ತಮಿಳು ಚಿತ್ರರಂಗದಲ್ಲಿ ವಿಭಿನ್ನ ಶೈಲಿಯ ನಟನೆಯ ಮೂಲಕ ಜನರ ಮನೆ ಮಾತಾದ ವಿಜಯ್ ಸೇತುಪತಿ ಅವರು ಎಲ್ಲಿ ಜನಿಸಿದರು, ಅವರು ಸಿನಿಮಾಗಳಲ್ಲಿ ಹೇಗೆ ಅವಕಾಶ ಪಡೆದುಕೊಂಡರು ಹಾಗೂ ಅವರ ಸಿನಿಮಾ ಜೀವನದ ಯಶಸ್ಸಿನ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

1978, ಜನವರಿ 16 ರಂದು ತಮಿಳುನಾಡಿನ ರಾಜಪಾಳ್ಯಂ ಎಂಬಲ್ಲಿ ವಿಜಯ್ ಸೇತುಪತಿ ಅವರು ಜನಿಸುತ್ತಾರೆ. ನೋಡಲು ಸಾಧಾರಣವಾಗಿದ್ದು ಬಡಕುಟುಂಬದಲ್ಲಿ ಜನಿಸುತ್ತಾರೆ. 6ನೇ ವಯಸ್ಸಿಗೆ ಕುಟುಂಬ ಸಮೇತ ಚೆನ್ನೈಗೆ ಬರುತ್ತಾರೆ. ಇವರ ಮೂಲ ಹೆಸರು ವಿಜಯ್ ಗುರುನಾಥ್ ಸೇತುಪತಿ ಖಲಿ ಮುತ್ತು. ಇವರ ತಂದೆ ತಾಯಿಯ ನಾಲ್ವರು ಮಕ್ಕಳಲ್ಲಿ ಇವರು ಒಬ್ಬರು. ಬಡತನದ ಕಾರಣದಿಂದ ಶಾಲಾ ಅವಧಿಯಲ್ಲಿ ಪಠ್ಯ ಅಥವಾ ಪಠ್ಯೇತರ ವಿಷಯಗಳಲ್ಲಿ ಆಸಕ್ತಿ ಇರಲಿಲ್ಲ. ಓದುವಾಗಲೇ ಕಿರಾಣಿ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದರು ಶಾಲಾಜೀವನ ಕಲಿಕೆ ಹಾಗೂ ಗಳಿಕೆಯಲ್ಲಿ ಕಳೆಯಿತು. ನಂತರ ಕಾಲೇಜಿಗೆ ಸೇರಿಕೊಂಡರು ಅಲ್ಲಿ ಫಾಸ್ಟ್ ಫುಡ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು ಬಿಕಾಂ ಮುಗಿಸಿದರು. ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಇವರಿಗೆ ಮುಂದಿನ ಶಿಕ್ಷಣ ಕಲಿಯಲು ಆಗಲಿಲ್ಲ.ನಂತರ ದುಬೈಗೆ ಹೋಗುತ್ತಾರೆ ಅಲ್ಲಿ 6 ವರ್ಷಗಳ ಕಾಲ ಕಠಿಣ ಪರಿಶ್ರಮದಿಂದ ದುಡಿಯುತ್ತಾರೆ. ಅಲ್ಲಿ ಆನ್ಲೈನ್ ಮೂಲಕ ಭಾರತ ಮೂಲದ ಜೆಸ್ಸಿ ಎಂಬಾಕೆಯ ಪರಿಚಯವಾಯಿತು 2003ರಲ್ಲಿ ಅವರ ವಿವಾಹವಾಯಿತು.

