ಈಗ ನಮ್ಮ ರಾಜ್ಯದಲ್ಲಿ ಕಾವೇರಿ ವಿವಾದ ಮತ್ತೊಮ್ಮೆ ಭುಗಿಲೆದ್ದಿದೆ, ಮೊನ್ನೆಯಷ್ಟೇ ಬೆಂಗಳೂರು ಬಂದ್ ಆಗಿದ್ದು, ನಾಳೆ ಕರ್ನಾಟಕ ಬಂದ್ (Karnataka) ಕೂಡ ಇದೆ. ಈ ಬಂದ್ ನಡೆಯುತ್ತಿರುವುದು ಕಾವೇರಿ ನೀರಿಗಾಗಿ, 5000 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಇಂದ ಆದೇಶ ಬಂದಿದೆ. ಕರ್ನಾಟಕ ಸರ್ಕಾರಕ್ಕೆ ಕೂಡ ನೀರು ಬಿಡದೆ ಬೇರೆ ದಾರಿ ಇಲ್ಲ ಎನ್ನುವ ಹಾಗೆ ಆಗಿದೆ. ಈ ಆದೇಶದಿಂದ ಮೈಸೂರು ಮತ್ತು ಮಂಡ್ಯ ಜಿಲ್ಲೆಯ ರೈತರು ಆಕ್ರೋಶಗೊಂಡಿದ್ದು, ಕಾವೇರಿ ನೀರನ್ನು ಬಿಡುವ ಹಾಗಿಲ್ಲ ಎಂದು ಹೋರಾಟ ಶುರು ಮಾಡಿದ್ದಾರೆ..
ಕಾವೇರಿ ನೀರಿಗಾಗಿ ಈ ರೀತಿ ಹೋರಾಟ ಆಗಾಗ ನಡೆಯುತ್ತಲೇ ಇರುತ್ತದೆ. ಜನರು ಸರ್ಕಾರವನ್ನು ನಂಬಿ, ಸರ್ಕಾರಕ್ಕೆ ನಮ್ಮ ರಾಜ್ಯದ ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ನಿರೀಕ್ಷೆ ಮಾಡುತ್ತಾರೆ. ಆದರೆ ಈಗ ನಡೆಯುತ್ತಿರುವುದೇ ಬೇರೆ ಆಗಿದೆ. ಈ ವೇಳೆ ಎಲ್ಲರು ನೆನಪು ಮಾಡಿಕೊಳ್ಳುತ್ತಿರುವುದು ಆ ಒಬ್ಬ ದಕ್ಷ ನಾಯಕನನ್ನು. ಸುಪ್ರೀಂ ಕೋರ್ಟ್ ಇಂದ ಆದೇಶ ಬಂದರು ಕೂಡ ಅವರು ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಪಟ್ಟು ಹಿಡಿದು, ಕರ್ನಾಟಕ ರಾಜ್ಯದ ರೈತರ ಪರವಾಗಿ ನಿಂತಿದ್ದರು. ಆ ನಾಯಕ ಮತ್ಯಾರು ಅಲ್ಲ, ಆಗಿನ ಸಿಎಂ ಆಗಿದ್ದ ಬಂಗಾರಪ್ಪನವರು.
ಈ ಘಟನೆ ನಡೆದದ್ದು 1991 ರಲ್ಲಿ, ಈ ವೇಳೆ ನಮ್ಮ ರಾಜ್ಯದ ಸಿಎಂ ಆಗಿದ್ದವರು ಬಂಗಾರಪ್ಪನವರು, ಜಯಲಲಿತಾ ಅವರು ತಮಿಳುನಾಡಿನ ಸಿಎಂ ಆಗಿದ್ದರು. ಆ ವೇಳೆ ತಮಿಳುನಾಡಿಗೆ ಕಾವೇರಿ ನೀರನ್ನು ಬಿಡಬೇಕು ಎಂದು ಜಯಲಲಿತಾ ಅವರು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಿದರು. ಆಗ ಎರಡು ರಾಜ್ಯದ ಪರಿಸ್ಥಿತಿ ನೋಡಿದ ಪ್ರಾಧಿಕಾರ, ಕರ್ನಾಟಕ ಸರ್ಕಾರವು ತಮಿಳುನಾಡಿಗೆ 205 TMC ನೀರು ಬಿಡಬೇಕು ಎಂದು ಸೂಚನೆ ನೀಡಿತು.
