ಕಡಿಮೆ ಬಂಡವಾಳದಲ್ಲಿ ಇಂತಹ ಮನೆಗಳನ್ನು ಮಾಡಿಕೊಳ್ಳಬಹುದು

0 40

ಫ್ರಿಫ್ಯಾಬ್ರಿಕ್, ಪ್ರಿಕಾಸ್ಟ್, ಕಂಟೇನರ್ ಹೋಮ್ ಇವುಗಳು ಹೇಗಿರುತ್ತದೆ, ಇವುಗಳ ಬೆಲೆ ಎಷ್ಟು, ಇವುಗಳನ್ನು ಸಪ್ಲೈ ಯಾರು ಮಾಡುತ್ತಾರೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಪ್ರಿಕಾಸ್ಟ್ ಬಿಲ್ಡಿಂಗ್ ಇದು ಆರ್ ಸಿಸಿ ಪ್ರಿಕಾಸ್ಟ್ ಬಿಲ್ಡಿಂಗ್ ಆಗಿರುತ್ತದೆ. ಇದರ ಎತ್ತರ 9 ಫೀಟ್ ಇರುತ್ತದೆ, ಉದ್ದ ಎಷ್ಟು ಬೇಕೊ ಅಷ್ಟು ಮಾಡಿಕೊಳ್ಳಬಹುದು. ಇದಕ್ಕೆ ಹೆಚ್ಚಿನ ಫೌಂಡೇಶನ್ ಬೇಡ 2 ಬೈ 1 ಫೀಟ್ ಗುಂಡಿಗಳನ್ನು ತೋಡಿ ಸ್ಲ್ಯಾಬ್ ಹೋಲ್ಡರನ್ನು ಹಾಕಿ ರೆಡಿ ಮಾಡಲಾಗುತ್ತದೆ, ಕೇವಲ ಒಂದು ದಿನದಲ್ಲಿ ಇದನ್ನು ರೆಡಿ ಮಾಡಲಾಗುತ್ತದೆ. ಇದಕ್ಕೆ ಪ್ಲಾಸ್ಟ್ರಿಂಗ್ ಬೇಕಾದರೆ ಮಾಡಿಕೊಳ್ಳಬಹುದು. ಇದರ ಬೆಲೆ 100 ರೂಪಾಯಿ ಪರ್ ಸ್ಕ್ವಾರ್ ಫೀಟ್ ಆಗಿರುತ್ತದೆ. 10 ಬೈ 10 ರೂಮ್ ರೆಡಿ ಮಾಡಲು 40,000 ರೂಪಾಯಿ ಖರ್ಚಾಗುತ್ತದೆ. ಇದನ್ನು ಬೆಂಗಳೂರಿನ ನೆಲಮಂಗಲದಲ್ಲಿ ಸಪ್ಲೈ ಮಾಡುತ್ತಾರೆ, ಅವರನ್ನು ಕೊಂಟ್ಯಾಕ್ಟ್ ಮಾಡಬಹುದು. ಕಂಟೇನರ್ ಹೋಮ್ ಆಫೀಸ್ ಇದು ಇನ್ಸುಲೇಟೆಡ್ ಇರುತ್ತದೆ ಜೊತೆಗೆ ಉಡನ್ ಇಂಟೀರಿಯರ್ ಹೊಂದಿರುತ್ತದೆ.

ಇದು 75,000 ರೂಪಾಯಿಗೆ ಸಿಗುತ್ತದೆ. ಇಲ್ಲಿ 15ರಿಂದ 20 ಜನರನ್ನೊಳಗೊಂಡ ಆಫೀಸನ್ನು ಮಾಡಬಹುದು. ಒಂದೇ ದಿನದಲ್ಲಿ ಇದನ್ನು ರೆಡಿ ಮಾಡುತ್ತಾರೆ. ಇದಕ್ಕೆ ಮೊದಲು ಫ್ಲ್ಯಾಟ್ ಫೌಂಡೇಶನ್ ರೆಡಿ ಮಾಡಬೇಕು. ಇದನ್ನು ಬೆಂಗಳೂರಿನ ಎಎಮ್ ಪೋರ್ಟೆಬಲ್ ಕ್ಯಾಬಿನ್ಸ ಇವರು ಸಪ್ಲೈ ಮಾಡುತ್ತಾರೆ. ಪೋರ್ಟೆಬಲ್ ಹೌಸಸ್ ಫ್ರಿಫ್ಯಾಬ್ರಿಕೇಟೆಡ್ ಹೌಸ್ ಆಗಿದ್ದು ಮೊಡ್ಯೂಲರ್ ಆಗಿರುತ್ತದೆ ಇದರ ಎತ್ತರ 8 ಫೀಟ್ ನಿಂದ 15 ಫೀಟ್ ಆಗಿರುತ್ತದೆ, ಲೆಂಥ್ ಎಷ್ಟು ಬೇಕಾದರೂ ಮಾಡಿಕೊಳ್ಳಬಹುದು. ಅಲ್ಯೂಮಿನಿಯಂ, ವುಡ್, ಪಿವಿಸಿ ಡೋರ್ ಗಳನ್ನು ಯೂಸ್ ಮಾಡಬಹುದು, ಪೌಡರ್ ಕೋಟೆಡ್ ವಿಂಡೋಗಳನ್ನು ಯೂಸ್ ಮಾಡಬಹುದು. 10 ಬೈ 10 ಸ್ಟ್ರಕ್ಚರ್ ರೆಡಿ ಮಾಡಿದರೆ ಒಂದು ಲಕ್ಷ ರೂಪಾಯಿ ಖರ್ಚಾಗುತ್ತದೆ. ಇನ್ಸುಲೇಟೆಡ್ ಹಾಗು ವೆದರ್ ಪ್ರೂಫ್ ಇರುತ್ತದೆ. ಇದನ್ನು ಮೆಟ್ ಹೋಮ್ ಪೋರ್ಟ ಕ್ಯಾಬಿನ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರು ಸಪ್ಲೈ ಮಾಡುತ್ತಾರೆ.

ಸ್ಟೀಲ್ ಫ್ರಿ ಫ್ಯಾಬ್ರಿಕೇಟ್ ಗೆಸ್ಟ್ ಹೌಸ್ ಇದು ಇನ್ಸುಲೇಟೆಡ್ ಹಾಗು ವೆದರ್ ಪ್ರೂಫ್ ಆಗಿರುತ್ತದೆ ಇದರ ಎತ್ತರ 9 ಫೀಟ್ ನಿಂದ 15 ಫೀಟ್ ವರೆಗೆ ಇರುತ್ತದೆ, ಲೆಂಥ್ ಬೇಕಾದಷ್ಟು ಇಟ್ಟುಕೊಳ್ಳಬಹುದು. ಪಿವಿಸಿ, ವುಡನ್ ನಿಂದ ಡೋರ್ ಮಾಡಿಕೊಳ್ಳಬಹುದು, ಪೌಡರ್ ಕೋಟೆಡ್ ವಿಂಡೋಸ್ ಹಾಕಿಕೊಳ್ಳಬಹುದು. 10 ಬೈ 10 ಸ್ಟ್ರಕ್ಚರ್ ಗೆ ಒಂದು ಲಕ್ಷ ಆಗುತ್ತದೆ. ಇದನ್ನು ತೆಲಂಗಾಣದಲ್ಲಿ ಸಪ್ಲೈ ಮಾಡುತ್ತಾರೆ. ಫ್ರಿ ಫ್ಯಾಬ್ರಿಕ್ ಹೌಸ್ ಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಮೂವ್ ಮಾಡಬಹುದು. ಕಮರ್ಷಿಯಲ್ ಉದ್ದೇಶಗಳಿಗೂ ಇದನ್ನು ಬಳಸಬಹುದು. ಇದರೊಂದಿಗೆ ಇಂಡವ್ಯೂಜಲ್ ಟಾಯ್ಲೆಟ್ ಸೆಕ್ಷನ್ ಹಾಗೂ ಸೆಕ್ಯೂರಿಟಿ ಕ್ಯಾಬಿನ್ ಕೂಡ ಇರುತ್ತದೆ.

