ಪುನೀತ್ ರಾಜಕುಮಾರ್ ಅವರ ಕನಸು ಆಸೆಗಳನ್ನು ಪೂರ್ಣಗೊಳಿಸಲು ಮುಂದಾದ ಅಶ್ವಿನಿ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಪವರ್ ಸ್ಟಾರ್ ಎಂದೇ ಪ್ರಸಿದ್ಧರಾಗಿರುವ ಯುವರತ್ನ ಪುನೀತ್ ರಾಜಕುಮಾರ್ ಅವರು ಅನೇಕ ಸಿನೆಮಾಗಳಲ್ಲಿ ನಟನೆ ಮಾಡಿದ್ದಾರೆ ಸುಮಾರು ಆರು ತಿಂಗಳ ಮಗು ವಿದ್ದಾಗಿನಿಂದ ಸಿನಿಮಾ ಲೋಕಕ್ಕೆ ಪ್ರವೇಶಮಾಡಿದ್ದಾರೆ ಪುನೀತ್ ಅವರು ತಂದೆಯ ಗುಣಗಳನ್ನೇ ಅಳವಡಿಸಿಕೊಂಡಿದ್ದರು ಡಾ. ರಾಜ್‌ಕುಮಾರ್ ಅವರ ಸಂಸ್ಕಾರದಲ್ಲಿ ಬೆಳೆದಿದ್ದರು ಅವರ ನಡೆ ನುಡಿ ಕೂಡ ರಾಜ್‌ಕುಮಾರ್ ಅವರಂತೆ ವಿನಯಪೂರ್ವಕವಾಗಿತ್ತು.

ಒಬ್ಬ ನಾಯಕನಟ ಅಷ್ಟೇ ಅಲ್ಲ ನಾಯಕತ್ವ ಇರುವ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ ಕಲಾರಂಗಕ್ಕೆ ದೊಡ್ಡ ನಷ್ಟವಾಗಿದೆ.ಸಾವಿನಲ್ಲೂ ಸಾರ್ಥಕತೆ ಮೆರೆದ ಅಪ್ಪು ತಂದೆಯಂತೆ ನೇತ್ರದಾನ ಮಾಡಿದ್ದಾರೆ ನಲವತ್ತಾರು ವರ್ಷಕ್ಕೆ ನಮ್ಮನ್ನು ಅಗಲಿದ್ದಾರೆ ಅವರ ಅಭಿಮಾನಿಗಳನ್ನು ತಬ್ಬಲಿ ಮಾಡಿದ್ದಾರೆ ನಾವು ಈ ಲೇಖನದ ಮೂಲಕ ಪುನೀತ ರಾಜಕುಮಾರ ಅವರ ಕೆಲವು ಆಸೆ ಮತ್ತು ಕನಸುಗಳ ಬಗ್ಗೆ ಹಾಗೂ ಅಶ್ವಿನಿಯವರು ಅವರ ಕನಸು ಆಸೆಗಳನ್ನು ಪೂರ್ಣ ಮಾಡಿದ ಸಂಗತಿಗಳ ಬಗ್ಗೆ ತಿಳಿದುಕೊಳ್ಳೋಣ.

ಪುನೀತ್ ಮತ್ತು ಅಶ್ವಿನಿ ಯವರದ್ದು ಪೇಮವಿವಾಹವಾಗಿದೆ ನಾವು ಇಂದು ಪ್ರೀತಿ ಪ್ರೇಮ ಟಿವಿ ಯಲ್ಲಿ ಮಾತ್ರ ನೋಡುತ್ತಿದ್ದೇವೆ ನಿಜ ಜೀವನದಲ್ಲಿ ಕೂಡ ಪುನೀತ್ ಮತ್ತು ಅಶ್ವಿನಿ ಯವರು ತುಂಬಾ ಅನ್ಯೋನ್ಯವಾಗಿ ಇದ್ದರು ಪುನೀತ ಅವರು ಅಭಿಮಾನಿಗಳಿಗೆ ಊಟ ಹಾಕಿಸಬೇಕು ಎಂಬ ಆಸೆಯನ್ನು ಹೊಂದಿದ್ದರು

ಆ ಆಸೆಯನ್ನು ಅಶ್ವಿನಿಯವರು ಮುಂದೆ ನಿಂತು ಪೂರ್ಣ ಮಾಡಿದರು ಮಕ್ಕಳ ವಿದ್ಯಾಭ್ಯಾಸ ಕ್ಕೇ ಎಂದು ತೊಂದರೆ ಯಾಗಬಾರದು ಎಂಬ ಪುನೀತ ಅವರ ಆಸೆಯನ್ನು ಅಶ್ವಿನಿಯವರು ಪುನೀತ ಅವರ ಪುಣ್ಯತಿಥಿ ಇರುವ ದಿನವೇ ಎರಡನೇ ಮಗಳಿಗೆ ಪರೀಕ್ಷೆ ಇದದಿದ್ದರಿಂದ ಅಶ್ವಿನಿಯವರು ಮಗಳನ್ನು ಶಾಲೆಗೆ ಕಳುಹಿಸಿದ್ದರು ಹಾಗೆಯೇ ಹಿರಿಯ ಮಗಳನ್ನು ಇಲ್ಲೇ ಇರಿಸಿಕೊಳ್ಳದೆ ಪುನೀತ್ ಅವರ ಆಸೆಯಂತೆ ವಿದೇಶಕ್ಕೆ ಎಜುಕೇಷನ್ ಗಾಗಿ ಕಳುಹಿಸಿದ್ದಾರೆ .

ಪುನೀತ್‌ರಿಂದ ಪ್ರೇರಣೆಗೊಂಡ ಅನೇಕ ಅಭಿಮಾನಿಗಳು ನೇತ್ರದಾನ ನೋಂದಣಿ ಮಾಡಿಸುತ್ತಿದ್ದಾರೆ ಅವರ ಪ್ರೀತಿ ಮತ್ತು ಗೌರವಕ್ಕೆ ಅಶ್ವಿನಿ ಅವರು ಪತ್ರದ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ ಹಾಗೆಯೇ ನೋವಿನಲ್ಲೂ ಸಂಯಮ ಕಳೆದುಕೊಳ್ಳದೆ ಯಾವುದೇ ಅಹಿತಕರ ಘಟನೆ ನಡೆಯಂತೆ ನೋಡಿಕೊಂಡು ಅವರಿಗೆ ವಿದಾಯ ಹೇಳಲು ಸಹಕರಿಸಿ ಎಲ್ಲರಿಗೂ ಧನ್ಯವಾದ ಎಂದು ಪತ್ರದಲ್ಲಿ ಮೂಲಕ ತಿಳಿಸಿದ್ದಾರೆ

ಹೃದಯಿ ಅಭಿಮಾನಿ ದೇವರುಗಳು ಸಾರ್ವಜನಿಕರಿಗೆ ತಮ್ಮ ಇಡೀ ಕುಟುಂಬದಿಂದ ಧನ್ಯವಾದಗಳು ಎಂದು ಹೇಳುವ ಮೂಲಕ ಅಶ್ವಿನಿ ಅವರು ಸಜ್ಜನಿಕೆಯನ್ನು ಮೆರೆದಿದ್ದಾರೆ.ಹೀಗೆ ಕೆಲವು ಕನಸುಗಳನ್ನು ಅಶ್ವಿನಿಯವರು ಪೂರ್ಣ ಮಾಡಿದ್ದಾರೆ ಅಥವಾ ಕನಸನ್ನು ನನಸ್ಸಾಗಿಸಿದ್ದಾರೆ. ಪುನೀತ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರು ಪ್ರಾರ್ಥಿಸೋಣ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *