ಆಧ್ಯಾತ್ಮದಲ್ಲಿ ಪ್ರಮುಖ ಸ್ಥಾನ ಪಡೆದಿರುವ ರುದ್ರಾಕ್ಷವನ್ನು ಧರಿಸುವುದರಿಂದ ಹಲವು ಉಪಯೋಗಗಳಿವೆ. ರುದ್ರಾಕ್ಷ ಧರಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಸದ್ಗುರು ಅವರ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ರುದ್ರಾಕ್ಷವನ್ನು ಧರಿಸುವುದರಿಂದ ಹಲವು ಪ್ರಯೋಜನಗಳಿವೆ. ಪ್ರಪಂಚದ ಪ್ರತಿಯೊಂದು ವಸ್ತುವು ಒಂದು ರೀತಿಯ ಕಂಪನ ಹೊಂದಿರುತ್ತದೆ. ರುದ್ರಾಕ್ಷ ಬಹಳ ವಿಶೇಷ ಕಂಪನ ಇರುವ ವಸ್ತುವಾಗಿದೆ. ನಾವು ರುದ್ರಾಕ್ಷವನ್ನು ಧರಿಸುವುದರಿಂದ ಅದು ನಮ್ಮ ಪ್ರಭಾವಳಿಯನ್ನು ಶುದ್ಧ ಮಾಡುತ್ತದೆ. ಪ್ರತಿಯೊಂದು ದೇಹದ ಸುತ್ತಲೂ ಒಂದು ನಿರ್ದಿಷ್ಟ ಬೆಳಕಿನ, ಶಕ್ತಿಯ ವಲಯ ಇರುತ್ತದೆ ಅದನ್ನು ಪ್ರಭಾವಳಿ ಎನ್ನುವರು. ಪ್ರತಿಯೊಂದು ವಸ್ತುವಿಗೂ ಪ್ರಭಾವಳಿ ಇರುತ್ತದೆ. ಸ್ಪ್ಯಾನಿಷ್ ಅಥವಾ ಭಾರತದ ಸಂತ, ಋಷಿಗಳ ಚಿತ್ರ ನೋಡಿದರೆ ಅವರ ತಲೆಯ ಸುತ್ತ ಬಿಳಿ ಬಣ್ಣದ ಬೆಳಕು ಕಾಣಿಸುತ್ತದೆ. ಚಿತ್ರಕಾರ ಚಿತ್ರದಲ್ಲಿರುವ ವ್ಯಕ್ತಿ ಶುದ್ಧ ಜೀವಿ ಎಂದು ತೋರಿಸಲು ಈ ರೀತಿ ಪ್ರಭವಳಿಯ ಚಿತ್ರ ಬಿಡಿಸುತ್ತಾನೆ. ಕಡು ಕಪ್ಪಿನಿಂದ ಹಿಡಿದು ಬಿಳಿಯ ಬಣ್ಣದ ಪ್ರಭಾವಳಿ ಇರುತ್ತದೆ. ಶಕ್ತಿಯನ್ನು ಬಳಸಿ ಮಾಟ ಮಂತ್ರ ಮಾಡುವವರನ್ನು ನೋಡುತ್ತೇವೆ. ಕೆಲವರು ಡೋಂಗಿಗಳಾದರೆ, ನಿಜವಾಗಿ ಮಾಟ ಮಂತ್ರ ಮಾಡುವ ಶಕ್ತಿವಂತರು ಇದ್ದಾರೆ. ಇದೊಂದು ಸಂಕೀರ್ಣ ರೂಪದ ಕಲೆ, ಅವರು ಕೂಡ ಬಹಳ ಶಕ್ತಿವಂತರಾಗಿರುತ್ತಾರೆ ಅವರ ಪ್ರಭಾವಳಿ ಕಡು ಕಪ್ಪು ಬಣ್ಣದ್ದಾಗಿರುತ್ತದೆ. ನಮ್ಮನ್ನು ನಾವು ಶುದ್ಧಗೊಳಿಸಬೇಕೆಂದರೆ ರುದ್ರಾಕ್ಷವನ್ನು ಧರಿಸಬೇಕು.

ಸಾಧು, ಸನ್ಯಾಸಿಗಳು ರುದ್ರಾಕ್ಷವನ್ನು ಧರಿಸಲು ಕಾರಣವೇನೆಂದರೆ ಅವರು ಯಾವಾಗಲೂ ಪ್ರಯಾಣ ಮಾಡುತ್ತಾರೆ, ಬೇರೆ ಬೇರೆ ಊರುಗಳಲ್ಲಿ ಊಟ, ನಿದ್ರೆಯನ್ನು ಮಾಡುತ್ತಾರೆ. ಹೀಗಾಗಿ ಅವರ ದೇಹ ಒಂದು ಮಟ್ಟದಲ್ಲಿ ಅಸ್ಥಿರವಾಗುತ್ತದೆ. ಸಾಮಾನ್ಯವಾಗಿ ಯಾರಿಗೆ ಆದರೂ ಬೇರೆ ಜಾಗಕ್ಕೆ ಹೋದಾಗ ನಿದ್ರೆ ಬರುವುದಿಲ್ಲ. ಬಹಳ ಹೊತ್ತು ಒಂದು ಜಾಗದಲ್ಲಿ ಕುಳಿತುಕೊಂಡು ಎದ್ದುಹೋದರೆ ಒಂದು ಯಂತ್ರದ ಮೂಲಕ ಅಥವಾ ನೀವು ಸಾಕಿದ ನಾಯಿಯ ಮೂಲಕ ಆ ಜಾಗವನ್ನು ಕಂಡುಹಿಡಿಯಬಹುದು. ಅದೆ ರೀತಿ ಒಂದು ಜಾಗದಲ್ಲಿ ಯಾವಾಗಲೂ ಮಲಗಿಕೊಂಡಾಗ ಅಲ್ಲಿ ವಿಶ್ರಾಂತಿ ಸಿಗುತ್ತದೆ. ಬೇರೆ ಜಾಗದಲ್ಲಿ ಬೇರೆ ಶಕ್ತಿಗಳು ಇರುವುದರಿಂದ ಆರಾಮ ಸಿಗುವುದಿಲ್ಲ. ರುದ್ರಾಕ್ಷವನ್ನು ಧರಿಸಿದಾಗ ಬೇರೆ ಶಕ್ತಿಗಳನ್ನು ತಡೆದು ದೇಹಕ್ಕೆ ಆರಾಮ ಸಿಗುವಂತೆ ಮಾಡುತ್ತದೆ. ರುದ್ರಾಕ್ಷವನ್ನು ಕವಚ ಎಂತಲೂ ಕರೆಯುತ್ತಾರೆ. ಪ್ರಯಾಣದಲ್ಲಿ ನಮ್ಮ ಪ್ರಭಾವಳಿ ಚದುರಿಹೋಗಿರುತ್ತದೆ ಇದರಿಂದ ಪ್ರಯಾಣದ ನಂತರ ದಣಿವಾಗುತ್ತದೆ. ರುದ್ರಾಕ್ಷವನ್ನು ಧರಿಸುವುದರಿಂದ ಪ್ರಭಾವಳಿಗೆ ಒಂದು ನಿರ್ದಿಷ್ಟ ಸ್ಥಿರವನ್ನು ಕೊಟ್ಟು ಪ್ರಯಾಣದ ಆಯಾಸವನ್ನು ತಡೆದುಕೊಳ್ಳುವಂತೆ ಮಾಡುತ್ತದೆ. ಬಹಳಷ್ಟು ಜನರು ಬೇರೆಯವರಿಗೆ ತೊಂದರೆ ಕೊಡಲು ನಕಾರಾತ್ಮಕ ಶಕ್ತಿಗಳನ್ನು ಬಳಸುತ್ತಾರೆ.

ರುದ್ರಾಕ್ಷ ಧರಿಸಿದರೆ ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ಸಿಗುತ್ತದೆ. ಕೆಲವೊಮ್ಮೆ ನಕಾರಾತ್ಮಕ ಶಕ್ತಿಗಳು ನೇರವಾಗಿ ನಮಗೆ ಮಾಡದೇ ಇದ್ದರೂ ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಕೆಲವು ಸಮಯದಲ್ಲಿ ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿರುವುದಿಲ್ಲ, ನಾವು ಏನು ಮಾಡುತ್ತಿದ್ದೇವೆ ಎನ್ನುವುದು ನಮಗೆ ತಿಳಿದಿರುವುದಿಲ್ಲ ಅಂತಹ ಸಮಯದಲ್ಲಿ ರುದ್ರಾಕ್ಷವನ್ನು ಧರಿಸುವುದರಿಂದ ಮನಸ್ಸಿಗೆ ತೃಪ್ತಿ ನೀಡುತ್ತದೆ. ಕಾಡಿನಲ್ಲಿ ಓಡಾಡುತ್ತಿರುವಾಗ ಬಾಯಾರಿಕೆಯಾದಾಗ ಸಿಗುವ ಎಲ್ಲಾ ನೀರನ್ನು ಕುಡಿಯಬಾರದು ಕೆಲವು ನೀರಿನಲ್ಲಿ ವಿಷ ಇರುತ್ತದೆ. ರುದ್ರಾಕ್ಷವನ್ನು ನೀರಿನ ಮೇಲೆ ಹಿಡಿದರೆ ಆ ನೀರು ಕುಡಿಯಲು ಯೋಗ್ಯವಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಸುತ್ತದೆ. ಆಹಾರದ ಮೇಲೆ ರುದ್ರಾಕ್ಷವನ್ನು ಹಿಡಿದರೆ ಅದರಲ್ಲಿ ವಿಷ ಸೇರಿದರೆ ರುದ್ರಾಕ್ಷ ಎಡಗಡೆ ತಿರುಗುತ್ತದೆ. ರುದ್ರಾಕ್ಷ ಧರಿಸುವುದರಿಂದ ನಮ್ಮ ಆರೋಗ್ಯವೃದ್ಧಿಯಾಗುತ್ತದೆ. ಅಧಿಕ ರಕ್ತದೊತ್ತಡ ಇದ್ದರೆ ಅದು ನಿವಾರಣೆಯಾಗುತ್ತದೆ. ಹೃದಯದ ಸಮಸ್ಯೆ ಇದ್ದವರು ರುದ್ರಾಕ್ಷವನ್ನು ಧರಿಸಬೇಕು, ರುದ್ರಾಕ್ಷ ವಿಶಿಷ್ಟ ಕಂಪನದಿಂದ ಶರೀರವನ್ನು ಶಾಂತ ಸ್ಥಿತಿಯಲ್ಲಿಡುತ್ತದೆ. ರುದ್ರಾಕ್ಷ ಅನುಗ್ರಹಕ್ಕೆ ಪಾತ್ರರಾಗಲು ಸಹಾಯ ಮಾಡುತ್ತದೆ. ಅನುಗ್ರಹ ಇಲ್ಲದೆ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಇಷ್ಟೊಂದು ಪ್ರಯೋಜನವಿರುವ ರುದ್ರಾಕ್ಷವನ್ನು ಪ್ರತಿಯೊಬ್ಬರು ಧರಿಸಲೇಬೇಕು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಧರಿಸಬಹುದಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

Leave a Reply

Your email address will not be published. Required fields are marked *