ನಂತರ ಭಾರತಕ್ಕೆ ವಾಪಸ್ ಬಂದು ಸಿಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರುತ್ತಾರೆ ನಂತರ ಚೆನ್ನೈ ಮೂಲದ ಥಿಯೇಟರ್ ಗ್ರೂಪ್ ಗೆ ಅಕೌಂಟಂಟ್ ಹಾಗೂ ಸಣ್ಣ ಪ್ರಮಾಣದ ನಟನಾಗಿ ಸೇರುತ್ತಾರೆ. ಅಲ್ಲಿಯವರ ನಟನೆಯನ್ನು ನೋಡುತ್ತಾ ನಟನೆಯ ಬಗ್ಗೆ ಕಲಿಯುತ್ತಾರೆ ಮತ್ತು ಅವರು ನಡೆಸುತ್ತಿರುವ ಶಾರ್ಟ್ ಫಿಲಂಗಳಲ್ಲಿ ಕೂಡ ವಿಜಯ್ ಅವರು ನಟಿಸುತ್ತಿದ್ದರು ಇದರಿಂದ ಅವರಿಗೆ ಬೆಸ್ಟ್ ಶಾರ್ಟ್ ಫಿಲಂ ನಟ ಎಂಬ ಬಿರುದು ದೊರೆತಿದೆ. ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಒಲವಿತ್ತು ಹೀರೊ ಆಗಬೇಕೆಂಬ ಆಸೆಯಿಂದ ಹಲವು ನಿರ್ದೇಶಕ, ನಿರ್ಮಾಪಕರನ್ನು ಭೇಟಿಯಾಗುತ್ತಿದ್ದರು ಆದರೆ ಅವರಿಗೆ ಅವಕಾಶ ಸಿಗಲಿಲ್ಲ ಹೀರೊ ಆಗುವುದು ಸುಲಭವಲ್ಲ ನಿನ್ನ ಮುಖಕ್ಕೆ ಹೀರೊ ಪಾತ್ರ ಸಿಗುವುದಿಲ್ಲ ಎಂದು ಅವಮಾನ ಮಾಡುತ್ತಿದ್ದರು. ತಮಿಳು ಸೀರಿಯಲ್ ನಲ್ಲಿ ಅವಕಾಶ ದೊರೆಯಿತು ನಂತರ ಹಲವು ಹೆಸರಾಂತ ನಿರ್ದೇಶಕರ ಪರಿಚಯವಾಗಿ ಅವಕಾಶ ದೊರೆತು ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿಕೊಂಡು ನಟನೆಯನ್ನು ಕಲಿತರು ನಂತರ ಅನೇಕ ತಮಿಳು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸುತ್ತಾರೆ. ಸಿನಿಮಾಗಳಲ್ಲಿ ನೆಗೆಟಿವ್ ರೋಲ್ ಗಳನ್ನು ಕೂಡ ಮಾಡುತ್ತಿದ್ದರು ಬೆಸ್ಟ್ ಖಳನಟ ಎಂಬ ಬಿರುದು ಅವರಿಗೆ ದೊರೆತಿದೆ.

ಸಿನಿಮಾದಲ್ಲಿ ನಟಿಸುತ್ತಾ ಅವರಿಗೆ ಹೆಸರು, ಹಣ ದೊರೆಯಿತು. ವರ್ಷಕ್ಕೆ 5-6 ಸಿನಿಮಾಗಳಲ್ಲಿ ನಟಿಸುವ ಅವರು ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಜನಪ್ರಿಯತೆ ಗಳಿಸಿದರು. ಅವರು ಹಲವು ಸಿನಿಮಾಗಳಲ್ಲಿ ತಮ್ಮದೇ ಆದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ನಟಿಸಿದ ಬಹುತೇಕ ಚಿತ್ರಗಳು ಸೂಪರ್ ಹಿಟ್ ಆಗಿದೆ. ಅವರು ನಟಿಸಿದ 96 ಎಂಬ ಚಿತ್ರ ಅವರ ಜೀವನದ ಜನಪ್ರಿಯ ಚಿತ್ರವಾಗಿದೆ. ಈ ಚಿತ್ರದಲ್ಲಿ ಅವರ ನೈಜ ನಟನೆಗೆ ಸೈಮಾ ಹಾಗೂ ಫಿಲಂ ಫೇರ್ ಅವಾರ್ಡ್ ದೊರೆತಿದೆ. ಈ ಚಿತ್ರ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ರಿಮೇಕ್ ಹಾಗೂ ಡಬ್ ಆಗಿದೆ. ಲೇಡಿ ಪಾತ್ರವನ್ನು ಕೂಡ ಇವರು ಸೊಗಸಾಗಿ, ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇವರು ತಮಿಳಿನ ಒಂದು ಸಿನಿಮಾದಲ್ಲಿ ಹಾಡಿದ್ದಾರೆ. ತೆಲುಗಿನ ಕೆಲವು ಸಿನಿಮಾಗಳಲ್ಲಿ ಕೂಡ ಇವರು ನಟಿಸಿದ್ದಾರೆ. ದಕ್ಷಿಣ ಭಾರತದ ಬಹುಬೇಡಿಕೆಯ ನಟರಾಗಿ ವಿಜಯ್ ಸೇತುಪತಿ ಅವರು ಗುರುತಿಸಿಕೊಂಡಿದ್ದಾರೆ. ಅವರ ನೈಜ ನಟನೆಗೆ ಅವರದೇ ಆದ ಅಭಿಮಾನ ಬಳಗವಿದೆ. 42 ವರ್ಷ ಪ್ರಾಯದ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಬಡಕುಟುಂಬದಿಂದ ಬಂದು ಸಿನಿಮಾರಂಗದಲ್ಲಿ ತಮ್ಮ ಸಹಜ ನಟನೆಯಿಂದ ಜನಪ್ರಿಯತೆ ಗಳಿಸಿ ಸಾಧನೆ ಮಾಡಿದ ವಿಜಯ್ ಸೇತುಪತಿ ಅವರ ಜೀವನ ನಿಜಕ್ಕೂ ಮಾದರಿಯಾಗಿದೆ. ವಿಜಯ್ ಸೇತುಪತಿ ಅವರು ಇನ್ನು ಹೆಚ್ಚಿನ, ವಿಭಿನ್ನವಾದ ಸಿನಿಮಾಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *