ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಇಲಾಖೆ ಮೂಲಕವೇ ಇ- ಕೆವೈಸಿ ಪದ್ಧತಿಯನ್ನು ದಾಖಲು ಮಾಡಲಾಗುತ್ತದೆ ಹಾಗಾಗಿ ಕುಟುಂಬ ಸದಸ್ಯರು ಪ್ರತ್ಯೇಕವಾಗಿ ಆಹಾರ ಇಲಾಖೆಗೆ ಭೇಟಿ ನೀಡಬೇಕಿಲ್ಲ ಕೆವೈಸಿ ಮಾಡಲು ಕುಟುಂಬದ ಪ್ರತಿಯೊಂದು ಸದಸ್ಯರು ಹಾಜ ರಾಗಬೇಕು ಹಾಗೂ ಆಧಾರ್‌ ಬೆರಳಚ್ಚು ಬಯೋಮೆಟ್ರಿಕ್‌ಅಪ್‌ಡೇಟ್‌ ಆಗಿರಬೇಕು ಆಧಾರ್‌ ಅಪ್‌ಡೇಟ್‌ ಆಗದಿದ್ದರೆ ಪಡಿತರ ಚೀಟಿಯಲ್ಲಿ ಇ-ಕೆವೈಸಿ ಮಾಡಲು ಆಗುವುದಿಲ್ಲ.ನಾವು ಈ ಲೇಖನದ ಮೂಲಕ ರೇಷನ್ ಕಾರ್ಡ್ ಅಲ್ಲಿ ಈ ಕೆ ವೈಸಿ ಯ ಬಗ್ಗೆ ತಿಳಿದುಕೊಳ್ಳೋಣ.

ಮೊದಲು ಆಹಾರ.ಕೇಆರ್.ಎನ್ ಐ ಸಿ .ಈ ವೆಬ್ ಸೈಟ್ ಗೆ ಕ್ಲಿಕ್ ಮಾಡಿದಾಗ ಹೊಸ ವಿಂಡೋ ಓಪನ್ ಆಗುತ್ತದೆ ಅಲ್ಲಿ ಇ ಸೇವೆಗಳು ಎಂಬ ಆಪ್ಷನ್ ಇರುತ್ತದೆ ಅಲ್ಲಿ ಕ್ಲಿಕ್ ಮಾಡಿದಾಗ ಈಅಲ್ಲಿ ಸೆಕೆಂಡ್ ಆಪ್ಷನ್ ಈ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿದಾಗ ಅಲ್ಲಿ ಯು ಐ ಡಿ ಲಿಂಕ್ ಅನ್ನು ಕ್ಲಿಕ ಮಾಡಿದಾಗ ಹೊಸ ವಿಂಡೋ ಓಪನ್ ಆಗುತ್ತದೆ ಅಲ್ಲಿ ಜಿಲ್ಲೆಗಳ ಬಗ್ಗೆ ಕಾಣಿಸುತ್ತದೆ ಅಲ್ಲಿ ಮೂರು ಕ್ಯಾಟಗೆರಿ ಆಗಿ ಜಿಲ್ಲೆಗಳ ವಿಂಗಡಣೆ ಕಾಣಿಸುತ್ತದೆ

ಅಲ್ಲಿ ಸರಿಯಾಗಿ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಸರಿಯಾಗಿ ನಮೂದಿಸಿ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ ಕ್ಲಿಕ್ ಮಾಡಿದಾಗ ಹೊಸ ವಿಂಡೋ ಓಪನ್ ಆಗುತ್ತದೆ ಅಲ್ಲಿ ಪಡಿತರ ಚೀಟಿ ವಿವರದ ಮೇಲೆ ಕ್ಲಿಕ್ ಮಾಡಿದಾಗ ವಿತ್ ಒ ಟಿ ಪಿ ಮೇಲೆ ಕ್ಲಿಕ್ ಮಾಡಬೇಕು ರೇಷನ್ ಕಾರ್ಡ್ ನಂಬರ್ ಅನ್ನು ಟೈಪ್ ಮಾಡಿ ಗೋ ಅನ್ನು ಬಟನ್ ಮೇಲೆ ಕ್ಲಿಕ್ ಮಾಡಬೇಕು ನಂತರ ರೇಷನ್ ಕಾರ್ಡ್ ನಂಬರ್ ಬರುತ್ತದೆ ಅದನ್ನು ಕಾಪಿ ಮಾಡಿ ಓಕೆ ಅಂತ ಕ್ಲಿಕ್ ಮಾಡಬೇಕು

ಹಾಗೂ ರೇಷನ್ ಕಾರ್ಡ್ ನಂಬರ್ ಅನ್ನು ಪೇಸ್ಟ್ ಮಾಡಿದಾಗಕುಟುಂಬದ ಸದಸ್ಯರ ಹೆಸರು ಕಾಣಿಸುತ್ತದೆ ಅಲ್ಲಿ ಒಬ್ಬರ ಹೆಸರನ್ನು ಸೆಲೆಕ್ಟ್ ಮಾಡಿ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರೋ ನಂಬರ್ಗೆ ಓ ಟಿ ಪಿ ಬರುತ್ತದೆ ಆ ಓ ಟಿ ಪಿಯನ್ನ ಟೈಪ್ ಮಾಡಿ ಗೋ ಅಂತ ಕ್ಲಿಕ್ ಮಾಡಬೇಕು ಆಗ ರೇಷನ್ ಕಾರ್ಡ್ ಡೀಟೇಲ್ಸ್ ಓಪನ್ ಆಗುತ್ತದೆ ಅಲ್ಲಿ ಮೆಂಬರ್ ಗಳ ಬಗ್ಗೆ ಕಾಣಿಸುತ್ತದೆ

ಅಲ್ಲಿ ಕೆ ವೈ ಸಿಯಲ್ಲಿ ಯೆಸ್ ಎಂದು ಬಂದರೆ ಅಪ್ಡೇಟ್ ಆಗಿದೆ ಅಂತ ನೋ ಅಂದ್ರೆ ಅಪ್ಡೇಟ್ ಆಗಿಲ್ಲ ಅಂತ ಅರ್ಥ ಹಾಗೆ ವೀವ್ ರೇಷನ್ ಕಾರ್ಡ್ ಡೀಟೇಲ್ಸ್ ಅಲ್ಲಿ ಕ್ಲಿಕ್ ಮಾಡಿದಾಗ ಅಲ್ಲಿ ಪಡಿತರ ಚೀಟಿ ಯ ವಿವರ ಓಪನ್ ಆಗುತ್ತದೆಹೀಗೆ ಸರಿ ಪಡಿಸಿಕೊಂಡು ಪಡಿತರ ಚೀಟಿಯ ಮೂಲಕ ಆಹಾರವನ್ನು ಪಡೆಯಬಹುದು

ಹೊಸದಾಗಿ ಅಂಚೆ ಮೂಲಕ ಪಡಿತರ ಚೀಟಿ ಪಡೆದವರು ಹಾಗೂ ಈಗಾಗಲೇ ಇ-ಕೆವೈಸಿ ಆಗಿರುವ ಕಾರ್ಡುದಾರರು ಮತ್ತೂಮ್ಮೆ ಇ-ಕೆವೈಸಿ ಮಾಡುವ ಅಗತ್ಯ ಇರುವುದಿಲ್ಲ ಸಂಪೂರ್ಣ ಇ-ಕೆವೈಸಿ ಆಗಿದೆಯೇ-ಇಲ್ಲವೇ ತಿಳಿಯಲು ಆಹಾರ ಇಲಾಖೆಯ ವೆಬ್‌ಸೈಟ್‌ನಲ್ಲಿ ಪಡಿತರ ಚೀಟಿ ಸಂಖ್ಯೆ ದಾಖಲಿಸಿ ಮಾಹಿತಿ ಪಡೆದು ಕೊಳ್ಳಬಹುದು

ಕೆವೈಸಿ ಮಾಡಿದ ಬಳಿಕ ಪಡಿತರ ಚೀಟಿಯಲ್ಲಿನ ಹಳೆಯ ಫೋಟೋ ಆಧಾರ್‌ ಕಾರ್ಡ್‌ನಲ್ಲಿರುವ ಫೋಟೋಗೆ ಬದಲಾಗುವುದು ಹಾಗೂ ಪಡಿತರ ಚೀಟಿಯ ಮುಖ್ಯಸ್ಥ ಪುರುಷರಾಗಿದ್ದಲ್ಲಿ ಇ-ಕೆವೈಸಿ ಮಾಡಿದ ಬಳಿಕ ಮಹಿಳೆಗೆ ವರ್ಗಾವಣೆಗೊಳ್ಳುತ್ತದೆ ಮಹಿಳೆ ಇಲ್ಲದ ಪಡಿತರ ಚೀಟಿಗೆ ಮಾತ್ರ ಪುರುಷ ಮುಖ್ಯಸ್ಥನಾಗಿರುತ್ತಾನೆ.

Leave a Reply

Your email address will not be published. Required fields are marked *