ಕನ್ನಡ ಚಿತ್ರರಂಗದ ಹಾಸ್ಯ ನಟ ಮಂಡ್ಯ ರಮೇಶ್ ಅವರ ಮಗಳು ದಿಶಾ ರಮೇಶ್ ಅವರು ಏನು ಮಾಡುತ್ತಿದ್ದಾರೆ ಹಾಗೂ ಅವರ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಕನ್ನಡ ಚಿತ್ರರಂಗದ ಸಕ್ರೀಯ ನಟ, ನಿರ್ದೇಶಕ, ರಂಗಕರ್ಮಿ ಮಂಡ್ಯ ರಮೇಶ್. ಇವರು 1964 ರಲ್ಲಿ ಜನಿಸಿದ್ದಾರೆ. 1982 ರಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಸಾವಿರಾರು ನಾಟಕಗಳು, ಧಾರಾವಾಹಿಗಳು, ಸಿನಿಮಾಗಳು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಭಿನಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಮಜಾಟಾಕೀಸ್ ಹಾಸ್ಯ ಕಾರ್ಯಕ್ರಮದಲ್ಲಿ ಮುದ್ದೇಶ ಎನ್ನುವ ಪಾತ್ರದಿಂದಲೂ ಕೂಡ ಬಹಳ ಹೆಸರುಗಳಿಸಿದ್ದಾರೆ. ಮಂಡ್ಯ ರಮೇಶ್ ಅವರಿಗೆ ಸುಂದರವಾದ ಒಬ್ಬ ಮಗಳಿದ್ದಾಳೆ ಅವರ ಹೆಸರು ದಿಶಾ ರಮೇಶ್. ಇವರು ಕೂಡ ಅಪ್ಪನಂತೆ ಕಲಾವಿದೆ. ಇವರು ಯಾವ ನಟಿಗೆ ಕಡಿಮೆ ಇಲ್ಲ ಎನ್ನುವಂತೆ ಅಭಿನಯ ಮಾಡುತ್ತಾರೆ.

ಇವರು ರಂಗಭೂಮಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದು ಚೋರ ಚರಣ ದಾಸ ಇವರಿಗೆ ಬಹುದೊಡ್ಡ ಹೆಸರನ್ನು ತಂದುಕೊಟ್ಟಿತು. ನಾನು ರಂಗಭೂಮಿಗೆ ಬರಲು ನನ್ನ ಅಪ್ಪನೆ ಸ್ಪೂರ್ತಿ ಎಂದು ದಿಶಾ ಹೇಳಿಕೊಂಡಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯಗಳಲ್ಲಿ ರಂಗಭೂಮಿ ಪ್ರದರ್ಶನ ನೀಡಬೇಕು ಎನ್ನುವುದು ದಿಶಾ ಅವರ ಕನಸಾಗಿದೆ. ಇವರು ಉತ್ತಮ ಪಾತ್ರ ಇರುವ ಕಥೆ ಸಿಕ್ಕರೆ ನಟಿಸುವ ಆಸೆಯಿದೆ ಎಂದು ಹೇಳಿದ್ದಾರೆ. ದಿಶಾ ಅವರು 2016 ರಲ್ಲಿ ತೆರೆಕಂಡ ದೇವರನಾಡಲ್ಲಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರು ಸ್ನೇಹಿತರೊಂದಿಗೆ ರಂಗಭೂಮಿಯಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ. ದಿಶಾ ಅವರು ಸಿನಿಮಾಗಳಲ್ಲಿ ನಟಿಸಿ ದೊಡ್ಡ ಹೆಸರು ಮಾಡಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *