ರತನ್ ಟಾಟಾ ಹೆಸರು ಯಾರು ಕೇಳಿಲ್ಲ ಹೇಳಿ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಟಾಟಾ ಅಂದ್ರೆ ರತನ್ ಅವರು ಎಂದು ಗುರುತಿಸುವುದರ ಮಟ್ಟಿಗೆ ಗೊತ್ತು ದೇಶದ ಕೈಗಾರಿಕಾ ಉದ್ಯಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿಕೊಂಡು ಬಂದ ಅಂತಹ ಧೀಮಂತ ವ್ಯಕ್ತಿ. ಇಂದು ಅನೇಕ ಉದ್ಯಮಿಗಳಿಗೆ ಹಾಗೂ ಯುವಕರಿಗೆ ಅವರ ವ್ಯಕ್ತಿತ್ವ ಹಾಗೂ ಸಾಧನೆ ಸ್ಫೂರ್ತಿಯಾಗಿದೆ

ಇವರು ಟಾಟಾ ಉದ್ಯಮಗಳಾದ, ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ ಮುಂತಾದ ಶ್ರೇಷ್ಟ ವಿಭಾಗಗಳಲ್ಲಿ ಹೊಸದಾಗಿ ಅಳವಡಿಸಿದ ಅತ್ಯಾಧುನಿಕ ತಾಂತ್ರಿಕ ಮತ್ತು ಮುಂದಾಲೋಚನೆಯ ಕ್ರಮಗಳಿಂದಾಗಿ ಅವುಗಳ ಮಟ್ಟವನ್ನು ಉನ್ನತ ಶಿಖರಕ್ಕೇರಿಸಿದರು

ಇನ್ನೂ ಇವರು 1937 December 28 ಬ್ರಿಟಿಷರ ಅವಧಿಯಲ್ಲಿ ಬಾಂಬೆಯಲ್ಲಿ ಸೋನು ಮತ್ತು ನೇವಲ್ ಟಾಟಾ ಅವರ ಪುತ್ರನಾಗಿ ಜನಿಸಿದರು ದುರದೃಷ್ಟ ಅವರು ಹತ್ತು ವರ್ಷ ಇದ್ದಾಗ ಅವರ ತಂದೆ ತಾಯಿ ವಿವಾಹ ವಿಚ್ಛೇಧನ ಪಡೆದರು ನಂತರ ತಮ್ಮ ಬಾಲ್ಯದ ದಿನಗಳನ್ನು ನವಜಬಾಯಿ ಟಾಟಾ ಅವರ ಅಜ್ಜಿ ಜೊತೆ ಬೆಳೆದರು ರತನ್ ಅವರ ಮೊದಲ ಭಾಷೆ ಗುಜರಾತಿ ರತನ್ ಅವರು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ 1970 ನಿರ್ವಹಣೆಗೆ ಬಡ್ತಿ ಪಡೆದರು ಹಾಗೂ1991 ಟಾಟಾ ಸನ್ಸ್ ಇಂದ ಜೆ ರ್ ಡಿ ಟಾಟಾ ಅವರು ಸ್ವತಃ ನಿವೃತ್ತಿ ಘೋಷಿಸಿ ರತನ್ ಅವರನ್ನು ಉತ್ತರಾಧಿಕಾರಿ ಆಗಿ ನೇಮಕ ಮಾಡಿದರು ಇದರಿಂದ ಹಲವಾರು ಕಂಪನಿ ವಿರೋಧ ನಡುವೆಯೂ ತನ್ನ ಕಂಪನಿಯನ್ನು ಮುನ್ನಡೆ ಸಾಗಿಸಿದರು

ಸತತ 21 ವರ್ಷಗಳ ಕಾಲ ಟಾಟಾ ಕಂಪನಿ ಮುನ್ನಡೆಸಿ 50 ಪಟ್ಟು ಲಾಭ ಹೆಚ್ಚಿಸಿದ ಹೆಗ್ಗಳಿಕೆ ಪಾತ್ರರಾದರು ಇನ್ನೂ ಅನೇಕ ಸಾಮಾಜಿಕ ಕಳಕಳಿ ಇದ್ದು ಅನೇಕ ಯುವಕರಿಗೆ ಉದ್ಯೋಗ ಕಲ್ಪಿಸಿದ್ದಾರೆ ಹಾಗೂ ಕೋರೋನ ಕಾಲದಲ್ಲಿ ತಮ್ಮ ಕೈಲಾದ ಸಹಾಯವನ್ನು ಮಾಡಿದಾರೆ ಇಷ್ಟೆಲ್ಲಾ ಮುಂಚೂಣಿಯಲ್ಲಿ ಇರುವ ರತನ್ ಟಾಟಾ ಅವರು ತಮ್ಮ ವೈಯಕ್ತಿಕ ಜೀವನ ಅಲ್ಲಿ ಇಂದಿಗೂ ಒಬ್ಬಂಟಿ . ಟಾಟಾ ಅವರು ಸಂಗಾತಿ ಇಲ್ಲ ಅವರು ಮದುವೆ ಆಗಿಲ್ಲ ನಿಜ ಇಂದಿಗೂ ಒಬ್ಬಂಟಿ ಜೀವನ ಸಾಗಿಸುತ್ತಾ ಸಮಾಜದ ಉದ್ದಾರ ಬಗ್ಗೆ ಯೋಚನೆ ಮಾಡುತ್ತ ಇದ್ದಾರೆ

ಕಾರಣವೆಂದರೆ ಪ್ರೇಮ ವೈಫಲ್ಯ ರತನ್ ಅವರು ಲಾಸ್ ಏಂಜಲೀಸ್ ಅಲ್ಲಿ ವ್ಯಾಸಂಗ ಮಾಡುವ ಸಮಯದಲ್ಲಿ ಒಬ್ಬಳು ಯುವತಿಯ ಮೇಲೆ ಪ್ರೇಮಾಂಕುರ ಆಗಿತ್ತು ಆಕೆಯ ಹೆಸರು ಎಲಿಯ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ ಕೊನೆಗೆ ಮದುವೆ ಆಗಬೇಕು ಎಂಬ ನಿರ್ಧರಕ್ಕೆ ಬಂದಾಗ ಹುಡುಗಿಯ ಮನೆಯವರು ಭಾರತಕ್ಕೆ ಕಳುಹಿಸಲು ಒಪ್ಪೋಲ್ಲ ಆಗ ಚೀನಾ ಹಾಗೂ ಭಾರತ ನಡುವೆ ಯುದ್ದ ನಡೆಯುತ್ತಾ ಇರುತ್ತದೆ ಹಾಗೂ ರತನ್ ಅವರ ಕುಟುಂಬ ಅನಾರೋಗ್ಯ ಪೀಡಿತ ಆಗಿರುತ್ತಾರೆ ಕೊನೆಗೆ ರತನ್ ಒಬ್ಬರೇ ಭಾರತಕ್ಕೆ ಬರುತ್ತಾರೆ ಕಾಲ ಕ್ರಮೇಣ ಪ್ರೀತಿಸಿದ ಹುಡುಗಿ ಬೇರೆ ಹುಡುಗನೊಂದಿಗೆ ವಿವಾಹ ಆಗುತ್ತದೆ ಆದರೆ ರತನ್ ಅವರು ಎಷ್ಟ್ ಹುಡುಗಿಯರು ನೋಡಲು ಬಂದರು ಮದುವೆ ಆಗದೆ ತನ್ನ ಬದ್ಧತೆಗೆ ನಿಂತು ಏಕಾಂಗಿ ಆಗಿ ಜೀವನ ಸಾಗಿಸುತ್ತಾರೆ

ಇದಕ್ಕೆಲ್ಲ ಮುಖ್ಯ ಕಾರಣ ಎಲಿಯಾಗೆ ಕೊಟ್ಟ ಭಾಷೆ ಯಾವುದೇ ಕಾರಣಕ್ಕೂ ನಿನಗೆ ಮೋಸ ಮಾಡೋಲ್ಲ ಹಾಗೂ ಯಾರನ್ನು ವಿವಾಹ ಆಗೋಲ್ಲ ಎಂದು ಬಾಷೆ ಕೊಟ್ಟಿರುತ್ತಾರೆ ಅದನ್ನೇ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಂದಿದ್ದಾರೆ ಆದರೆ ಎಲ್ಲೂ ಧೃತಿಗೆಡದೆ ತಮ್ಮ ಕಂಪೆನಿಯನ್ನು ಉನ್ನತ ಮಟ್ಟಕ್ಕೆ ಇರಿಸುವುದರ ಬಗ್ಗೆ ಯೋಚನೆ ಮಾಡುತ್ತ ಕಳೆದರು ಇಂದಿನ ಯುವ ಜನಾಂಗದವರಿಗೆ ಒಬ್ಬ ಮಾದರಿ ಪುರುಷ ಆಗಿದ್ದಾರೆ ಇವತ್ತಿನ ಯುವಕರು ದುಡುಕು ಸ್ವಭಾವದ ಮನೋಭಾವನೆ ಹೊಂದಿದ್ದು ಸ್ವಲ್ಪ ಏರಪೇರಾದರೂ ಆತ್ಮಹತ್ಯೆಗೆ ಶರಣಾಗಿ ಬಿಡುತ್ತಾರೆ ಅಂತಹವರು ಒಮ್ಮೆ ಇವರ ಜೀವನದ ಬಗ್ಗೆ ತಿಳಿದುಕೊಂಡರೆ ಉತ್ತಮ

Leave a Reply

Your email address will not be published. Required fields are marked *