Ragi benefits for body: ರಾಗಿ ಮನುಷ್ಯನಿಗೆ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು. ರಾಗಿಯಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ. ನೀವು ಪ್ರತಿನಿತ್ಯ ಒಮ್ಮೆಯಾದ್ರೂ ರಾಗಿ ಮುದ್ದೆ, ದೋಸೆ, ರೊಟ್ಟಿ, ಅಥವಾ ಉಪ್ಪಿಟ್ಟನ್ನು ಸೇವಿಸಿದ್ರೆ ಒಳ್ಳೆಯದು. ರಾಗಿ ಸೇವನೆಯಿಂದ ಆರೋಗ್ಯಕ್ಕೆ ಸಿಗಲಿದೆ ಹಲವಾರು ಪ್ರಯೋಜನ. ಸಿರಿಧಾನ್ಯಗಳಲ್ಲಿ ಒಂದಾಗರುವ ರಾಗಿಯನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ ಆರೋಗ್ಯಕ್ಕೆ ಹಲವು ಲಾಭಗಳು ಸಿಗುತ್ತದೆ. ಇದು ದೇಹಕ್ಕೆ ತಂಪು ಮತ್ತು ಶಕ್ತಿಯನ್ನು ನೀಡುವುದರ ಜೊತೆಗೆ ಹಲವು ರೋಗಗಳನ್ನು ನಿವಾರಿಸುವ ಶಕ್ತಿ ರಾಗಿಗೆ ಇದೆ. ನಮ್ಮ ಆಹಾರ ಪದ್ದತಿಯಲ್ಲಿ ರಾಗಿ ಬಳಕೆ ಮಾಡುವುದರಿಂದ ಹಲವಾರು ಲಾಭಗಳು ಸಿಗಲಿದೆ.

Ragi benefits for body

ರಾಗಿಯ ಅಡುಗೆಗಳನ್ನು ಮಕ್ಕಳಿಂದ ಹಿಡಿದು ವಯಸ್ಸಾದವ ರವರೆಗೆ ಯಾರು ಬೇಕಾದರೂ ತಿನ್ನಬಹುದು. ರಾಗಿಯು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತೆ. ಅದಕ್ಕೆ ಪ್ರತಿದಿನ ರಾಗಿ ಮುದ್ದೆ ಸೇವಿಸಿ. ಆರೋಗ್ಯ ತಜ್ಞರ ಪ್ರಕಾರ ರಾಗಿಯು ಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತದೆ. ಕಾರ್ಬೊಹೈಡ್ರೇಟ್ ಅಂಶಗಳನ್ನು ಹೊಂದಿರುವ ಆಹಾರ ಪದಾರ್ಥವಾಗಿದೆ. ಆದ್ದರಿಂದ ಇದು ಸಕ್ಕರೆ ಕಾಯಿಲೆ ಇರುವವತರಿಗೆ ತುಂಬಾ ಒಳ್ಳೆಯದು.

ರಾಗಿಯನ್ನು ಯಾವುದೇ ಸಂಸ್ಕರಣೆ ಮಾಡದೇ ಜನರು ಸೇವನೆ ಮಾಡುತ್ತಾರೆ. ಅದಕ್ಕೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಾಗಿಯಲ್ಲಿ ಪಾಲಿಫಿನಾಲ್ ಅಂಶಗಳು ಸಾಕಷ್ಟು ಕಂಡುಬರುತ್ತದೆ ಮತ್ತು ಕ್ಯಾಲ್ಸಿಯಂ ಜೊತೆಗೆ ಅಗತ್ಯವಾದ ಅಮೈನೋ ಆಮ್ಲಗಳು ಇದರಲ್ಲಿ ಹೆಚ್ಚಾಗಿವೆ. ರಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಅತ್ಯುತ್ತಮವಾಗಿ ನಿರ್ವಹಿಸಿಕೊಳ್ಳಲು ಅನುಕೂಲವಾಗುತ್ತದೆ. ಅಲ್ಲದೇ ಕೊಲೆಸ್ಟ್ರಾಲ್ ಅಂಶಗಳು ಸಹ ಕಡಿಮೆಯಾಗುತ್ತದೆ.

ಇದನ್ನೂ ಓದಿ..ಪ್ರತಿದಿನ ಬೇವಿನ ಎಲೆ ತಿನ್ನುವುದರಿಂದ ನಮ್ಮ ದೇಹದ ಒಳಗೆ ಏನಾಗುತ್ತೆ ಗೊತ್ತಾ, ನೀವೇ ನೋಡಿ

ಇದು ಶುಗರ್ ಇರೋರಿಗೆ ಒಳ್ಳೆಯದು ರಾಗಿ ಮುದ್ದೆ, ರಾಗಿ ರೊಟ್ಟಿ, ರಾಗಿ ಉಪ್ಪಿಟ್ಟು, ರಾಗಿ ದೋಸೆ, ಅಂಬಲಿ, ಸ್ವೀಟ್ ಏನು ಬೇಕಾದ್ರೂ ಮಾಡಿ, ರಾಗಿ ಆಹಾರ ಪದಾರ್ಥ ಸೇವಿಸಬಹುದು. ಕೆಲವರಿಗೆ ಮುದ್ದೆ ಊಟ ಇಷ್ಟ ಆಗಲ್ಲ. ಅಂತವರು ದೋಸೆ, ರೊಟ್ಟಿ ಮಾಡಿ ತಿನ್ನಬಹುದು ರಾಗಿಯು ನಾರಿನ ಅಂಶವನ್ನು ಒಳಗೊಂಡಿದ್ದು, ಜೀರ್ಣ ಪ್ರಕ್ರಿಯೆ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತೆ. ನಿಮಗೆ ಹೊಟ್ಟೆನೋವು, ಗ್ಯಾಸ್‍ಸ್ಟ್ರಿಕ್ಟ್ ನಂತಹ ಸಮಸ್ಯೆ ಕಾಡುವುದಿಲ್ಲ.

