20 ಲಕ್ಷಕ್ಕೆ ಸೇಲ್ ಆಯಿತು ಈ ರುದ್ರಾಕ್ಷಿ, ಇಲ್ಲಿದೆ ರುದ್ರಾಕ್ಷಿ ಬೆಳೆಯ ಸಂಪೂರ್ಣ ಮಾಹಿತಿ

0 11

ಅನೇಕ ಮರಗಳನ್ನು ಹಿಂದೂ ಸಂಪ್ರದಾಯದಲ್ಲಿ ದೈವಿಕ ಸ್ವರೂಪವಾಗಿ ಪೂಜಿಸಲಾಗುತ್ತದೆ ಅದರಲ್ಲಿ ರುದ್ರಾಕ್ಷಿ ಮರ ಅಥವಾ ರುದ್ರಾಕ್ಷಿಯನ್ನು ಹೆಚ್ಚು ದೈವಿಕ ಸ್ವರೂಪದಲ್ಲಿ ಕಾಣುತ್ತೇವೆ. ರುದ್ರಾಕ್ಷಿ ನೇಪಾಳದಲ್ಲಿ ಬೆಳೆಯುವ ಬೆಳೆಯಾಗಿದ್ದು ಕರ್ನಾಟಕದಲ್ಲಿ ಈ ಬೆಳೆಯನ್ನು ಬೆಳೆದು ನಾನಾ ದೇಗುಲಗಳಿಗೆ ಉಚಿತವಾಗಿ ಕೊಡುತ್ತಿರುವ ಚಿಕ್ಕಮಗಳೂರಿನ ಶೃಂಗೇಶ್ವರ ರಾವ್ ಅವರನ್ನು ಒಳ್ಳೆಯ ಕೃಷಿಕ ಎಂದು ಹೇಳಬಹುದು. ಹಾಗಾದರೆ ಶೃಂಗೇಶ್ವರ ರಾವ್ ಅವರು ಬೆಳೆದ ರುದ್ರಾಕ್ಷಿ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೊಳೂರಿನ ಎಲ್ ಶ್ರಂಗೇಶ್ವರ್ ರಾವ್ ಅವರು ಇಂಜಿನೀಯರ್ ಪದವೀಧರ. ಅವರು ತಮ್ಮ 28 ಎಕರೆ ಜಮೀನಿನಲ್ಲಿ ಕಾಫಿ, ತೆಂಗು, ಅಡಿಕೆ, ಕಾಳುಮೆಣಸನ್ನು ಪ್ರಮುಖ ಬೆಳೆಗಳಾಗಿ ಬೆಳೆಯುತ್ತಿದ್ದಾರೆ ಅವರು ಹೊಸ ಬೆಳೆಗಳನ್ನು ಬೆಳೆಯಲು ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ ಕಳೆದ ಎರಡು ದಶಕಗಳಿಂದ 1997ರಲ್ಲಿ ನೇಪಾಳದ ಸಾಂಪ್ರದಾಯಿಕ ಬೆಳೆಯಾದ ರುದ್ರಾಕ್ಷಿ ಮರಗಳನ್ನು ಪೋಷಿಸುತ್ತಾ ಮಾನಸಿಕ ನೆಮ್ಮದಿಯನ್ನು ಕಂಡುಕೊಂಡಿದ್ದಾರೆ.

ರುದ್ರಾಕ್ಷಿ ಇದು ಧಾರ್ಮಿಕ ಸ್ವರೂಪ ಹೊಂದಿರುವ ಕಾರಣ ಶ್ರಂಗೇಶ್ವರ್ ರಾವ್ ಅವರು ಬೆಳೆದರು. ರುದ್ರಾಕ್ಷಿ ನಾಟಿ ಮಾಡಿ 6 ವರ್ಷದ ನಂತರ ಫಲ ಬರುತ್ತದೆ. ಸುಮಾರು 40 ಗಿಡಗಳನ್ನು ಅವರು ಬೆಳೆಸಿದ್ದಾರೆ. ಅವರು ಪ್ರತಿವರ್ಷ 15-20 ಕ್ವಿಂಟಾಲ್ ರುದ್ರಾಕ್ಷಿ ಬೆಳೆಯುತ್ತಾರೆ.

ಹಸಿರು ಮತ್ತು ನೀಲಿ ಬಣ್ಣದ ಕಾಯಿಗಳಾಗುತ್ತದೆ. ರುದ್ರಾಕ್ಷಿ ಮುಖಗಳ ಸಂಖ್ಯೆ ಆಧಾರದ ಮೇಲೆ ವಿಂಗಡಣೆ ಮಾಡಲಾಗುತ್ತದೆ. 90% ಪಂಚಮುಖ ರುದ್ರಾಕ್ಷಿ, ಬೆರಳೆಣಿಕೆಯಷ್ಟು ಏಕಮುಖ ರುದ್ರಾಕ್ಷಿ ಇರುತ್ತದೆ ಏಕಮುಖ ರುದ್ರಾಕ್ಷಿ ಸಿಗುವುದು ಅದೃಷ್ಟ ಎಂದು ನಂಬುತ್ತಾರೆ. ಶ್ರಂಗೇಶ್ವರ್ ರಾವ್ ಅವರಿಗೆ ಇಲ್ಲಿಯವರೆಗೆ 3 ಮುಖದಿಂದ 18 ಮುಖಗಳವರೆಗೆ ಸಿಕ್ಕಿದೆ.

ಅನೇಕ ದೇವಾಲಯಗಳಿಗೆ ಉಚಿತವಾಗಿ ರುದ್ರಾಕ್ಷಿ ಕೊಡುತ್ತಿದ್ದರು ಆದರೆ ದುರುಪಯೋಗ ಪ್ರಾರಂಭವಾಯಿತು ಇದರಿಂದ ಮುಖಗಳ ಸಂಖ್ಯೆಯ ಆಧಾರದ ಮೇಲೆ ಕನಿಷ್ಟ ಬೆಲೆಯನ್ನು ನಿಗದಿ ಮಾಡಿದ್ದಾರೆ. ರುದ್ರಾಕ್ಷಿ ಮರ ಶ್ರೇಷ್ಠವಾಗಿದೆ, ಅವರು ರುದ್ರಾಕ್ಷಿ ಮರಗಳನ್ನು ಸಾವಯವ ವಿಧಾನದಲ್ಲಿ ಬೆಳೆಸಿದ್ದಾರೆ. ಅವರು ಮರಗಳಿಗೆ ದನದ ಗೊಬ್ಬರ ಹಾಕುತ್ತಾರೆ.

ರುದ್ರಾಕ್ಷಿ ಹಣ್ಣನ್ನು ತಂದು ನೀರಿನಲ್ಲಿ 4 ದಿವಸ ಇಟ್ಟು ಕ್ಲೀನ್ ಮಾಡಿ ಬಿಸಿಲಿನಲ್ಲಿ ಒಣ ಹಾಕುತ್ತಾರೆ ನಂತರ ಅದು ಹಾಳಾಗದಂತೆ ಎಳ್ಳಣ್ಣೆಯಲ್ಲಿ ನೆನೆಸಿ 4 ದಿವಸಗಳ ಕಾಲ ಬಿಸಿಲಿಗೆ ಒಣ ಹಾಕುತ್ತಾರೆ ಇದರಿಂದ ಶೈನ್ ಆಗುತ್ತದೆ. ಶ್ರಂಗೇಶ್ವರ್ ರಾವ್ ಅವರಿಗೆ ರುದ್ರಾಕ್ಷಿ ಮರಗಳ ನಿರ್ವಹಣೆಗೆ ಎರಡು ವರೆ ಲಕ್ಷ ರೂಪಾಯಿ ಖರ್ಚಾಗುತ್ತದೆ.

ಒಂದು ಮರದಿಂದ ಒಂದು ವರ್ಷಕ್ಕೆ 50 ಕೆಜಿ ರುದ್ರಾಕ್ಷಿ ಪಡೆಯುತ್ತಿದ್ದಾರೆ. ರುದ್ರಾಕ್ಷಿಯಲ್ಲಿ ಔಷಧೀಯ ಗುಣಗಳು ಹೇರಳವಾಗಿದೆ. ರುದ್ರಾಕ್ಷಿ ರಸವನ್ನು ಕುಡಿಯುವುದರಿಂದ ಕ್ಯಾನ್ಸರ್ ತಡೆಯಬಹುದು, ರಾತ್ರಿ ರುದ್ರಾಕ್ಷಿ ನೆನೆಸಿದ ನೀರನ್ನು ಬೆಳಗ್ಗೆ ಕುಡಿಯುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಸುಮಾರು 25 ರೋಗಗಳಿಗೆ ರುದ್ರಾಕ್ಷಿ ಔಷಧಿಯಾಗಿ ಕೆಲಸ ಮಾಡುತ್ತದೆ. ಶ್ರಂಗೇಶ್ವರ್ ರಾವ್ ಅವರು ಕರ್ನಾಟಕದಲ್ಲಿ ಮೊದಲಬಾರಿಗೆ ರುದ್ರಾಕ್ಷಿ ಬೆಳೆದಿದ್ದಾರೆ.

ವಿನಯ್ ಗುರೂಜಿ ಅವರ ಶಿಷ್ಯರಾದ ಶ್ರಂಗೇಶ್ವರ್ ರಾವ್ ಅವರು ಬೆಳೆದ ರುದ್ರಾಕ್ಷಿಯನ್ನು ಗೂರೂಜಿ ದೇಶ ವಿದೇಶಕ್ಕೆ ಕಳುಹಿಸಿದ್ದಾರೆ. ಲಿಂಗಾಯತ ಮಠಕ್ಕೆ ಶ್ರಂಗೇಶ್ವರ್ ರಾವ್ ಅವರು ಉಚಿತವಾಗಿ ರುದ್ರಾಕ್ಷಿ ಕೊಟ್ಟಿದ್ದಾರೆ. ಆಮ್ಲ, ಅಶ್ವತ್ಥ್, ಆಲ, ಬನ್ನಿ, ಬೇವು ಹೀಗೆ ಅನೇಕ ಮರಗಳು ದೈವ ಸ್ವರೂಪವನ್ನು ಹೊಂದಿದೆ. ಇಂತಹ ಮರಗಳಲ್ಲಿ ರುದ್ರಾಕ್ಷಿ ಮರಗಳಿಗೆ ವಿಶೇಷ ಸ್ಥಾನವಿದೆ. ಹಲವು ಧಾರ್ಮಿಕ ಕಾರ್ಯಗಳಲ್ಲಿ ರುದ್ರಾಕ್ಷಿಯನ್ನು ಬಳಸಲಾಗುತ್ತದೆ. ರುದ್ರ ಎಂದರೆ ಶಿವ ಅಕ್ಷಿ ಎಂದರೆ ಕಣ್ಣು ಶಿವನ ಕಣ್ಣಿನ ಅಗ್ನಿಯಿಂದ ಮನ್ಮಥನನ್ನು ವಧೆ ಮಾಡಿದಾಗ ಅಗ್ನಿ ಭೂಮಿ ಸ್ಪರ್ಶ ಮಾಡಿದಾಗ ಅಗ್ನಿ ರುದ್ರಾಕ್ಷಿ ಮಣಿಗಳಾಗಿ ಕನ್ವರ್ಟ್ ಆಯಿತು.

ಎಲ್ಲ ದೇವರಿಗೂ ಆ ದೇವರಿಗೆ ಪ್ರಿಯವಾದ ಮುಖಗಳ ರುದ್ರಾಕ್ಷಿಯನ್ನು ಅರ್ಪಿಸಲಾಗುತ್ತದೆ. ಮನುಷ್ಯನ ಮೇಲೆ ಸಕಾರಾತ್ಮಕ ಶಕ್ತಿಯನ್ನು ರುದ್ರಾಕ್ಷಿ ಬೀರುತ್ತದೆ. ಇತ್ತೀಚೆಗೆ ಚಲನಚಿತ್ರ ನಟ ಅರ್ಜುನ್ ಸರ್ಜಾ ಅವರು ಕಟ್ಟಿಸಿರುವ ಆಂಜನೇಯ ದೇವಾಲಯಕ್ಕೆ ಶ್ರಂಗೇಶ್ವರ್ ರಾವ್ ಬೆಳೆದ ರುದ್ರಾಕ್ಷಿಯನ್ನು ಕೊಡಲಾಗಿದೆ. ಈ ಕಾಲದಲ್ಲಿ ಹಣಕ್ಕಿಂತ ಭಾವನೆ, ಶ್ರದ್ಧೆ ದೊಡ್ಡದು ಎಂದು ಶ್ರಂಗೇಶ್ವರ್ ರಾವ್ ಅವರು ಹೇಳುತ್ತಾರೆ.

ಒಟ್ಟಿನಲ್ಲಿ ಕೊಳೂರು ಎಂಬ ಪುಟ್ಟ ಗ್ರಾಮದಲ್ಲಿ ಬೆಳೆದ ರುದ್ರಾಕ್ಷಿ ರಾಜ್ಯ, ದೇಶ ವಿದೇಶದ ದೇವಾಲಯಗಳಲ್ಲಿ ರಾರಾಜಿಸುತ್ತಿದೆ. ರುದ್ರಾಕ್ಷಿ ಬೆಳೆಯುವಂತಹ ಒಳ್ಳೆಯ ಕೆಲಸವನ್ನು ಮಾಡುತ್ತಿರುವ ಶೃಂಗೇಶ್ವರ ರಾವ್ ಅವರಿಗೆ ದೇವರು ಆಯಸ್ಸು ಆರೋಗ್ಯ ಕೊಡಲಿ ಎಂದು ಆಶಿಸೋಣ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.