ಕರುನಾಡ ಕನಸುಗಾರ ಎಂದೇ ಪ್ರಖ್ಯಾತಿ ಆಗಿರುವ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರ ಬಗ್ಗೆ, ಅವರ ಸಿನಿಮಾ ಜೀವನದ ಬಗ್ಗೆ ಹಾಗೂ ಅವರ ಫೇವರಿಟ್ ಹೀರೋಯಿನ್ ಗಳ ಬಗ್ಗೆ ಅವರೇ ಹೇಳಿದ ಮಾತುಗಳು ಇಲ್ಲಿವೆ ನೋಡಿ.

ಪ್ರೇಮಲೋಕ ಚಿತ್ರವನ್ನ ಯಾರು ತಾನೇ ನೋಡಿಲ್ಲ ಹೇಳಿ? ಆ ಕಾಲದಲ್ಲಿ ಸಾಕಷ್ಟು ಜನರ ಮನ ಗೆದ್ದ ಕನ್ನಡ ಸಿನೆಮಾ ಪ್ರೇಮಲೋಕ. ಪ್ರೇಮಲೋಕದ ರೂವಾರಿ ಕ್ರೇಜಿ ಸ್ಟಾರ್ ರವಿಚಂದ್ರನ್. ಅವರು ತಮ್ಮ ಫೇವರಿಟ್ ನಟಿಯರ ಬಗ್ಗೆ ಹೀಗೆ ಹೇಳುತ್ತಾರೆ. ಈ ಕ್ರೇಜಿ ಸ್ಟಾರ್ ಗೆ ಜೂಹಿ ಚಾವ್ಲಾ ಮತ್ತೆ ಖುಷ್ಬೂ ಈ ಎರಡು ನಟಿಯರು ತುಂಬಾ ಇಷ್ಟ ಅಂತೆ. ಬಾಂಬೇ ಅಲ್ಲಿ ಪ್ರೇಮಲೋಕ ಸಿನಿಮಗೋಸ್ಕರ ಹೀರೋಯಿನ್ ಗಳ ಅಡಿಷನ್ ನಡೆಯುತ್ತ ಇತ್ತು ಆಗ 64 ಜನ ಹುಡುಗಿಯರು ಸೆಲೆಕ್ಟ್ ಆಗಿದ್ದರಂತೆ. ಆ 64 ಹುಡುಗಿಯರಲ್ಲಿ ಕೊನೆಗೆ ಸೆಲೆಕ್ಟ್ ಆಗಿದ್ದು ಮಾತ್ರ ಜೂಹಿ ಚಾವ್ಲಾ. ಜೂಹಿ ಚಾವ್ಲಾ ಉತ್ತಮ ನಟಿ ಇವರು ನನ್ನ ಜೊತೆ ಸಿನೆಮಾ ಮಾಡುವಾಗ ಯಾವ ಒಂದು ಸಿನಿಮಾದಲ್ಲಿಯೂ ಕೂಡಾ ಯಾವುದೇ ಡೈಲಾಗ್ ಗಳನ್ನೂ ಕೂಡಾ 2, 3 ಟೇಕ್ ಗಳನ್ನ ತಗೊಂಡಿದ್ದು ನೆನಪೇ ಇಲ್ಲ ಅಂತ ಹೇಳ್ತಾರೆ. ಹಾಗೆಯೇ ಸಿನೆಮಾ ಡೈಲಾಗ್ ಗಳನ್ನ ಜೂಹಿ ಚಾವ್ಲಾ ಅಸ್ಸಿಸ್ಟೆಂಟ್ ಡೈರೆಕ್ಟರ್ ಗಳು ಕನ್ನಡದಲ್ಲಿ ಹೇಳಿದನ್ನ ಹಿಂದಿ ಭಾಷೆಯಲ್ಲಿ ಬರೆದುಕೊಂಡು ನಂತರ ಅದನ್ನ ಓದಿಕೊಂಡು ತಮಗೆ ಪೆರ್ಫೆಕ್ಟ್ ಆದ ನಂತರವೇ ಕ್ಯಾಮೆರಾ ಎದುರು ಬರುತ್ತಾ ಇದ್ದರು. ಕ್ಯಾಮೆರಾ ಎದುರು ಬಂದರೆ ಒಂದೇ ಟೇಕ್ ಗೆ ಒಂದು ಡೈಲಾಗ್ ಮುಗಿಸಿ ಹೋಗುತ್ತಾ ಇದ್ದರು ಅಷ್ಟು ಪೆರ್ಫೆಕ್ಟ್ ಆಗಿ ಇರ್ತಾರೆ ಅವರು ಅಂತ ಹೇಳ್ತಾರೆ ಕ್ರೇಜಿ ಸ್ಟಾರ್.

ಇನ್ನೂ ಖುಷ್ಬೂ ಅವರ ಬಗ್ಗೆಖುಷ್ಬೂ ಅವರನ್ನ ರವಿಚಂದ್ರನ್ ಅವರು ನೇರವಾಗಿ ಮೊದಲು ಭೇಟಿ ಮಾಡದೆ ಫೋನ್ ಮೂಲಕವೇ ತಮ್ಮ ಸಿನಿಮಾ ಗೆ ಸೆಲೆಕ್ಟ್ ಮಾಡಿಕೊಂಡಿದ್ದರು. ತನ್ನ ಸಿನಿಮಾದ ಹೀರೋಯಿನ್ ಹೇಗೆ ಇರಬೇಕು ಅನ್ನೋದರ ಬಗ್ಗೆ ಮೊದಲೇ ತಿಳಿಸಿದ್ದರಂತೆ ಕ್ರೇಜಿ ಸ್ಟಾರ್. ಖುಷ್ಬೂ ಅವರಿಗೆ ಮೊದ ಮೊದಲು ರವಿಚಂದ್ರನ್ ಅಂದ್ರೆ ಭಯ ಇತ್ತಂತೆ ತುಂಬಾ ಸ್ಟ್ರಿಕ್ಟ್ ಆಗಿ ಇರ್ತಾರೆ ಪ್ರತಿಯೊಂದು ಡೈಲಾಗ್ ಕೂಡ ಅವರು ಹೇಳಿದ ಹಾಗೇ ಬರಬೇಕು ಅಂತ…. ಆದರೆ ಕುದುರೆಮುಖದಲ್ಲಿ ಒಮ್ಮೆ ಶೂಟಿಂಗ್ ಗೆ ಅಂತ ಹೋದಾಗ ಅಲ್ಲಿ ಪ್ರೇಮ ಲೋಖ ಸಿನಿಮಾ ನೋಡಿ ಆಗಿನಿಂದ ರವಿಚಂದ್ರನ್ ಅವರ ಮೇಲೆ ಇರುವ ಸಿಟ್ಟು, ಭಯದ ಭಾವನೆ ಹೋಗಿ ಒಳ್ಳೆಯ ಅಭಿಪ್ರಾಯ ಬಂದಿತ್ತು. ಹಾಗೇ ಅಷ್ಟೇ ಅಲ್ಲದೆ ಯಾವುದೇ ಡೈಲಾಗ್ ಇದ್ದರೂ ಕೂಡಾ ಒಂದು ಅಥವಾ ಎರಡು ಟೇಕ್ ಗಳಲ್ಲಿ ಎಷ್ಟೇ ದೊಡ್ಡ ಡೈಲಾಗ್ ಇದ್ದರೂ ಸಹ ಸರಿಯಾಗಿ ಮಾಡುತ್ತಿದ್ದರು.

ರವಿಚಂದ್ರನ್ ಅವರಿಗೆ ಅವರ ಜಿತೆ ಕೆಲಸ ಮಾಡುವ ವ್ಯಕ್ತಿ ಪ್ರಾಮಾಣಿಕವಾಗಿ ಇದ್ದರೆ ಅವರನ್ನ ತುಂಬಾ ಇಷ್ಟ ಪಡುತ್ತಾರಂತೆ. ಈಗಲೂ ಸಹ 25 ವರ್ಷಗಳ ನಂತರವೂ ಸಹ ಜೂಹಿ ಚಾವ್ಲಾ, ಖುಷ್ಬೂ ಅವರು ರವಿಚಂದ್ರನ್ ಅವರ ಫೇವರಿಟ್ ಹಾರೋಯಿನ್ ಹಾಗೆ ಯಾವಾಗಲೂ ಕೂಡಾ ಅಭಿಮಾನದಿಂದ ನೆನೆಯುತ್ತಲೇ ಇರುತ್ತಾರೆ. ಯಾವಾಗ ಬೆಂಗಳೂರಿಗೆ ಬಂದರೂ ಸಹ ಕಾಲ್ ಮಾಡಿ ಒಮ್ಮೆಯಾದರೂ ಭೇಟಿ ಮಾಡಿಯೇ ಹೋಗೋದು ಅಂತ ಹೇಳ್ತಾರೆ ರವಿಚಂದ್ರನ್. ನೇರ ನಡೆ ನುಡಿ ಹೊಂದಿರುವ ಕ್ರೇಜಿ ಸ್ಟಾರ್ ವಿ ರವುಚಂದ್ರನ್ ಅವರು ಸ್ವಲ್ಪವೂ ಅಂಜಿಕೆ ಅಳುಕು ಇಲ್ಲದೇ ತಮ್ಮ ಫೇವರಿಟ್ ಹೀರೋಯಿನ್ ಗಳ ಬಗ್ಗೆ ಮನಬಿಚ್ಚಿ ಹೇಳಿದ ಮಾತುಗಳು ಇವು.

Leave a Reply

Your email address will not be published. Required fields are marked *

error: Content is protected !!