ರಜನೀಕಾಂತ್ ಅಳಿಯ ಕೂಡ ದೊಡ್ಡ ಸ್ಟಾರ್ ನಟ, ಇವರು ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ.!

0 0

ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ದೇವರು ಎಂದೇ ಪೂಜಿಸುವ ರಜನಿಕಾಂತ್ ಅವರ ಮಗಳಾದ ಐಶ್ವರ್ಯ ಅವಳಿಗೆ ಮದುವೆಯಾಗಿ ರಜನಿಕಾಂತ್ ಅವರ ಅಳಿಯ ಎನಿಸಿಕೊಂಡರು ಈ ಧನುಷ್. ನಟ ಧನುಷ್ ವಿಭಿನ್ನವಾದ ಪಾತ್ರಗಳ ಮೂಲಕ ಗಮನಸೆಳೆದಿದ್ದಾರೆ. ಧನುಷ್ ಅವರ ಕುಟುಂಬದವರಿಗೆ ಸಿನಿಮಾ ನಂಟಿದೆ. ಇವರು ನಟ, ನಿರ್ಮಾಪಕ, ನಿರ್ದೇಶಕ, ಬರಹಗಾರ, ಗೀತಸಂಗೀತ ರಚನೆಕಾರ, ಚಿತ್ರಕಥೆಗಾರರಾಗಿ ಗುರುತಿಸಿಕೊಂಡಿದ್ದಾರೆ. ಇಂಡಿಯನ್ ಬ್ಯೂಸ್‌ಲೀ ಎಂದೇ ಧನುಷ್ ಖ್ಯಾತಿ ಪಡೆದಿದ್ದಾರೆ. 44 ಸಿನಿಮಾಗಳಲ್ಲಿ 13 ಸಿನಿಮಾಗಳು ಸೈಮಾ ಅವಾರ್ಡ್, 9 ವಿಜಯ್ ಅವಾರ್ಡ್ಸ್, 7 ಫಿಲ್ಮ್‌ಫೇರ್‌ ಪ್ರಶಸ್ತಿ, 5 ವಿಕಟನ್ ಪ್ರಶಸ್ತಿ, 5 ಎಡಿಸನ್ ಅವಾರ್ಡ್ಸ್, 3 ನ್ಯಾಶನಲ್ ಅವಾರ್ಡ್ಸ್ ಸಿಕ್ಕಿವೆ. ಇವರು ನಟ ರಜನಿಕಾಂತ್ ಅಳಿಯ ಎನ್ನುವುದು ಎಲ್ಲರಿಗೂ ಗೊತ್ತಿದೆ. ಫೋರ್ಬ್ಸ್‌ ಇಂಡಿಯಾ ಲಿಸ್ಟ್‌ನಲ್ಲಿ ಇವರ ಹೆಸರು ಇದೆ. ರಜನಿಕಾಂತ್ ಅವರ ಅಳಿಯನಾಗಿರುವ ಧನುಷ್ ಅವರ ಒಟ್ಟೂ ಸಂಪಾದನೆ ಅಥವಾ ಅವರ ಇದುವರೆಗಿನ ಆಸ್ತಿ ಎಷ್ಟು ಎನ್ನುವುದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯ ಪಡುವುದು ಖಚಿತ.

ಧನುಷ್ ಅವರ ನಿಜವಾದ ಹೆಸರು ವೆಂಕಟೇಶ್ ಪ್ರಭು ಕಸ್ತೂರಿ ರಾಜ್ ಇದೆ. 1995 ನಲ್ಲಿ ಪ್ರದರ್ಶನಗೊಂಡ ಕುರುದ್ದಿಪನ್ನಲ್ ಚಿತ್ರದಲ್ಲಿ ಒಂದು ಮಶೀನಿನ ಹೆಸರು ಧನುಷ್ ಇತ್ತು. ಇದರಿಂದ ಪ್ರಭಾವಿತರಾಗಿ ವೆಂಕಟೇಶ್ ಅವರು ತಮ್ಮ ಹೆಸರನ್ನು ಧನುಷ್ ಎಂದು ಬದಲಾಯಿಸಿಕೊಂಡರು. ಒಂದು ತಮಾಷೆಯ ವಿಷಯವೇನೆಂದರೆ ಧನುಷ್ ಅವರಿಗೆ ನಟನಾಗುವ ಬಯಕೆಯಿರಲಿಲ್ಲ. ಅವರು ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿ ದೊಡ್ಡ ಶೇಪ್ ಆಗಬೇಕೆಂಬ ವಿಚಾರ ಮಾಡಿದ್ದರು. ಆದರೆ ಅವರ ಸಹೋದರ ನೀನು ಅಭಿನಯ ಕ್ಷೇತ್ರದಲ್ಲಿ ನಿನ್ನ ಜೀವನವನ್ನು ಕಂಡುಕೋ ಎಂದಾಗ ಇವರು ಅಭಿನಯ ಕ್ಷೇತ್ರದ ಕಡೆಗೆ ಹೊರಳಿದರು.

ಧನುಷ್ ಇವರು ತಮಿಳು ಚಲನಚಿತ್ರರಂಗದಲ್ಲಿ ಪ್ರಸಿದ್ಧ ದಿಗ್ದರ್ಶಕರಾದ ಕಸ್ತೂರಿ ರಾಜ ಅವರ ಮಗ ಆಗಿದ್ದಾರೆ. ಧನುಷ್ ಇವರು ತಮ್ಮ ತಂದೆಯ ದಿಗ್ದರ್ಶನದಲ್ಲಿ ನಿರ್ಮಾಣವಾದ ತುಳ್ಳುವಾದೋ ಇಲಾಮಾಯಿ ಚಿತ್ರದ ಮುಖಾಂತರ ಅಭಿನಯ ಕ್ಷೇತ್ರದಲ್ಲಿ ಎಂಟ್ರಿ ಮಾಡಿದರು. 2003 ರಲ್ಲಿ ಪ್ರದರ್ಶನಗೊಂಡ ತಿರುದ ತಿರುದಿ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ತುಂಬ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿತು. ಈ ಚಿತ್ರವು ಧನುಶ್ ಅವರಿಗೆ ತಮಿಳು ಚಿತ್ರರಂಗದಲ್ಲಿ ಅಪಾರ ಯಶಸ್ಸನ್ನು ತಂದುಕೊಟ್ಟಿತು. 28 ಜುಲೈ 1983 ರಲ್ಲಿ ತಮಿಳುನಾಡಿನ ಥೇನಿ ಯಲ್ಲಿ ಜನಿಸಿದ ಧನುಷ್ ಅವರು ಸದ್ಯ ತಮಿಳು ಚಿತ್ರರಂಗದ ಮೇರು ನಟರಾಗಿದ್ದಾರೆ. ಚೆನ್ನೈನ ಪನ್ಪಲ್ ದಲ್ಲಿ 2013 ರಲ್ಲಿ ಖರೀದಿಸಿದ ದೊಡ್ಡ ಸುಸಜ್ಜಿತ ಬಂಗಲೆಯಿದ್ದು , ಈ ಬಂಗಲೆ ಬೆಲೆ ಸುಮಾರು 18 ಕೋಟಿ ರೂಪಾಯಿಗಳಷ್ಟು ಇದೆ. ಇದರ ಹೊರತಾಗಿ ಅವರ ಹತ್ತಿರ ಒಂದು ಗೆಸ್ಟ್ ಹೌಸ್ ಹಾಗೂ ಅನೇಕ ದುಬಾರಿ ಕಾರುಗಳು ಸಹ ಸಾಲಾಗಿ ನಿಂತಿವೆ. ಅವುಗಳಲ್ಲಿ ಆಡಿ A 8, ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪೂರ್, ಜಾಗ್ವಾರ್ ಎಕ್ಸ್ಇ, ರೋಲ್ಸ್ ರಾಯಲ್ ಘೋಸ್ಟ್ ಸೀರೀಸ್-|| ಹೀಗೆ ಇನ್ನೂ ಅನೇಕ ದುಬಾರಿ ಕಾರುಗಳು ಶಾಮೀಲಾಗಿವೆ. ಈ ಕಾರುಗಳ ಪ್ರಾರಂಭದ ಬೆಲೆ 5 ಕೋಟಿ ರೂಪಾಯಿಗಳಿಂದ ಶುರುವಾಗುತ್ತವೆ.

ಸುದ್ದಿಮೂಲಗಳ ಪ್ರಕಾರ ಧನುಶ್ ಅವರು ಒಂದು ಚಿತ್ರಕ್ಕೆ ತೆಗೆದುಕೊಳ್ಳುವ ಸಂಭಾವನೆ ಸುಮಾರು 7 ರಿಂದ 10 ಕೋಟಿ ರೂಪಾಯಿಗಳು. 2011ರಲ್ಲಿ ಧನುಷ್ ಅವರಿಗೆ ಆದುಕಲಂ ಚಿತ್ರಕ್ಕಾಗಿ ಉತ್ಕೃಷ್ಟ ಅಭಿನಯಕ್ಕಾಗಿ ರಾಷ್ಟ್ರೀಯ ಪುರಸ್ಕಾರ ದೊರಕಿದೆ. ಧನುಷ್ ಅವರು ರಜನಿಕಾಂತ್ ಅವರ ಮಗಳಾದ ಐಶ್ವರ್ಯ ಜೊತೆಗೆ ಮದುವೆಯಾಗಿದ್ದಾರೆ. ಐಶ್ವರ್ಯ ಅವರು ಧನುಷ್ ಗಿಂತ ವಯಸ್ಸಿನಲ್ಲಿ ಎರಡು ವರ್ಷ ದೊಡ್ಡವರಾಗಿದ್ದಾರೆ. 2003 ರಲ್ಲಿ ಇಬ್ಬರು ಒಂದು ಚಿತ್ರದ ಸಂದರ್ಭದಲ್ಲಿ ಭೇಟಿಯಾದ ನಂತರ ಮುಂದೆ ಸ್ನೇಹ ಮುಂದುವರಿಸಿ 2004ರಲ್ಲಿ ಮದುವೆಯಾದರು. ಇವರು ಪರಶಿವನ ಪರಮ ಭಕ್ತರಾಗಿದ್ದರಿಂದ ತಮ್ಮ ಮಕ್ಕಳಿಗೆ ಯತ್ರರಾಜಾ ಮತ್ತು ಲಿಂಗರಾಜಾ ಎಂದು ಹೆಸರಿಟ್ಟಿದ್ದಾರೆ. ತಮ್ಮ 35 ನೇ ವಯಸ್ಸಿನಲ್ಲಿ ಧನುಷ್ ಅವರು ಸದ್ಯ 72 ಕೋಟಿ ರೂಪಾಯಿಗಳ ಒಡೆಯರಾಗಿದ್ದಾರೆ.

Leave A Reply

Your email address will not be published.