ಜಗತ್ತಿನಲ್ಲಿ ಯಾವಾಗಲೂ ಒಳ್ಳೆಯವರು ಹೆಚ್ಚು ನರಳುತ್ತಿದ್ದಾರೆ ಹಾಗೂ ಕಷ್ಟಗಳನ್ನು ಅವರು ಮಾತ್ರ ಅನುಭವಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತವೆ, ನಿಜವಾಗಲೂ ಒಳ್ಳೆಯವರು ನರಳುತ್ತಿದ್ದಾರಾ ಅಥವಾ ಕೆಟ್ಟವರು ಹೆಚ್ಚು ನರಳುತ್ತಿದ್ದಾರಾ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಜಗತ್ತಿನಲ್ಲಿ ಪ್ರತಿಯೊಬ್ಬರು ತಮ್ಮನ್ನು ತಾವು ಒಳ್ಳೆಯವರು ಎಂದು ಪರಿಗಣಿಸುತ್ತಾರೆ. ತಾವು ಒಳ್ಳೆಯವರೆಂದು ಅಂದುಕೊಳ್ಳುವವರು ಸುಮ್ಮನೆ ತೊಳಲಾಡುತ್ತಿರುತ್ತಾರೆ. ಮೊಟ್ಟ ಮೊದಲನೆಯದಾಗಿ ಜನರು ಒಳ್ಳೆಯವರಾಗುತ್ತಿರುವುದು ಬೇರೆಯವರು ಸರಿಯಿಲ್ಲವೆಂದು ನಿರೂಪಿಸಿಕೊಳ್ಳುತ್ತಿದ್ದಾರೆ ಹಾಗೂ ಅವರಿಗೆ ಹೋಲಿಸಿಕೊಂಡು ತಮ್ಮನ್ನು ತಾವೇ ಒಳ್ಳೆಯವರು ಎಂದು ತಿಳಿದುಕೊಳ್ಳುತ್ತಿದ್ದಾರೆ. ಬೇರೆಯವರನ್ನು ತಮಗೆ ಹೋಲಿಸಿಕೊಂಡು ನಾವು ಅವರಿಗಿಂತ ಒಳ್ಳೆಯವರು ಹಾಗೂ ತಮ್ಮನ್ನು ಹೊರತುಪಡಿಸಿ ಬೇರೆಯವರೆಲ್ಲರು ಕೆಟ್ಟವರು ಎಂದು ಭಾವಿಸಿಕೊಂಡು ನಮಗೆ ಮಾತ್ರ ಒಳ್ಳೆಯದಾಗುತ್ತಿಲ್ಲ, ಒಳ್ಳೆಯವರು ಮಾತ್ರ ನರಳುತ್ತಾರೆ ಹಾಗೂ ಕೆಟ್ಟವರು ಸುಖದಿಂದ ಇದ್ದಾರೆ ಎಂದು ಕೊರಗುತ್ತಾರೆ.

ಜಗತ್ತಿನಲ್ಲಿ ಬಹಳ ಜನರ ಜೊತೆ ನಿಮ್ಮನ್ನು ಹೋಲಿಸಿಕೊಂಡು ಒಳ್ಳೆಯವರೆಂದು ಭಾವಿಸಿದಷ್ಟು ಬೇರೆಯವರು ಕೆಟ್ಟವರಾಗಿ ಕಾಣಿಸುತ್ತಾರೆ. ಸಮಾಜದಲ್ಲಿ ಇಂತವರ ಬಳಿ ಜನರು ಬರಲು ಹೆದರುತ್ತಾರೆ ಏಕೆಂದರೆ ಅವರಿಗೆ ಜೀವನ ಅನ್ನೋದೆ ಇರುವುದಿಲ್ಲ. ಒಬ್ಬರ ಒಳ್ಳೆತನ ಎನ್ನುವುದು ಬೇರೆಯವರ ಹೋಲಿಕೆಯಲ್ಲಿ ಅವಲಂಬಿತವಾಗಿ ರಬಾರದು. ಅತಿಯಾದ ಒಳ್ಳೆಯವರು ಭೂ ಲೋಕದಲ್ಲಿ ಹಾಗೂ ಪರಲೋಕದಲ್ಲಿ ಸಲ್ಲುವುದಿಲ್ಲ. ಕಥೆಯ ಮೂಲಕ ತಿಳಿಸುವುದಾದರೆ ಶಂಕರನ್ ಪಿಳ್ಳೈ ಎಂಬ ವ್ಯಕ್ತಿ ಹಿಂದಿನ ಜನ್ಮದಲ್ಲಿ ಒಳ್ಳೆಯ ವ್ಯಕ್ತಿಯಾಗಿದ್ದನು. ಒಂದು ಖಾಯಿಲೆ ಬಂದು ಮರಣ ಹೊಂದಿದನು. ಈತನು ಒಳ್ಳೆಯ ವ್ಯಕ್ತಿಯಾದ್ದರಿಂದ ಸ್ವರ್ಗಕ್ಕೆ ಹೋಗುತ್ತಾನೆ. ಸ್ವರ್ಗಕ್ಕೆ ಹೋದಾಗ ಇವನ ಪಾಪ ಪುಣ್ಯಗಳ ಪುಸ್ತಕಗಳನ್ನು ತೆರೆದು ನೋಡಿದಾಗ ಮೊದಲನೇ ಪುಟದಿಂದ ಕೊನೆಯ ಪುಟದವರೆಗೆ ಎಲ್ಲವೂ ಪುಣ್ಯಗಳೇ ತುಂಬಿರುತ್ತವೆ. ಇದನ್ನು ನೋಡಿದ ದೇವತೆಗಳು ಶಂಕರನ್ ಪಿಳ್ಳೈ ಬಳಿ ಬಂದು ಜೀವನ ಪೂರ್ತಿಯಾಗಿ ಒಳ್ಳೆ ಕೆಲಸ ಮಾಡಿದವರಿಗೆ ಯಾವ ಕೊಣೆಯೂ ನಿಗದಿ ಮಾಡಿಲ್ಲ, ಮತ್ತು ಇಲ್ಲಿಯವರೆಗೂ ಒಂದೂ ಕೆಟ್ಟ ಕೆಲಸ ಮಾಡದವರು ಸ್ವರ್ಗಕ್ಕೆ ಯಾರು ಬಂದಿಲ್ಲ ಆದ್ದರಿಂದ ಭೂಮಿಗೆ ಮತ್ತೆ ನಿನ್ನನ್ನು ಕಳುಹಿಸಿ ಮೂರು ಗಂಟೆಗಳ ಅವಧಿಯಲ್ಲಿ ಒಂದು ಕೆಟ್ಟ ಕೆಲಸ ಮಾಡಿ ಬರುವಂತೆ ಸಲಹೆ ನೀಡುತ್ತಾರೆ ಅದರಂತೆ ದೇವತೆಗಳು ಆತನನ್ನು ಭೂಮಿಗೆ ಕಳುಹಿಸುತ್ತಾರೆ.

ಅವನು ಇಲ್ಲಿಯವರೆಗೂ ಕೆಟ್ಟ ಕೆಲಸಗಳನ್ನು ಮಾಡದೇ ಇರುವುದರಿಂದ ಯಾವ ಕೆಟ್ಟ ಕೆಲಸ ಮಾಡಬೇಕೆಂದು ಒಂದುವರೆ ತಾಸಿನವರೆಗೆ ಯೋಚಿಸುತ್ತಾನೆ ನಂತರ ನೆರೆಮನೆಯಲ್ಲಿ ನಡು ವಯಸ್ಸಿನ ಒಬ್ಬಳು ಮಹಿಳೆ ಇರುತ್ತಾಳೆ. ಅವಳು ಇವನ ಕಡೆ ಮಾದಕ ನೋಟ ಬೀರುತಿದ್ದಳು ಆದರೆ ಅವನು ಯಾವತ್ತೂ ಅವಳ ಕಡೆ ನೋಡಿರಲಿಲ್ಲ. ಅದು ನೆನಪಾಗಿ ಆತನು ಅವಳ ಮನೆಗೆ ಹೋಗುತ್ತಾನೆ. ಅಲ್ಲಿ ಅವಳು ಮನೆಯ ಬಾಗಿಲನ್ನು ತೆರೆದಾಗ ಶಂಕರನ್ ಅವಳ ಬಳಿ ನೀನು ನನಗೆ ಬೇಕು