ಆದರೆ ನಮ್ಮ ರಾಜ್ಯದ ಸಿಎಂ ಆಗಿದ್ದ ಬಂಗಾರಪ್ಪನವರು ತಮಿಳುನಾಡಿಗೆ ನೀರು ಬಿಡಲು ಒಪ್ಪಿಗೆ ನೀಡಲಿಲ್ಲ. ಆ ವೇಳೆ ವಾಟಾಳ್ ನಾಗರಾಜ್ ಅವರು ಕೂಡ ಇದ್ದರು, ವಾಟಾಳ್ ನಾಗರಾಜ್ ಅವರು ಕಾವೇರಿ ಬಗ್ಗೆ ಮಾತನಾಡಿ, ರಕ್ತ ಬೇಕಾದರೂ ಕೊಡ್ತೀವಿ ಆದರೆ ಕಾವೇರಿ ನೀರನ್ನು ಮಾತ್ರ ಕೊಡೋದಿಲ್ಲ ಎಂದು ಹೇಳಿದ್ದರು. ಇನ್ನು ಬಂಗಾರಪ್ಪ ಅವರು ಕೂಡ ಯಾರಿಂದ ಎಷ್ಟೇ ಒತ್ತಡ ಬಂದರು ಕೂಡ ನಾವು ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ನಮ್ಮ ರಾಜ್ಯದ ಸಿಎಂ ಈ ನಿರ್ಧಾರ ತೆಗೆದುಕೊಂಡ ಕಾರಣ ತಮಿಳುನಾಡಿನ ಸಿಎಂ ಜಯಲಲಿತಾ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಆ ವೇಳೆ ಕೇಂದ್ರ ಸರ್ಕಾರ ಕೂಡ ಮಧ್ಯಕ್ಕೆ ಬಂದು, ತಮಿಳುನಾಡಿಗೆ 205 TMC ನೀರನ್ನು ಬಿಡುಗಡೆ ಮಾಡಬೇಕು ಎಂದು ಹೇಳಿ, ಕರ್ನಾಟಕ ರಾಜ್ಯದ ಮೇಲೆ ಒತ್ತಡ ಹೇರುವುದಕ್ಕೆ ಶುರು ಮಾಡಿತು. ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಯಾರು ಎಷ್ಟೇ ಒತ್ತಡ ಹಾಕಿದರು ಸಹ ಬಂಗಾರಪ್ಪನವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲ್ಲ.
ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಹಾಕಿದ ಆಕ್ಷೇಪಕ್ಕೆ, ನಮ್ಮ ರಾಜ್ಯ ಸರ್ಕಾರ ಕೂಡ ತಡೆಯಾಜ್ಞೆ ತಂದಿತು. ಹೀಗೆ ಸುಪ್ರೀಂ ಕೋರ್ಟ್, ತಮಿಳುನಾಡು ಸರ್ಕಾರ ಯಾರು ಎಷ್ಟೇ ಒತ್ತಡ ಹಾಕಿದರು ಕೂಡ, ಬಂಗಾರಪ್ಪನವರು ಮಾತೆಯ ಅದ್ಯಾವುದಕ್ಕೂ ಜಗ್ಗದೆ ನಮ್ಮ ರೈತರ ಪರವಾಗಿ ನಿಂತರು. ರೈತರ ಪರವಾಗಿ ನಿಂತ ಬಂಗಾರಪ್ಪನವರು ಕಾವೇರಿ ನೀರು ನಮ್ಮ ರಾಜ್ಯಕ್ಕೆ ಸೇರಿದ್ದು ಅವರು ಕೇಳೋ ಅಷ್ಟು ನೀರು ಕೊಡೋದಕ್ಕೆ ಸಾಧ್ಯವಿಲ್ಲ, ನೀವು ಇದನ್ನು ಬಿಡಬೇಡಿ ಎಂದು ರೈತರಿಗೆ ಪ್ರತಿಭಟನೆ ಮಾಡುತ್ತಿರುವವರಿಗೆ ಬೆಂಬಲ ಕೊಟ್ಟಿದ್ದರು.ಇಂತಹ ಹೆಮ್ಮೆಯ ರಾಜಕಾರಣಿಗಳು ನಮಗೆ ಬೇಕು ಹೆಮ್ಮೆಯಿಂದ ಶೇರ್ ಮಾಡಿ
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ಇನ್ನು ಮೇಲೆ ತಿರುಪತಿಯ ದರ್ಶನ ತುಂಬಾ ಸುಲಭ ಹೇಗೆ ಅಂತೀರಾ ಇಲ್ನೋಡಿ