ಭಾರತದಲ್ಲಿ ಇದೀಗ ಕಡಿಮೆ ಬೆಲೆ 7 ರೂಪಾಯಿಗೆ 100 ಕಿ.ಮೀ ಮೈಲೇಜ್ ಕೊಡೊ ಬೈಕ್

0 4

ಬಹಳಷ್ಟು ಜನರು ಬಡತನ ಅನುಭವಿಸುತ್ತಿದ್ದು ಬೈಕ್ ಹೊಡೆಯುವ ಆಸೆ ಇದ್ದರೂ ಬೈಕ್ ಖರೀದಿಸಲು ಆಗುತ್ತಿರಲಿಲ್ಲ ಆದರೆ ಈಗ ಭಾರತದಲ್ಲಿ ಕಡಿಮೆ ಬೆಲೆಗೆ ಬೈಕ್ ಸಿಗುತ್ತದೆ. ಆ ಬೈಕ್ ಹೆಸರೇನು, ಅದರ ಬೆಲೆ ಹೀಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಬೈಕ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಬೈಕ್ ಎಂದರೆ ಇಷ್ಟ. ಯುವಕರಿಗಂತೂ ಬೈಕ್ ಕ್ರೇಜ್ ಹೆಚ್ಚಾಗಿ ಇರುತ್ತದೆ. ಸಾಮಾನ್ಯವಾಗಿ ಲಾಂಗ್ ಡ್ರೈವ್ ಹೋಗುವುದೆಂದರೆ ಬಹಳ ಜನರಿಗೆ ಇಷ್ಟವಿರುತ್ತದೆ. ಆದರೆ ಬೈಕ್ ಖರೀದಿಸಲು ಹಣವಿರುವುದಿಲ್ಲ ಆದ್ದರಿಂದ ಕಡಿಮೆ ಬೆಲೆಯಲ್ಲಿ ಸುಲಭವಾಗಿ ಸಿಗುವಂತೆ ಭಾರತದಲ್ಲಿಯೇ ಬೈಕ್ ತಯಾರಿಸಿದ್ದಾರೆ.
ನಮ್ಮ ದೇಶ ಭಾರತದಲ್ಲಿಯೇ ಲಾಂಚ್​ ಆದ ಈ ಬೈಕ್​ ಜನರಿಗೆ ಕೈಗೆಟಕುವ ದರದಲ್ಲಿ ಅಂದರೆ ಕಡಿಮೆ ಬೆಲೆಯಲ್ಲಿ ಸಿಗುವಂತೆ ತಯಾರಿಸಿದ್ದಾರೆ.

ಹೈದರಾಬಾದ್​ ಮೂಲದ ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟಪ್​, ಆಟೊಮೊಬೈಲ್ ಪ್ರೈವೇಟ್​ ಲಿಮಿಟೆಡ್​ ಕಂಪನಿಯವರು ಸೇರಿ ಆಟಮ್​ 1.0 ಎಲೆಕ್ಟ್ರಿಕ್​ ಬೈಕ್​ನ್ನು ತಯಾರಿಸಿದ್ದು ಅದರಲ್ಲಿ ಆಟೋಮೊಬೈಲ್‌ನ ಆನ್‌ಲೈನ್ ಪೋರ್ಟಲ್ ಮೂಲಕ ಭಾರತದಾದ್ಯಂತ ವೆಚ್ಚ, ಪರಿಣಾಮಕಾರಿ ಕೆಫೆ, ರೇಸರ್ ಶೈಲಿಯ ಎಲೆಕ್ಟ್ರಿಕ್ ಬೈಕ್ ಲಭ್ಯವಿದ್ದು, ಇದರ ಬೆಲೆ ಕೇವಲ 50,000 ರೂಪಾಯಿ ಮಾತ್ರ. ಪೋರ್ಟಬಲ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ನಿಯಂತ್ರಿಸಲ್ಪಡುವ ಈ ಬೈಕ್ 4 ಗಂಟೆಗಳಲ್ಲಿ ಚಾರ್ಜ್ ಆಗುತ್ತದೆ, ಅಲ್ಲದೆ ಈ ಬೈಕ್ ನ ವಿಶೇಷವೆಂದರೆ ಆಟಮ್ 1.0 ಒಂದೇ ಚಾರ್ಜ್‌ನಲ್ಲಿ 100 ಕಿ.ಮೀ ವೇಗವನ್ನು ನೀಡುತ್ತದೆ.

ಈ ಎಲೆಕ್ಟ್ರಿಕ್ ಬೈಕ್ 2 ವರ್ಷಗಳ ಬ್ಯಾಟರಿ ಗ್ಯಾರೆಂಟಿಯೊಂದಿಗೆ ಬರುತ್ತದೆ ಮತ್ತು ಇದನ್ನು ಬೇರೆ ಬೇರೆ ಭಾಗಗಳನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ. ಹೆಚ್ಚುವರಿಯಾಗಿ ಆಟಮ್ 1.0 ಗೆ ನೋಂದಣಿ ಅಗತ್ಯವಿಲ್ಲ ಮತ್ತು ಅದನ್ನು ಚಾಲನೆ ಮಾಡುವ ವ್ಯಕ್ತಿಗೆ ಲೈಸೆನ್ಸ್​ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಹದಿಹರೆಯದವರು ಪ್ರಯಾಣಿಸಲು ಈ ವಾಹನವನ್ನು ಕಾನೂನುಬದ್ಧವಾಗಿಯೂ ಬಳಸಬಹುದಾಗಿದೆ. ಆಟಮ್ 1.0 ಆದ ಈ ಬೈಕ್ 6 ಕೆಜಿ ತೂಕದ ಪೋರ್ಟಬಲ್ ಬ್ಯಾಟರಿ ಪ್ಯಾಕ್​ನೊಂದಿಗೆ ತನ್ನ ಕಾರ್ಯನಿರ್ವಹಿಸುತ್ತಿದೆ. ಬೈಕ್ ಪ್ರತಿ ಚಾರ್ಜ್‌ಗೆ ಸುಮಾರು 1 ಯುನಿಟ್ ಬಳಕೆಯಾಗುತ್ತದೆ. ಈ ಬೈಕ್ ಉಳಿದ ಬೈಕ್‌ಗಳಿಗೆ ಹೋಲಿಸಿದರೆ ದಿನಕ್ಕೆ 7-10 ರೂಪಾಯಿಗೆ 100 ಕಿಲೋಮೀಟರ್‌ ಓಡುತ್ತದೆ. ಇಷ್ಟು ಕಡಿಮೆ ಬೆಲೆಗೆ ಬೈಕ್ ಸಿಗುತ್ತಿರುವುದು ಸಂತೋಷ ಕೊಟ್ಟಿದೆ. ಹೆಚ್ಚಿನ ಜನರು ಬೈಕ್ ಖರೀದಿಸಲಿ. ಬೈಕ್ ಖರೀದಿಸುವ ಕನಸು ಹೊಂದಿರುವವರು ತಪ್ಪದೆ ಈ ಮಾಹಿತಿಯನ್ನು ಓದಿ ಮತ್ತು ಇದರ ಉಪಯೋಗ ಪಡೆಯಿರಿ.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

Leave A Reply

Your email address will not be published.