ಮನುಷ್ಯನ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಸೊಪ್ಪು ತರಕಾರಿಗಳಲ್ಲಿ ಈ ಸೋಪು ಕೂಡ ಒಂದಾಗಿದೆ. ಈ ಸೊಪ್ಪಿನಲ್ಲಿ ಹಲವು ವಿಶೇಷತೆ ಹಾಗೂ ಉತ್ತಮ ಆರೋಗ್ಯಕರ ಗುಣಗಳಿದ್ದು ನಿದ್ರಾಹೀನತೆ ಹಾಗೂ ಅಜೀರ್ಣತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ ಈ ಸೊಪ್ಪಿನಲ್ಲಿರುವಂತ ಇನ್ನು ಹಲವು ಆರೋಗ್ಯಕಾರಿ ಪ್ರಯೋಜನಗಳು ಯಾವುವು ಅನ್ನೋದನ್ನ ನೋಡುವುದಾದರೆ ನರ ದೌರ್ಬಲ್ಯ ನಿವಾರಿಸುವ ಜೊತೆಗೆ ಸಬ್ಬಸಿಗೆ ಸೊಪ್ಪಿನ ಸೇವನೆಯಿಂದ ನರಗಳಿಗೆ ಶಕ್ತಿಯನ್ನ ಪಡೆಯಬಹುದು.

ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಕೆಲಸದ ಒತ್ತಡದಿಂದಾಗಿ ಹೆಚ್ಚಿನವರಿಗೆ ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಬರುವುದಿಲ್ಲ ಅಂತವರು ಸಬ್ಬಸಿಗೆ ಸೊಪ್ಪನ್ನ ಸೇವಿಸುವುದು ತುಂಬಾ ಉತ್ತಮ. ಇದನ್ನು ಸೇವಿಸಿದರೆ ನಿದ್ರೆ ಚನ್ನಾಗಿ ಬರುತ್ತದೆ. ಬಾಣಂತಿಯರಲ್ಲಿ ಎದೆಹಾಲಿನ ಕೊರತೆ ಇದ್ದಾರೆ ಅನಂತವರು ಸಬ್ಬಸಿಗೆ ಸೊಪ್ಪನ್ನ ಸೇವಿಸುವುದು ಉತ್ತಮ. ಸಬ್ಬಸಿಗೆ ಸೊಪ್ಪಿನ ಸುಪ್ ಅಥವಾ ಸಾಂಬಾರ್ ಮಾಡಿಕೊಂಡು ಊಟ ಮಾಡಿದರೆ ಎದೆ ಹಾಲು ಹೆಚ್ಚಾಗುತ್ತವೆ.

ಇನ್ನು ನಿಮಗೆ ಜೀರ್ಣ ಶಕ್ತಿಯ ಕೊರತೆ ಇದ್ದರೆ ಅಥವಾ ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಹೊಟ್ಟೆ ನೋವಿನ ಸಮಸ್ಯೆ ಬಂದರೆ ಅಂತವರು ಸಬ್ಬಸಿಗೆ ಸೊಪ್ಪಿನ ರಸಕ್ಕೆ ಜೇನುತುಪ್ಪವನ್ನ ಬೆರೆಸಿಕೊಂಡು ಕುಡಿದರೆ ಅಜೀರ್ಣದ ಸಮಸ್ಯೆ ದೂರವಾಗುತ್ತದೆ. ಅರಿಶಿನದ ಜೊತೆಗೆ ಸಬ್ಬಸಿಗೆ ಸೊಪ್ಪನ್ನು ಅರೆದು ಗಾಯದ ಮೇಲೆ ಹಚ್ಚುವುದರಿಂದ ಗಾಯದ ಊತ, ನೋವು ಕಡಿಮೆಯಾಗುತ್ತದೆ, ಗಾಯ ಬೇಗ ವಾಸಿಯಾಗುತ್ತದೆ. ಇನ್ನು ಅಲರ್ಜಿ ಸಮಸ್ಯೆ ಕಾಡುತ್ತಿದ್ದರೆ ಸಬ್ಬಸಿಗೆ ಸೊಪ್ಪುನ್ನು ನುಣ್ಣಗೆ ಅರೆದು ಚರ್ಮದ ಅಲರ್ಜಿ ಇದ್ದ ಜಾಗಕ್ಕೆ ಲೇಪಿಸಿ ಅಲರ್ಜಿ ಬಹುಬೇಗನೆ ನಿವಾರಣೆ ಆಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!