ಪುನೀತ್ ಸಮಾಧಿಬಳಿ ಬಂದು ಅವರ ಬಾಡಿಗಾರ್ಡ್ ನಿಜಕ್ಕೂ ಎಂತಹ ಕೆಲಸ ಮಾಡಿದ್ದಾರೆ ನೋಡಿ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಸಿನಿಮಾಗಳನ್ನು ನೋಡಿ ಅಭಿಮಾನಿಗಳಾದವರು ಸಾಕಷ್ಟು ಜನರು. ಅಭಿಮಾನಿಗಳಿಗೆ ಪುನೀತ್ ರಾಜಕುಮಾರ್ ಅವರು ಇನ್ನಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಹೀಗಿರುವಾಗ ಅವರೊಂದಿಗೆ ಪ್ರತಿದಿನ ಇರುವ ಅವರ ಬಾಡಿಗಾರ್ಡ್ ಅವರಿಗೆ ಎಷ್ಟು ದುಃಖವಾಗುತ್ತಿರಬಹುದು. ಪುನೀತ್ ರಾಜಕುಮಾರ್ ಅವರ ಬಾಡಿಗಾರ್ಡ್ ಆಗಿದ್ದವರು ಪುನೀತ್ ಅವರ ಸಮಾಧಿ ಬಳಿ ಬಂದು ಏನು ಮಾಡಿದರು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಕ್ಟೋಬರ್ 29 ನೇ ತಾರೀಖಿನಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ಅವರು ನೆನಪು ಮಾತ್ರ. ಪುನೀತ್ ರಾಜಕುಮಾರ್ ಅವರು ಸಿನಿಮಾಗಳಲ್ಲಿ ನಾಯಕನಾಗಿ ನಟಿಸುವುದಲ್ಲದೆ ಅನೇಕ ಜನರಿಗೆ ಸಹಾಯ ಮಾಡಿದರು,

ಅವರು ಮಾಡಿರುವ ಸಹಾಯ ಇನ್ನೊಬ್ಬರಿಗೆ ತಿಳಿಯುತ್ತಿರಲಿಲ್ಲ. ಪುನೀತ್ ರಾಜಕುಮಾರ್ ಅವರು ಮರಣಹೊಂದಿ ಇಪ್ಪತ್ತು ದಿನಗಳು ಕಳೆದುಹೋಗಿವೆ ಪುನೀತ್ ಅವರ ಅಪರೂಪದ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಪುನೀತ್ ರಾಜಕುಮಾರ್ ಅವರ ಸಮಾಧಿ ಬಳಿ ಅವರ ಬಾಡಿಗಾರ್ಡ್ ಆಗಿದ್ದವರು ಬಂದು ಪುನೀತ್ ಅವರಿಗೆ ಇಷ್ಟವಾದ ನಾಟಿ ಕೋಳಿ ಸಾರು, ಮುದ್ದೆ, ಬಿರಿಯಾನಿ ತಂದು ಸಮಾಧಿಯ ಮುಂದೆ ಇಟ್ಟು ಬನ್ನಿ ಬಾಸ್ ನಿಮ್ಮನ್ನು ಬಿಟ್ಟು ಇರಲು ಆಗುತ್ತಿಲ್ಲ ಎಂದು ಹೇಳುತ್ತಾ ಬಿಕ್ಕಿಬಿಕ್ಕಿ ಸಮಾಧಿಯ ಮುಂದೆ ಅತ್ತಿದ್ದಾರೆ. ಬಹಳಷ್ಟು ಸಮಯದವರೆಗೆ ಅಪ್ಪು ಸರ್ ಅವರ ಸಮಾಧಿಯನ್ನು ನೋಡುತ್ತಾ ನಿಂತುಬಿಟ್ಟಿದ್ದರು. ನಂತರ ಅಲ್ಲಿಯ ಪೊಲೀಸರು ಅವರನ್ನು ಸಮಾಧಾನಪಡಿಸಿ ಕಳುಹಿಸಿಕೊಟ್ಟಿದ್ದಾರೆ. ಅವರ ದುಃಖ ನೋಡಿ ಅಲ್ಲಿದ್ದವರ ಕಣ್ಣಿನಲ್ಲಿ ನೀರು ಬಂದಿತ್ತು.

ಪುನೀತ್ ಸರ್ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದೆ ಇರಬಹುದು ಆದರೆ ಅವರು ಮಾಡಿರುವ ಸಾಕಷ್ಟು ಒಳ್ಳೆಯ ಕೆಲಸಗಳಿಂದ ಅವರು ಇಂದಿಗೂ ಜೀವಂತ. ನಾವು ಮಾಡಿರುವ ಒಳ್ಳೆಯ ಕೆಲಸ ಇನ್ನೊಬ್ಬರಿಗೆ ಗೊತ್ತಾಗದಂತೆ ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಆ ಮಾತನ್ನು ಪುನೀತ್ ರಾಜಕುಮಾರ್ ಅವರು ಪಾಲಿಸಿಕೊಂಡು ಬಂದಿದ್ದಾರೆ. ಅವರು ಬದುಕಿರುವಾಗ ಅವರು ಮಾಡಿರುವ ಸಹಾಯದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಇಂತಹ ಮಹಾನ್ ಪುರುಷನನ್ನು ನಾವು ಇಷ್ಟು ಬೇಗ ಕಳೆದುಕೊಂಡಿರುವುದು ವಿಷಾದನೀಯವಾಗಿದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *