ಶರ್ಟ್ ಬಿಚ್ಚಿ ಆಸ್ಪತ್ರೆಯಲ್ಲಿ ಈ ವೈದ್ಯ ಮಾಡಿದ್ದೇನು? ಅರೋಗ್ಯ ಸಚಿವರೇ ಇತ್ತ ಗಮನ ಹರಸಿ

0 0

ಕಳೆದ ಒಂದೂವರೆ ತಿಂಗಳಿಂದ ಕೊರೋನಾ ಸೋಂಕಿತರಾರೂ ಇರದೆ, ಒಂದು ರೀತಿಯ ‘ಸೇಫ್‌ ಝೋನ್‌’ನಲ್ಲಿದ್ದ ಯಾದಗಿರಿ ಜಿಲ್ಲೆಯ ಜನರಿಗೆ ಮಂಗಳವಾರದ ವಿದ್ಯಮಾನ ಆಘಾತ ಮೂಡಿಸಿದೆ. ಗುಜರಾತಿನ ಅಹ್ಮದಾಬಾದಿನಿಂದ ಸುರಪುರ ನಗರಕ್ಕೆ ಆಗಮಿಸಿದ್ದ ದಂಪತಿಗೆ ಕೋವಿಡ್‌-19 ಸೋಂಕು ದೃಢಪಟ್ಟ ಸುದ್ದಿ ಬೆಚ್ಚಿ ಬೀಳಿಸಿದೆ. ದಂಪತಿಯ ಪುತ್ರ ಹಾಗೂ ಕಾರ್‌ ಚಾಲಕನ ವರದಿ ನೆಗೆಟಿವ್‌ ಬಂದು ಸಮಾಧಾನ ಮೂಡಿಸಿದೆ.

ವಲಸಿಗರ ಆಗಮನದಿಂದ ಮುಂಜಾಗ್ರತಾ ಕ್ರಮವಾಗಿ, ಸೊಮವಾರ ಮಧ್ಯರಾತ್ರಿಯಿಂದಲೇ 24 ಗಂಟೆಗಳ ಕಾಲದ ಸಂಫೂರ್ಣ ನಿಷೇಧಾಜ್ಞೆ ಜಾರಿ ಮಾಡಲಾಗುತ್ತದೆ ಎಂದು ಮಧ್ಯರಾತ್ರಿಯೇ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಮಂಗಳವಾರ ಬೆಳ್ಳಬೆಳಿಗ್ಗೆ ಎಂದಿನಂತೆ ಜನ ಹೊರಗೆ ಬಂದಾಗ ಸೋಂಕಿನ ವಾಸನೆ ಬಡಿದಿದ್ದು, ಮಧ್ಯಾಹ್ನದ ಹೊತ್ತಿಗೆ ಅದು ಖಚಿತವಾಗಿದೆ. ನಮ್ಮ ಜಿಲ್ಲೆಯಲ್ಲೂ ಪಾಸಿಟಿವ ಬಂತೆನ್ನೋ ಕಾರಣಕ್ಕೆಂಬಂತೆ, ಗಲ್ಲಿ ಗಲ್ಲಿಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಜನ ಸಾಮಾಜಿಕ ಅಂತರ, ಮಾಸ್ಕ್‌ ಮುಂತಾದವುಗಳತ್ತ ಗಮನ ಹರಿಸಿದ್ದಾರೆ. ಲಾಕ್‌ ಡೌನ್‌ ಸಡಿಲಿಕೆ ನಂತರ ಇದು ಬಹುತೇಕ ಮಾಯವಾಗಿತ್ತು.

ಯಾದಗಿರಿಯಲ್ಲಿ ಹೊಸ ಜಿಲ್ಲಾಸ್ಪತ್ರೆ ಯನ್ನು ಕೋವಿಡ್ ಸೆಂಟರ್ ಆಗಿ ಮಾಡಿದ್ದಾರೆ ಅಲ್ಲಿ ಒಬ್ಬ ವೈದ್ಯಾಧಿಕಾರಿ ರೋಗಿಯ ಬಳಿ ಈ ರೀತಿ ನಡೆದುಕೊಂಡಿದ್ದಾನೆ. ಕೋವಿಡ್ ಸೆಂಟರ್ನಲ್ಲಿ ಮಾಸ್ಕ್ ಹಾಗೂ ಪಿಪಿ ಕಿಟ್ಟಿಲ್ಲದೆ ರಾತ್ರಿಯ ವೇಳೆ ಕೋವಿಡ್ ಪೇಷಂಟ್ ಬಂದಿದ್ದಾಗ ಅವರಿಗೆ ಶರ್ಟ್ ಬಿಚ್ಚಿ ಯಾವುದೇ ಕ್ರಮವನ್ನು ನೋಯಿಸಿದೆ ಮಾಡಲು ಮುಂದಾಗಿದ್ದಾರೆ. ಯಾವುದೇ ನಿಯಮವನ್ನು ಪಾಲನೆ ಮಾಡದೆ ರೀತಿ ವರ್ತಿಸಿದ ವೈದ್ಯಾಧಿಕಾರಿಯ ವಿರುದ್ಧ ಸೋಂಕಿತರ ಸಂಬಂಧಿಗಳು ದೂರು ದಾಖಲಿಸಿದ್ದಾರೆ. ಇಲ್ಲಿ ಸರ್ಕಾರವನ್ನು ದೂರಬೇಕು ವೈದ್ಯಾಧಿಕಾರಿಯನ್ನು ದೂರಬೇಕೊ ತಿಳಿದಿಲ್ಲ.

Leave A Reply

Your email address will not be published.