ಶಾಲಾ ವಾಹನಗಳು ಯಾಕೆ ಹಳದಿ ಬಣ್ಣ ಹೊಂದಿರುತ್ತವೆ ಇದರ ಹಿಂದಿರುವ ಅಸಲಿಯತ್ತೇನು? ಗೊತ್ತೇ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಶಾಲಾ ವಾಹನಗಳನ್ನು ಗಮನಿಸಿರುತ್ತಾರೆ, ಆದ್ರೆ ಎಲ್ಲ ಶಾಲಾ ವಾಹನಗಳು ಹಳದಿ ಬಣ್ಣವನ್ನು ಹೊಂದಿರುತ್ತವೆ ಯಾಕೆ ಅನ್ನೋದನ್ನ ಬಹಳಷ್ಟು ಜನ ತಿಳಿದುಕೊಂಡಿರೋದಿಲ್ಲ. ಯಾಕೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ.

ಮುಖ್ಯವಾಗಿ ಶಾಲಾ ವಾಹನಗಳು ಅಷ್ಟೇ ಅಲ್ದೆ ಕಾರ್ಯ ನಿವರ್ಹಿಸುವಂತ ಜೆಸಿಬಿ ಕೂಡ ಹಳದಿ ಬಣ್ಣವನ್ನು ಹೊಂದಿರುತ್ತದೆ. ಹೌದು ಮುಖಯವಾಗಿ ಮನುಷ್ಯ ಕಣ್ಣು ಎಲ್ಲ ಬಣ್ಣವನ್ನು ಹೆಚ್ಚಾಗಿ ಗುರುತಿಸಬಲ್ಲದು ಹಾಗೂ ಮುಖ್ಯವಾಗಿ ಕೆಂಪು ಬಣ್ಣವನ್ನು ಕೂಡ ಕೆಂಪು ಬಣ್ಣಕ್ಕಿಂತ ಎರಡು ಪಟ್ಟು ಹಳದಿ ಬಣ್ಣವನ್ನು ಮನುಷ್ಯನ ಕಣ್ಣು ಹೆಚ್ಚಾಗಿ ಗ್ರಹಿಸುತ್ತದೆ. ಆದ್ದರಿಂದ ಜೆಸಿಬಿ ಹಾಗೂ ಶಾಲಾ ವಾಹನಗಳಿಗೆ ಹಳದಿ ಬಣ್ಣವನ್ನು ಬಳಸಿರುತ್ತಾರೆ.

ಮಕ್ಕಳು ದೇಶದ ಮುಂದಿನ ಪ್ರಜೆಗಳು ಅವರ ಸುರಕ್ಷತೆ ನಮ್ಮೆಲ್ಲರ ಹಕ್ಕು ಕೂಡ ಹೀಗೆ ಪ್ರಕೃತಿಯಲ್ಲಿ ಹಾಗುವಂತ ಕೆಲವೊಂದು ಅನಾಹುತ ತಪ್ಪಿಸಲು ಸಹಕಾರಿಯಾಗುತ್ತದೆ. ಹೌದು ಕೆಲವೊಮ್ಮೆ ಮಳೆಗಾಲದಲ್ಲಿ ಮಂಜಿನ ವಾತಾವರಣ ಹಾಗೂ ಮೋಡದ ವಾತಾವರಣ ಕತ್ತಲು ಕವರಿಸುವುದು ಇಂತಹ ಸಮಯದಲ್ಲಿ ಹಳದಿಯೋ ಬಣ್ಣ ಬೇಗನೆ ಕಣ್ಣಿಗೆ ಬೀಳುತ್ತದೆ ಆದ್ದರಿಂದ ಯಾವುದೇ ಅಪಾಯ ಆಗದಂತೆ ಸುರಕ್ಷಿತವಾಗಿರಲು ಸಹಕಾರಿ ಅನ್ನೋದು ತಜ್ಞರ ಮಾತು.

ಹೌದು ನಮ್ಮ ನಿಮ್ಮೆಲ್ಲರ ಮಕ್ಕಳು ಶಾಲೆಗೆ ಹೋಗುವಾಗ ಶಾಲಾ ವಾಹನಗಳು ಬೆಳಗಿನ ಜಾವಾ 6:30 ಇಲ್ಲ 7 ಗಂಟೆ ಸಮಯದಲ್ಲಿ ಬರುತ್ತವೆ. ವಾತಾವರಣ ಬದಲಾದಾಗ ಬೆಳಗಿನ ಸಮಯದಲ್ಲಿ ವಾಹನಗಳು ಅಷ್ಟಾಗಿ ಕಾಣುವುದಿಲ್ಲ, ಆದರೆ ಹಳದಿ ಬಣ್ಣದ ವಾಹನಗಳು ಬಹಳ ಬೇಗ ಕಣ್ಣಿಗೆ ಕಣ್ಣುತ್ತವೆ, ಆದ್ದರಿಂದ ಶಾಲಾ ವಾಹನಗಳಿಗೆ ಹಳದಿ ಬಣ್ಣವನ್ನ ಆಯ್ಕೆ ಮಾಡಿದ್ದಾರೆ. ಎಲ್ಲಾ ಶಾಲಾ ವಾಹನಗಳು ಹಳದಿ ಬಣ್ಣದ್ದೇ ಆಗಿರ ಬೇಕು ಎಂಬುದಲ್ಲನ್ನ 1930 ರಲ್ಲಿ ನಾರ್ಥ್ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಡಾ. ಫ್ರಾಂಕ್ ಎನ್ನುವವರು ಈಗ ನಾವು ಇಲ್ಲಿ ತಿಳಿಸಿರುವ ಎಲ್ಲಾ ವಿಷಯಗಳನ್ನ ಹೇಳಿ ಈ ಹಳದಿ ಬಣ್ಣವನ್ನ ಆಯ್ಕೆ ಮಾಡುತ್ತಾರೆ. ಅಂದಿನಿಂದ ಇಲ್ಲಿಯವರೆಗೂ ಇದು ನಡೆದುಕೊಂಡು ಬಂದಿದೆ ಎನ್ನಬಹುದು. ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಕೂಡ ಹಂಚಿಕೊಳ್ಳಿ ಇದರ ವಿಚಾರ ತಿಳಿದುಕೊಳ್ಳಲಿ. ಹೀಗೆ ಉಪಯುಕ್ತ ವಿಚಾರಗಳನ್ನು ತಿಳಿದುಕೊಳ್ಳಲು ನಮ್ಮ ಪೇಜ್ ಅನ್ನು ಷೇರ್ ಮಾಡುವ ಮೂಲಕ ಬೆಂಬಲಿಸಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *