ವ್ಯವಸಾಯದಲ್ಲಿ ಕೀಟನಾಶಕಗಳನ್ನು ಬಳಸುವುದರಲ್ಲಿ ಹಲವಾರು ವಿಧದ ಕೀಟನಾಶಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಕೀಟನಾಶಕಗಳು, ರಸಗೊಬ್ಬರಗಳು ಜೊತೆಗೆ ಕೂಲಿ ಇವೆಲ್ಲವೂ ಸೇರಿ ಹೆಚ್ಚು ವೆಚ್ಚ ಮಾಡಿ ಸಿಗುವ ಬೆಳೆಗೆ ಸಿಗುವ ಬೆಲೆ ಮಾತ್ರ ಕಡಿಮೆ. ನಷ್ಟವೆ ಹೆಚ್ಚು. ಮತಹ ಸಮಯದಲ್ಲಿ ರಾಯಚೂರಿನ ಕೆಲವು ಪ್ರಗತಿಪರ ರೈತರು ಹೊಸ ರೀತಿಯ ಪ್ರಯೋಗ ಮಾಡಿದ್ದಾರೆ. ಜೊತೆಗೆ ಒಳ್ಳೆಯ ಇಳುವರಿ ಕೂಡ ಪಡೆಯುತ್ತಿದ್ದಾರೆ. ಹಾಗಾದರೆ ಅವರು ಅನುಸರಿಸುತ್ತಿರುವ ಪದ್ಧತಿ ಏನೂ ನಾವು ತಿಳಿಯೋಣ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರಿನ ರೈತರು ಸುತ್ತಲಿನ ಎರಡು ಸಾವಿರ ಎಕರೆಗಳಿಗೆ ಈ ಹೊಸ ಪ್ರಯೋಗ ಮಾಡಿದ್ದಾರೆ. ಯಾವುದೇ ರೀತಿಯ ಅಡುಗೆ ಎಣ್ಣೆ ತೆಗೆದುಕೊಂಡು ಅದಕ್ಕೆ ಆರು ಕೋಳಿ ಮೊಟ್ಟೆ ಹಾಕಿ ನೀರಿನೊಂದಿಗೆ ಬೆರೆಸಿ ಸಿಂಪಡಣೆ ಮಾಡುತ್ತಾರೆ. ಈ ರೀತಿಯ ಇಳಿವರಿಯ ಪ್ರಯೋಗವನ್ನು ಇಸ್ರೆಲಿನ ವಿಜ್ಞಾನಿಯೊಬ್ಬರು ಪ್ರಯೋಗ ಮಾಡಿ ಗೆದ್ದಿದ್ದರು. ತೆಲಂಗಾಣದ ರೈತರು ಕೂಡ ಈ ಪ್ರಯೋಗವನ್ನು ಮಾಡಿ ಹೆಚ್ಚು ಇಳುವರಿ ಪಡೆದಿದ್ದರು. ಈಗ ನಾರಾಯಣಪುರದ ಬಲದಂಡೆಯ ಕಾಲುವೆ ನೀರಿನಿಂದ ಇವರ ಪ್ರಮುಖ ಬೆಳೆಗಳಾದ ಭತ್ತ, ಹತ್ತಿ, ಮೆಣಸು ಬೆಳೆಯುತ್ತಾರೆ. ಹೀಗೆ ಬೆಳೆಯುವ ಬೆಳೆಗೆ ಗೊಬ್ಬರ, ಔಷಧ ಸಿಂಪಡಣೆ, ಇದರ ಕೂಲಿ ಎಲ್ಲಾ ಸೇರಿ 40-50 ಸಾವಿರ ಒಂದು ಎಕರೆಗೆ ಖರ್ಚು ಮಾಡುತ್ತಿದ್ದರು. ಆದರೆ ಕೊನೆಯಲ್ಲಿ ನಷ್ಟವಾಗುತ್ತಿತ್ತು. ಆದರೆ ಈಗ ಅಡುಗೆ ಎಣ್ಣೆಯನ್ನು ಬಳಸಿ ಲಾಭ ಮಾಡುತ್ತಿದ್ದಾರೆ. ಅಡುಗೆ ಎಣ್ಣೆಯನ್ನು ಕೀಟ ನಾಶಕ ಔಷಧಿಯಾಗಿಯೂ ಹಾಗೂ ಪೋಷಕಾಂಶಗಳನ್ನು ಒದಗಿಸುವ ಔಷಧಿಯಾಗಿಯೂ ಬಳಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ವೀರನಗೌಡ ಎಂಬ ರೈತರ ಪ್ರಕಾರ ಎರಡು ಸಾವಿರ ಎಕರೆಯಲ್ಲಿ ನೂರರಿಂದ ನೂರೈವತ್ತು ಜನ ರೈತರು ಸೇರಿ ಕೃಷಿ ಮಾಡುತ್ತಿದ್ದಾರೆ. ಆಂಧ್ರದ ಮೂಲದ ಪೊನ್ನು ಸ್ವಾಮಿ ಎಂಬ ರೈತನಿಂದ ಈ ವಿಧಾನದ ಬಗ್ಗೆ ತಿಳಿಯಿತು. ಅವನ ಪ್ರಕಾರ ಎರಡು ಪಟ್ಟು ಇಳುವರಿ ಪಡೆಯಬಹುದು ಎನ್ನುತ್ತಾರೆ. ಒಂದು ಎಕರೆಗೆ ಎಳ್ಳೆಣ್ಣೆ ಹಾಗೂ ಆರು ಮೊಟ್ಟೆ ಹಾಕಿ ಕಲಸಿ ನೀರಿನೊಂದಿಗೆ ಸೇರಿಸಿ ಬೆಳೆಗಳಿಗೆ ಸಿಂಪಡಿಸಿದರೆ ಸಾಕು. ನಿಯಮಿತವಾಗಿ ಬಳಸುವುದರಿಂದ ಉತ್ತಮ ಬೆಳೆಯು ಸಿಗುತ್ತದೆ. ಯಾವುದೇ ರೋಗ ಕಂಡುಬರುತ್ತಿಲ್ಲ. ಹುಳುಗಳು ಸಾಯುತ್ತವೆ. ಮುರುಟು ರೋಗ ಕೂಡ ಇಲ್ಲ. ಫರ್ಟಿಲೈಸರ್ ಬಳಸಿದಷ್ಟೆ ಇಳುವರಿ ಬಂದಿದೆ. ಮೂವತ್ತು ಎಕರೆಗೆ ನಾಲ್ಕು ಸಾವಿರ ಅಷ್ಟೆ ವೆಚ್ಚವಾಗಿದ್ದು. ಈಗ ಹದಿನೇಳು ಕ್ವಿಂಟಲ್ ಬೆಳೆ ಬರುತ್ತದೆ. ಇದರಿಂದ ರೈತರಿಗೆ ಲಾಭದ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಎಲ್ಲಾ ರೈತರ ಅಭಿಪ್ರಾಯಗಳು ಚೆನ್ನಾಗಿದೆ ಎನ್ನುವುದೆ ಆಗಿದೆ. ಫರ್ಟಿಲೈಸರ್, ಫೆಸ್ಟಿಸೈಸ್ ಬಳಸುವುದಕ್ಕಿಂತ ಕಡಿಮೆ ಖರ್ಚಿನಲ್ಲಿ ಆಗುತ್ತದೆ. ಎಂದು ರೈತರು ಹೇಳುತ್ತಾರೆ.

ಪಾಮ್ ಎಣ್ಣೆ, ಶೇಂಗಾ ಎಣ್ಣೆ, ಕೊಬ್ಬರಿ ಎಣ್ಣೆ ಹೀಗೆ ಅಡುಗೆಗೆ ಬಳಸುವ ಹಲವಾರು ಎಣ್ಣೆಗಳಲ್ಲಿ ಮಧ್ಯವರ್ತಿಯಂತೆ ಆರು ಕೋಳಿ ಮೊಟ್ಟೆ ಬೆರೆಸಿ ವಾರಕ್ಕೆ ಒಂದು ಬಾರಿಗೆ ಬೆಳೆಗಳಿಗೆ ಸಿಂಪಡಣೆ ಮಾಡಬೇಕು. ಇದರಿಂದ ಮುರುಟು ರೋಗ, ಜಿಗಿ ರೋಗ ಹೀಗೆ ಮುಂತಾದ ರೋಗಗಳ ನಾಶ ಮಾಡುತ್ತದೆ. ಹಳೆಯ ಪದ್ದತಿಗೆ ಬಳಸುವ ಹಣದ ಶೇಕಡಾ ಹತ್ತು ಭಾಗ ಬಳಸಿ ಬೆಳೆಗಳಿಗೆ ಪೋಷಕಾಂಶಗಳನ್ನು ಕೂಡ ಒದಗಿಸಬಹುದು ಎಂದು ಕಂಡುಕೊಂಡಿದ್ದಾರೆ ರೈತರು. ಈ ಮಿಶ್ರಣ ಹೇಗೆ ಮಾಡಬೇಕು ಎಂದರೆ ಬೆಳೆ ಬೆಳೆಯುವ ಸಮಯದಲ್ಲಿ ಒಂದು ವಾರಗಳಿಗೊಮ್ಮೆ ಅಡುಗೆ ಎಣ್ಣೆ ಹಾಗೂ ನೀರು ಬೆರೆಸಿ ಸಿಂಪಡಿಸಬೇಕು. ಆದರೆ ಎಣ್ಣೆ ಮತ್ತು ನೀರು ಬೆರೆಯದೆ ಇರುವ ಕಾರಣ ಮದ್ಯವರ್ತಿಯಾಗಿ ಕೋಳಿಮೊಟ್ಟೆ ಬಳಸುತ್ತಾರೆ. ಈ ಮೂರು ವಸ್ತುಗಳು ಮಾತ್ರ ಬೇಕಾಗಿರುವುದು. ಮೊದಲು ಕೋಳಿ ಮೊಟ್ಟೆಯ ಬದಲು ಎಂಎಸ್ ಪೈರ್ ಎಂಬ ಮಿಶ್ರಣ ಬಳಸುತ್ತಿದ್ದರು. ಈ ಮಿಶ್ರಣಕ್ಕೆ ನೂರು ಮಿಲಿಗೆ 40 ರೂಪಾಯಿ ಕೊಟ್ಟು ತರುತ್ತಿದ್ದರು. ಆದರೆ ಈಗ ಒಂದು ಲೀಟರ್ ಗೆ ಆರು ಕೋಳಿ ಮೊಟ್ಟೆ ಮಿಶ್ರಣ ಮಾಡಿ 19 ಲೀಟರ್ ನೀರು ಬೆರೆಸಿಕೊಂಡು ಆರು ಟ್ಯಾಂಕ್ ಔಷಧಿ ಸಿಂಪಡಿಸುತ್ತಾರೆ. ವಾರಕ್ಕೊಮ್ಮೆ ಸಿಂಪಡಣೆ ಮಾಡಬೇಕು. ಹೀಗೆ ಲೆಕ್ಕ ಹಾಕಿದರೆ ಒಂದು ಲೀಟರ್ ಎಣ್ಣೆಗೆ 60-120 ರೂಪಾಯಿ, ಆರು ಮೊಟ್ಟೆಗೆ 40 ರೂಪಾಯಿಗಳು, ಸಿಂಪಡಿಸಿದ ಕೂಲಿ 300 ರೂಪಾಯಿ ಹೀಗೆ ಎಕರೆಗೆ 450 ರೂಪಾಯಿ ಮಾತ್ರ ಖರ್ಚು ಮಾಡುತ್ತಾರೆ. ಇದೇ ರೀತಿ ರಾಸಾಯನಿಕ ಬಳಸಿದಲ್ಲಿ ಪ್ರತಿ ಲೀಟರ್ ಗೆ 1000-1500 ರುಪಾಯಿ ಜೊತೆಗೆ ರಸಗೊಬ್ಬರಗಳಿಗೆ ಹೆಚ್ಚಿ ಖರ್ಚು ಮಾಡುವ ಹಾಗೆ ಇತ್ತು. ಇದರ ಬಗ್ಗೆ ಮಾತನಾಡಿದ ಶರಬಣ್ಣ ಸಾಹುಕಾರ ಎಂಬ ರೈತ ಹೇಳುತ್ತಾರೆ. ಫರ್ಟಿಲೈಸರ್, ರಾಸಾಯನಿಕಗಳು ಬಳಸುವುದರಿಂದ ಆರೋಗ್ಯಕ್ಕೆ ತೊಂದರೆ ಆಗಬಹುದು ಆದರೆ ನಾವು ತಿನ್ನುವ ಪದಾರ್ಥವಾದ ಅಡುಗೆ ಎಣ್ಣೆಯನ್ನು ಬಳಸುವುದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆಯು ಇಲ್ಲ. ಕಡಿಮೆ ಖರ್ಚಿನಲ್ಲಿ, ಯಾವುದೇ ರೋಗಗಳು ಬಾರದಂತೆ ಇಳುವರಿ ಪಡೆಯಬಹುದು ಎನ್ನುತ್ತಾರೆ. ಇದರಿಂದ ರೈತ ಒಂದು ಮಾದರಿಯಾಗುತ್ತದೆ. ಭೂಮಿಯ ಫಲವತ್ತತೆ ಹಾಗೆ ಇರುತ್ತದೆ ಎನ್ನುತ್ತಾರೆ.

ಭೂಮಿಯ ಫಲವತ್ತತೆಯ ದೃಷ್ಟಿಯಿಂದಲೂ, ರೋಗ ಮುಕ್ತ ಬೆಳೆಗಳಿಂದಲೂ, ಹಾಗೂ ರಾಸಾಯನಿಕ ಬಳಸದೆ ಒಳ್ಳೆಯ ಇಳುವರಿ ಪಡೆಯಲು ಸಹಾಯಕವಾಗುವ ಅಡುಗೆ ಎಣ್ಣೆ ಹಾಗೂ ಕೋಳಿ ಮೊಟ್ಟೆಯ ಮಿಶ್ರಣ ಉತ್ತಮವಾಗಿದೆ. ಜೊತೆಗೆ ಕಡಿಮೆ ಖರ್ಚಿನಲ್ಲಿ ಔಷಧ ಸಿಂಪಡಣೆ ಕೂಡ ಮಾಡಬಹುದು.

Leave a Reply

Your email address will not be published. Required fields are marked *