ಯಾರ ಜೀವನ ಹೇಗಿರುತ್ತದೆ, ಹೇಗಾಗುತ್ತದೆ ಎಂದು ಹೇಳಲಾಗುವುದಿಲ್ಲ. ಹಳ್ಳಿಯಿಂದ ಪೇಟೆಗೆ ಬಂದ ರಾಜೇಶ್ ಹಳ್ಳಿ ಹೈದ ಪೇಟೆಗೆ ಬಂದ ಎಂಬ ಕಾರ್ಯಕ್ರಮದಲ್ಲಿ ವಿನ್ ಆಗಿ ಸಿನಿಮಾಗಳಲ್ಲಿ ನಟಿಸಲು ಅವಕಾಶ ದೊರೆತು ದುರದೃಷ್ಟವಶಾತ್ ಅವರು ಆತ್ಮಹ ತ್ಯೆ ಮಾಡಿಕೊಂಡ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ.

ಹೆಗ್ಗಡದೇವನ ಕೋಟೆ ಎಂಬ ತಾಲೂಕಿಗೆ ಸೇರಿದ ಕಾಡು ಜನರ ತಂಡಕ್ಕೆ ಸೇರಿದ ಲಕ್ಷ್ಮಮ್ಮ ಎಂಬುವವರ ಒಬ್ಬನೇ ಮಗ ರಾಜೇಶ್. 2010 ರ ಸಮಯದಲ್ಲಿ ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ಕ್ರಾಂತಿ ಶುರುವಾಯಿತು. ಸುವರ್ಣ ವಾಹಿನಿಯಲ್ಲಿ ಹಳ್ಳಿ ಹೈದ ಪ್ಯಾಟೆಗ್ ಬಂದ ಎಂಬ ಕಾರ್ಯಕ್ರಮವು ಪ್ರಾರಂಭವಾಯಿತು. ಈ ಕಾರ್ಯಕ್ರಮದ ಉದ್ದೇಶ ನಾಗರಿಕತೆಯಿಂದ ದೂರ ಉಳಿದ ರಾಜ್ಯದ ಮೂಲೆಯಲ್ಲಿರುವ ಯುವಕರನ್ನು ಕರೆತರುವುದು, ಕಾರ್ಯಕ್ರಮದಲ್ಲಿ ಅವರ ಜೊತೆ ಮೊಡರ್ನ್ ಹುಡುಗಿಯರನ್ನು ಜೋಡಿ ಮಾಡಿ ಸ್ಪರ್ಧೆ ನಡೆಸುವುದು. ಕಾಡಿನ ಯುವಕರಿಗೆ ಆಧುನಿಕ ಪದ್ಧತಿಗಳು ಮೊದಲು ಕಷ್ಟವಾಗುತ್ತಿತ್ತು. ಕಾಡಿನ ಯುವಕರಿಗೆ ಆಧುನಿಕತೆಯ ಪರಿಚಯ ಮಾಡಿಸುವುದು ಕೆಟ್ಟದ್ದಲ್ಲ ಆದರೆ ಇದು ಅವರ ಮೇಲಿನ ಬಲವಂತದ ಹೇರಿಕೆ ಆಗಿತ್ತು. ರಾಜೇಶ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ಪ್ರತಿಭೆಯ ಮೂಲಕ ಜನಮನ ಗೆದ್ದನು. ಈ ಕಾರ್ಯಕ್ರಮದಲ್ಲಿ ರಾಜೇಶನಂತ ದುರ್ಗಮ ಪ್ರದೇಶದಿಂದ ಹಲವರನ್ನು ಆಯ್ಕೆ ಮಾಡಲಾಗಿತ್ತು ಆದರೆ ರಾಜೇಶ್ ತನ್ನ ಪ್ರತಿಭೆ ಮೂಲಕ ಜನಪ್ರಿಯನಾದ.

ರಾಜೇಶ್ ಈ ಕಾರ್ಯಕ್ರಮಕ್ಕೆ ಹುಮ್ಮಸ್ಸಿನಿಂದ ಬಂದಿದ್ದನು. ಕಾರ್ಯಕ್ರಮದಲ್ಲಿ ಅವನಿಗೆ ಐಶ್ವರ್ಯ ಎಂಬ ಮೈಸೂರು ಮೂಲದ ಹುಡುಗಿ ಜೊತೆಯಾಗಿದ್ದರು. ಕೆಲವು ಸ್ಪರ್ಧೆಯಲ್ಲಿ ಇವರಿಬ್ಬರಿಗೂ ಘರ್ಷಣೆ ನಡೆಯುತ್ತಿತ್ತು. ಅವನಿಗೆ ಕಲಿಸುವಾಗ ಐಶ್ವರ್ಯ ಅವರು ಎಷ್ಟೋ ಬಾರಿ ಬೈಸಿಕೊಂಡು, ಹೊಡೆಸಿಕೊಂಡಿದ್ದಾರೆ. ಆಗ ಈ ಶೋ ಹಲವು ಟೀಕೆಗೆ ಒಳಗಾಗಿತ್ತು. ಒರಟು ಸ್ವಭಾವದ ರಾಜೇಶ್ ಯಾರ ಮಾತಿಗೂ ಬಗ್ಗುತ್ತಿರಲಿಲ್ಲ. ಅವನ ಹುಚ್ಚು ಸ್ವಭಾವದಿಂದ ಈ ವಾಹಿನಿಯ ಟಿಆರ್ಪಿ ಹೆಚ್ಚಾಯಿತು. ರಾಜೇಶ್ ಕೋಪಿಷ್ಟ, ಮೊಂಡು ಸ್ವಭಾವದವನಾಗಿದ್ದ ಆದರೆ ಪ್ರತಿಭೆಯ ಮೂಲಕ ಅಂತಿಮವಾಗಿ ಈ ಕಾರ್ಯಕ್ರಮದ ವಿನ್ನರ್ ಕೂಡ ಆದನು ಅವನಿಗೆ ಸ್ಪರ್ಧೆಯ ನಿಯಮದಂತೆ 10 ಲಕ್ಷ ರೂಪಾಯಿ ಬಹುಮಾನ ದೊರೆಯಿತು. ರಾಜೇಶ್ ಗೆದ್ದ ಹಣವನ್ನು ವಿದ್ಯುಚ್ಛಕ್ತಿ ಇಲ್ಲದ ತನ್ನ ಊರಿಗೆ ಜನರೇಟರ್ ವ್ಯವಸ್ಥೆಯನ್ನು ಮಾಡಿಸಿದನು. ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ರಾಜೇಶ್ ಅವರನ್ನು ಅನುಕರಣೆ ಮಾಡುತ್ತಿದ್ದನು ನಂತರ ಎಲ್ಲ ವಾಹಿನಿಯಲ್ಲಿ ಅವನದ್ದೇ ಮಾತುಗಳು ಅವನ ಸಂದರ್ಶನ ನಡೆಯಿತು. ನಂತರ ರಾಜೇಶ್ ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತು ಆದರೆ ಈ ಚಿತ್ರ ಗೆಲುವನ್ನು ಪಡೆಯಲಿಲ್ಲ. ಈ ಸೋಲಿನಿಂದ ರಾಜೇಶ್ ಖಿನ್ನತೆಗೆ ಒಳಗಾದ ಇದರಿಂದ ಮನೆಯಲ್ಲಿ, ಬೀದಿಯಲ್ಲಿ ಜಗಳ ಆಡುತ್ತಿದ್ದನು ನಂತರ ಅವರನ್ನು ಮಾನಸಿಕ ಕೇಂದ್ರಗಳಿಗೆ ಸೇರಿಸಲಾಯಿತು ಚೇತರಿಸಿಕೊಂಡು ಮನೆಗೆ ಬಂದ ರಾಜೇಶ್ ಅವರಿಗೆ ಎರಡನೇ ಚಿತ್ರದಲ್ಲಿ ಅವಕಾಶ ಸಿಕ್ಕಿತು ಆ ಸಿನಿಮಾದ ಶೂಟಿಂಗ್ ಮುಗಿದ ನಂತರ ಇದ್ದಕ್ಕಿದ್ದಂತೆ 2013, ನವೆಂಬರ್ ನಲ್ಲಿ ಮೈಸೂರಿನ ತನ್ನದೇ ಮನೆಯ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಶೋ ಮುಗಿದ ನಂತರ ರಾಜೇಶ್ ಅವರನ್ನು ಅವರ ಪಾಡಿಗೆ ಬಿಟ್ಟಿದ್ದರೆ ಬಹುಶಃ ಅವರು ಖಿನ್ನತೆಗೆ ಒಳಗಾಗುತ್ತಿರಲಿಲ್ಲ. ಮುಗ್ಧ ಮನಸ್ಸಿನ ರಾಜೇಶ್ ಯಾವುದೋ ಕಾರಣಕ್ಕೆ ಖಿನ್ನತೆಗೆ ಒಳಗಾಗಿ ಅನ್ಯಾಯವಾಗಿ ಆತ್ಮ ಹ ತ್ಯೆಗೆ ಶರಣಾದರು ಇದು ವಿಷಾದವೆನಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!