ಹೊಸದಾಗಿ ರೇಷನ್ ಕಾರ್ಡ್ ಪಡೆಯಬೇಕು ಅನ್ನೋರಿಗಾಗಿ ಈ ಮಾಹಿತಿ

News
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ನಾವಿಂದು ನಿಮಗೆ ತಿಳಿಸುವ ವಿಷಯ ಬಿಪಿಎಲ್ ಪಡಿತರ ಚೀಟಿಯನ್ನು ಪಡೆಯುವುದಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ನೀವಿನ್ನೂ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿಲ್ಲದಿದ್ದರೆ ಅದನ್ನು ಯಾವ ರೀತಿಯಾಗಿ ಮಾಡಿಸಿಕೊಳ್ಳಬೇಕು ಅರ್ಜಿ ಸಲ್ಲಿಸುವುದು ಹೇಗೆ ಬಿಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದಕ್ಕೆ ಯಾವೆಲ್ಲವೆಲ್ಲ ದಾಖಲೆಗಳು ಬೇಕಾಗುತ್ತವೆ ಜೊತೆಗೆ ಯಾರು ಬಿಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಳ್ಳುವುದಕ್ಕೆ ಅರ್ಹರಾಗಿರುತ್ತಾರೆ ಎನ್ನುವ ಕುರಿತಾದ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಪಡಿತರ ಚೀಟಿಯನ್ನು ಪಡೆಯುವುದಕ್ಕೆ ಅರ್ಜಿ ಸಲ್ಲಿಸುವ ಪ್ರಾರಂಭದಲ್ಲಿ ನೀವು ಪಡಿತರ ಚೀಟಿಗೆ ಸಂಬಂಧಿಸಿದಂತೆ ಅಫಿಶಿಯಲ್ ವೆಬ್ ಸೈಟ್ ಅನ್ನು ತೆರೆಯಬೇಕು. ಅಲ್ಲಿ ನಿಮಗೆ ಇ ಸೇವೆಗಳು ಎನ್ನುವ ಆಯ್ಕೆ ಕಂಡುಬರುತ್ತದೆ ನೀವು ಅದರ ಮೇಲೆ ಕ್ಲಿಕ್ ಮಾಡಬೇಕು ಅದರ ಮೇಲೆ ಕ್ಲಿಕ್ ಮಾಡಿದಾಗ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ ಅಲ್ಲಿ ಒಂದಿಷ್ಟು ಆಯ್ಕೆಗಳು ಇರುತ್ತವೆ ಅದರಲ್ಲಿ ಇ ಪಡಿತರ ಚೀಟಿ ಎನ್ನುವುದು ಕಾಣಿಸುತ್ತದೆ

ಅದರ ಮೇಲೆ ಕ್ಲಿಕ್ ಮಾಡಿದಾಗ ಹೊಸ ಪಡಿತರ ಚೀಟಿ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ನಿವ್ ಆನ್ಲೈನ್ ಅಪ್ಲಿಕೇಶನ್ ಫಾರ್ ರೇಷನ್ ಕಾರ್ಡ್ ಎನ್ನುವುದು ಕಾಣಿಸುತ್ತದೆ. ನೀವು ಆನ್ಲೈನಲ್ಲಿ ಅರ್ಜಿ ಸಲ್ಲಿಸುವುದಕ್ಕೆ ನಿಮ್ಮ ಬಳಿ ಸೆಕ್ಯೂಜೆನ್ ಬೈಯೋಮೆಟ್ರಿಕ್ ಇರಬೇಕು ಜೊತೆಗೆ ಆರ್ ಡಿ ಸರ್ವಿಸ್ ಅಪ್ಡೇಟ್ ನಲ್ಲಿ ಒಂದು ಜೀಪ್ ಫೈಲ್ ಇರುತ್ತದೆ ಅದನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ನಂತರ ನೀವು ಯಾವ ಭಾಷೆಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಇಚ್ಛೆಪಡುತ್ತಿರಿ ಆ ಭಾಷೆಯನ್ನು ಆಯ್ದುಕೊಳ್ಳಬೇಕು. ನಂತರ ಅಲ್ಲಿ ಹೊಸ ಪಡಿತರ ಚೀಟಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಅದು ನೀಲಿ ಬಣ್ಣದಲ್ಲಿ ಕಾಣಿಸಿದರೆ ಅದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಅರ್ಥ. ಅದರ ಮೇಲೆ ಕ್ಲಿಕ್ ಮಾಡಿದಾಗ ಯಾವ ರೀತಿಯ ಪಡಿತರ ಚೀಟಿ ಬೇಕು ಎನ್ನುವ ಕೆಲವು ಆಯ್ಕೆಗಳು ಕಾಣಿಸುತ್ತವೆ.

