ಹಾರ್ಧಿಕ್ ಪಾಂಡ್ಯ ಮಗು ಕ್ರುನಾಲ್ ಪಾಂಡ್ಯ ಭುಜದ ಮೇಲೆ ಎಷ್ಟು ಕ್ಯೂಟ್ ಆಗಿದೆ

0 0

ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಅವರು ಭಾರತದ ಕ್ರಿಕೆಟ್ ತಂಡದ ಅತ್ಯುತ್ತಮ ಆಟಗಾರರಾಗಿದ್ದಾರೆ. ಇವರು ತಮ್ಮ ಬಿಡುವಿನ ಸಂದರ್ಭದಲ್ಲಿ ಕುಟುಂಬದ ಜೊತೆ ಉತ್ತಮ ಸಮಯವನ್ನು ಕಳೆಯುತ್ತಾರೆ. ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಕುಟುಂಬದ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಭಾರತದ ಕ್ರಿಕೆಟ್ ನ ಕುಂಗ್ ಫೂ ಪಾಂಡ್ಯ ಎಂದು ಹೆಸರಾಗಿರುವ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯರವರು 1993 ಅಕ್ಟೋಬರ್ 11 ರಂದು ಗುಜರಾತ್ ನ ಸೂರತ್ ನಲ್ಲಿ ಜನಿಸಿದರು. ಇವರ ತಂದೆ ಹಿಮಾಂಶು ಪಾಂಡ್ಯ , ಇವರು ಒಂದು ಸಣ್ಣ ಕಾರು ಫೈನಾನ್ಸ್ ಅನ್ನು ಗುಜರಾತ್ ನ ಸೂರತ್ ನಲ್ಲಿ ನಡೆಸುತ್ತಿದ್ದರು. ಇವರದು ಬಡ ಕುಟುಂಬ. ಹಾರ್ದಿಕ್ ಪಾಂಡ್ಯರವರಿಗೆ ಹಿರಿಯ ಸಹೋದರ ಇದ್ದಾನೆ ಇವರ ಹೆಸರು ಕೃನಾಲ್ ಪಾಂಡ್ಯ. ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ತಮ್ಮ ಚಿಕ್ಕವಯಸ್ಸಿನಿಂದಲೂ ಕ್ರಿಕೆಟ್ ನ ಬಗ್ಗೆ ಅತಿಯಾದ ಆಸಕ್ತಿ ಹೊಂದಿದವರಾಗಿದ್ದರು ಇದನ್ನು ನೋಡಿದ ಅವರ ತಂದೆ ಮಕ್ಕಳಿಗೆ ಉತ್ತಮ ಕ್ರಿಕೆಟ್ ತರಬೇತಿ ನೀಡಲು ವಡೋದರದ ಕಿರಣ್ ಮೋರೆಯವರ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು.

ಹಾರ್ದಿಕ್ ಪಾಂಡ್ಯರವರು 9 ನೇ ತರಗತಿಯವರೆಗೆ ಮಾತ್ರ ಓದಿದ್ದಾರೆ. ನಂತರದಲ್ಲಿ ಕ್ರಿಕೆಟ್ ನ್ನು ಗಂಭೀರವಾಗಿ ತೆಗೆದುಕೊಂಡರು. ಇವರು ಆಲ್ ರೌಂಡರ್ ಆಗಿದ್ದು ಬಲಗೈ ಬ್ಯಾಟ್ಸ್ ಮ್ಯಾನ್ ಹಾಗೂ ಬೌಲರ್ ಆಗಿದ್ದಾರೆ. 2015 ರಲ್ಲಿ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ ಮೂಲಕ ಯಶಸ್ಸಿನ ಹಾದಿ ತುಳಿದರು. ಹಾರ್ದಿಕ್ ಪಾಂಡ್ಯರವರು ಡ್ಯಾನ್ಸರ್ ಹಾಗೂ ಮಾಡಲ್ ಆಗಿರುವ ನಟಿ ನತಾಶಾ ಸ್ಟಾಂಕೋವಿಕ್ ಅವರನ್ನು ಜನವರಿ 1, 2020 ರಂದು ಪ್ರೀತಿಸಿ ಮದುವೆಯಾದರು. 30 ಜುಲೈ 2020 ರಂದು ಹಾರ್ದಿಕ್ ಪಾಂಡ್ಯರವರ ಪುತ್ರ ಅಗಸ್ತ್ಯ ಪಾಂಡ್ಯ ಜನಿಸಿದರು. ಹಾರ್ದಿಕ್ ಪಾಂಡ್ಯ ಅವರ ಹಿರಿಯ ಸಹೋದರ ಕೃನಾಲ್ ಹಿಮಾಂಶು ಪಾಂಡ್ಯ ಅವರು 24 ಮಾರ್ಚ್ 1991 ರಂದು ಜನಿಸಿದರು. ಇವರು ಕೂಡ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರಾಗಿದ್ದು ಆಲ್ ರೌಂಡರ್ ಆಗಿದ್ದಾರೆ. ಇವರು ಎಡಗೈ ಬ್ಯಾಟ್ಸ್ ಮನ್ ಹಾಗೂ ಬೌಲರ್ ಆಗಿದ್ದಾರೆ. ಇವರು ಕೂಡ ಐಪಿಎಲ್ ಮೂಲಕ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇವರು 2017 ರಂದು ಪಂಕುರಿ ಶರ್ಮಾ ಅವರನ್ನು ವಿವಾಹವಾದರು.

ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯರವರು ಬರೋಡ ಡೊಮೆಸ್ಟಿಕ್ ಕ್ರಿಕೆಟ್ ಮೂಲಕ ಕ್ರಿಕೆಟ್ ವೃತ್ತಿಯನ್ನು ಪ್ರಾರಂಭಿಸಿದರು ನಂತರ ಐಪಿಎಲ್ ಅವರ ಜೀವನವನ್ನೇ ಬದಲಾಯಿಸಿತು. ಐಪಿಎಲ್ ನಲ್ಲಿ ಪ್ರಮುಖ ಆಟಗಾರರಾಗಿದ್ದು ಇವರು ಮುಂಬೈ ಇಂಡಿಯನ್ಸ್ ತಂಡದ ಮೂಲಕ ಗುರುತಿಸಿಕೊಂಡಿದ್ದಾರೆ. 2021ರಲ್ಲಿ ನಡೆಯುತ್ತಿದ್ದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಭಾರತದಲ್ಲಿ ಕೊರೊನಾ ಹೆಚ್ಚಾದ ಕಾರಣ ಹಾಗೂ ಕ್ರಿಕೆಟ್ ಆಟಗಾರರಿಗೂ ಸೋಂಕು ತಗುಲಿದ ಕಾರಣ ಮಧ್ಯದಲ್ಲಿ ನಿಲ್ಲಿಸಲಾಯಿತು ಹಾಗೂ ಭಾರತದಲ್ಲಿ ಕೊರೊನಾದಿಂದ ಲಾಕ್ ಡೌನ್ ಮಾಡಿದ ಕಾರಣ ಎಲ್ಲಾ ಕ್ರಿಕೆಟಿಗರು ಮನೆಯಲ್ಲಿ ಕುಟುಂಬದ ಜೊತೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಕೃನಾಲ್ ಪಾಂಡ್ಯರವರು ತಮ್ಮನ ಮಗನಾದ ಅಗಸ್ತ್ಯ ಪಾಂಡ್ಯರವರ ಜೊತೆ ಆಟವಾಡುತ್ತಿರುವ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ.

ಹಾರ್ದಿಕ್ ಪಾಂಡ್ಯರವರು ಹಾಗೂ ಅವರ ಪತ್ನಿ ನತಾಶ ಮತ್ತು ಮಗ ಅಗಸ್ತ್ಯ ನ ಜೊತೆ ಲಾಕ್ ಡೌನ್ ಅನ್ನು ಉತ್ತಮ ರೀತಿಯಲ್ಲಿ ಕುಟುಂಬದ ಜೊತೆ ಕಳೆಯುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ಮಗನಿಗೆ ಊಟ ಮಾಡಿಸುವುದು, ಎತ್ತಿಕೊಂಡು ಮುದ್ದಾಡುವುದು ಹಾಗೂ ಮಗುವಿನ ಜೊತೆ ಆಟ ಆಡುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿದೆ. ನೀವೂ ಕೂಡ ಹಾರ್ದಿಕ ಪಾಂಡ್ಯ ಅವರ ಸೋಶಿಯಲ್ ಮೀಡಿಯಾಗಳಲ್ಲಿ ಮಗುವಿನ ಜೊತೆಗಿನ ಸಂತೋಷದ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ನೋಡಿ ಆನಂದಿಸಿ.

Leave A Reply

Your email address will not be published.