ಎನ್ನುತ್ತಾನೆ ನಂತರ ಪ್ರಕೃತಿ ಸಹಜ ಕ್ರಿಯೆ ನಡೆಯುತ್ತದೆ. ಅವನು ಇದೊಂದು ಕೆಟ್ಟ ಕೆಲಸ ಇದರಿಂದ ತಾನು ಸ್ವರ್ಗಕ್ಕೆ ಮರಳಬಹುದು ಎಂದು ಭಾವಿಸುತ್ತಾನೆ ಆದರೆ ಅವನಿಗೆ ಆ ಮಹಿಳೆಯು ಪಿಳ್ಳೈ ಅವರೇ ನೀವು ಒಳ್ಳೆಯ ಕೆಲಸ ಮಾಡಿದ್ದೀರಾ ಎಂದು ಹೇಳುತ್ತಾಳೆ. ಅವಳ ದೃಷ್ಟಿಯಲ್ಲಿ ಅವನು ಒಳ್ಳೆಯ ಕೆಲಸ ಮಾಡಿದ್ದಾನೆ. ಇದರಿಂದ ಅವನಿಗೆ ಸ್ವರ್ಗಕ್ಕೆ ಹೋಗುವ ಅವಕಾಶ ತಪ್ಪುತ್ತದೆ.

ಮನುಷ್ಯನಿಗೆ ಮುಕ್ತಿ ಕೊಡುವುದು ಬೇರೆಯವರಿಗೆ ಹೋಲಿಸಿಕೊಂಡು ಪಡೆದಿರುವ ಒಳ್ಳೆತನದಿಂದಲ್ಲ. ಬೇರೆಯವರ ಹೋಲಿಕೆಯಲ್ಲಿ ಹೇಳಿಕೊಂಡ ಒಳ್ಳೆತನ ಅದೊಂದು ರೀತಿಯ ಕಾಯಿಲೆಯಾಗಿ ಜನರಲ್ಲಿ ಕಾಡುತ್ತಿದೆ. ಜನರ ಈ ರೀತಿಯ ವರ್ತನೆಯು ನಿಜವಾದ ಸಂತೋಷದ ಅರ್ಥವು ತಿಳಿಯದಂತೆ ಮಾಡಿದೆ. ಮನುಷ್ಯರು ಬೇರೆಯವರ ಬಳಿ ಇರುವುದು ನಮ್ಮ ಬಳಿ ಬೇಕೆಂದು ಆಸೆ ಪಡುತ್ತಾರೆ. ಅದು ದೊರಕಲಿಲ್ಲ ಎಂದರೆ ಅದು ಕಷ್ಟ ಎಂದು ಭಾವಿಸುತ್ತಾರೆ. ಒಂದು ವೇಳೆ ಬೇರೆಯವರ ಬಳಿ ಇಲ್ಲದ್ದು ತಮ್ಮ ಬಳಿ ಇದ್ದರೆ ಅದನ್ನು ಸುಖ ಎಂದು ಪರಿಗಣಿಸುತ್ತಾರೆ. ಉದಾಹರಣೆಗೆ ಜನರೆಲ್ಲ ಆಹಾರವಿಲ್ಲದೆ ಉಪವಾಸ ಇದ್ದಾಗ ನಮ್ಮ ಬಳಿ ಆಹಾರ ಇದ್ದು ಹೊಟ್ಟೆ ತುಂಬ ತಿಂದರೆ ಇದನ್ನು ಸುಖ ಎನ್ನುತ್ತಾರೆ. ಬೇರೆಯವರ ಹಸಿವನ್ನು ತಣಿಸುವುದು ಸುಖ ಎಂದು ಯಾರು ತಿಳಿದುಕೊಳ್ಳುವುದಿಲ್ಲ. ಭೂಮಿಯ ಮೇಲೆ ಇರುವ ಪ್ರತಿಯೊಬ್ಬರು ತಮ್ಮ ಕರ್ಮಗಳ ಅನುಸಾರವಾಗಿ ಕಷ್ಟ ಸುಖಗಳನ್ನು ಅನುಭವಿಸುತ್ತಿದ್ದಾರೆ ಎಂದು ಸದ್ಗುರುಜೀಯವರು ಜನರಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *