ಭಾರತದಲ್ಲಿ ಅದೆಷ್ಟೋ ವಿಸ್ಮಯಗಳು ಅಡಗಿ ಕುಳಿತಿವೆ. ಇಲ್ಲಿನ ಪ್ರಕೃತಿ ಕೂಡಾ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಅಂತಹ ಪ್ರಕೃತಿಯ ನಡುವೆ ಅನೇಕ ಮನಮೋಹಕ ಹಾಗೂ ರುದ್ರ ರಮಣೀಯ ಸ್ಥಳಗಳು ಇರುವುದು ನಮ್ಮೆಲ್ಲರಿಗೂ ಗೊತ್ತಿರುವುದೇ. ಇಂತಹ ರಮಣೀಯ ಸ್ಥಳಗಳ ಪೈಕಿ ಭಾರತದ ಅತೀ ಎತ್ತರದ ಜಲಪಾತಗಳೂ ಒಂದು. ಅಂತಹ ಪ್ರಮುಖವಾದ 10 ಜಲಪಾತಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ಭಾರತದಲ್ಲಿನ 10 ಎತ್ತರದ ಜಲಪಾತಗಳಲ್ಲಿ 10 ನೆಯದಾಗಿ ಗುರುತಿಸಿಕೊಂಡಿರುವುದು ನಮ್ಮ ಜೋಗಜಲಪಾತ. ಸುಮಾರು 829 ಅಡಿಗಳಷ್ಟು ಎತ್ತರದಿಂದ ಧುಮುಕುವ ಈ ಜಲಪಾತ ಭಾರತದಲ್ಲಿರುವ ಅತೀ ಎತ್ತರದ ಜಲಪಾತಗಳಲ್ಲಿ ಒಂದು ಎನಿಸಿಕೊಂಡಿದೆ. ಶರಾವತಿ ನದಿಯಿಂದ ಸೃಷ್ಟಿಸಲ್ಪಟ್ಟ ಈ ಜಲಪಾತ ಕರ್ನಾಟಕದ ಅತ್ಯಂತ ಪ್ರೇಕ್ಷಣೀಯ ಸ್ಥಳವಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲೇ ಈ ವಿಶ್ವ ವಿಖ್ಯಾತ ಜೋಗ ಜಲಪಾತ ಇರುವುದು.

ಒಂಭತ್ತನೆಯದಾಗಿ ಕಾಣುವುದು ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿರುವ ತಲಯಾರ್ ಜಲಪಾತ. 974 ಅಡಿಗಳಶ್ಟು ಎತ್ತರದಿಂದ ಧುಮುಕುತ್ತದೆ. ಈ ಜಲಪಾತ ತನ್ನ ರೌದ್ರತೆಗೆ ಹೆಸರುವಾಸಿ ಆಗಿದೆ. ಈ ಜಲಪಾತಕ್ಕೆ ತಲುಪಲು ಸರಿಯಾದ ದಾರಿ ಇಲ್ಲದೇ ಇರುವುದು ಇದರ ಪ್ರಾಮುಕ್ಯತೆಯನ್ನು ಹಾಗೂ ಇದರ ಪ್ರಖ್ಯಾತಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿರುವುದು ಸುಳ್ಳಲ್ಲ.

ಎಂಟನೆಯ ಸ್ಥಾನದಲ್ಲಿ ಕಾಣಸಿಗುವುದು ಮೇಘಾಲಯದ ಕೈನೇರಮ್ ಜಲಪಾತ. ಮೇಘಾಲಯದ ತಾಂಗರಾಂಗ್ ಪ್ರದೇಶದಲ್ಲಿ ಇರುವ ಇದು ಚಿರಾಪುಂಜಿಗೆ ಹತ್ತಿರದಲ್ಲಿ ಇದೆ. ಈ ಜಲಪಾತ ಈಸ್ಟ್ ಕಾಶಿಹಿಲ್ಸ್ ಜಿಲ್ಲೆಯಲ್ಲಿ ಕಂಡುಬರುತ್ತದೆ. ನಂತರದ ಸ್ಥಾನದಲ್ಲಿ ಇರುವ ಜಲಪಾತ ಕೂಡಾ ಮೆಘಾಲಯದಲ್ಲೇ ಇದೆ. ಇದು ಸುಮಾರು 1006 ಅಡಿ ಎತ್ತರದಿಂದ ಧುಮ್ಮಿಕ್ಕುವ ಈ ಮೇಘಾಲಯದ ಜಲಪಾತ ಕಾಶಿಹಿಲ್ಸ್ ಜಿಲ್ಲೆಯಲ್ಲಿ ಇದೆ.

ಭಾರತದ ಐದನೆಯ ಅತೀ ಎತ್ತರದ ಜಲಪಾತವಾಗಿ ಕಾಣಿಸುವುದು ದೂದ್ ಸಾಗರ್. ಸಾಕಷ್ಟು ಪ್ರಖ್ಯಾತಿ ಹೊಂದಿದ್ದು ಪ್ರಾವಾಸಿಗರನ್ನು ಕೈ ಬೀಸಿ ತನ್ನೆದೆ ಸೆಳೆಯುವ ಈ ಜಲಪಾತ ಇರುವುದು ಕರ್ನಾಟಕ ಮತ್ತು ಗೋವಾ ರಾಜ್ಯದ ಗಡಿ ಭಾಗದಲ್ಲಿ. ಈ ಜಲಪಾತ ಸುಮಾರು 1020 ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕುತ್ತದೆ. ಗೋವಾದ ಅದ್ಭುತ ಬೀಚ್ ಗಳ ಜೊತೆಗೆ ಈ ಅದ್ಭುತ ದೂದ್ ಸಾಗರ್ ಕೂಡಾ ಪ್ರಸಿದ್ಧ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ.