ಅಲ್ಲಿ ಆದ್ಯತಾ ಕುಟುಂಬ ಮತ್ತು ಆದ್ಯೇತರ ಕುಟುಂಬ ಎನ್ನುವುದು ಕಾಣಿಸುತ್ತದೆ. ಅಲ್ಲಿ ಆದ್ಯತಾ ಕುಟುಂಬ ಎಂದರೆ ಬಿಪಿಎಲ್ ರೇಷನ್ ಕಾರ್ಡ್ ಗೆ ಸಂಬಂಧಿಸಿರುತ್ತದೆ ಅದನ್ನ ಆಯ್ದುಕೊಳ್ಳಬೇಕು. ಇನ್ನೂ ಯಾರೆಲ್ಲ ಈ ಒಂದು ಪಡಿತರ ಚೀಟಿಯನ್ನು ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಯಾರು ಸಲ್ಲಿಸಲು ಬರುವುದಿಲ್ಲ ಎನ್ನುವುದನ್ನು ತಿಳಿದುಕೊಳ್ಳೋಣ.

ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಕಾಯಂ ನೌಕರರು ಅಂದರೆ ಸರ್ಕಾರದಿಂದ ಅಥವಾ ಸರ್ಕಾರದ ಅನುದಾನದ ಪಡೆದುಕೊಂಡು ನಡೆಸುತ್ತಿರುವ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕುಟುಂಬದವರು ಬಿಪಿಎಲ್ ಕಾರ್ಡ್ ಅನ್ನು ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಬರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್ ಗಿಂತ ಅಧಿಕ ಹೊಲ ಭೂಮಿ ಇದ್ದರೆ ಅಂತಹ ಕುಟುಂಬದವರು ಬಿಪಿಎಲ್ ಕಾರ್ಡ್ ಅನ್ನು ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಬರುವುದಿಲ್ಲ.

ನಗರ ಪ್ರದೇಶದಲ್ಲಿ ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣವುಳ್ಳ ಮನೆಯನ್ನು ಹೊಂದಿರುವ ಕುಟುಂಬದವರಿಗೂ ಸಹ ಬಿಪಿಎಲ್ ಪಡಿತರ ಚೀಟಿಯನ್ನು ಪಡೆಯುವುದಕ್ಕೆ ಅವಕಾಶವಿರುವುದಿಲ್ಲ. ಜೀವನವನ್ನು ನಡೆಸುವುದಕ್ಕೆ ವಾಣಿಜ್ಯ ಉದ್ದೇಶಕ್ಕಾಗಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿದ್ದರೆ ಅಂತವರು ಅರ್ಜಿ ಸಲ್ಲಿಸುವುದಕ್ಕೆ ಬರುವುದಿಲ್ಲ. ಇನ್ನು ಯಾವ ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳಿಗಿಂತ ಅಧಿಕವಾಗಿರುತ್ತದೆ ಅಂತಹ ಕುಟುಂಬದವರು ಅರ್ಜಿ ಸಲ್ಲಿಸುವುದಕ್ಕೆ ಬರುವುದಿಲ್ಲ.

ಮುಂದಿನ ಪುಟಕ್ಕೆ ಹೋದಾಗ ಅಲ್ಲಿ ಮತ್ತೆ ಹೊಸ ಪಡಿತರ ಚೀಟಿ ಎನ್ನುವುದು ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು ನಂತರ ಎರಡು ಸಾವಿರದ ಹದಿನೈದರಲ್ಲಿ ಅರ್ಜಿ ಸಲ್ಲಿಸಿದರೆ ಅದನ್ನು ಲಿಂಕ್ ಮಾಡಬಹುದೇ ಎಂದು ಕೇಳುತ್ತದೆ ಅಲ್ಲಿ ನೀವು ಎಸ್ ಅಥವಾ ನೊ ಎಂದು ಆಯ್ಕೆ ಮಾಡಿಕೊಳ್ಳಬಹುದು.

ನಂತರ ನೀವು ನೊ ಎನ್ನುವುದನ್ನು ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಕೇಳುತ್ತದೆ ಮತ್ತೆ ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ನಂಬರನ್ನು ಕೇಳುತ್ತದೆ ಅದನ್ನು ನಮೂದಿಸಿ ಮುಂದೆ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ನಿಮಗೆ ಅರ್ಜಿ ಕಾಣಿಸುತ್ತದೆ ಅಲ್ಲಿ ಕೇಳುವ ಮಾಹಿತಿಗಳನ್ನು ಸಂಪೂರ್ಣವಾಗಿ ತುಂಬಬೇಕು. ಇನ್ನೂ ಅರ್ಜಿಯನ್ನು ಸಲ್ಲಿಸುವುದಕ್ಕೆ ಕೆಲವೊಂದು ದಾಖಲಾತಿಗಳು ಕಡ್ಡಾಯವಾಗಿ ಬೇಕಾಗುತ್ತದೆ ದಾಖಲೆಗಳು ಯಾವುವು ಎಂಬುದನ್ನು ತಿಳಿಸಿಕೊಡುತ್ತೇವೆ.

ನಿಮ್ಮ ಪಾಸ್ಪೋರ್ಟ್ ಸೈಜ್ ಅಳತೆಯ ಫೋಟೋ ಅಡ್ರೆಸ್ ಪ್ರೂಫ್ ಗುರುತಿನ ಚೀಟಿ ಮತ್ತು ನಿಮ್ಮ ವಯಸ್ಸನ್ನು ಗುರುತಿಸುವುದಕ್ಕೆ ಒಂದು ದಾಖಲಾತಿ ನಿಮ್ಮ ಇನ್ಕಮ್ ಸರ್ಟಿಫಿಕೇಟ್ ಜೊತೆಗೆ ನಿಮ್ಮ ವಾರ್ಡ್ ಕೌನ್ಸಿಲರ್ ಕಡೆಯಿಂದ ಒಂದು ಪ್ರಮಾಣ ಪತ್ರ ಬೇಕಾಗುತ್ತದೆ. ಒಂದು ವೇಳೆ ನೀವು ಬಾಡಿಗೆ ಮನೆಯಲ್ಲಿ ಇದ್ದರೆ ಬಾಡಿಗೆ ಒಪ್ಪಂದ ಮಾಡಿಕೊಂಡಿರುವ ಪ್ರಮಾಣಪತ್ರ ಬೇಕಾಗುತ್ತದೆ.

ಇಷ್ಟು ದಾಖಲೆಗಳನ್ನು ತೆಗೆದುಕೊಂಡು ನೀವು ನಿಮ್ಮ ಹತ್ತಿರದ ಸಿ ಎಸ್ ಸಿ ಸೆಂಟರ್ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು. ಈ ರೀತಿಯಾಗಿ ಹೊಸ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿಯನ್ನು ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಇದು ಯಾವಾಗ ಬೇಕಾದರೂ ಬಂದಾಗಬಹುದು

ನಿಮ್ಮ ಹತ್ತಿರ ಪಡಿತರ ಚೀಟಿ ಇಲ್ಲ ಎಂದರೆ ಈ ಮೇಲಿನ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಸಿ ಎಸ್ ಸಿ ಸೆಂಟರ್ ಮೂಲಕವಾಗಿ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೆ ತಿಳಿಸಿರಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *