ಮಾನವೀಯತೆ ಮೆರೆದ ನಿಜವಾದ ಹೀರೋಗಳ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಒಬ್ಬ ಹುಡುಗ ಒಂದು ದೊಡ್ಡ ಅಪಾರ್ಟ್ಮೆಂಟ್ ಕಿಟಕಿಯಿಂದ ಇಳಿಯಲು ಹೋಗಿ ಅಲ್ಲಿ ಸಿಕ್ಕಿಹಾಕಿಕೊಂಡು ಬಿದ್ದು ಕಿರುಚುತ್ತ ಇರುತ್ತಾನೆ ಆಗ ಇನ್ನೊಂದು ಮನೆಯ ಕಿಟಕಿಯಿಂದ ಒಬ್ಬ ವ್ಯಕ್ತಿ ಬಂದು ಆ ಹುಡುಗನನ್ನು ಕಾಪಾಡುತ್ತಾನೆ. ಒಂದು ಮಗು ಆಟ ಆಡುತ್ತಾ ಬಂದು ಒಂದು ಮ್ಯಾನ್ ಹೋಲ್ ನಲ್ಲಿ ಬೀಳತ್ತೆ ಆಗ ಅಲ್ಲೇ ಪಕ್ಕದಲ್ಲಿದ್ದ ವ್ಯಕ್ತಿ ತಕ್ಷಣವೇ ಆ ಮಗುವನ್ನು ಕಾಪಾಡಲು ಧಾವಿಸಿ ಬರುತ್ತಾನೆ. ಕೆಲವು ಬಾರಿ ನಡೆಯುವ ಆಕಸ್ಮಿಕ ಘಟನೆಗಳಿಗೆ ನಮ್ಮ ಮೆದುಳು ಕೆಲಸ ಮಾಡುವುದೇ ಇಲ್ಲ ಆಗ ಎಲ್ಲರಿಗೂ ಸ್ವಲ್ಪ ಗಾಬರಿ ಆಗುವುದು ಸಹಜ. ಇಬ್ಬರು ಪುಟ್ಟ ಮಕ್ಕಳು ಒಂದು ದೊಡ್ಡ ಚರಂಡಿ ಪಕ್ಕದಲ್ಲಿ ಆಟ ಆಡುತ್ತಾ ಇದ್ದಾಗ ಒಂದು ಮಗು ಚರಂಡಿಯ ಒಳಗೆ ಬೀಳತ್ತೆ ಆದರೆ ಆ ಸಮಯದಲ್ಲಿ ಯಾರೂ ಇರಲ್ಲ ಆಗ ಯಾರೋ ಅಪರಿಚಿತ ವ್ಯಕ್ತಿ ಬೈಕ್ ನಲ್ಲಿ ಬಂದು ಚರಂಡಿಗೆ ಬಿದ್ದ ಆ ಮಗುವನ್ನು ಕಾಪಾಡುತ್ತಾನೆ.
ಒಬ್ಬ ವಯಸ್ಸಾದ ವ್ಯಕ್ತಿ ತುಂಬಾ ನಿಧಾನವಾಗಿ ರೋಡ್ ಕ್ರಾಸ್ ಮಾಡುತ್ತಿರುತ್ತಾನೆ. ಆಗ ಅದನ್ನು ನೋಡಿದ ಕಾರ್ ಡ್ರೈವರ್ ಒಬ್ಬರು ಆ ವಯಸ್ಸಾದ ವ್ಯಕ್ತಿಯನ್ನು ನೋಡಿ ಓಡಿ ಬಂದು ಅವರನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ರೋಡ್ ಕ್ರಾಸ್ ಮಾಡಿಸುತ್ತಾನೆ. ಒಂದು ಹ್ಯಾಂಡಿಕ್ಯಾಪ್ ಹುಡುಗಿ ರೋಡ್ ಕ್ರಾಸ್ ಮಾಡುವಾಗ ಅವಳಿಗೆ ಎದುರಾಗಿ ಒಂದು ಕಾರ್ ಬರತ್ತೆ ಆಗ ಅಲ್ಲೇ ಇದ್ದ ಇನ್ನೊಬ್ಬ ಮಹಿಳೆ ಆಕೆಗೆ ಸಹಾಯ ಮಾಡಿ ರೋಡ್ ಕ್ರಾಸ್ ಮಾಡಿಸುತ್ತಾಳೆ. ಒಬ್ಬ ವ್ಯಕ್ತಿ ವೇಗವಾಗಿ ಬೈಕ್ ಓಡಿಸಿಕೊಂಡು ಬಂದು ರೈಲ್ವೇ ಗೇಟ್ ಬಳಿ ಗೇಟ್ ಹಾಕಿರುವುದನ್ನ ನೋಡದೆ ರೈಲ್ವೇ ಟ್ರ್ಯಾಕ್ ಮೇಲೆ ಬೀಳುತ್ತಾನೆ ಅದೇ ಸಮಯಕ್ಕೆ ಅಲ್ಲಿ ರೈಲ್ ಕೂಡಾ ಬರ್ತಾ ಇರತ್ತೆ. ಅಲ್ಲೇ ಇದ್ದ ಒಬ್ಬ ವ್ಯಕ್ತಿ ತನ್ನ ಬ್ಯಾಗ್ ಕೂಡಾ ಬಿಟ್ಟು ಬಿದ್ದ ವ್ಯಕ್ತಿಯನ್ನು ರಕ್ಷಿಸುತ್ತಾನೆ.
ನಿಮ್ಮ ಜೀವನದಲ್ಲಿ ಕೂಡಾ ಯಾರಿಗಾದರೂ ಸಹಾಯ ಮಾಡುವ ಅವಕಾಶ ಸಿಕ್ಕಿದರೆ ತಪ್ಪದೆ ಸಹಾಯ ಮಾಡಿ. ಕೆಲವೊಮ್ಮೆ ಆಕಸ್ಮಿಕ ಘಟನೆಗಳು ನಡೆದಾಗ ಯಾರೋ ಒಬ್ಬರಿಗೆ ಸಹಾಯ ಮಾಡುವ ಅವಕಾಶ ಸಿಕ್ಕಾಗ ಆಗ ಸಿಗುವ ಆನಂದವೇ ಬೇರೆ.