ಇದು 30-40,000 ರೂಪಾಯಿಗೆ ಸಿಗುತ್ತದೆ. ಇವು ಇನ್ಸುಲೇಟೆಡ್ ಆಗಿರುವುದರಿಂದ ವೆದರ್ ಪ್ರೂಫ್ ಆಗಿರುತ್ತದೆ. ಇದರಲ್ಲಿ ಹೀಟ್ ಇರುವುದರಿಂದ ಎಸಿಯನ್ನು ಬಳಸಬೇಕಾಗುತ್ತದೆ. 1 ವರ್ಷದಿಂದ 50 ವರ್ಷದವರೆಗೆ ವಾರೆಂಟಿ ಕೊಡುತ್ತಾರೆ. ಸ್ಟೀಲ್ ಮೂವೆಬಲ್ ಫ್ಯಾಬ್ರಿಕೇಟೆಡ್ ಗೆಸ್ಟ್ ಹೌಸ್ ಇದರ ಎತ್ತರ 12 ಫೀಟ್ ಹಾಗೂ ಉದ್ದ 18 ಫೀಟ್ ಇರುತ್ತದೆ. ಇದರ ಬೆಲೆ 1,20,000 ರೂಪಾಯಿ ಆಗುತ್ತದೆ. ಇದಕ್ಕೆ ಪಿವಿಸಿ ಹಾಗೂ ಸ್ಟೀಲ್ ಡೋರ್ ಗಳನ್ನು ಬಳಸಬಹುದು ಜೊತೆಗೆ ಅಲ್ಯೂಮಿನಿಯಂ ಪೌಡರ್ ಕೋಟೆಡ್ ವಿಂಡೋಸ್ ಗಳನ್ನು ಬಳಸಬಹುದು. ಇದನ್ನು ಮಾಡಲು ಮೆಟಲ್ ಸೊಲ್ಯೂಷನ್ಸ್ ಬೆಂಗಳೂರು ಇವರು ಸಪ್ಲೈ ಮಾಡುತ್ತಾರೆ. ಫ್ರಿಫ್ಯಾಬ್ರಿಕೇಟೆಡ್ ಆಫೀಸ್ ಕ್ಯಾಬಿನ್ ಇದರಲ್ಲಿ 20 ಅಥವಾ 20 ಕ್ಕಿಂತ ಹೆಚ್ಚು ಜನರನ್ನು ಸೇರಿಸಬಹುದು. ಇದು ಇನ್ಸುಲೇಟಡ್ ಹಾಗೂ ವುಡನ್ ಇಂಟೀರಿಯರ್ ಬರುತ್ತದೆ. ಜೊತೆಗೆ ಬಾಥರೂಮ್, ಆಫೀಸ್ ಗೆ ಬೇಕಾದ ವ್ಯವಸ್ಥೆ ಇರುತ್ತದೆ. 1,70,000 ರೂಪಾಯಿಗೆ ಸಿಗುತ್ತದೆ. ಕರ್ನಾಟಕ ಪೋರ್ಟೆಬಲ್ ಕ್ಯಾಬಿನ್ ಬೆಂಗಳೂರು ಇವರು ಸಪ್ಲೈ ಮಾಡುತ್ತಾರೆ. ಮೊಡ್ಯೂಲರ್ ಫ್ರಿಫ್ರ್ಯಾಬ್ ಇದು 12 ಫೀಟ್ ಎತ್ತರವಿರುತ್ತದೆ, 20 ಫೀಟ್ ಉದ್ದವಿರುತ್ತದೆ. Ms ವುಡನ್, pvc, upvc, ಸ್ಟೀಲ್, ಗ್ಲಾಸ್ ಯಾವುದೇ ಡೋರ ಬಳಸಬಹುದು, ಅಲ್ಯೂಮಿನಿಯಂ ಪೌಡರ್ ಕೋಟೆಡ್ ವಿಂಡೋಸ್ ಬಳಸಬಹುದು. ಇದರ ಬೆಲೆ 2 ಲಕ್ಷ ಆಗಿರುತ್ತದೆ. ಇದನ್ನು ಇನ್ನಬೊಕ್ಸ ಮೊಡ್ಯೂಲರ್ ಫ್ರಿಫ್ರ್ಯಾಬ್ ತೆಲಂಗಾಣ ಇವರು ಸಪ್ಲೈ ಮಾಡುತ್ತಾರೆ. ಪೋರ್ಟೆಬಲ್ ವುಡನ್ ಆಫೀಸ್ ಕ್ಯಾಬಿನ್ ಇದನ್ನು ಆಫೀಸ್ ಕ್ಯಾಬಿನ್ ಆಗಿ ಬಳಸಬಹುದು ಅಥವಾ ಮನೆಯಂತೆ ಬಳಸಬಹುದು.

ಇದು 10 ಫೀಟ್ ಎತ್ತರ, 20 ಫೀಟ್ ಉದ್ದವಿರುತ್ತದೆ. ಇದು ಇನ್ಸುಲೇಟೆಡ್ ಮತ್ತು ವೆದರ್ ಪ್ರೂಫ್ ಆಗಿರುತ್ತದೆ. ಇದರ ಬೆಲೆ 2,10,000 ರೂಪಾಯಿ ಆಗಿರುತ್ತದೆ. ಇದನ್ನು ರಿಪೇರಿ ಕೂಡ ಮಾಡಿಸಿಕೊಳ್ಳಬಹುದು. ಇದನ್ನು ಎನ್ಎ ಆಫೀಸ್ ಸೊಲ್ಯೂಷನ್ಸ್ ಬೆಂಗಳೂರು ಇವರು ಸಪ್ಲೈ ಮಾಡುತ್ತಾರೆ. ಕಂಟೇನರ್ ಇಂದ ಮಾಡಿರುವ ಮೋಡರ್ನ್ ಹೌಸ್ ಇದು ಸಾಮಾನ್ಯವಾಗಿ ಗ್ರೇ ಕಲರ್ ಇರುತ್ತದೆ. ಇನ್ಸುಲೇಟೆಡ್ ವೆದರ್ ಪ್ರೂಫ್ ಆಗಿರುತ್ತದೆ. ವುಡನ್ ಇಂಟೀರಿಯರ್ ದೊರೆಯುತ್ತದೆ. ಇದರಲ್ಲಿ ಕಿಚನ್, ಬಾತ್ರೂಮ್ ಎಲ್ಲವೂ ಸಿಗುತ್ತದೆ. ಇದರ ಎತ್ತರ 10-12 ಫೀಟ್, 16 ಫೀಟ್ ಉದ್ದ ಸಿಗುತ್ತದೆ. ಇದರ ಬೆಲೆ 2,25,000 ರೂಪಾಯಿ ಆಗುತ್ತದೆ. ಇದನ್ನು ಟಿಜೆ ಟ್ರೇಡಿಂಗ್ ಏಜೆನ್ಸೀಸ್ ತಮಿಳುನಾಡು ಇವರು ಸಪ್ಲೈ ಮಾಡುತ್ತಾರೆ. ಕಂಟೇನರ್ ಹೌಸ್ ಇದು ಸ್ಟೀಲ್ ಅಥವಾ ಬೇರೆ ಯಾವುದೇ ಕಲರ್ ನಲ್ಲಿ ಸಿಗುತ್ತದೆ. ಎಂಎಸ್, ಯುಪಿವಿಸಿ ಡೋರ್ ಹಾಕಿಕೊಳ್ಳಬಹುದು, ಪೌಡರ್ ಕೋಟೆಡ್ ಅಲ್ಯೂಮಿನಿಯಂ ವಿಂಡೋಸ್ ಬಳಸಬಹುದು. ಇದು ವೆದರ್ ಪ್ರೂಫ್ ಆಗಿರುತ್ತದೆ. ಇದಕ್ಕೆ ಅಟ್ಯಾಚ್ ಬಾತ್ರೂಮ್, ಟಾಯ್ಲೆಟ್ ಕೂಡ ಇರುತ್ತದೆ ಇದರ ಬೆಲೆ 2,75,000 ರೂಪಾಯಿ. ಎಂಎ ಪೋರ್ಟೆಬಲ್ ಕ್ಯಾಬಿನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಅಥವಾ ತೆಲಂಗಾಣ ಇವರು ಸಪ್ಲೈ ಮಾಡುತ್ತಾರೆ. ಇವೆಲ್ಲವೂ ಫ್ರೀ ಫ್ಯಾಬ್ರಿಕೇಟೆಡ್, ಪ್ರೀಕಾಸ್ಟ್, ಕಂಟೇನರ್ ಹೋಮ್ ಗಳಾಗಿದೆ ಇವುಗಳ ಮೆಂಟೆನೆನ್ಸ್ ಕಡಿಮೆ ಇರುತ್ತದೆ. ರಸ್ಟ, ವೆದರ್ ಪ್ರೂಫ್ ಆಗಿರುತ್ತದೆ. ಇವುಗಳನ್ನು ಈಜಿಯಾಗಿ ರೆಡಿ ಮಾಡಬಹುದು. ಇವುಗಳನ್ನು ಕಮರ್ಷಿಯಲ್ ಅಥವಾ ಇನ್ಯಾವುದೇ ಉದ್ದೇಶಗಳಿಗೆ ಬಳಸಬಹುದು.

Leave A Reply

Your email address will not be published.