ರಾಗಿ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ. ಮನುಷ್ಯನ ದೇಹಕ್ಕೆ 60% ಕಾರ್ಬೋಹೈಡ್ರೇಟ್ ಅಂಶದ ಅವಶ್ಯಕತೆಯನ್ನು ರಾಗಿ ಪೂರೈಸುತ್ತದೆ. ಅದಕ್ಕೆ ರಾಗಿ ಸೇವನೆ ಒಳ್ಳೆಯದು ರಾಗಿ ಸಹ ಗೋಧಿಯಂತೆ ತುಂಬಾ ಒಳ್ಳೆಯದು. ಲೆಸಿಥಿನ್ ಮತ್ತು ಮೆಥಿಯೋನಿನ್ ಎನ್ನುವ ಅಮಿನೋ ಆಮ್ಲವು ಇದರಲ್ಲಿದ್ದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಇದು ತಗ್ಗಿಸುವುದು ಹಾಗೂ ಯಕೃತ್ ಗೆ ಕೊಬ್ಬು ಕರಗಿಸಲು ನೆರವಾಗುವುದು. ಟ್ರೈಪ್ಟೊಫಾನ್ ಎನ್ನುವ ಮತ್ತೊಂದು ಅಮಿನೋ ಆಮ್ಲವು ಹಸಿವು ತಗ್ಗಿಸುವುದು.

ರಾಗಿಯಲ್ಲಿ ಇರುವಂತಹ ಕಬ್ಬಿಣಾಂಶವು ರಕ್ತಹೀನತೆ ನಿವಾರಣೆ ಮಾಡಲು ನೆರವಾಗುವುದು ಹಾಗೂ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಣೆ ಮಾಡುವುದು. ಇದರಲ್ಲಿ ನೈಸರ್ಗಿಕ ಕಬ್ಬಿಣಾಂಶ ಮತ್ತು ವಿಟಮಿನ್ ಸಿ ಇದ್ದು, ಇದರಿಂದ ಕಬ್ಬಿಣಾಂಶವು ಬೇಗನೆ ಹೀರಿಕೊಳ್ಳುವುದು. ಗ್ಲುಟೇನ್ ಸೂಕ್ಷ್ಮತೆ ಇರುವವರಿಗೆ ರಾಗಿಯು ವರದಾನವಾಗಿದೆ. ಬೇರೆ ಧಾನ್ಯಗಳಲ್ಲಿ ಗ್ಲುಟೇನ್ ಅಂಶವು ಇದ್ದು, ರಾಗಿಯಲ್ಲಿ ಇದು ಶೂನ್ಯವಾಗಿದೆ. ಟ್ರೈಪ್ಟೊಫಾನ್ ಎನ್ನುವ ಅಮಿನೋ ಆಮ್ಲವು ರಾಗಿಯಲ್ಲಿ ಅಧಿಕ ಮಟ್ಟದಲ್ಲಿದ್ದು, ಇದು ನರ ವ್ಯವಸ್ಥೆಯನ್ನು ಉತ್ತಮಪಡಿಸುವುದು ನೆನಪಿನ ಶಕ್ತಿ ಉತ್ತೇಜಿಸುವುದು ಮತ್ತು ಮನಸ್ಸನ್ನು ಶಾಂತವಾಗಿಸುವುದು.

ಇದನ್ನೂ ಓದಿ..ಸಕ್ಕರೆ ಕಾಯಿಲೆ ಇರೋರು ನುಗ್ಗೆ ಸೊಪ್ಪು ಬಳಸುವುದರಿಂದ ಏನಾಗುತ್ತೆ ಗೊತ್ತಾ..

ರಾಗಿಯು ಆತಂಕ ಮತ್ತು ನಿದ್ರಾಹೀನತೆ ಕಡಿಮೆ ಮಾಡಿ ಆರೋಗ್ಯಕಾರಿ ನಿದ್ರೆ ನೀಡುವುದು. ರಾಗಿಯಲ್ಲಿ ಇರುವಂತಹ ಟ್ರೈಪ್ಟೊಫಾನ್ ಅಂಶವು ನರಪ್ರೇಕ್ಷಕಗಳಲ್ಲಿ ಸೆರೊಟೊನಿನ್ ಮಟ್ಟವನ್ನು ಸಮತೋಲನಕ್ಕೆ ತರುವುದು. ಪ್ರತಿದಿನ ನಿಮ್ಮ ಊಟದಲ್ಲಿ ರಾಗಿ ಆಹಾರವನ್ನು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಿ. ಆಗ ನೀವು ಆರೋಗ್ಯವಾಗಿ ಇರುತ್ತೀರಿ. ರಾಗಿ ತಿಂದವನಿಗೆ ರೋಗ ಇಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!