ರಾಕಿಂಗ್ ಸ್ಟಾರ್ ಯಶ್ ಜೀವನದ ಅಪರೂಪದ ಫೋಟೋಗಳು ನೋಡಿ

0 0

ಕನ್ನಡ ಚಿತ್ರರಂಗದಲ್ಲಿ ಯಶ್ ಅವರನ್ನು ರಾಕಿಂಗ್ ಸ್ಟಾರ್ ಎಂದು ಕರೆಯಲಾಗುತ್ತದೆ. ಇವರು ಮಾಡಿದ ಸಿನೆಮಾಗಳೆಲ್ಲಾ ಸುಮಾರು ಹಿಟ್ ಆಗಿವೆ ಎಂದರೂ ತಪ್ಪಿಲ್ಲ. ಯಶ್ ರಾಧಿಕಾ ಪಂಡಿತ್ ಅವರ ಜೊತೆ ಒಂದು ಧಾರಾವಾಹಿಯಲ್ಲಿ ನಟನೆ ಮಾಡಿದ್ದರು. ಹಾಗೆಯೇ ಮುಂದೆ ಅದೇ ಜೋಡಿ ಮೊಗ್ಗಿನ ಮನಸು ಎಂಬ ಸಿನೆಮಾ ಮಾಡಿ ಬಹಳ ಪ್ರಸಿದ್ಧಿಯಾಯಿತು. ಈಗ ಯಶ್ ಅವರ ಕೆ.ಜಿ.ಎಫ್. ಭಾಗ-2 ಈ ಸಿನೆಮಾಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ನಾವು ಇಲ್ಲಿ ಯಶ್ ಅವರ ಚಿಕ್ಕಂದಿನಿಂದಲೂ ಇರುವ ಫೋಟೋಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಯಶ್ ಅವರು ಜನವರಿ 8 1989 ರಲ್ಲಿ ಜನಿಸಿದರು. ಇವರ ಮೊದಲ ಹೆಸರು ನವೀನ್ ಕುಮಾರ್ ಆಗಿತ್ತು. ಭಾರತ ದೇಶದ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಭುವನಹಳ್ಳಿ ಎಂಬಲ್ಲಿ ಜನಿಸಿದರು. ಇವರು ಅಪ್ಪಟ ಭಾರತೀಯ ಆಗಿದ್ದಾರೆ. ಭಾರತೀಯ ಚಲನಚಿತ್ರ ನಟ ಮತ್ತು ಮುಖ್ಯವಾಗಿ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಲನ ಚಿತ್ರಗಳಲ್ಲಿ ಅಭಿನಯಿಸುವ ಮೊದಲು ಇವರು ರಂಗಕಲೆ ಮತ್ತು ನಾಟಕಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಹಾಗೆಯೇ ದೂರದರ್ಶನಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು.

2007ರಲ್ಲಿ ಜಂಭದ ಹುಡುಗಿ ಎಂಬ ಸಿನಿಮಾಕ್ಕೆ ಪ್ರವೇಶವನ್ನು ಮಾಡಿದರು. ಈ ಚಿತ್ರದಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದ್ದರು. ಮೊದಲು ಹಲವಾರು ಧಾರವಾಹಿಗಳಲ್ಲಿ ಯಶ್ ಅವರು ನಟಿಸಿದ್ದರು. ನಂತರ 2008ರಲ್ಲಿ ಮೊಗ್ಗಿನ ಮನಸ್ಸು ಎಂಬ ಸಿನಿಮಾವನ್ನು ಮಾಡಿದರು. ಈ ಸಿನಿಮಾ ಯಶಸ್ಸನ್ನು ಗಳಿಸಿತು. ಈ ಸಿನಿಮಾ ಅತ್ಯುತ್ತಮ ಪೋಷಕ ನಟ ಫಿಲಂ ಫೇರ್ ಪ್ರಶಸ್ತಿಯನ್ನೂ ತಂದುಕೊಟ್ಟಿತು. ಹಾಗೆಯೇ 2010ರಲ್ಲಿ ಮೊದಲಾಸಲ ಎಂಬ ಸಿನೆಮಾವನ್ನು ಮಾಡಿದರು. 2011ರಲ್ಲಿ ಕಿರಾತಕ ಎಂಬ ಸಿನಿಮಾವನ್ನು ಮಾಡಿದರು.

ಹಾಗೇ ನಂತರದಲ್ಲಿ ಡ್ರಾಮಾ, ಗೂಗ್ಲಿ, ರಾಜಾಹುಲಿ ಮತ್ತು ಗಜಕೇಸರಿ ಇವೆಲ್ಲ ಸಿನಿಮಾಗಳಲ್ಲಿ ಇವರು ಮಾಡಿದರು. ಎಲ್ಲವುಗಳಲ್ಲಿ ನಾಯಕ ಪಾತ್ರವನ್ನು ವಹಿಸಿದ್ದರು. ನಂತರ ರಾಮಾಚಾರಿ ಮತ್ತು ಮಾಸ್ಟರ್ಪೀಸ್ ಎಂಬ ಸಿನಿಮಾಗಳನ್ನು ಮಾಡಿದರು. ಈಗ ಅವರಿಗೆ ಕೆಜಿಎಫ್ ಭಾಗ-1 ಬಹಳ ಹೆಸರನ್ನು ತಂದು ಕೊಟ್ಟಿದೆ. ಕೆಜಿಎಫ್ ಭಾಗ-2 ಟ್ರೈಲರ್ ರಿಲೀಸ್ ಮಾಡಿದ ಮೂರು ದಿನಕ್ಕೆ 15 ಲಕ್ಷ ನೋಟವನ್ನು ಕಂಡಿದೆ. ಆದ್ದರಿಂದ ಕೆಜಿಎಫ್ ಭಾಗ-2 ಅಭಿಮಾನಿಗಳು ಕಾಯುತ್ತಿದ್ದಾರೆ. ಹಾಗೆಯೇ ಇವರು ಚಿಕ್ಕಂದಿನಿಂದ ಬೆಳೆಯುತ್ತಾ ಹೋದಂತೆ ಇವರ ಫೋಟೋಗಳು ಇವೆ. ಅವು ಬಹಳ ಸುಂದರವಾಗಿವೆ.

Leave A Reply

Your email address will not be published.