ್ಪಿಸಿ ಪೂಜಿಸ ಬೇಕು. ಒಂದು ವೇಳೆ ನಿಮ್ಮ ಬಳಿ ಕೇವಲ ವಿಗ್ರಹವಿದ್ದರೆ ಪಂಚಾಮೃತ ಅಭಿಷೇಕವನ್ನು ಮಾಡಬೇಕಾಗುತ್ತದೆ. ಈ ಎಲ್ಲಾ ಕಾರ್ಯಗಳನ್ನು ಕೂಡ ನೀವು ಮಕ್ಕಳಿಂದಲೇ ಮಾಡಿಸಬೇಕು ಎನ್ನುವುದನ್ನು ಮಾತ್ರ ನೆನಪಿಟ್ಟುಕೊಳ್ಳಿ. ಈ ಸಂದರ್ಭದಲ್ಲಿ ಸರಸ್ವತಿ ಮಾತೆಗೆ ಇಷ್ಟ ಆಗುವಂತಹ ಹೋಳಿಗೆ ಪಾಯಸ ಆದಂತಹ ಸಿಹಿ ಖಾದ್ಯಗಳನ್ನು ಆಕೆಯ ನೈವೇದ್ಯಕ್ಕಾಗಿ ತಯಾರಿಸಬೇಕಾಗುತ್ತದೆ. ಇದು ಮಕ್ಕಳಿಗೆ ಕೂಡ ಇಷ್ಟ ಆಗಿರಬೇಕಾಗುತ್ತದೆ ಯಾಕೆಂದರೆ ಅದನ್ನೇ ಪ್ರಸಾದದ ರೀತಿಯಲ್ಲಿ ಮಕ್ಕಳು ಸೇವಿಸಬೇಕು ಅದರಿಂದಾಗಿಯೇ ತಾಯಿಯ ಕೃಪೆ ಆ ಮಕ್ಕಳಿಗೆ ವರ್ಗಾವಣೆ ಆಗುತ್ತದೆ ಎನ್ನುವ ನಂಬಿಕೆಯನ್ನು ಇಲ್ಲಿ ನಾವು ಇಟ್ಟುಕೊಳ್ಳಬಹುದಾಗಿದೆ.

ಈ ಸಂದರ್ಭದಲ್ಲಿ ಮಕ್ಕಳಿಂದಲೇ ತುಪ್ಪದ ದೀಪಾರಾಧನೆಯನ್ನು ದೇವಿಗೆ ಮಾಡಿಸಬೇಕು. ಇನ್ನು ಈ ಸಂದರ್ಭದಲ್ಲಿ ಸರಸ್ವತಿ ದೇವಿಯ ಎದುರುಗಡೆ 5 ನವಿಲುಗರಿಯನ್ನು ಕೂಡ ಇಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಮಕ್ಕಳ ವಿದ್ಯಾರ್ಜನೆಗೆ ಸಂಬಂಧಪಟ್ಟಂತಹ ಪೆನ್ನು ಪುಸ್ತಕ ಈ ರೀತಿಯ ವಸ್ತುಗಳನ್ನು ದೇವರ ಮೂರ್ತಿಯ ಎದುರುಗಡೆ ಇಟ್ಟು ಪೂಜಿಸಬೇಕು. ಈ ಮೂಲಕ ಮಕ್ಕಳು ಸರಸ್ವತಿ ಪೂಜೆ ಮಾಡುವುದರ ಜೊತೆಗೆ ತಮ್ಮ ಶಿಕ್ಷಣ ಕ್ಷೇತ್ರದಲ್ಲಿ ದೇವಿಯ ಆಶೀರ್ವಾದದಿಂದಾಗಿ ಪ್ರಗತಿಯನ್ನು ಸಾಧಿಸುತ್ತಾರೆ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.