ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಳ್ವಿಕೆಗೆ ಬರುವುದಕ್ಕಿಂತ ಮೊದಲೇ ಪ್ರಚಾರ್ಸ್ದ ಸಮಯದಲ್ಲಿ 5 ಯೋಜನೆಗಳನ್ನು ಜಾರಿಗೆ ತರುವುದಾಗಿ ತಿಳಿಸಿತ್ತು. ಅದೇ ರೀತಿ ಅಧಿಕಾರಕ್ಕೆ ಬಂದ ನಂತರ ಒಂದೊಂದಾಗಿ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಗ್ಯಾರಂಟಿ ನೀಡಿದ್ದ 5 ಯೋಜನೆಗಳ ಪೈಕಿ 4 ಯೋಜನೆಗಳನ್ನು ಈಗಾಗಲೇ ಜಾರಿಗೆ ತರಲಾಗಿದ್ದು, ಒಂದೇ ಒಂದು ಯೋಜನೆ ಬಾಕಿ ಉಳಿದಿದೆ, ಆ ಯುವನಿಧಿ ಈ ವರ್ಷಾಂತ್ಯಕ್ಕೆ ಜಾರಿಗೆ ಬರಲಿದೆ. ಇನ್ನುಳಿದ ಹಾಗೆ ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳು ಜಾರಿಗೆ ಬಂದಿವೆ.

ಇದರಲ್ಲಿ ಸರ್ಕಾರ ಮೊದಲಿಗೆ ಜಾರಿಗೆ ತಂದ ಯೋಜನೆ ಶಕ್ತಿ ಯೋಜನೆ ಆಗಿದೆ. ಜೂನ್ 10ರಂದು ಸಿಎಂ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಅಂದಿನಿಂದ ರಾಜ್ಯದ ಎಲ್ಲಾ ಹೆಣ್ಣುಮಕ್ಳಳು ಶಕ್ತಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಸರ್ಕಾರಿ ಬಸ್ ಗಳಲ್ಲಿ ರಾಜ್ಯದ ಎಲ್ಲಿಗೆ ಬೇಕಾದರು ಹೆಣ್ಣುಮಕ್ಕಳು ಉಚಿತವಾಗಿ ಪ್ರಯಾಣ ಮಾಡಬಹುದು. ಹೆಣ್ಣುಮಕ್ಕಳು ಈ ಯೋಜನೆಯ ಸೌಲಭ್ಯದಿಂದ ಬಹಳ ಸಂತೋಷಗೊಂಡಿದ್ದಾರೆ.

ಈ ಯೋಜನೆಗೆ ಜಾರಿಗೆ ಬಂದಾಗಿನಿಂದ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ತೋರಿಸಿ ತೀರ್ಥ ಕ್ಷೇತ್ರಗಳು, ಪುಣ್ಯ ಕ್ಷೇತ್ರಗಳು ಈ ಎಲ್ಲಾ ಕಡೆ ಹೆಣ್ಣುಮಕ್ಕಳು ಓಡಾಡುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಎಲ್ಲಾ ಹೆಣ್ಣುಮಕ್ಕಳಿಗೂ ಸಹಾಯವೇ ಆಗುತ್ತಿದೆ. ಆದರೆ ಸರ್ಕಾರ ಈಗ ಶಕ್ತಿ ಯೋಜನೆಯ ವಿಚಾರಕ್ಕೆ ಹೊಸ ನಿಯಮವನ್ನು ಕಡ್ಡಾಯಗೊಳಿಸಿದೆ. ಇಷ್ಟು ದಿನ ಹೆಣ್ಣುಮಕ್ಕಳು ಕೇವಲ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಪಡೆದು ಬಸ್ ನಲ್ಲಿ ಪ್ರಯಾಣ ಮಾಡಲು ಅವಕಾಶ ಕೊಡಲಾಗಿತ್ತು.

ಆದರೆ ಮುಂದಿನ ದಿನಗಳಲ್ಲಿ ಇದಿಷ್ಟೆ ಸಾಕಾಗುವುದಿಲ್ಲ. ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಮಾಡಿಸಬೇಕಾಗುತ್ತದೆ. ಈ ಸ್ಮಾರ್ಟ್ ಕಾರ್ಡ್ ಅನ್ನು ಮಾಡಿಸದೆ ಹೋದರೆ ಆ ಹೆಣ್ಣುಮಕ್ಕಳು ಶಕ್ತಿ ಯೋಜನೆಯ ಮೂಲಕ ಉಚಿತ ಬಸ್ ಪ್ರಯಾಣ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಇದು ಸರ್ಕಾರದಿಂದ ಸಿಕ್ಕಿರುವ ಅಧಿಕೃತ ಮಾಹಿತಿ ಆಗಿದ್ದು, ಎಲ್ಲ ಹೆಣ್ಣುಮಕ್ಕಳು ಈಗಲೇ ಈ ವಿಚಾರ ತಿಳಿದುಕೊಂಡರೆ ಒಳ್ಳೆಯದು.

ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಹೆಣ್ಣುಮಕ್ಕಳು ಅರ್ಜಿ ಹಾಕಬೇಕಾಗುತ್ತದೆ. ಅರ್ಜಿ ಹಾಕುವ ದಿನಾಂಕ ಯಾವಾಗಿನಿಂದ ಶುರುವಾಗುತ್ತದೆ ಎನ್ನುವ ಪೂರ್ತಿ ಮಾಹಿತಿಯನ್ನು ಸರ್ಕಾರ ಶೀಘ್ರದಲ್ಲೇ ತಿಳಿಸಿಕೊಡುತ್ತದೆ. ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಪಡೆಯಲು 14.16 ರೂಪಾಯಿ ಪಾವತಿ ಮಾಡಿ ಅರ್ಜಿ ಹಾಕಬೇಕಾಗುತ್ತದೆ. ಅರ್ಜಿ ಹಾಕುವ ದಿನಾಂಕ ಶುರುವಾಗುತ್ತಿದ್ದ ಹಾಗೆ ಹೆಣ್ಣುಮಕ್ಕಳು ತಮಗೆ ಹತ್ತಿರ ಇರುವ ಬಾಪೂಜಿ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು.

By AS Naik

Leave a Reply

Your email address will not be published. Required fields are marked *