ಯಜುವೇಂದ್ರ ಚಹಲ್ ಮದುವೆ ಆಗುವ ಹುಡುಗಿ ಇವರೇ

0 0

ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಆರಸಿಬಿಯ ಟ್ರಂಪ್ ಕಾರ್ಡ್ ಯಜುವೇಂದ್ರ ಚಹಲ್ ಮುಂಬೈ ಮೂಲದ ಹುಡುಗಿಯೊಂದಿಗೆ ಎಂಗೇಜ್ಮೆಂಟ್ ಫೋಟೊಗಳನ್ನು ಟ್ವಿಟರ್ ನಲ್ಲಿ ಹಾಕಿಕೊಂಡಿದ್ದಾರೆ. ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಮುಂಬೈ ಮೂಲದ ಧನಶ್ರಿ ವರ್ಮಾ ಅವರ ಜೊತೆ ಚಹಲ್ ಹಸೆಮಣೆ ಏರಲು ತಯಾರಾಗಿದ್ದಾರೆ. ಧನಶ್ರಿ ವೃತ್ತಿಯಲ್ಲಿ ಡಾಕ್ಟರ್ ಆಗಿದ್ದು ಡ್ಯಾನ್ಸರ್ ಕೂಡ ಹೌದು. ಧನಶ್ರಿ ಒಬ್ಬ ಕೋರಿಯೊಗ್ರಾಫರ್ ಹಾಗೂ ಯುಟ್ಯೂಬರ್ ಕೂಡ ಆಗಿದ್ದಾರೆ. ಸೆಲೆಬ್ರಿಟಿಗಳ ಮದುವೆ ಸಮಾರಂಭಗಳಿಗೆ ಡ್ಯಾನ್ಸಿಂಗ್ ಇವೆಂಟ್ ಗಳಿಗೆ ಧನಶ್ರಿ ಕೋರಿಯೊಗ್ರಾಫ್ ಮಾಡುತ್ತಾರೆ. ಚಹಲ್ ರೀತಿಯಲ್ಲಿ ಟಿಕ್ ಟಾಕ್ ನಲ್ಲೂ ಸಕತ್ತ್ ಫೇಮಸ್ ಆಗಿದ್ದಾರೆ.

ಚಹಲನ ಅನೇಕ ಟಿಕ್ ಟಾಕ್ ವಿಡಿಯೋಗಳನ್ನು ತಮ್ಮ ಇನ್ಸಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇವರು ತಮ್ಮ ಡ್ಯಾನ್ಸ್ ಮೂಲಕ ಅಭಿಮಾನ ಬಳಗವನ್ನೇ ಹೊಂದಿದ್ದಾರೆ.ಇವರು ಇನ್ಸ್ಟಾಗ್ರಾಮದಲ್ಲಿ 6 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ, ಅಲ್ಲದೇ ಇವರ ಡ್ಯಾನ್ಸ್ ನೋಡಲು ಅದೆಷ್ಟೋ ಅಭಿಮಾನಿಗಳು ಕಾಯುತ್ತಾರೆ. ಮದುವೆ ಸಂಭ್ರಮದ ಜೊತೆಯಲ್ಲಿ ಐಪಿಎಲ್ ತಂಡಕ್ಕೆ ಸೇರಿಕೊಂಡ ಖುಷಿಯಲ್ಲಿ ಯಜುವೇಂದ್ರ ಚಹಲ್ ಇದ್ದಾರೆ. ಒಟ್ಟಿನಲ್ಲಿ ಚಹಲ್ ಮದುವೆ ಸಂಭ್ರಮದಲ್ಲಿದ್ದಾರೆ ಅವರ ಜೀವನ ಸುಖಮಯವಾಗಿರಲಿ ಎಂದು ಹಾರೈಸೋಣ.

Leave A Reply

Your email address will not be published.