ದೂದ್ ಸಾಗರದ ನಂತರದ ಸ್ಥಾನದಲ್ಲಿ ಇರುವುದು ನಾಶ್ಗತಿಯಾಂಗ್ ಜಲಪಾತ . ಮೇಘಾಲಯದ ಪೂರ್ವ ಕಾಶಿ ಜಿಲ್ಲೆಯಲ್ಲಿ ಇರುವ ಈ ಜಲಪಾತ 1033 ಅಡಿ ಎತ್ತರದಿಂದ ಧುಮುಕುತ್ತೆ. ಇದರಿಂದಾಗಿ ಇದು ಭಾರತದ ಅತೀ ಎತ್ತರದ ನಾಲ್ಕನೇ ಜಲಪಾತಗಳ ಸಾಲಿಗೆ ಸೇರಿದೆ.

ಇನ್ನು ಭಾರತದ ಮೂರನೇ ಅತೀ ಎತ್ತರದ ಜಲಪಾತ ಇರುವುದು ಕೂಡಾ ಮೇಘಾಲಯದಲ್ಲೇ. ನಾಶ್ಗತಿಯಾಂಗ್ ಜಲಪಾತದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಭಾರತದ ಮೂರನೇ ಅತೀ ಎತ್ತರದ ಜಲಪಾತ ಇದೆ. ಇದು 1120 ಅಡಿಗಳಷ್ಟು ಮೇಲಿನಿಂದ ಧುಮ್ಮಿಕ್ಕುತ್ತದೆ. ಈ ಜಲಪಾತ ಇರುವ ಪ್ರದೇಶ ಪ್ರಪಂಚದಲ್ಲೇ ಅತೀ ತೇವಾಂಶ ಇರುವ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ ಈ ಜಲಪಾತ ಇರುವ ಪ್ರದೇಶ ಭಾರತದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಎಂದು ಹೆಸರುವಾಸಿ ಆಗಿದೆ. ಅಷ್ಟೇ ಅಲ್ಲದೆ ಇಲ್ಲಿ ನಾವು ಅತೀ ಹೆಚ್ಚು ಜೀವಂತ ಸೇತುವೆಗಳನ್ನು ಸಹ ಕಾಣಬಹುದು.

ಭಾರತದ ಅತೀ ಎತ್ತರದ ಎರಡನೇ ಜಲಪಾತ ಯಾವುದು ಅಂತ ನೋಡುವುದಾದರೆ , ಒರಿಸ್ಸಾದ ಬರೆಹೇಪುನಿ ಜಲಪಾತ. ಇದು ಸಿಲ್ಹಿಂಪಾಲ್ ನ್ಯಾಷನಲ್ ಪಾರ್ಕ್ ನಲ್ಲಿ ಇದ್ದು ಮಯೂರ್ ಬಂಜ್ ಜಿಲ್ಲೆಯಲ್ಲಿದೆ. ಇದು 1380 ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕುವ ಜಲಪಾತ ಆಗಿದೆ.

ಇನ್ನು ಭಾರತದ ಮೊಟ್ಟ ಮೊದಲ ಅತೀ ಎತ್ತರದ ಜಲಪಾತ ಎನ್ನುವ ಕೀರ್ತಿಗೆ ಪಾತ್ರವಾಗಿರುವ ಜಲಪಾತ ಇರುವುದು ನಮ್ಮ ಕರ್ನಾಟಕದಲ್ಲಿಯೇ ಎನ್ನುವುದು ನಮ್ಮ ಹೆಮ್ಮೆ. ಇದು ಶಿವಮೊಗ್ಗ ಜಿಲ್ಲೆಯಲ್ಲಿರುವ ಈ ಜಲಪಾತ 1493 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಇದನ್ನು ಕುಂಚಿಕಲ್ ಫಾಲ್ಸ್ ಎಂದು ಗುರುತಿಸಲಾಗಿದ್ದು ಏಷ್ಯಾದಲ್ಲಿಯೇ ಎರಡನೇ ಅತೀ ಎತ್ತರದ ಜಲಪಾತ ಎಂದು ಗುರುತಿಸಿಕೊಂಡಿದೆ. ಇದು ವಾರಾಹಿ ನದಿಯಿಂದ ಸೃಷ್ಟಿಯಾಗಿದ್ದು ಪಶ್ಚಿಮ ಘಟ್ಟಗಳ ನಡುವೆ ಇದು ರುದ್ರ ರಮಣೀಯವಾಗಿ ಕಾಣಿಸುತ್ತದೆ. ಇವು ಭಾರದಲ್ಲಿರುವ ಅತೀ ಎತ್ತರದಿಂದ ಧುಮ್ಮಿಕ್ಕುವ ಪ್ರಮುಖ ಜಲಪಾತಗಳು.

Leave a Reply

Your email address will not be published. Required fields are marked *