ಜೀವನ ಎಂದರೆ ಸುಖ ದುಃಖಗಳ ಮಿಶ್ರಣ. ಹುಟ್ಟಿದ ಮನುಷ್ಯನು ಒಮ್ಮೆ ಸುಖ, ಒಮ್ಮೆ ದುಃಖ ಅನುಭವಿಸುತ್ತಾನೆ. ಯಾರಿಗೆ ಆಗಲಿ ಬಹಳ ದುಃಖವಾದರೆ ಚಾಣಕ್ಯ ಹೇಳಿರುವ ನೀತಿ ಮಾತುಗಳನ್ನು ಅನುಸರಿಸಿದರೆ ಜೀವನದಲ್ಲಿ ಎಷ್ಟೇ ಕಷ್ಟ ಎದುರಾದರೂ ಎದುರಿಸಬಹುದು. ಹಾಗಾದರೆ ಚಾಣಕ್ಯ ಹೇಳಿದ ಮಾತುಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಜೀವನದಲ್ಲಿ ನಮಗೆ ಬೇಸರವಾದಾಗ ಚಾಣಕ್ಯನ ನೀತಿ ಮಾತುಗಳನ್ನು ನೆನಪಿಸಿಕೊಳ್ಳಬೇಕು. ಬೇರೆಯವರ ತಪ್ಪುಗಳಿಂದ ನಾವು ಪಾಠ ಕಲಿಯಬೇಕು, ಎಲ್ಲ ತಪ್ಪುಗಳನ್ನು ನಾವೊಬ್ಬರೆ ಮಾಡಲು ನಮಗಿರುವ ಆಯಸ್ಸು ಸಾಲುವುದಿಲ್ಲ. ಕೆಲವೊಮ್ಮೆ ಅತಿಯಾಗಿ ಪ್ರಾಮಾಣಿಕತೆ ಒಳ್ಳೆಯದಲ್ಲ, ನೇರವಾದ ಮರಗಳು ಮೊದಲು ನೆಲಕ್ಕುರುಳುತ್ತವೆ, ಡೊಂಕು ಮರಗಳು ನಂತರ ನೆಲಕ್ಕುರುಳುತ್ತವೆ. ಹಾವು ವಿಷಯುಕ್ತವಲ್ಲದಿದ್ದರೂ ವಿಷಯುಕ್ತದಂತೆ ಬುಸುಗುಡುತ್ತಿರಬೇಕು. ಅತ್ಯಂತ ದೊಡ್ಡ ಗುರು ಮಂತ್ರವೆಂದರೆ ನಿಮ್ಮ ರಹಸ್ಯಗಳನ್ನು ಯಾರಿಗೂ ಹೇಳಬೇಡಿ, ಇದೆ ನಿಮಗೆ ಮುಳುವಾಗುತ್ತದೆ. ಪ್ರತಿ ಸ್ನೇಹದ ಹಿಂದೆ ಒಂದು ಸ್ವಾರ್ಥ ಇದ್ದೆ ಇರುತ್ತದೆ, ಸ್ವಾರ್ಥ ರಹಿತ ಸ್ನೇಹವೇ ಇಲ್ಲ ಇದು ಕಹಿಯಾದರೂ ಸತ್ಯ. ಪ್ರತಿ ಕಾರ್ಯಕ್ಕೆ ತೊಡಗುವ ಮುನ್ನ ನಮಗೆ ನಾವೇ 3 ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಈ ಕಾರ್ಯ ನಾನೇಕೆ ಮಾಡುತ್ತಿದ್ದೇನೆ, ಈ ಕಾರ್ಯದ ಫಲಗಳೆನು, ಈ ಕಾರ್ಯದಲ್ಲಿ ನಾನು ಸಫಲನಾಗುತ್ತೇನೆಯೇ ಈ ಮೂರು ಪ್ರಶ್ನೆಗಳಿಗೆ ಪ್ರಾಮಾಣಿಕವಾದ ಮತ್ತು ಸ್ಪಷ್ಟವಾದ ಉತ್ತರ ಸಿಕ್ಕರೆ ಮಾತ್ರ ಮುಂದುವರೆಯಿರಿ ಇಲ್ಲವೆಂದರೆ ಆ ಪ್ರಯತ್ನ ವ್ಯರ್ಥ. ಭಯ ನಮ್ಮ ಹತ್ತಿರ ಆವರಿಸುತ್ತಿದ್ದಂತೆ ಅದರ ಮೇಲೆ ನಾವೇ ಆಕ್ರಮಣ ಮಾಡಿ ವಿನಾಶಗೊಳಿಸಿಬಿಡಬೇಕು.

