ನಮಗೆ ನೀಡುವ ಅಕ್ಕಿ ಬರೀ ಕಲ್ಲು, ಮಣ್ಣು, ಹುಳುಗಳಿಂದಲೇ ಕೂಡಿರುತ್ತವೆ ಎಂದು ಆರೋಪ ಮಾಡುತ್ತಿದ್ದ ಎಪಿಎಲ್‌ ಮತ್ತು ಬಿಪಿಎಲ್‌ ಪಡಿತರ ಕಾರ್ಡುದಾರರಿಗೆ ಸರ್ಕಾರದಿಂದ ಸಂತಸದ ಸುದ್ದಿ ನೀಡಿದೆ. ಏಪ್ರಿಲ್ 18ರಂದು ಈ ಸುದ್ಧಿ ನೀಡಿದ ಸರ್ಕಾರ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಸೋನಾ ಮಸೂರಿ ಅಕ್ಕಿಯನ್ನು ಗ್ರಾಹಕರಿಗೆ ವಿತರಿಸಲು ರಾಜ್ಯ ಸರ್ಕಾರ ಅಲ್ಲಿನ ಬತ್ತ ಖರೀದಿಸಲು ಮುಂದಾಗಿದೆ. ಈ ಮೂಲಕ ಇದರೊಂದಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಗ್ರಾಹಕರಿಗೆ ಸೋನಾ ಮಸೂರಿ ಅಕ್ಕಿ ವಿತರಿಸುವ ಪ್ರಪ್ರಥಮ ರಾಜ್ಯವಾಗಿ ನಮ್ಮ ರಾಜ್ಯ ಹೊರಹೊಮ್ಮಲಿದೆ ಎಂದು ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಶನಿವಾರ ಮಾಹಿತಿ ನೀಡಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಈ ಸೋನಾಮಸೂರಿ ಅಕ್ಕಿಯನ್ನು ಬೆಳೆಯಲಾಗುತ್ತದೆ. ನಂತರ ನ್ಯಾಯಬೆಲೆ ಅಂಗಡಿಗಳ ಮುಖಾಂತರ ಅಕ್ಕಿಯನ್ನು ರೇಶನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ನೀಡಲಾಗುವುದು. ಪ್ರಸ್ತುತ ನಮ್ಮ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ನೀಡುತ್ತಿರುವ ಅಕ್ಕಿ ನಮ್ಮ ರಾಜ್ಯದಲ್ಲಿ ಬೆಳೆದ ಅಕ್ಕಿ ಅಲ್ಲಾ ಹೊರ ರಾಜ್ಯದಿಂದ ಆಮದು ಮಾಡಿಕೊಂಡು ಅಕ್ಕಿ ವಿತರಣೆ ಮಾಡಲಾಗುತ್ತಿತ್ತು. ಪ್ರತೀ ಒಂದು ಕೇಜಿ ಅಕ್ಕಿ ಇಪ್ಪತ್ತೆಂಟು ರೂಪಾಯಿಯಂತೆ ಹಣ ನೀಡಿ ಚತ್ತಿಸ್‌ಗಡ ರಾಜ್ಯದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಇದನ್ನೇ ನ್ಯಾಯಬೆಲೆ ಅಂಗಡಿಗಳ ಮೂಲಕ ಗ್ರಾಹಕರಿಗೆ ಹಂಚಲಾಗುತ್ತಿತ್ತು. ಆದರೆ ಚತ್ತಿಸ್‌ಗಡದಿಂದ ನಮ್ಮ ರಾಜ್ಯಕ್ಕೆ ಅಕ್ಕಿ ತರಬೇಕಾದರೆ ಸಾರಿಗೆ ವೆಚ್ಚ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಚತ್ತಿಸ್‌ಗಡ ರಾಜ್ಯದಿಂದ ಅಕ್ಕಿ ತರಿಸುವ ಬದಲು ನಮ್ಮ ರಾಜ್ಯದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ 10 ಲಕ್ಷ ಎಕರೆ ಪ್ರದೇಶದಲ್ಲಿ ಹಾಗೂ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬೆಳೆದ ಸೋನಾ ಮಸೂರಿ ಅಕ್ಕಿಯನ್ನು ಸರ್ಕಾರವೇ ನೇರವಾಗಿ ರೈತರಿಂದ ಖರೀದಿಸಿ ಅದನ್ನು ನ್ಯಾಯಬೆಲೆ ಅಂಗಡಿ ಮೂಲಕ ಎಪಿಎಲ್‌ ಹಾಗೂ ಬಿಪಿಎಲ್‌ ಕಾರ್ಡ್ ಹೊಂದಿರುವ ಜನರಿಗೆ ನೀಡುವಂತೆ ಸಲಹೆ ನೀಡಲಾಗಿದೆ.

