ಪುನೀತ್ ರಾಜಕುಮಾರ್ ಅವರು ಹಠಾತ್ತನೆ ನಿಧನರಾದರು ಅವರ ಸಾವು ನ್ಯಾಯವೇ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತದೆ. ಪುನೀತ್ ಅವರು ಅನೇಕ ಜನರಿಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ್ದಾರೆ. ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ ಪುನೀತ್ ಅವರ ಮನೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಡಾಕ್ಟರ್ ರಾಜಕುಮಾರ್ ಅವರು ಬೇಡರ ಕಣ್ಣಪ್ಪ ಚಿತ್ರದ ನಿರ್ಮಾಪಕರಿಂದ ಸದಾಶಿವ ನಗರದಲ್ಲಿ 11 ಲಕ್ಷ ರೂಪಾಯಿ ಕೊಟ್ಟು ತಮ್ಮ ದೊಡ್ಡ ಕುಟುಂಬಕ್ಕೆ ಸರಿಹೊಂದುವ ಬಂಗಲೆಯನ್ನು ಖರೀದಿಮಾಡಿದ್ದರು. ಆ ಮನೆಯಲ್ಲಿ ಅಣ್ಣಾವ್ರು ಸರಿ ಸುಮಾರು 30 ವರ್ಷಗಳ ಕಾಲ ನೆಲೆಸಿದ್ದರು. ಕುಟುಂಬ ದೊಡ್ಡದಾದಂತೆ ಬಂಗಲೆಯನ್ನು ನವೀಕರಣಗೊಳಿಸಲಾಯಿತು ಅಲ್ಲದೆ ಪುನೀತ್ ರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ದೊಡ್ಡ ಮನೆಯನ್ನು ನಿರ್ಮಿಸಲು ಮುಂದಾದರು. ಡಾಕ್ಟರ್ ರಾಜಕುಮಾರ್ ಅವರು ಇರುವಾಗಲೆ ಮನೆಯನ್ನು ನವೀಕರಣಗೊಳಿಸಬೇಕು ಎಂದುಕೊಂಡಿದ್ದರು ಆದರೆ ಸಮಯ ಕೂಡಲಿಲ್ಲ. ಹಳೆಯ ಮನೆ ಇರುವಲ್ಲಿಯೇ ನಾಲ್ಕು ಅಂತಸ್ತಿನ ಮನೆಯನ್ನು ನಿರ್ಮಿಸಲಾಯಿತು.

ಒಂದು ಅಂತಸ್ತಿನಲ್ಲಿ ಅಪ್ಪು ಕುಟುಂಬ ಇನ್ನೊಂದು ಅಂತಸ್ತಿನಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಕುಟುಂಬ ನೆಲೆಸಿದ್ದರು. ಬಹಳ ವಾಟರ್ ಡಿಸೈನ್ ಬಳಸಿ ವಿಶಾಲವಾದ ಮನೆ ನಿರ್ಮಾಣ ಮಾಡಿದ್ದು ಪುನೀತ್ ರಾಜಕುಮಾರ್ ಅವರ ಮನೆ ನೋಡಲು ಸುಂದರವಾಗಿದೆ. ಮನೆಯು ವಿಶಾಲವಾದ ಹಾಲ್ ಅನ್ನು ಹೊಂದಿದೆ. ಅಶ್ವಿನಿ ಅವರ ಅಭಿರುಚಿಗೆ ತಕ್ಕಂತೆ ಕಿಚನ್ ಹಾಗೂ ಮನೆಯ ಒಂದೊಂದು ರೂಮ್ ಗಳು ಬಹಳ ಚೆನ್ನಾಗಿದೆ ನೀಟಾಗಿದೆ ಎಲ್ಲರಿಗೂ ಇಷ್ಟವಾಗುತ್ತದೆ. ಮನೆಯ ಒಳಾಂಗಣ ಹಸರಿನಿಂದ ಕೂಡಿದೆ. ಹಬ್ಬದ ಸಮಯದಲ್ಲಿ ಕುಟುಂಬದ ಅಕ್ಕ ತಂಗಿ ಅಣ್ಣ ತಮ್ಮ ಎಲ್ಲರೂ ಸೇರುವುದರಿಂದ ವಿಶಾಲವಾದ ಒಳಾಂಗಣ ಕಾಣಬಹುದು.

ಮನೆಯ ಲಿವಿಂಗ್ ಏರಿಯಾ ಬೆಳಕಿನಿಂದ ಕಂಗೊಳಿಸುತ್ತದೆ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ತಮ್ಮದೆ ಆದ ಭವ್ಯವಾದ ಒಂದು ಮನೆಯನ್ನು ನಿರ್ಮಿಸಬೇಕೆಂಬ ಆಸೆ ಹೊಂದಿರುತ್ತಾರೆ. ಅಪ್ಪು ಅವರು ತಾವು ಕಟ್ಟಿದ ಮನೆಯಲ್ಲಿ ಕೆಲವು ವರ್ಷಗಳು ಇದ್ದರು ಅವರ ಮನೆಯಲ್ಲಿ ಸಾಕಷ್ಟು ನೆನಪುಗಳಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!