ಮನೆಯ ಗಾಜಿನ ಲೋಟದಲ್ಲಿ ನಿಂಬೆ ಹಣ್ಣನ್ನ ಇಟ್ಟು ನೋಡಿ, ಮನೆಯ ವಾತಾವರಣವೇ ಬದಲಾಗಲಿದೆ ಯಾಕೆಂದರೆ..

0 618

Lemon Benefits: ಮನೆಯಲ್ಲಿ ಗಾಜಿನ ಲೋಟದಲ್ಲಿ ನಿಂಬೆ ಹಣ್ಣನ್ನ ಇಟ್ಟು ನೋಡಿ ಚಮತ್ಕಾರವೇ ಆಗುತ್ತದೆ ಜೀವನವೇ ಬದಲಾಗುತ್ತದೆ ಎನ್ನುವ ಕುತೂಹಲಕಾರಿ ಮಾಹಿತಿಯ ಬಗ್ಗೆ ವಿವರಣೆ. ಚಿಕ್ಕ ಮಕ್ಕಳಿಗೆ ಕಣ್ಣಿನ ದೃಷ್ಟಿ (Sight eye) ಬಿದ್ದಿದ್ದರೆ ಅವರಿಗೆ ಒಂದು ನಿಂಬೆ ಹಣ್ಣಿನಿಂದ ಕೆಳಗಿನಿಂದ ಮೇಲಕ್ಕೆ, ಮೇಲಿನಿಂದ ಕೆಳಕ್ಕೆ 3 ಬಾರಿ ಮಾಡಿಸಿ ಆ ನಿಂಬೆ (Lemon)ಹಣ್ಣನ್ನ ನಾಲ್ಕು ಭಾಗ ಮಾಡಿ ಕತ್ತರಿಸಿ ಯಾರು ಇಲ್ಲದ ಜಾಗದಲ್ಲಿ ಅಥವಾ ಮೂರು ದಾರಿ ಸೇರುವ ಜಾಗದಲ್ಲಿ ಯಾರಿಗೂ ಕಾಣದಂತೆ ಎಸೆದು ಹಿಂದೆ ತಿರುಗಿ ನೋಡದೆ ಬರಬೇಕು.

ವ್ಯಾಪಾರ ಪ್ರಗತಿಗಾಗಿ ಒಂದು ನಿಂಬೆಹಣ್ಣನ್ನ ತೆಗೆದುಕೊಂಡು ಅದನ್ನ ಅಂಗಡಿಯ ಸುತ್ತ ಸುತ್ತಿಸಿ ನಂತರ ನಿಮ್ಮ ವ್ಯಾಪಾರವೂ ಸರಿಯಾಗಿ ನಡಿಲಿ ಎಂದು ಬೇಡಿಕೊಂಡು ಅದನ್ನ ನಾಲ್ಕು ತುಂಡುಗಳಾಗಿ ಕತ್ತರಿಸಿ ಪ್ರತಿ ನಾಲ್ಕು ದಿಕ್ಕುಗಳಿಗೆ ನಿಂಬೆ ತುಂಡುಗಳನ್ನ ಎಸೆಯಬೇಕು.

ವೃತ್ತಿ ಜೀವನದ ಯಶಸ್ವಿಗಾಗಿ ನಿಂಬೆಹಣ್ಣಿನ ಮೇಲೆ ನಾಲ್ಕು ಲವಂಗಗಳನ್ನ ಇಟ್ಟು 108 ಓಂ ಶ್ರೀ ಹನುಮತೆ ನಮಃ ಎಂದು ಹೇಳಬೇಕು ಮತ್ತು ಕೆಲಸಕ್ಕೆ ಹೋಗುವಾಗ ಈ ನಿಂಬೆ ಹಣ್ಣನ್ನು ತೆಗೆದುಕೊಂಡು ಹೋಗಬೇಕು ಇದರಿಂದ ನೀವು ನಿಸ್ಸಂದೇಹವಾಗಿ ವೃತ್ತಿಪರ ಯಶಸ್ಸನ್ನು ಸಾಧಿಸುತ್ತೀರಿ.

ಉದ್ಯೋಗಿ ಪಡೆಯುವುದಕ್ಕೆ ಎಷ್ಟೇ ಪ್ರಯತ್ನ ಪಟ್ಟರು ಕೆಲಸ ಸಿಗುತ್ತಿಲ್ಲ ಎಂದರೆ ಮಧ್ಯರಾತ್ರಿಯ ಸಮಯದಲ್ಲಿ ಒಂದು ಕಲೆಗಳಿಲ್ಲದ ನಿಂಬೆ ಹಣ್ಣನ್ನು ತೆಗೆದುಕೊಂಡು ಸ್ವಚ್ಛವಾಗಿ ತೊಳೆಯಬೇಕು ನಂತರ ಅದನ್ನ ನಾಲ್ಕು ತುಂಡುಗಳಾಗಿ ಕತ್ತರಿಸಿ ನಾಲ್ಕು ದಾರಿ ಸೇರುವಲ್ಲಿ ನಾಲ್ಕು ಮೂಲೆಗಳಲ್ಲಿ ಎಸೆಯಬೇಕು ಉದ್ಯೋಗ ಸಿಗಲಿ ಎಂದು ಮನಸ್ಸಿನಲ್ಲಿ ಪ್ರಾರ್ಥನೆ ಮಾಡಬೇಕು ಇದರ ಪರಿಣಾಮವಾಗಿ ನಿರುದ್ಯೋಗ ಇದ್ದವರಿಗೆ ಉದ್ಯೋಗ ಪ್ರಾಪ್ತಿಯಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದನ್ನು ಶುಕ್ಲ ಪಕ್ಷದ ಯಾವುದೇ ದಿನ ಮಾಡಬಹುದು ಸತತ ಏಳು ದಿನಗಳ ಕಾಲ ಈ ಪ್ರಯೋಗ ಮಾಡಬೇಕು.

ಸಂತೋಷ ಮತ್ತು ಸಮೃದ್ಧಿಗಾಗಿ ಒಂದು ನಿಂಬೆಹಣ್ಣನ್ನು ತೆಗೆದುಕೊಳ್ಳಿ ಮತ್ತು ಮೂರು ದಾರಿ ಸೇರುವಲ್ಲಿ ಹೋಗಿ ನಿಂಬೆಯಿಂದ ಏಳು ಬಾರಿ ನಿವಾಳಿ ತೆಗೆದು ಆ ನಿಂಬೆ ಹಣ್ಣನ್ನ ಎರಡು ತುಂಡುಗಳಾಗಿ ಕತ್ತರಿಸಿ ಒಂದು ತುಂಡನ್ನು ನಿಮ್ಮ ಹಿಂದೆ ಮತ್ತು ಮತ್ತೊಂದು ತುಂಡನ್ನು ನಿಮ್ಮ ಮುಂದೆ ಎಸೆದು ಹಿಂತಿರುಗಿ ನೋಡದೆ ಬರಬೇಕು. ಹಾಗೆಯೇ ಗುರುವಾರ ದಿನ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಅಲ್ಲಿ 4 ನಿಂಬೆಹಣ್ಣು ಮತ್ತು ಲವಂಗವನ್ನು ಕೊಟ್ಟು ಪೂಜೆ ಮಾಡಿಸಿಕೊಂಡು ಬರಬೇಕು.

ವ್ಯಾಪಾರ ನಷ್ಟದಲ್ಲಿ ಸಾಗುತ್ತಿದ್ದಾರೆ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ವ್ಯಾಪಾರದ ಸ್ಥಳದ ನಾಲ್ಕು ಮೂಲೆಗೂ ಒಂದೊಂದು ಸಲ ಮುಟ್ಟಿಸಿ ನಂತರ ಆ ನಿಂಬೆ ಹಣ್ಣನ್ನ ನಾಲ್ಕು ತುಂಡುಗಳನ್ನಾಗಿ ಮಾಡಿ ನಾಲ್ಕು ದಿಕ್ಕುಗಳಲ್ಲಿ ಇಡಬೇಕು ಇದರಿಂದ ಶನಿ ದೋಷ ದೂರವಾಗುತ್ತದೆ ಈ ಪರಿಹಾರ ಮಾಡಿಕೊಂಡರೆ ಎಲ್ಲಾ ಕೆಟ್ಟ ಶಕ್ತಿಯು ಆ ಸ್ಥಳದಿಂದ ದೂರವಾಗುತ್ತದೆ

ಶುಕ್ರವಾರದ ದಿನ ದುರ್ಗಾದೇವಿಯ ದೇವಸ್ಥಾನ ಅಥವಾ ಯಾವುದಾದರೂ ದೇವಿಯ ದೇವಸ್ಥಾನಕ್ಕೆ ಹೋಗಿ ನಿಂಬೆಹಣ್ಣಿನ ದೀಪವನ್ನು ಹಚ್ಚಬೇಕು ಯಾವುದೇ ಕಾರಣಕ್ಕೂ ಸರಸ್ವತಿ ಹಾಗೂ ಲಕ್ಷ್ಮಿ ದೇವಿಯ ದೇವಾಲಯದಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು. ಈ ದೀಪವನ್ನು ಹಚ್ಚುವಾಗ ಕೆಲವೊಂದು ನಿಯಮವನ್ನು ಅನುಸರಿಸಬೇಕಾಗುತ್ತದೆ ಅದೇನು ಅಂದರೆ ಮನೆಯಲ್ಲಿ ಒಬ್ಬರಿಗಿಂತ ಹೆಚ್ಚು ಜನ ಈ ದೀಪಗಳನ್ನ ಹಚ್ಚಬಾರದು ಅದರಲ್ಲೂ ಮನೆಯ ಹೆಣ್ಣು ಮಕ್ಕಳೇ ದೀಪವನ್ನು ಹಚ್ಚುವುದು ಸೂಕ್ತ ಹಾಗೂ ಮನೆಯಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು.

ರಸ್ತೆಯಲ್ಲಿ ಬಿದ್ದಿರುವ ನಿಂಬೆ ಮೆಣಸಿನ ಕಾಯಿ ಮೇಲೆ ಎಂದಿಗೂ ಕಾಲಿಡಬಾರದು. ಗಾಜಿನ ಲೋಟದಲ್ಲಿ ನೀರ್ ಹಾಕಿ ಅದರಲ್ಲಿ ನಿಂಬೆಹಣ್ಣನ್ನು ಹಾಕಿ ಮನೆಯಲ್ಲಿ ಇಡುವುದನ್ನು ನಾವು ಪ್ರತಿನಿತ್ಯ ಕಾಣುತ್ತಲೇ ಇರುತ್ತೇವೆ ಇದಕ್ಕೆ ಕಾರಣ ನಿಂಬೆಹಣ್ಣು ದೃಷ್ಟಿಯಾಗದಂತೆ ತಡೆಯುತ್ತದೆ. ಕೆಲವೊಮ್ಮೆ ಹೊರಗಿನಿಂದ ಬಂದವರು ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ

ಇದರಿಂದ ಮನೆಯಲ್ಲಿ ಯಾವಾಗಲೂ ಅನಾಹುತ ಸಮಸ್ಯೆಗಳು ಸಂಭವಿಸುತ್ತಿರುತ್ತದೆ ಅದರಿಂದ ಈ ದೃಷ್ಟಿ ದೋಷವನ್ನು ನಿವಾರಿಸಲು ಪ್ರತಿ ಶನಿವಾರ ಒಂದು ನಿಂಬೆಹಣ್ಣನ್ನು ಕತ್ತರಿಸಿ ಅದಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ಅದನ್ನ ಮನೆ ಬಾಗಿಲಿಗೆ ಇಡಬೇಕು. ನಿಂಬೆ ಹಣ್ಣನ್ನ ಈ ರೀತಿಯೆಲ್ಲ ಉಪಯೋಗಿಸಿ ದೃಷ್ಟಿಯನ್ನು ತೆಗೆಯಬಹುದು.

Leave A Reply

Your email address will not be published.