ಇದರಿಂದ ಹೀಗೇ ಮಾಡುವುದರಿದ ನಮ್ಮ ರಾಜ್ಯದ ರೈತರ ಆರ್ಥಿಕ ಪರಿಸ್ಥಿತಿ ಕೂಡಾ ಸರಿ ಹೋಗುತ್ತದೆ. ಅಚ್ಚುಕಟ್ಟು ಪ್ರದೇಶ ಹಾಗೂ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬತ್ತ ಬೆಳೆದ ರೈತರಿಗೆ ಉತ್ತಮ ಬೆಲೆ ಸಿಗಲಿದ್ದು ಈ ಮೂಲಕ ಕೃಷಿ ಕಾರ್ಮಿಕರಿಗೂ ನೆರವಾಗಲಿದೆ. ಅಲ್ಲದೇ ಮುಚ್ಚಿ ಹೋದ ಅನೇಕ ಅಕ್ಕಿ ಗಿರಣಿಗಳು ಸಹ ಪುನಶ್ಚೇತನಗೊಂಡು ಉದ್ಯೊಗ ಅವಕಾಶಗಳು ಸೃಷ್ಟಿಯಾಗಲಿದೆ. ಇದರಿಂದ ರಾಜ್ಯದ ಅರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದು ಮುಖ್ಯಮಂತ್ರಿ ಅವರಿಗೆ ಬರೆದ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಒಂದು ಉನ್ನತಮಟ್ಟದ ಸಭೆ ಕರೆದು ಈ ವಿಷಯ ಚರ್ಚಿಸಿ ರೈತರಿಂದ ಸೋನಾ ಮಸೂರಿ ಅಕ್ಕಿ ಖರೀದಿಸಲು ತೀರ್ಮಾನಿಸಿದ್ದಾರೆ. ಸರ್ಕಾರವು 75 ಕೆಜಿ ಸೋನಾ ಮಸೂರಿ ಬತ್ತದ ಚೀಲಕ್ಕೆ 1401 ನಿಗದಿ ಮಾಡಿದ್ದು ಈ ಬಾರಿ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರಯಲಿದ್ದು ರೈತರು ಅತಂಕಪಡುವ ಅಗತ್ಯವಿಲ್ಲ. ಸದ್ಯಕ್ಕೆ ಸರ್ಕಾರ ರೈತರಿಂದ 10 ಲಕ್ಷ ಟನ್‌ ಸೋನಾ ಮಸೂರಿ ಅಕ್ಕಿ ಖರೀದಿ ಮಾಡಲಿದೆ. ಬತ್ತ ಮಾರಾಟ ಮಾಡಲು ರೈತರು ಮೇ. 5ರೊಳಗೆ ಸಹಕಾರಿ ಸಂಘಕ್ಕೆ ತೆರಳಿ ತಮ್ಮ ಹೆಸರು ನೋಂದಾವಣೆ ಮಾಡಿಸಿಕೊಳ್ಳಬೇಕು. ಜೂನ್‌ 30ರವರಗೆ ಸರ್ಕಾರದಿಂದ ಬತ್ತ ಖರೀದಿ ಪ್ರಕ್ರಿಯೆ ನಡೆಯಲಿದ್ದು ರೈತರು ಇದರ ಲಾಭ ಪಡೆಯಬೇಕು ಎಂದು ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *