ಒಂದು ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ಸಂಭಾವನೆ ಎಷ್ಟು ಕೋಟಿ ಗೊತ್ತಾ? ನಿರ್ಮಾಪಕರು ಶಾ’ಕ್

0 0

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. ‘ಬೆಳಗೆದ್ದು ಯಾರ ಮುಖವ ನಾನು ನೋಡಿದೆ..’ ಎಂಬ ಜನಪ್ರಿಯ ಹಾಡಿನಿಂದಲೇ ಖ್ಯಾತಿ ಗಳಿಸಿದ ರಶ್ಮಿಕಾ, ಇದೀಗ ರಾಷ್ಟ್ರಮಟ್ಟದಲ್ಲಿ ಬಹುಬೇಡಿಕೆಯ ನಟಿ. ವಿಜಯ ದೇವರಕೊಂಡ ಜೊತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡ್ತಾ ಸಕ್ಸಸ್ ಕಂಡ ನಟಿ ಬಳಿಕ ನಾಗಾರ್ಜುನ ಅಕ್ಕಿನೇನಿ, ನಾಣಿ, ಮಹೇಶ್ ಬಾಬು, ಕಾರ್ತಿ, ಅಲ್ಲು ಅರ್ಜುನ್ ಹೀಗೆ ಸೌತ್ ಸಿನಿಮಾ ರಂಗದ ಸ್ಟಾರ್ ನಟರ ಜೊತೆ ಅಭಿನಯಿಸಿ ದಕ್ಷಿಣ ಭಾರತದಲ್ಲಿ ಟಾಪ್ ನಾಯಕಿಯರಲ್ಲಿ ಒಬ್ಬರು.

ಅಲ್ಲು ಅರ್ಜುನ್ ನಾಯಕನಟನಾಗಿ ಅಭಿನಯಿಸಿದ ಪುಷ್ಪ ಚಿತ್ರದ ಯಶಸ್ಸಿನ ನಂತರ ಅವರಿಗೆ ಬೇಡಿಕೆ ಇನ್ನೂ ಹೆಚ್ಚುತ್ತಿದೆ. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಬಾಲಿವುಡ್ ಚಿತ್ರರಂಗವನ್ನೂ ಪ್ರವೇಶಿಸಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ತನ್ನ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ತಮಿಳು ಸಿನಿಮಾ ರಂಗದಿಂದ ಸೂಪರ್ ಸುದ್ದಿಯೊಂದು ಬಂದಿದೆ. ದಕ್ಷಿಣದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಮುಂದಿದ್ದಾರೆ ಎನ್ನಲಾಗುತ್ತಿದೆ. ಈವರೆಗೂ ಪೂಜಾ ಹೆಗಡೆ ಹೆಸರು ಕೇಳಿ ಬರುತ್ತಿತ್ತು, ಇದೀಗ ಪೂಜಾರನ್ನು ಸೈಡ್ ಹಾಕಿ, ವಿಜಯ್ ನಟನೆಯ ಸಿನಿಮಾಗೆ ಐದು ಕೋಟಿ ಸಂಭಾವನೆ ಪಡೆಯುವ ಮೂಲಕ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದ್ದಾರಂತೆ ರಶ್ಮಿಕಾ. ಕಿರಿಕ್ ಪಾರ್ಟಿ ಸಿನಿಮಾಗೆ 5 ರಿಂದ 10 ಲಕ್ಷ ಸಂಭಾವನೆ ಪಡೆದಿದ್ದ ರಶ್ಮಿಕಾ ಮಂದಣ್ಣ ಇವತ್ತಿನ ರೆಮ್ಯೂನರೇಷನ್ ಕೇಳಿ, ದಕ್ಷಿಣ ಭಾರತದ ನಿರ್ಮಾಪಕರು ಶಾಕ್ ಆಗಿದ್ದಾರೆ. ಯಾಕಂದ್ರೆ ಸಿನಿಮಾ ಜೊತೆ ಜೊತೆಗೆ ಅನೇಕ ಜಾಹೀರಾತು ಬ್ರಾಂಡ್​ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿಯೂ ಅವರು ಹೊರ ಹೊಮ್ಮುತ್ತಿದ್ದಾರೆ.

ಈ ಸ್ಟಾರ್‌ಡಮ್‌ನಿಂದಾಗಿ ರಶ್ಮಿಕಾ ಮಂದಣ್ಣ ಸಂಭಾವನೆ ಜಾಸ್ತಿ ಆಗಿದೆಯಂತೆ. ದಳಪತಿ ವಿಜಯ್ ಜೊತೆ ಸದ್ಯ ರಶ್ಮಿಕಾ ನಟಿಸುತ್ತಿದ್ದು, ಈ ಚಿತ್ರಕ್ಕೆ ಅವರು ತಗೆದುಕೊಂಡ ಸಂಭಾವನೆ ಬರೋಬ್ಬರಿ 5 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಇಷ್ಟು ದೊಡ್ಡ ಮೊತ್ತದ ಸಂಭಾವನೆಯನ್ನು ದಕ್ಷಿಣದ ನಟಿಯರು ಇಷ್ಟು ಬೇಗ ಯಾರೂ ಪಡೆದಿಲ್ಲ ಎನ್ನುವುದು ಮತ್ತೊಂದು ದಾಖಲೆ. ಅತೀ ಹೆಚ್ಚು ಸಂಭಾವನೆ ಮತ್ತು ಹೆಚ್ಚು ಸಿನಿಮಾಗಳನ್ನು ನಟಿಸುತ್ತಿರುವ ಪಟ್ಟಿಯಲ್ಲೂ ರಶ್ಮಿಕಾಗೆ ಮೊದಲ ಸ್ಥಾನ ಸಿಕ್ಕಿದೆ. ತಮಿಳು, ತೆಲುಗು, ಹಿಂದಿ ಸೇರಿದಂತೆ ಅವರು ಆರು ಸಿನಿಮಾಗಳಲ್ಲಿ ಸದ್ಯ ನಟಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಆಪ್ತರು ಹೇಳುವ ಪ್ರಕಾರ, ತೆಲುಗು ನಟ ಮಹೇಶ್ ಬಾಬು ಹಾಗು ತಮಿಳಿನ ಕಾರ್ತಿ ಸುಲ್ತಾನ್ ಸಿನಿಮಾಗೆ ಮೂರು ಕೋಟಿ ಸಂಭಾವನೆ ಪಡೆದಿದ್ರಂತೆ. ಈಗ ಪುಷ್ಪ ಸಿನಿಮಾ ಹಿಟ್ ಆದ್ಮೇಲೆ ಕೊಂಚ ಸಂಭಾವನೆ ಜಾಸ್ತಿ ಮಾಡಿಕೊಂಡಿರುವ ರಶ್ಮಿಕಾ ಮಂದಣ್ಣ, ವಿಜಯ್ ಸಿನಿಮಾಗೆ 4 ಕೋಟಿ ರೆಮ್ಯುನರೇಷನ್ ಪಡೆದಿದ್ದಾರೆ ಎನ್ನಲಾಗಿದೆ. ದಕ್ಷಿಣದಲ್ಲಿ ಪೂಜಾ ಹೆಗ್ಡೆ ಒಂದು ಸಿನಿಮಾಗೆ 3.50 ಕೋಟಿ ಸಂಭಾವನೆ ಪಡೆಯುತ್ತಿದ್ದರಂತೆ. ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಜೊತೆಗೆ ನಟಿಸಿರುವ ‘ಪುಷ್ಪ’ ಸಿನಿಮಾದಲ್ಲಿ ನಟಿಸಿದ ಬಳಿಕ ರಶ್ಮಿಕಾ ಕ್ರೇಜ್ ಮತ್ತಷ್ಟು ಹೆಚ್ಚಿದೆ.

ಈ ಒಂದೇ ಚಿತ್ರದ ಮೂಲಕ ಉತ್ತರ ಭಾರತದಲ್ಲೂ ರಶ್ಮಿಕಾಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಸಾಕಷ್ಟು ಸೂಪರ್ ಸ್ಟಾರ್‌ಗಳ ಜೊತೆಯಲ್ಲಿ ನಟಿದ್ದಾರೆ. ರಶ್ಮಿಕಾ ಮಂದಣ್ಣ ತೆಲುಗಿನ ಬಳಿಕ ತಮಿಳು ಸ್ಟಾರ್ ಹೀರೊಗಳ ಜೊತೆಗೆ ತಮ್ಮ ಸಿನಿಮಾ ಜರ್ನಿಯನ್ನು ಶುರುಮಾಡಿದ್ದಾರೆ. ಈ ಹಿಂದೆ ತಮಿಳಿನಲ್ಲಿ ಕಾರ್ತಿ ಜೊತೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಇದೀಗ ನಟ ವಿಜಯ್ ಜೊತೆಗೆ ಅಭಿನಯಿಸಲು ಮುಂದಾಗಿದ್ದಾರೆ. ತಮಿಳಿನ ‘ವಾರಿಸು’ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ‘ವಾರಿಸು’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಆದರೆ ಪೋಸ್ಟರ್‌ನಲ್ಲಿ ನಟ ವಿಜಯ್ ಮಾತ್ರ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಪಾತ್ರ ಹೇಗೆ ಇರಲೇಬೇಕು ಎನ್ನುವ ಬಗ್ಗೆ ಇನ್ನೂ ಸುಳಿವು ಬಿಟ್ಟುಕೊಟ್ಟಿಲ್ಲ ಚಿತ್ರತಂಡ.

ವಾರಿಸು ಚಿತ್ರದಲ್ಲಿ ನಟಿ ರಶ್ಮಿಕಾ ಪಾತ್ರ ಹೇಗಿರಲಿದೆ ಎನ್ನುವುದಕ್ಕಿಂತಲೂ ಹೆಚ್ಚಾಗಿ, ಚಿತ್ರಕ್ಕಾಗಿ ರಶ್ಮಿಕಾ ಪಡೆದುಕೊಂಡಿರುವ ಸಂಭಾವನೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ‘ವಾರಿಸು’ ಚಿತ್ರಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯುವ ಮೂಲಕ ನಟಿ ರಶ್ಮಿಕಾ ಮಂದಣ್ಣ ಸೌತ್ ನಟಿಯರ ಪೈಕಿ ಮೊದಲ ಸ್ಥಾನದಲ್ಲಿ ಇದ್ದಾರೆ. ಜೊತೆಗೆ ನಂಬರ್ ನಟಿ ಎನಿಸಿಕೊಂಡಿದ್ದಾರೆ. ವಾರಿಸು’ ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ಪಡೆದಿರುವ ಸಂಭಾವನೆ 5 ಕೋಟಿ ರೂ. ಎನ್ನಲಾಗಿದೆ. ಸಿನಿಮಾರಂಗದಲ್ಲಿ ನಾಯಕ ನಟಿಯರಿಗೆ ನಾಯಕರಿಗಿಂತ ಕಡಿಮೆ ಸಂಭಾವನೆ ಇರುತ್ತೆ. ಆದರೆ ನಾಯಕಿಯರ ಪೈಕಿ ಹೆಚ್ಚು ಸಂಭಾವನೆ ಪಡೆದು ನಂಬರ್1 ಸ್ಥಾನದಲ್ಲಿ ರಶ್ಮಿಕಾ ಇದ್ದಾರೆ.

ಈ ಮೊದಲು ರಶ್ಮಿಕಾ ಮಂದಣ್ಣ ಮೂರು ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು. ಈಗ ತಮಿಳು ಚಿತ್ರಕ್ಕಾಗಿ 2 ಕೋಟಿ ರೂ. ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ 5 ಕೋಟಿ ರೂ. ಪಡೆದುಕೊಳ್ಳುವ ಮೂಲಕ ರಶ್ಮಿಕಾ ಸುದ್ದಿಯಾಗಿದ್ದಾರೆ. ಪೂಜಾ ಹೆಗ್ಡೆ, ಸಮಂತಾ ಎಲ್ಲರನ್ನು ಹಿಂದೆ ಹಾಕಿ ರಶ್ಮಿಕಾ ಇದೀಗ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಏಕಾಏಕಿ ರಶ್ಮಿಕಾ ತಮ್ಮ ಸಂಭಾವನೆಯನ್ನು ಏರಿಸಿಕೊಳ್ಳುವ ಮೂಲಕ ಪೂಜಾರನ್ನು ಹಿಂದಿಕ್ಕಿದ್ದಾರೆ. ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆಯುವ ಮೂಲಕ ಇತರ ನಾಯಕಿಯರನ್ನು ಅಚ್ಚರಿಗೆ ದೂಡಿದ್ದಾರೆ. ಪುಷ್ಪಾ ಯಶಸ್ಸಿನ ನಂತರ ರಶ್ಮಿಕಾ ಸಂಭಾವನೆ ಎರಡ್ಮೂರು ಬಾರಿ ಏರಿಕೆಯಾಗಿದೆ ಎನ್ನಲಾಗುತ್ತಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.