ಜೀವನವೇ ಬೇಡ ಸಾಯಬೇಕು ಅನ್ನೋ ಅಷ್ಟು ಜಿಗುಪ್ಸೆ ಹೊಂದಿದ್ದ ಮಹಿಳೆ ಇಂದು ೨೦೦ ಮಹಿಳೆಯರಿಗೆ ಕೆಲಸ ಕೊಟ್ಟ ಆಶ್ರಯದಾತೆ ಎಂದರೆ ತಪ್ಪಾಗಲಾರದು ನಿಜಕ್ಕೂ ಇವರ ಈ ಕೆಲ್ಸಕ್ಕೆ ಮೆಚ್ಚಲೇ ಬೇಕು. ಯಾಕೆಂದರೆ ಜೀವನದಲ್ಲಿ ಕಷ್ಟಗಳನ್ನು ಎದುರಿಸಿದ ಈ ಮಹಿಳೆ ಆ ದಿನದಲ್ಲಿ ಸಾಯಬೇಕು ಎಂಬುದಾಗಿ ನಿರ್ಧರಿಸಿದ ಮಹಿಳೆ ಇಂದು ತಾನು ಬದುಕಿ ಬೇರೆಯವರ ಬದುಕನ್ನು ರೂಪಿಸುತ್ತಿರುವ ಅನ್ನದಾತೆ.

ಇವರ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರವನ್ನು ಈ ಮೂಲಕ ತಿಳಿಯೋಣ, ಹೆಸರು ಮಹಾದೇವಿ ಎಂಬುದಾಗಿ ಕಲಬುರ್ಗಿಯವರು ಹೆಣ್ಣು ಮನಸ್ಸು ಮಾಡಿದರೆ ಏನನ್ನ ಬೇಕಾದರೂ ಸಾಧಿಸುತ್ತಾಳೆ ಅನ್ನೋದಕ್ಕೆ ಜೀವಂತ ಉದಾಹರಗಳಿವೆ. ಈಕೆ ರೊಟ್ಟಿ ಮಾಡುವ ಕೆಲಸಕ್ಕೆ ಮುಂದಾಗುತ್ತಾರೆ, ಇವರ ಬದುಕು ಬದಲಾಯಿಸಿದ ರೊಟ್ಟಿ ಮಾಡುವ ಕಾಯಕ. ಹೌದು ಕಲಬುರ್ಗಿ ನಗರದ ಮಾಣಿಕೇಶ್ವರಿ ನಿವಾಸಿಯಾಗಿರುವ ಮಹಾದೇವಿ ರೊಟ್ಟಿ ಮಹಾದೇವಿ ಎಂಬುದಾಗಿ ಜನಪ್ರಿಯತೆ ಗಳಿಸಿದ್ದಾರೆ.

ರೊಟ್ಟಿ ಅಷ್ಟೇ ಅಲ್ಲದೆ ಇದರ ಜೊತೆಗೆ ಚಪಾತಿ, ಶೇಂಗಾ ಹೋಳಿಗೆ, ಧಪಾಟಿ, ಸಜ್ಜೆ ರೊಟ್ಟಿ, ಶೇಂಗಾ ಹಿಂಡಿ, ಅಗಸೆ ಹಿಂಡಿ, ಎಳ್ಳು ಹಿಂಡಿ, ಕರೆಳ್ಳು ಹಿಂಡಿ ಹಾಗೂ ವಿವಿಧ ಬಗೆಯ ಚಟ್ನಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡ್ತಿದ್ದಾರೆ, ಇವರಲ್ಲಿ ಸಿಗುವಂತ ಆಹಾರ ಪದಾರ್ಥಗಳು ಬೇರೆಯ ಅಂಗಡಿ ಹೋಟಲ್ ಬೇಕರಿಗಿಂತ ಕಡಿಮೆ ಬೆಲೆ ಇರುತ್ತದೆ ಹಾಗೂ ರುಚಿಕರವಾದ ಆಹಾರ ಪದಾರ್ಥಗಳನ್ನು ಇವರಲ್ಲಿ ಕಾಣಬಹುದಾಗಿದೆ. ಸುಮಾರು ೨೫ ವರ್ಷಗಳ ಹಿಂದೆ ರೊಟ್ಟಿ ವ್ಯಾಪಾರ ಮಾಡುತ್ತಿದ್ದ ಮಹಿಳೆ ಇಂದು ೨೦೦ ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ಕೊಟ್ಟ ಅನ್ನದಾತೆಯಾಗಿದ್ದಾರೆ.

ಇವರ ರೊಟ್ಟಿ ವಿದೇಶಗಳಿಗೆ ಕೂಡ ಹೋಗುತ್ತದೆ ಇವರ ವ್ಯಾಪಾರ ವ್ಯವಹಾರದಲ್ಲಿ ಏಳಿಗೆ ಕಂಡಿದ್ದು ಇದೀಗ ಉತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ ಇವರಿಗೆ ಮೊದಲು ಜೀವನವೇ ಬೇಡ ಸಾಯಬೇಕು ಎಂದೆನಿಸಿದಾಗ ಮುಗಳಖೋಡದ ಶ್ರೀಗಳು ಅವರಿಗೆ ಧೈರ್ಯ ಹೇಳಿ, ರೊಟ್ಟಿ ಮಾರಿ ಬದುಕು ನಡೆಸು ಎಂದಿದ್ದರಂತೆ ಶ್ರೀಗಳ ಮಾತಿನಂತೆ ಈ ಕೆಲಸಕ್ಕೆ ಕೈ ಹಾಕುತ್ತಾರೆ, ಇಂದು ಉತ್ತಮ ಬದುಕು ಕಟ್ಟಿಕೊಂಡು ಬೆರೆವರಿಗೂ ಆಸರೆಯಾಗಿದ್ದರೆ, ಅದೇನೇ ಇರಲಿ ಜೀವನದಲ್ಲಿ ಕಷ್ಟ ಬಂದಾಗ ದೃಢ ನಿರಾಧಾರ ಮಾಡಿ ಜೀವನದಲ್ಲಿ ಏನಾದರು ಸಾಧಿಸಬೇಕು ಅನ್ನೋ ಛಲ ಬೆಳೆಸಿಕೊಂಡರೆ ನಿಜಕ್ಕೂ ನಿಮ್ಮ ಜೀವನ ಉತ್ತಮ ರೀತಿಯಲ್ಲಿ ನಡೆಯುತ್ತದೆ,.

By

Leave a Reply

Your email address will not be published. Required fields are marked *