Nugge Soppu: ನುಗ್ಗೆ ಸೊಪ್ಪು ಔಷಧಿ ಗುಣವನ್ನು ಹೊಂದಿದೆ ಇದರ ಅನುಕೂಲತೆ ಜನರಿಗೆ ತಿಳಿಸಬೇಕೆನ್ನುವುದು ನಮ್ಮ ಆಶಯ. ನುಗ್ಗೆ ಸೊಪ್ಪಿನ ಪೌಡರ್ ಸಕ್ಕರೆ ಕಾಯಿಲೆಗೆ ಒಳ್ಳೆಯ ಮದ್ದು. ನುಗ್ಗೆ ಸೊಪ್ಪಿನ ಪುಡಿಯನ್ನ ಶಾಂಪು ಕಂಪನಿಗೆ ಕಳಸಲಾಗುತ್ತದೆ ಹೆಚ್ಚು ಉಳಿದ ಸೊಪ್ಪನ್ನ ದನ ಮತ್ತು ಕುರಿಗೆ ಹಾಕಬಹುದು ಇದನ್ನು ಹಾಕುವುದರಿಂದ ಒಳ್ಳೆಯ ಪೌಷ್ಟಿಕಾಂಶ ಮತ್ತು ಕೊಬ್ಬಿನ ಅಂಶ ಸಿಗುತ್ತದೆ ಇದನ್ನು ಹಾಕುವುದರಿಂದ ಹಿಂಡಿ,ಬೂಸಾವನ್ನು ಕಡಿಮೆ ಹಾಕಬಹುದು.

ನುಗ್ಗೆ ಸೊಪ್ಪಿನ ಖಾಲಿ ಎಲೆಯನ್ನ‌ ಒಣಗಿಸಿ ಕಂಪನಿಗೆ ಕೊಡುತ್ತಾರೆ ಕಂಪನಿಯವರು ಎಣ್ಣೆಗೆ, ಔಷಧಿಗೆ ಮತ್ತು ಶಾಂಪೂ ತಯಾರಿಸಲು ಬಳಸುತ್ತಾರೆ. ನುಗ್ಗೆ ಸೊಪ್ಪನ್ನ ಮೂರು ತಿಂಗಳಿಗೊಮ್ಮೆ ಕಟಾವು ಮಾಡಲಾಗುತ್ತದೆ. ಸೊಪ್ಪನ್ನು ಒಣಗಿಸಿ ಮಿಲ್ಲಿಗೆ ಹಾಕಿ ಪುಡಿ ಮಾಡಿ ಸೇವನೆ ಮಾಡುತ್ತಾರೆ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಯಾರು ಬೇಕಿದ್ದರೂ ಈ ಸೊಪ್ಪಿನ ಪುಡಿಯನ್ನು ಸೇವನೆ ಮಾಡಬಹುದು ಮುಖ್ಯವಾಗಿ BP, ಸಕ್ಕರೆ ಕಾಯಿಲೆ ಇದ್ದಂತವರು ಬೆಳಿಗ್ಗೆ ಹೊತ್ತು ಬಿಸಿ ನೀರಲ್ಲಿ ಪುಡಿಯನ್ನು ಹಾಕಿ ಕುದಿಸಿ ಒಂದು ಚಿಟಿಕೆ ಅರಿಶಿನ ಹಾಕಿ ಕುಡಿಯುವುದು ಒಳ್ಳೆಯದು. ಇದನ್ನು ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಔಷಧಿ ತೆಗೆದುಕೊಳ್ಳುವ ಅವಶ್ಯಕತೆ ಬರುವುದಿಲ್ಲ. ಈ ನುಗ್ಗೆ ಸೊಪ್ಪಿನ ಪುಡಿ ಬಹಳ ಬೆಲೆಬಾಳುತ್ತದೆ. ಒಂದು ಕೆಜಿ ಪುಡಿಗೆ 300 ರುಪಾಯಿ. ನುಗ್ಗೆ ಸೊಪ್ಪು ನ ಪುಡಿಯನ್ನು ಬಳಸುವುದರಿಂದ ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ.

Leave a Reply

Your email address will not be published. Required fields are marked *