ವಿಶ್ವದ ಅತ್ಯಂತ ದೊಡ್ಡ ಶಕ್ತಿಯೆಂದರೆ ಯುವಶಕ್ತಿ ಹಾಗೂ ಯುವತಿಯ ಸೌಂದರ್ಯ. ಒಂದು ಕಾರ್ಯವನ್ನು ಕೈಗೆತ್ತಿಕೊಂಡ ಬಳಿಕ ವಿಫಲವಾಗುವ ಭಯ ಪಟ್ಟು ಮಧ್ಯಕ್ಕೆ ನಿಲ್ಲಿಸಬೇಡಿ, ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವವರೇ ಸುಖಿಗಳು. ಯಾವುದೇ ಹೂವಿನ ಸುಗಂಧ ಗಾಳಿ ಇರುವ ದಿಕ್ಕಿನಲ್ಲಿ ಮಾತ್ರ ಪಸರಿಸುತ್ತದೆ ಆದೆರೆ ಒಬ್ಬ ವ್ಯಕ್ತಿಯ ಒಳ್ಳೆಯತನ ಎಲ್ಲ ದಿಕ್ಕುಗಳಲ್ಲಿ ಪಸರಿಸುತ್ತದೆ. ದೇವರು ವಿಗ್ರಹದೊಳಗಿಲ್ಲ ನಮ್ಮ ಭಾವನೆಗಳೇ ದೇವರು, ಆತ್ಮವೇ ದೇವಸ್ಥಾನ. ಒಬ್ಬ ವ್ಯಕ್ತಿ ತನ್ನ ಕರ್ಮದಿಂದ ದೊಡ್ಡ ಮನುಷ್ಯನಾಗುತ್ತಾನೆಯೇ ಹೊರತು ಅವನ ಹುಟ್ಟಿನಿಂದಲ್ಲ. ನಿಮ್ಮ ಅಂತಸ್ತಿಕೆಗಿಂತ ಹೆಚ್ಚಿರುವ ಅಥವಾ ಕಡಿಮೆ ಇರುವ ವ್ಯಕ್ತಿಗಳೊಂದಿಗೆ ಸ್ನೇಹ ಬೆಳಸಬೇಡಿ ಎಂದಿಗೂ ಆ ಸ್ನೇಹ ಸಂತೋಷ ಕೊಡುವುದಿಲ್ಲ. ಮಗುವನ್ನು ಮೊದಲ 5 ವರ್ಷಗಳವರೆಗೆ ಮುದ್ದಾಗಿ ಸಾಕಿರಿ, ನಂತರದ ಐದು ವರ್ಷಗಳವರೆಗೆ ಮಗು ಎಸಗುವ ತಪ್ಪುಗಳನ್ನು ಬೆದರಿಸಿ ತಿದ್ದಿರಿ, ಹದಿನಾರನೇ ವಯಸ್ಸಿನಲ್ಲಿ ಸ್ನೇಹಿತರಂತೆ ಕಾಣಬೇಕು, ಬೆಳೆದ ಮಕ್ಕಳು ನಿಮ್ಮ ಅತ್ಯಂತ ನಿಕಟ ಸ್ನೇಹಿತರಾಗುತ್ತಾರೆ. ಮೂರ್ಖ ವ್ಯಕ್ತಿಗೆ ಪುಸ್ತಕಗಳು, ಅಂಧ ವ್ಯಕ್ತಿಗೆ ಕನ್ನಡಿ ಇರುವಷ್ಟೆ ನಿರುಪಯೋಗಿ. ವಿದ್ಯೆ ನಿಜವಾದ ಸ್ನೇಹಿತ, ವಿದ್ಯಾವಂತನಿಗೆ ಎಲ್ಲೆಲ್ಲೂ ಮನ್ನಣೆ ಇದೆ, ವಿದ್ಯೆ ನಿಜವಾದ ಭೂಷಣ, ವಿದ್ಯೆಯೇ ಎಂದಿಗೂ ಯೌವನ. ಚಾಣಕ್ಯರು ಹೇಳಿರುವ ಈ ನೀತಿ ಮಾತುಗಳನ್ನು ತಪ್ಪದೇ ಎಲ್ಲರೂ ಪಾಲಿಸಬೇಕು, ಪಾಲಿಸಿದಲ್ಲಿ ಜೀವನ ಸುಂದರವಾಗಿರುತ್ತದೆ. ಈ ಮಾತುಗಳನ್ನು ನಿಮ್ಮ ಸ್ನೇಹಿತರಿಗೆ, ಬಂಧುಗಳಿಗೆ, ಚಿಕ್ಕಮಕ್ಕಳಿಗೆ ತಪ್ಪದೇ ತಿಳಿಸಿ.

Leave a Reply

Your email address will not be published. Required fields are marked *