ಅಭಿಮಾನಿಗಳೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ರಾಧಿಕಾ ಪಂಡಿತ್

0 0

ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಗೆ ಹುಟ್ಟುಹಬ್ಬದ ಸಂಭ್ರಮ. ರಾಧಿಕಾ ಪ್ರತಿವರ್ಷ ತನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಅಭಿಮಾನಿಗಳಲ್ಲಿದೆ, ಕುಟುಂಬದವರ ಜೊತೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ ಮೊಗ್ಗಿನ ಮನಸ್ಸಿನ ಹುಡುಗಿ, ಗಜ ಕೇಸರಿಯ ಹೃದಯ ಕದ್ದ ಸಿಂಡ್ರೆಲಾ ರಾಧಿಕಾ ಪಂಡಿತ್ ಮಾರ್ಚ್‌ 7ರಂದು 35ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟ ನಂತರದಿಂದ ರಾಧಿಕಾ ಪ್ರತಿ ವರ್ಷವೂ ಹುಟ್ಟು ಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಾರೆ. ಆದರೆ ಈ ವರ್ಷ ಮನೆಯಲ್ಲಿ ಇಬ್ಬರು ಮಕ್ಕಳು (ಐರಾ ಮತ್ತು ಯಾಥರ್ವ) ಹಾಗೂ ಕೊರೋನಾ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುವುದಾಗಿ ಯಶ್ ಹೇಳಿದ್ದು, ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಎರಡು ಮುದ್ದಾದ ಮಕ್ಕಳ ತಾಯಿ ರಾಧಿಕಾ ಈ ವರ್ಷ ಸಹ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಎಲ್ಲರಾ ಜೊತೆ ಹುಟ್ಟುಹಬ್ಬ ಆಚರಣೆ ಮಾಡಬೇಕು ಎನ್ನುವ ಆಸೆ ಇದ್ದರೂ ಸಹ ನಿಮ್ಮಲ್ಲರ ಆರೋಗ್ಯದ ದೃಷ್ಟಿಯಿಂದ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿ, ಸಾಧ್ಯವಾದಷ್ಟು ಪ್ರತಿಕ್ರಿಯೆ ನೀಡುವುದಾಗಿ ಹೇಳಿ ಅಭಿಮಾನಿಗಳಿಗೆ ಪ್ರೀತಿಯ ಪತ್ರ ಬರೆದಿದ್ದಾರೆ.

ಪ್ರತಿ ವರ್ಷ ಬೇರೆ ಜಾಗಗಳಿಂದ ಬೇರೆ ಊರಿನಿಂದ ನನ್ನ ಹುಟ್ಟಿದ ಹಬ್ಬ ಆಚರಣೆ ಮಾಡಲು ಭೇಟಿ ಮಾಡಲು ಬರುತ್ತಿದ್ದಿರಿ. ಕಳೆದ ಎರಡು ವರ್ಷಗಳಿಂದ ಇದು ಸಾಧ್ಯವಾಗಲಿಲ್ಲ. ಕೊರೊನಾ ಎಲ್ಲೆಡೆ ಇರುವುದರಿಂದ ನಮ್ಮ ನಿಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ನಿಮ್ಮನ್ನ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲವೆಂದು ತುಂಬಾ ಕಾಡುತ್ತಿದೆ. ಈ ಬಾರಿ ಯಾವುದೇ ಆಚರಣೆ ಮನೆಯ ಬಳಿ ಇರುವುದಿಲ್ಲ. ದಯವಿಟ್ಟು ಯಾರು ಬೇಜಾರಾಗಬೇಡಿ. ಆದರೂ ನಿಮ್ಮ ಎಲ್ಲಾ ಸೋಷಿಯಲ್ ಮೀಡಿಯಾ ಮೆಸೇಜ್ ನೋಡುತ್ತೇನೆ, ಸಾಧ್ಯವಾದಷ್ಟು ರಿಪ್ಲೈ ಕೊಡುತ್ತೇನೆ. ಎಲ್ಲರ ಪ್ರೀತಿಗೂ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ನಿಮ್ಮ ರಾಧಿಕಾ ಪಂಡಿತ್ ಎಂದು ಹೇಳಿದ್ದಾರೆ.

ಕನ್ನಡದ ಟಾಪ್ ನಟಿಯಾಗಿ, ಅಪ್ಪಟ ಕನ್ನಡದ ನಟಿಯಾಗಿಯೇ ಉಳಿದುಕೊಂಡ ರಾಧಿಕಾ ಪಂಡಿತ್ ಅವರಿಗೆ ಜನ್ಮದಿನದ ಶುಭಾಶಯಗ ಮಹಾಪೂರವೇ ಹರಿದುಬರುತ್ತಿವೆ. ಸಂಸಾರ ಬಂಧನದಲ್ಲಿ, ಮಕ್ಕಳೊಂದಿಗೆ ಬ್ಯುಸಿಯಾಗಿದ್ದರೂ ರಾಧಿಕಾ ಅವರ ಅಭಿಮಾನಿಗಳೇನೂ ಕಡಿಮೆಯಾಗಿಲ್ಲ. ಅವರು ಚಿತ್ರರಂಗಕ್ಕೆ ರೀ ಎಂಟ್ರಿ ಕೊಡಲಿ ಎನ್ನುವುದು ಅಭಿಮಾನಿಗಳ ಬಯಕೆಯಾಗಿದೆ. ಅಭಿಮಾನಿಗಳ ಆಸೆಯಂತೆ ರಾಧಿಕಾ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗುತ್ತಾರಾ, ಮತ್ತೆ ಬಣ್ಣ ಹಚ್ಚುತ್ತಾರಾ ಎನ್ನುವುದು ಅಭಿಮಾನಿಗಳ ಕುತೂಹಲ. ಸದ್ಯ ರಾಧಿಕಾ ಇಬ್ಬರು ಮುದ್ದಾದ ಮಕ್ಕಳ ಆರೈಕೆಯಲ್ಲಿ ನಿರತರಾಗಿದ್ದಾರೆ.

ಜ್ಯೋತಿಷ್ಯ: ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ
ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

Leave A Reply

Your email address will not be published.