ಹೊಸ ಸಂವತ್ಸರದ ಮೊದಲ ಹಬ್ಬ ಯುಗಾದಿ. ಹೊಸ ಚಿಗುರು ಮೂಡುವ ಚೈತ್ರ ಮಾಸ. ಈ ವರ್ಷ ಯುಗಾದಿ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಬರುತ್ತದೆ. ಯಾವ ಸ್ಥಳಗಳಲ್ಲಿ ಮಳೆ ಬರುತ್ತದೆ ಎನ್ನುವ ವಿವರವನ್ನು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುತ್ತದೆ. ಇನ್ನು ಹಲವು ಜಿಲ್ಲೆಗಳಲ್ಲಿ ಮಿತಿಮೀರಿದ ತಾಪಮಾನ ದಾಖಲಾಗಿದೆ.

ತುಂಬಾ ಹೆಚ್ಚಿನ ಉಷ್ಣಾಂಶ ರಾಜ್ಯದಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ದಾಖಲಾಗಿದೆ. ಉದ್ಯಾನ ನಗರಿ ಎಂದೆ ಖ್ಯಾತಿ ಪಡೆದಿರುವ ಬೆಂಗಳೂರು ಸಹ ಇದೀಗ, ಇರುವ ಅತಿ ಅಧಿಕವಾದ ತಾಪಮಾನಕ್ಕೆ ಬೆಂದು ಬೆಂಡಾಗಿ ಹೋಗಿದೆ. ಇನ್ನು ಬರುವ ಮೂರು ವಾರ ಕೂಡ ಇದೆ ವಾತಾವರಣ ಮುಂದುವರೆಯುತ್ತದೆ. ಇದಾದ ನಂತರದ ದಿನಗಳಲ್ಲಿ ಬಹುತೇಕ ರಾಜ್ಯದ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಮುಂಬರುವ ಎರಡು ವಾರಗಳ ಸಮಯ ಬಿರು ಬಿಸಿಲು :-ಮುಂಬರುವ ಎರಡು ವಾರಗಳ ಸಮಯ ರಾಜ್ಯದಲ್ಲಿ ಬಿರು-ಬಿಸಿಲಿನ ಉಷ್ಣ ಹವೆ ಹೆಚ್ಚಾಗುತ್ತಿರುವ ಕಾರಣ ಬರಗಾಲದ ಬವಣೆ ಮತ್ತಷ್ಟು ಹೆಚ್ಚಾಗಿ ಮುಂದುವರೆಯುತ್ತದೆ, ಎಂದು ಹವಾಮಾನ ಇಲಾಖೆ ವಿವರ ನೀಡಿದೆ.

ಏಪ್ರಿಲ್ 15ರ ತನಕ ಉಷ್ಣಾಂಶ ಏರಿಕೆ ಇದೇ ರೀತಿ, ಇರುವ ಕಾರಣಕ್ಕಾಗಿ ಕಟ್ಟೆಚ್ಚರ ವಹಿಸಲು ಜಿಲ್ಲಾ ಆಡಳಿತಗಳಿಗೆ ಗವರ್ನಮೆಂಟ್ ಸೂಚನೆ ನೀಡಿದ್ದು, ರಾಜ್ಯದ ಪರಿಸ್ಥಿತಿಯ ಮೇಲೆ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕೋಶ ಹೆಚ್ಚು ನಿಗ ವಹಿಸಿದೆ.

ಪೂರ್ವ ಮುಂಗಾರು ಮಳೆ ರಾಜ್ಯಕ್ಕೆ ವರ ಆಗಲಿದೆ :-ಪೂರ್ವ ಮುಂಗಾರು ಮಳೆ ರಾಜ್ಯಕ್ಕೆ ವರವಾಗುತ್ತದೆ. ಭಾರತೀಯ ಹವಾಮಾನ ಇಲಾಖೆ ಅಂದಾಜು ಮಾಡಿರುವ ಪ್ರಾಕಾರ ಏಪ್ರಿಲ್ ತಿಂಗಳಿನ 3ನೇ ವಾರದ ನಂತರ ರಾಜ್ಯದಲ್ಲಿ ತಾಪಮಾನ ಸುಧಾರಣೆಯ ಸ್ಥಿತಿಗೆ ಬರುತ್ತದೆ.

ರಾಜ್ಯದ ಪಾಲಿಗೆ ಪೂರ್ವ ಮುಂಗಾರಿನ ಮಳೆ ವರದಾನ ಆಗುವ ಭರವಸೆ ವ್ಯಕ್ತ ಆಗುತ್ತಿದೆ. ಏಕೆಂದರೆ, ರಾಜ್ಯದಲ್ಲಿ ಅಲ್ಲಲ್ಲಿ ವಾಡಿಕೆಯ ಮಳೆ ಗಿಂತ ಹೆಚ್ಚಿಗೆ ಬೇಸಿಗೆ ಮಳೆ ಮಾರ್ಚ್ ತಿಂಗಳಲ್ಲಿ ಉಂಟಾಗಿದೆ. 9 ಮಿಲಿಮೀಟರ್ ಬೇಸಿಗೆ ಮಳೆ ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಉಂಟಾಗುತ್ತದೆ. ಆದರೆ, ಈ ವರ್ಷ 10 ಮಿಲಿಮೀಟರ್ ಮಳೆಯಾಗಿದ್ದು, ಮುಂದೆ ಬರುವ ದಿನಗಳಲ್ಲಿ ತಾಪಮಾನ ಏರಿಕೆಯಿಂದ ಮಳೆಯ ಪ್ರಮಾಣ ಉತ್ತಮವಾಗಿ ಇರುತ್ತದೆ ಎನ್ನುವ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಈ ಜಿಲ್ಲೆಗಳಲ್ಲಿ ಹಗುರ ಮಳೆ :-ಮಾರ್ಚ್ 30 ಹಾಗೂ 31 ರಂದು ಅಂದರೆ ಮಾರ್ಚ್ ತಿಂಗಳ ಅಂತ್ಯಕ್ಕೆ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಹಾಸನ, ಶಿವಮೊಗ್ಗ, ಕೊಡಗು, ಮೈಸೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ.

ಯುಗಾದಿ ಮಳೆ ಹಬ್ಬ ಈ ವರ್ಷ :- ಭಾರತೀಯರ ಪಾಲಿಗೆ ಸಾಮಾನ್ಯವಾಗಿ ಯುಗಾದಿ ಹೊಸ ವರ್ಷವಾಗಿದ್ದು. ಹೊಸ ಚಿಗುರಿನ ಜೊತೆಗೆ ಪ್ರಕೃತಿ ದೇವತೆ ಕಣ್ಣಿಗೆ ಹಬ್ಬದೂಟ ನೀಡುವಳು ಎಂದೇ ಹೇಳಬಹುದು. ಯುಗಾದಿ ಸಮೀಪಕ್ಕೆ ಈ ವರ್ಷ ಮಳೆಯ ಸಿಂಚನ ಆಗುತ್ತದೆ.

ಈ ಯುಗಾದಿಯಂದು ಮಳೆಯ ಹಬ್ಬವೇ ಆಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಂದಾಜು ಮಾಡಿದೆ. ಏಪ್ರಿಲ್ ತಿಂಗಳಿನಲ್ಲಿ ಎರಡು ವಾರ ಅಂದಾಜಿನಂತೆ ಬಿಸಿಲು ಮತ್ತು ಒಣ ಹವೆ ಮತ್ತಷ್ಟು ತೀವ್ರ ಆಗುತ್ತದೆ. ಯುಗಾದಿ ಆಸುಪಾಸಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಹಿಸುತ್ತದೆ. ಪೂರ್ವ ಮುಂಗಾರು ಎರಡು ಮೂರು ವಾರಗಳ ನಂತರ ಉತ್ತಮವಾಗಿ ಬರುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗಿದೆ.

ಒಟ್ಟಾರೆಯಾಗಿ ರಾಜ್ಯದಲ್ಲಿ ಪೂರ್ವ ಮುಂಗಾರು ಏಪ್ರಿಲ್ ತಿಂಗಳಲ್ಲಿ ಅಂದರೆ ಯುಗಾದಿಯ ಸಂದರ್ಭದಲ್ಲಿ ಆರಂಭ ಆಗುವುದರ ಬಗ್ಗೆ ತಿಳಿಸಿದ್ದು. ರಾಜ್ಯದ ರೈತರಿಗೆ ಪೂರ್ವ ಮುಂಗಾರು ಮಳೆ ವರದಾನವಾಗಲಿದೆ ಎಂದು ಅವಮಾನ ಇಲಾಖೆ ವರದಿ ಮಾಡಿದೆ.

Leave a Reply

Your email address will not be published. Required fields are marked *