ಕಲಿಯುಗದ ಕಲ್ಪವೃಕ್ಷ ಕಾಮಧೇನು ಗುರು ರಾಘವೇಂದ್ರ ಮಹಾಸ್ವಾಮಿಗಳು ನೆಲೆಸಿರುವ ತುಂಗಾತೀರದ ಮಂತ್ರಾಲಯದಲ್ಲಿ ರಾಯರ 350ನೇ ಆರಾಧನೆ ಮಹೋತ್ಸವ ನಡೆಯುತ್ತಿದೆ. ಆಗಸ್ಟ್ 21 ರಿಂದ ಆರಂಭವಾದ ರಾಯರ ಆರಾಧನೆ ಮಹೋತ್ಸವ ಆಗಸ್ಟ್ 27ರವರೆಗೂ ನಡೆಯಲಿದೆ. ಈ ನಿಟ್ಟಿನಲ್ಲಿ ಮಂತ್ರಾಲಯಕ್ಕೆ ಜನಸಾಗರವೇ ಹರಿದು ಬರುತ್ತಿದೆ. ರಾಘವೇಂದ್ರ ಮಹಾಸ್ವಾಮಿಗಳು ನೆಲೆಸಿರುವ ತುಂಗಾತೀರ ಮಂತ್ರಾಲಯದಲ್ಲಿ ರಾಯರ 350ನೇ ಆರಾಧನಾ ಮಹೋತ್ಸವದ ಸಂಭ್ರಮ ಕಳೆಗಟ್ಟಿದೆ. ಈ ಹಿನ್ನೆಲೆಯಲ್ಲಿ ದಿನಕ್ಕೊಂದು ವಿಶೇಷ ಪೂಜೆ ರಾಯರ ಸನ್ನಧಿಯಲ್ಲಿ ನಡೆಯುತ್ತಿದೆ. ಅದರಂತೆ ಉತ್ತರಾಧನೆ ನಡೆಯುತ್ತಿದೆ.

ಈ ಸಂಭ್ರವನ್ನು ಮತ್ತಷ್ಟು ಇಮ್ಮಡಿಗೊಳಿಸಲು ರಾಯರ ಬೃಂದಾವನಕ್ಕೆ ಎರಡು ಚಿನ್ನದ ಪಾತ್ರೆಯನ್ನು ಸಮರ್ಪಣೆ ಮಾಡಲಾಗಿದೆ. ಮಠಕ್ಕೆ ದಾನಿಗಳು ನೀಡಿದ ಚಿನ್ನದಿಂದ ತಯಾರಿಸಲಾದ ಪಾತ್ರೆಗಳನ್ನು ಮಠದ ಶ್ರೀಗಳು ರಾಯರಿಗೆ ಸಮರ್ಪಣೆ ಮಾಡಿದ್ದಾರೆ. 20 ಕೋಟಿ ರೂಪಾಯಿ ಮೌಲ್ಯದ ಈ ಎರಡು ಚಿನ್ನದ ಪಾತ್ರೆಗಳನ್ನು ಪಂಚಾಮೃತ ಅಭಿಷೇಕಕ್ಕೆ ಬಳಕೆ ಮಾಡಲು ಶ್ರೀಗಳು ತೀರ್ಮಾನಿಸಿದ್ದಾರೆ.

ಮಠಕ್ಕೆ ದಾನಿಗಳು ನೀಡಿದ ಚಿನ್ನದಿಂದ ತಯಾರಿಸಲಾದ ಪಾತ್ರೆಗಳನ್ನು ಮಠದ ಶ್ರೀಗಳು ರಾಯರಿಗೆ ಸಮರ್ಪಣೆ ಮಾಡಿದ್ದಾರೆ. 20 ಕೋಟಿ ರೂಪಾಯಿ ಮೌಲ್ಯದ ಈ ಎರಡು ಚಿನ್ನದ ಪಾತ್ರೆಗಳನ್ನು ಪಂಚಾಮೃತ ಅಭಿಷೇಕಕ್ಕೆ ಬಳಕೆ ಮಾಡಲು ಶ್ರೀಗಳು ತೀರ್ಮಾನಿಸಿದ್ದಾರೆ. ಸಮೀಪದ ತುಂಗಭದ್ರಾ ನದಿ ತಳಕಂಡಿದ್ದರೂ ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವಕ್ಕೆ ಭಕ್ತಸಾಗರವೇ ಹರಿದುಬರುತ್ತದೆ. ಆಂಧ್ರ, ಕರ್ನಾಟಕ ಸೇರಿ ನಾನಾ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ರಾಯರ ಕ್ಷೇತ್ರದಲ್ಲಿ ಭಕ್ತಿ, ಭಾವ ಉಕ್ಕಿಹರಿದಿದೆ.

ಆರಾಧನೆ ಅಂಗವಾಗಿ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಆರಾಧನೆ ಮಹೋತ್ಸವದ ವೈಭವ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ರಾಯರ ದರ್ಶನಕ್ಕೆ ಬಂದ ಭಕ್ತರೇ ಪರಿಮಳ ಪ್ರಸಾದ ಪ್ಯಾಕಿಂಗ್ ಮಾಡುವ ವಾಡಿಕೆ ಮಂತ್ರಾಲಯದಲ್ಲಿ ಪ್ರಾರಂಭವಾಗಿದೆ. ಈ ನಿಟ್ಟಿನಲ್ಲಿ ಭರದಿಂದ ಪರಿಮಳ ಪ್ರಸಾದದ ಪ್ಯಾಕಿಂಗ್ ನಡೆಯುತ್ತಿದೆ. ಪರಿಮಳ ಪ್ರಸಾದ ಸರ್ವರೋಗಕ್ಕೂ ಮದ್ದು ಎಂಬ ಪ್ರತೀತಿ ಇದೆ. ಹೀಗಾಗಿ ಮಂತ್ರಾಲಯಕ್ಕೆ ಬರುವವರು ಪರಿಮಳ ಪ್ರಸಾದ ಪಡೆಯುವುದು ವಾಡಿಕೆ. ಈ ಬಾರಿ 5 ಕ್ವಿಂಟಲ್​ಗೂ ಅಧಿಕ ಪರಿಮಳ ಪ್ರಸಾದ ತಯಾರಿಸಲಾಗಿದೆ.

ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ನೀಡುವ ಪರಿಮಳ ಪ್ರಸಾದ ತಿರುಪತಿಯ ತಿಮ್ಮಪ್ಪನ ಲಾಡುನಂತೆಯೇ ಹೆಸರು ವಾಸಿ. ಮಂತ್ರಾಲಯಕ್ಕೆ ಆಗಮಿಸುವ ಎಲ್ಲರೂ ಪರಿಮಳ ಪ್ರಸಾದ ಪಡೆಯದೇ ಮರಳಲಾರರು. ಅಂಥ ಮಹತ್ವ ಪರಿಮಳ ಪ್ರಸಾದಕ್ಕಿದೆ. 20 ರೂ.ಗೆ ನಾಲ್ಕು ಪರಿಮಳ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ. ಪರಿಮಳ ಪ್ರಸಾದ ತಯಾರಿಸುವ ಪ್ರಕ್ರಿಯೆ ಶ್ರೀಮಠದ ಅಡುಗೆ ಶಾಲೆಯಲ್ಲಿ ದಿನವೂ ಬೆಳಗ್ಗೆ 8ಕ್ಕೆ ಆರಂಭಗೊಳ್ಳುತ್ತದೆ. ಆರಾಧನೆ ಸಂದರ್ಭದಲ್ಲಿ ಸಾಕಷ್ಟು ಮುಂಚಿತವಾಗಿಯೇ ಪರಿಮಳ ಪ್ರಸಾದ ತಯಾರಿಸಲಾಗುತ್ತದೆ.

ಆರಾಧನೆಗೆ ಲಕ್ಷಾಂತರ ಸಂಖ್ಯೆಯ ಭಕ್ತರು ಆಗಮಿಸುವುದರಿಂದ ಎಲ್ಲರಿಗೂ ಪರಿಮಳ ಪ್ರಸಾದ ಒದಗಿಸಲು ವಾರಗಟ್ಟಲೇ ಮೊದಲೇ ತಯಾರಿ ನಡೆಸಲಾಗುತ್ತದೆ. ಇನ್ನುಳಿದ ದಿನಗಳಲ್ಲಿ ಭಕ್ತರ ಸಂಖ್ಯೆಯನ್ನು ಪರಿಗಣಿಸಿ ಪ್ರಸಾದದ ತಯಾರಿ ಪ್ರಕ್ರಿಯೆ ನಡೆಯುತ್ತದೆ. ಫೇಣೆ ರವಾ, ಶುದ್ಧ ತುಪ್ಪ, ಸಕ್ಕರೆ ಬಳಸಿ ತಯಾರಿಸುವ ಪರಿಮಳ ಪ್ರಸಾದದ ಕಂಪು ಅಂದಿಗೂ ಇಂದಿಗೂ ಎಂದೆಂದಿಗೂ ಅದೇ ಸ್ವಾದ.

ಒಂದೇ ರೀತಿಯ ಪರಿಮಳಕ್ಕೆ ಹೆಸರಾಗಿದೆ. ಶ್ರೀಮಠಕ್ಕೆ ಭೇಟಿ ನೀಡಿ ಶ್ರೀರಾಘವೇಂದ್ರತೀರ್ಥರ ದರ್ಶನ ಪಡೆವ ಎಲ್ಲರೂ ಪರಿಮಳ ಪ್ರಸಾದ ಖರೀದಿಸದಿರರು. ದಿನವೂ 20 ಸಾವಿರ ಪರಿಮಳ ಪ್ರಸಾದದ ತುಂಡುಗಳು ಖರ್ಚಾಗುತ್ತವೆ. ಪ್ರತಿ 20 ರೂ.ನ ಪ್ಯಾಕೇಟ್‌ ನಲ್ಲಿ ಇಂಥ ನಾಲ್ಕು ಪ್ರಸಾದಗಳಿರುತ್ತವೆ. ಅದರಲ್ಲೂ ಆರಾಧನೆ ಮತ್ತಿತರ ವಿಶೇಷ ಸಂದರ್ಭದಲ್ಲಿ ಪರಿಮಳ ಪ್ರಸಾದ ತಯಾರಿಸುವ ಬಾಣಸಿಗರಿಗೆ ಬಿಡುವಿಲ್ಲದ ಕೆಲಸ. ಆಗ ದಿನವೂ 2 ಲಕ್ಷ ಪ್ಯಾಕೇಟ್‌ ಪರಿಮಳ ಪ್ರಸಾದ ಮಾರಾಟವಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *