2020 ರಲ್ಲಿ ನಡೆಯುತ್ತಿರುವ ಐಪಿಎಲ್ ಟಿ-20 ಯಲ್ಲಿ ಆರಸಿಬಿ ಡಗೌಟ್ ನಲ್ಲಿ ಕುಣಿದು ಕುಪ್ಪಳಿಸಿದ ಬ್ಯೂಟಿ ಯಾರೆಂದು ಈ ಲೇಖನದ ಮೂಲಕ ತಿಳಿಯೋಣ.

2020 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸೆಪ್ಟಂಬರ್ 28 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ ರೋಚಕ ಗೆಲುವನ್ನು ಪಡೆದಿದೆ. ಸೂಪರ್ ಒವರ್ ನ ಅಂತಿಮ ಎಸೆತದಲ್ಲಿ ಬೌಂಡರಿ ಸಿಡಿಸಿದ ಸಂದರ್ಭದಲ್ಲಿ ಆರಸಿಬಿ ಡಗೌಟ್ ನಲ್ಲಿ ಕುಣಿದು ಕುಪ್ಪಳಿಸಿದ ಯುವತಿಯ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಕೊರೋನ ಕಾರಣದಿಂದ ಪ್ರೇಕ್ಷಕರಿಲ್ಲದೆ ಪಂದ್ಯಗಳನ್ನು ನಡೆಸಲಾಗುತ್ತಿದ್ದು ಆದರೂ ಆಟಗಾರರ ನಡುವೆ ಯುವತಿ ಎಲ್ಲರ ಆಕರ್ಷಣೀಯ ಕೇಂದ್ರ ಬಿಂದುವಾಗಿದ್ದರು. ಇವಳು ಯಾರೆಂದರೆ ಮೊದಲ ಸಹಾಯಕ ಮಹಿಳಾ ಸಿಬ್ಬಂದಿ ನವನೀತಾ ಗೌತಮ್. ತರಭೇತಿ ಪಡೆದ ಮಸಾಜ್ ಥೆರಪಿಸ್ಟ್ ಆಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ, ತಂಡದ ಕ್ರೀಡಾ ಮಸಾಜ್ ಥೆರಪಿಸ್ಟ್ ಆಗಿ ನವನೀತಾ ಗೌತಮ್ ಅವರನ್ನು ನೇಮಕ ಮಾಡಿಕೊಳ್ಳಲಾಗಿತ್ತು.

ಐಪಿಎಲ್ ನ ಯಾವುದೇ ತಂಡವು ಇದುವರೆಗೂ ಮಹಿಳಾ ಸಹಾಯಕ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರಲಿಲ್ಲ. ಆರಸಿಬಿ ತಂಡದ ಮುಖ್ಯ ಪಿಸಿಯೋ ಥೆರಪಿಸ್ಟ್ ಅವರ ಮಾರ್ಗದರ್ಶನದಲ್ಲಿ ಆಟಗಾರರ ಸ್ಥಿತಿ, ಗತಿ ಅರಿತು ಸೂಕ್ತ ಮಸಾಜ್ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಹಿಂದೆ ಕೆನಡಾ ಮೂಲದ ಥೆರಪಿಸ್ಟ್ ಟೊರೊಂಟೊ ನ್ಯಾಷನಲ್ ಪರ ಗ್ಲೋಬಲ್ ಟಿ-20 ಲೀಗ್ ನಲ್ಲಿ ಕಾರ್ಯ ನಿರ್ವಹಿಸಿದ್ದರು. ಏಷ್ಯಾ ಕಪ್ ನಲ್ಲಿ ಭಾರತದ ಮಹಿಳಾ ಬಾಸ್ಕೆಟ್ ಬಾಲ್ ತಂಡದ ಜೊತೆಗೂ ಕೂಡ ಕಾರ್ಯ ನಿರ್ವಹಿಸಿದ್ದರು. ಆರಸಿಬಿ ತಂಡದೊಂದಿಗೆ ಐಪಿಎಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರು ಈ ಕೆಲಸ ದೊಡ್ಡ ಚಾಲೆಂಜ್ ಆಗಿದ್ದು 20 ಸಹೋದರರೊಂದಿಗೆ ಕಾಲ ಕಳೆಯುವ ಅನುಭವ ಉತ್ತಮವಾಗಿದೆ ಹಾಗೂ ಮಹಿಳಾ ಸಿಬ್ಬಂದಿಯನ್ನು ಹೆಚ್ಚು ನೇಮಿಸಿಕೊಳ್ಳಲಿ ಎಂದು ಹೇಳಿಕೊಂಡಿದ್ದಾರೆ. ಆಟಗಾರರ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಸ್ನಾಯುಗಳಲ್ಲಿ ಯಾವುದು ಹೆಚ್ಚು ಒತ್ತಡಕ್ಕೆ ಒಳಗಾಗಿದೆ, ಯಾವುದು ಕಡಿಮೆ ಒತ್ತಡಕ್ಕೆ ಒಳಗಾಗಿದೆ ಎಂದು ಗಮನಿಸಿ ಪ್ರತಿ ಪಂದ್ಯಕ್ಕೂ ಮುನ್ನ ಚಿಕಿತ್ಸೆ ಮಸಾಜ್ ಮಾಡಲಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!