ರೇಷನ್ ಕಾರ್ಡ್ ಮಾಡಿಸುವವರೇ ಇಲ್ಲಿ ಗಮನಿಸಿ, ಸರ್ಕಾರದಿಂದ ಹೊಸ ನಿಯಮ ಈ ಕೆಲಸ ಮಾಡಿಲ್ಲ ಅಂದ್ರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆ

0 4,536

Ration Card eKYC: ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಪ್ರತಿ ರಾಜ್ಯಕ್ಕೆ ಇಂತಿಷ್ಟು ರೇಷನ್ ಕಾರ್ಡ್ ಗಳನ್ನು ಕೊಡಲೇಬೇಕು ಎಂದು ನಿಗದಿ ಮಾಡಲಾಗಿರುತ್ತದೆ. ಅದೇ ರೀತಿಯಲ್ಲಿ ಕೇಂದ್ರ ಸರ್ಕಾರ ನಿಗದಿ ಮಾಡಿರುವಷ್ಟು ಬಿಪಿಎಲ್ ಮತ್ತು ಎಪಿಎಲ್ ರೇಷನ್ ಕಾರ್ಡ್ ಗಳನ್ನು ನಮ್ಮ ರಾಜ್ಯದಲ್ಲಿ ಈಗಾಗಲೇ ನಿಗದಿ ಮಾಡಲಾಗಿದೆ. ಆದರೆ ಈಗ ನಮ್ಮ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಗಳಿಗೆ ಭಾರಿ ಬೇಡಿಕೆ ಇದೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಬೇಕು ಎಂದರೆ ಬಿಪಿಎಲ್ ಕಾರ್ಡ್ ಇರಲೇಬೇಕು.

ಹಾಗಾಗಿ ಹೆಚ್ಚಿನ ಜನರು ರೇಶನ್ ಕಾರ್ಡ್ ಪಡೆಯಬೇಕು ಎಂದು ಬಯಸುತ್ತಿದ್ದಾರೆ. ಹಾಗಾಗಿ ಈ ಹಿಂದೆ ಎರಡೂವರೆ ವರ್ಷಗಳ ಹಿಂದೆಯೇ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರನ್ನು ಪರಿಶೀಲಿಸಿ ರೇಷನ್ ಕಾರ್ಡ್ ನೀಡುವುದಕ್ಕೆ ನಿರ್ಧಾರ ಮಾಡಿದೆ. ರೇಷನ್ ಕಾರ್ಡ್ ಇದ್ದರೆ ಉಚಿತವಾಗಿ ರೇಶನ್ ಪಡೆಯುವುದು ಮಾತ್ರವಲ್ಲ, ಇನ್ನು ಹಲವು ಯೋಜನೆಗಳನ್ನು ಪಡೆಯಬಹುದು. ಆದರೆ ರೇಷನ್ ಕಾರ್ಡ್ ಇಂದ ಹೆಚ್ಚು ಪ್ರಯೋಜನ ಇರುವುದಕ್ಕೆ ಜನರು ಸರ್ಕಾರಕ್ಕೆ ಮೋಸ ಮಾಡುವುದಕ್ಕೆ ಸಹ ಬಳಸುತ್ತಾರೆ.

ಇದರಿಂದ ಸರ್ಕಾರಕ್ಕೆ ತೊಂದರೆ ಆಗುವುದರಿಂದ ಸರ್ಕಾರ ಮೊದಲಿಗೆ ಮೋಸ ಮಾಡುತ್ತಿರುವಂಥ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಬೇಕು ಎಂದು ಕೆ.ಹೆಚ್ ಮುನಿಯಪ್ಪ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಒಂದು ಕಾರ್ಯಕ್ರಮದಲ್ಲಿ ಆಹಾರ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಮಾತನಾಡಿ, ಬಿಜೆಪಿ ಸರ್ಕಾರ ಜಾರಿಯಲ್ಲಿದ್ದಾಗ ರೇಷನ್ ಕಾರ್ಡ್ ವಿತರಣೆ ನಿಲ್ಲಿಸಿತ್ತು, ಈಗ ಆಹಾರ ಇಲಾಖೆಯಲ್ಲಿ 2.96 ಲಕ್ಷ ರೇಷನ್ ಕಾರ್ಡ್ ಅಪ್ಲಿಕೇಶನ್ ಇದೆ.

ಅದೆಲ್ಲವನ್ನು ಚೆಕ್ ಮಾಡಿ, ಶೀಘ್ರದಲ್ಲೇ ವಿತರಣೆ ಮಾಡಲಾಗುತ್ತದೆ. ರೇಷನ್ ಕಾರ್ಡ್ ಇಂದ ಮಕ್ಕಳ ಓದು ಹಾಗೂ ಬೇರೆ ಪ್ರಯೋಜನಗಳನ್ನು ಮಾತ್ರ ಪಡೆದು, ರೇಷನ್ ಪಡೆದುಕೊಳ್ಳದೆ ಹೋದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಬಿಪಿಎಲ್ ಕಾರ್ಡ್ ಅನ್ನು ಬಡತನದಲ್ಲಿ ಇರುವವರಿಗೆ ದಿನದ ಆಹಾರಕ್ಕೆ ಸಹಾಯ ಆಗಲಿ ಎಂದು ಕೊಡಲಾಗುತ್ತದೆ. ಅವರಿಗೆ ಅಕ್ಕಿ, ಧಾನ್ಯಗಳನ್ನು ನೀಡಲಾಗುತ್ತದೆ. ಆದರೆ ನಮ್ಮ ರಾಜ್ಯದ 3 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಇದ್ದು 6 ತಿಂಗಳಿನಿಂದ ರೇಷನ್ ಪಡೆದುಕೊಂಡಿಲ್ಲ..

ಅಂಥವರ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ರೇಷನ್ ಕಾರ್ಡ್ ವಿಚಾರದಲ್ಲಿ ಮೋಸ ಆಗಬಾರದು ಎಂದರೆ ekyc ಮಾಡಿಸುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ekyc ಮಾಡಿಸಿಲ್ಲ ಎಂದರೆ ಅಂಥವರ ರೇಷನ್ ಕಾರ್ಡ್ ಕೂಡ ರದ್ದಾಗುತ್ತದೆ. ಇದಿಷ್ಟು ಸರ್ಕಾರದ ಹೊಸ ನಿಯಮಗಳಿದ್ದು, ಇದನ್ನೆಲ್ಲಾ ಜನರು ಪಾಲಿಸಲೇಬೇಕು. ಇಲ್ಲದೆ ಹೋದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ.

Leave A Reply

Your email address will not be published.