ಸಂಚಾರಿ ವಿಜಯ್ ಅವರ ಕೊನೆ ಮಾತು ಕೇಳಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ ನೋಡಿ

0 0

ನಾನು ಅವನಲ್ಲ, ಅವಳು’ ಎಂಬ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ನಟ ಸಂಚಾರಿ ವಿಜಯ್ ಅವರು ನಿಧನರಾಗಿದ್ದಾರೆ. ರಸ್ತೆ ಅಪಘಾತದಲ್ಲಿ ವಿಜಯ್ ಅವರ ತಲೆ ಹಾಗೂ ತೊಡೆಗೆ ಭಾರೀ ಪೆಟ್ಟಾಗಿತ್ತು. ಸರ್ಜರಿ ಮಾಡಿದ್ದರೂ ಕೂಡ ವಿಜಯ್ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ನಟ ಸಂಚಾರಿ ವಿಜಯ್ ಅವರಿಗೆ 38 ವರ್ಷ ವಯಸ್ಸಾಗಿದ್ದು, ಅವರು ಶನಿವಾರ ತಡರಾತ್ರಿ ಅಂದರೆ ಜೂನ್ 12ರಂದು ನಡೆದ ಅಪಘಾತದಲ್ಲಿ ನಿಧನರಾಗಿದ್ದಾರೆ. ಅಪಘಾತ ಆದತಕ್ಷಣ ವಿಜಯ್ ಅವರನ್ನು ಆಸ್ಪತ್ರೆಗೆ ಕರೆತಂದು ಆಪರೇಶನ್ ಕೂಡ ಮಾಡಲಾಗಿತ್ತು. ಆದರೆ ವಿಜಯ್ ಅವರು ಮೆದುಳು ನಿಷ್ಕ್ರಿಯವಾಗಿ ಚಿಕಿತ್ಸಗೆ ಸ್ಪಂದಿಸಿರಲಿಲ್ಲ. ಅಪೋಲೋ ಆಸ್ಪತ್ರೆ ವೈದ್ಯರಿಂದ ಅವರ ಸಾವಿನ ಕುರಿತು ಅಧಿಕೃತ ಘೋಷಣೆಯಾಗಿದೆ. ವಿಜಯ್ ಅವರು ತಮ್ಮ ಸಾವಿಗಿಂತ ಮೊದಲು ಒಂದು ವಿಡಿಯೋವನ್ನು ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಅವರು ಏನು ಹೇಳಿದ್ದರು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸಂಚಾರಿ ವಿಜಯ್ ಅವರು ಗೆಳೆಯ ನವೀನ್ ಜೊತೆ ಜೂನ್ 12ರಂದು ರಾತ್ರಿ 11.45ರ ಸುಮಾರಿಗೆ ಬೈಕ್‌ನಲ್ಲಿ ಹೋಗುವಾಗ ರಸ್ತೆ ಅಪಘಾತವಾಗಿತ್ತು. ವಿದ್ಯುತ್ ಕಂಬಕ್ಕೆ ಹೋಗಿ ಬೈಕ್ ಗುದ್ದಿತ್ತು ಎಂದು ತಿಳಿದಿದೆ. ತಕ್ಷಣವೇ ಅವರನ್ನು ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆರೋಗ್ಯದ ಸ್ಥಿತಿ ತುಂಬ ಗಂಭೀರವಾಗಿತ್ತು. ಸಿ.ಟಿ. ಸ್ಕ್ಯಾನ್ ಮಾಡಿದ ನಂತರದಲ್ಲಿ ವಿಜಯ್ ಮೆದುಳಿಗೆ ತೀವ್ರ ಗಾಯವಾಗಿ ರಕ್ತಸ್ರಾವ ಆಗಿರೋದು ವೈದ್ಯರಿಗೆ ಗೊತ್ತಾಗಿತ್ತು. ಮೆದುಳಿನ ರಕ್ತಸ್ರಾವವನ್ನು ತಡೆಯಲು ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅಪಘಾತ ಆದಕೂಡಲೆ ಆಸ್ಪತ್ರೆಗೆ ಕರೆತಂದರಾದರೂ ವಿಜಯ್ ಸ್ಥಿತಿ ತುಂಬ ಹದಗೆಟ್ಟಿತ್ತು. ತಕ್ಷಣ ಅವರಿಗೆ ಆಪರೇಶನ್ ಕೂಡ ಮಾಡಲಾಗಿತ್ತು. ಆಪರೇಶನ್ ಆದ 36 ಗಂಟೆ ಆದರೂ ಕೂಡ ಅವರು ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ಬಹು ಮುಖ್ಯವಾಗಿ ಅವರ ಮೆದುಳಿಗೆ ಭಾರೀ ಪೆಟ್ಟಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತಾದರೂ ಅವರಿಗೆ ಪ್ರಜ್ಞೆ ಬಂದಿರಲಿಲ್ಲ.

ನ್ಯೂರೋ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಿದ್ದರೂ ಕೂಡ ವಿಜಯ್ ಅವರು ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ಅವರ ಆರೋಗ್ಯ ಸ್ಥಿತಿ ತುಂಬ ಗಂಭೀರವಾಗಿದೆ, ಏನೂ ಹೇಳಲಾಗಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದರು. ಕುಟುಂಬಸ್ಥರು ವಿಜಯ್ ಅವರ ಅಂಗಾಂಗ ದಾನ ಮಾಡಲು ನಿರ್ಧಾರ ಮಾಡಿದ್ದಾರೆ. ನಟನೆ ಜೊತೆಗೆ ಸಾಮಾಜಿಕ ಕೆಲಸ ಮಾಡೋದರಲ್ಲಿ ಸಂಚಾರಿ ವಿಜಯ್ ಅವರು ಹೆಚ್ಚು ಗುರುತಿಸಿಕೊಂಡಿದ್ದರು. ಬೆಟ್ಟದಂತಹ ಕನಸು ಕಂಡಿದ್ದ ಇವರ ಬಹುದೊಡ್ಡ ಗುರಿ ಕಣ್ಮುಂದೆ ಇತ್ತು. ಕಷ್ಟಗಳು ಎದುರಾದ್ರೂ ಅವಕಾಶಗಳು ಕಡಿಮೆ ಸಿಕ್ಕರೂ ಹಿಂದೆ ಸರಿದಿರಲಿಲ್ಲ. ಸಹನೆ ಕಳೆದುಕೊಳ್ಳಲಿರಲಿಲ್ಲ. ಚಿಕ್ಕ ಚಿಕ್ಕ ಅವಕಾಶಗಳಲ್ಲೇ ತಮ್ಮನ್ನ ತಾವು ಗುರುತಿಸಿಕೊಂಡಿದ್ರು. ಹೀಗೆ ಸಿನಿಮಾ ಕ್ಷೇತ್ರದಲ್ಲೂ ಚಾಪು ಮೂಡಿಸಿದ್ದ ನಟ ಸಂಚಾರಿ ವಿಜಯ್ ಸಂಚಾರ ಮುಗಿಸಿದ್ದಾರೆ.

ಇವರು ರಂಗಭೂಮಿ ಮತ್ತು ಸಿನೆಮಾ ಕಲಾವಿದರಾಗಿದ್ದು ಪ್ರಮುಖವಾಗಿ ಕನ್ನಡ ಚಿತ್ರರಂಗದ ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿ ಸಿನೆಮದಲ್ಲಿಯೂ ಕೆಲಸ ಮಾಡಿದ್ದಾರೆ. 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಇವರಿಗೆ ಕನ್ನಡದ “ನಾನು ಅವನಲ್ಲ ಅವಳು” ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದ್ದು, ಈ ಚಿತ್ರದಲ್ಲಿ ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿದ್ದಾರೆ. ಹಾಗೂ ಮತ್ತೊಂದು ಸಿನೆಮಾ “ಹರಿವು”ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆಯಿತು. ವಿಜಯ್ ನಿಧನದ ಸುದ್ದಿ ತಿಳಿದು ಚಂದನವನದ ಸದಸ್ಯರು ಕಣ್ಣೀರು ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಸೇರಿದಂತೆ ಸಾಕಷ್ಟು ಜನರು ವಿಜಯ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ನಂತರದಲ್ಲಿ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನಗಳ ಮೂಲಕ ವಿಜಯ್ ಹುಟ್ಟೂರು ಪಂಚಮನಹಳ್ಳಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು.

ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ತಮ್ಮ ಸಾವಿಗೂ ಕೆಲವು ದಿನಗಳ ಹಿಂದೆ ಅಷ್ಟೇ ಮಾಡಿದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅದರಲ್ಲಿ ಸಂಚಾರಿ ವಿಜಯ್ ಅವರು ಏನು ಹೇಳಿದ್ದರು ಅನ್ನೋದನ್ನ ನೋಡೋಣ. ” ಲಾಕ್ ಡೌನ್ ನಿಂದಾಗಿ ಸಾಕಷ್ಟು ಜನರಿಗೆ ಸಮಸ್ಯೆ ಆಗಿದೆ. ರಂಗಭೂಮಿಯನ್ನೆ ನಂಬಿಕೊಂಡು ಕೆಲಸ ಮಾಡುತ್ತಿದ್ದ ಅನೇಕ ರಂಗಭೂಮಿ ಕಲಾವಿದರಿಗೆ ಕೂಡಾ ಹಲವಾರು ಸಮಸ್ಯೆ ಆಗಿದೆ. ಹಾಗಾಗಿ ‘ ಸಂಚಯ ತಂಡ ‘ ಇದನ್ನು ಅಂದರೆ, ರಂಗ ಭೂಮಿ ಕಲಾವಿದರ ಕಷ್ಟಗಳನ್ನು ಗಮನದಲ್ಲಿ ಇಟ್ಟುಕೊಂಡು ಒಟ್ಟೂ ನಾಲ್ಕು ನಾಟಕಗಳನ್ನು ಪ್ರಸ್ತುತಪಡಿಸಲು ನಿರ್ಧರಿಸಿದೆ. ಫಿಲ್ಮ್ ಮೇಕರ್ ಯುನೈಟೆಡ್ ಕ್ಲಬ್ ಇಲ್ಲಿ ನಿಮಗೆ ಸಮಯ ಸಿಕ್ಕಾಗ ಯಾವಾಗ ಬೇಕಾದರೂ ಈ ನಾಟಕಗಳನ್ನು ನೋಡಬಹುದು. FUC ಅಲ್ಲಿ ಕೂಡಾ ಟಿಕೆಟ್ ಕೊಂಡುಕೊಳ್ಳುವ ಮೂಲಕ ನಾಟಕವನ್ನು ನೋಡಬಹುದು ಇದರಿಂದ ಈ ಮೂಲಕ ಸುಮಾರು ಮುನ್ನೂರು ರಂಗಭೂಮಿ ಕಲಾವಿದರಿಗೆ ಸಹಾಯ ಮಾಡಬೇಕು ಎಂದು ಸಂಚಯ ತಂಡ ಕೆಲಸ ಮಾಡುತ್ತಿದೆ. ಈ ಸಾಹಾಯಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಹೇಳಿ ರಂಗ ಭೂಮಿ ಕಲಾವಿದರ ಸಲುವಾಗಿ ಈ ಒಂದು ವಿಡಿಯೋವನ್ನು ಮಾಡಿದ್ದರು. ಸಾಕಷ್ಟು ಸಾಮಾಜಿಕ ಕೆಲಸ ಮಾಡುತ್ತಿದ್ದ ಸಂಚಾರಿ ವಿಜಯ್ ಅವರು ತಮ್ಮ ಸಾವಿನ ಸಮಯದಲ್ಲಿ ಕೂಡಾ ತನ್ನ ದೇಹದ ಅಂಗಾಂಗಗಳನ್ನು ದಾನ ಮಾಡಿ ಅವರು ಇಲ್ಲ ಎನ್ನುವ ಮಾತು ಬಾರದ ಹಾಗೆ ಮಾಡಿ ಅವರ ಅಂಗಾಂಗಳ ಮೂಲಕ ನಮ್ಮ ನಡುವೆಯೇ ಇರುವ ಹಾಗೆ ಮಾಡಿಹೋಗಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸೋಣ.

Leave A Reply

Your email address will not be published.