Ultimate magazine theme for WordPress.

ಪುನೀತ್ ಅವರ ಕೊನೆ ವೀಡಿಯೊ ಹಂಚಿಕೊಂಡ ರಾಘಣ್ಣ

0 1

ಪುನೀತ್ ರಾಜಕುಮಾರ್ ಅವರು ನಮ್ಮ ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ. ಅವರ ಸಾವು ನಮ್ಮೆಲ್ಲರಿಗೂ ದುಃಖ ತಂದಿದೆ. ಅವರ ಕೊನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ರಾಘಣ್ಣ ಹಂಚಿಕೊಂಡಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಸಿನಿಮಾಗಳನ್ನು ನೋಡಿ ಅಭಿಮಾನಿಗಳಾದವರು ಸಾಕಷ್ಟು ಜನರು. ಅಭಿಮಾನಿಗಳಿಗೆ ಪುನೀತ್ ರಾಜಕುಮಾರ್ ಅವರು ಇನ್ನಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಹೀಗಿರುವಾಗ ಅವರೊಂದಿಗೆ ಪ್ರತಿದಿನ ಇರುವ ಅವರ ಕುಟುಂಬದವರಿಗೆ ಎಷ್ಟು ದುಃಖವಾಗುತ್ತಿರಬಹುದು. ಪುನೀತ್ ರಾಜಕುಮಾರ್ ಅವರ ದೊಡ್ಡಣ್ಣನಾದ ರಾಘಣ್ಣ ಅವರು ಪುನೀತ್ ಅವರ ಕೊನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಕ್ಟೋಬರ್ 29 ನೇ ತಾರೀಖಿನಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ಅವರು ನೆನಪು ಮಾತ್ರ. ಪುನೀತ್ ರಾಜಕುಮಾರ್ ಅವರು ಸಿನಿಮಾಗಳಲ್ಲಿ ನಾಯಕನಾಗಿ ನಟಿಸುವುದಲ್ಲದೆ ಅನೇಕ ಜನರಿಗೆ ಸಹಾಯ ಮಾಡಿದರು, ಅವರು ಮಾಡಿರುವ ಸಹಾಯ ಇನ್ನೊಬ್ಬರಿಗೆ ತಿಳಿಯುತ್ತಿರಲಿಲ್ಲ. ಪುನೀತ್ ರಾಜಕುಮಾರ್ ಅವರು ಮರಣಹೊಂದಿ ಈಗಾಗಲೆ ತಿಂಗಳೆ ಕಳೆದುಹೋಗಿದೆ ಪುನೀತ್ ಅವರ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪುನೀತ್ ಸರ್ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದೆ ಇರಬಹುದು ಆದರೆ ಅವರು ಮಾಡಿರುವ ಸಾಕಷ್ಟು ಒಳ್ಳೆಯ ಕೆಲಸಗಳಿಂದ ಅವರು ಇಂದಿಗೂ ಜೀವಂತ. ನಾವು ಮಾಡಿರುವ ಒಳ್ಳೆಯ ಕೆಲಸ ಇನ್ನೊಬ್ಬರಿಗೆ ಗೊತ್ತಾಗದಂತೆ ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಆ ಮಾತನ್ನು ಪುನೀತ್ ರಾಜಕುಮಾರ್ ಅವರು ಪಾಲಿಸಿಕೊಂಡು ಬಂದಿದ್ದಾರೆ.

ಅವರು ಬದುಕಿರುವಾಗ ಅವರು ಮಾಡಿರುವ ಸಹಾಯದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಪುನೀತ್ ಅವರಿಗೆ ಮಕ್ಕಳೆಂದರೆ ಬಹಳ ಇಷ್ಟ. ಅವರು ಮಕ್ಕಳ ಹುಟ್ಟುಹಬ್ಬವನ್ನು ಸಂತೋಷದಿಂದ ಆಚರಿಸುತ್ತಾರೆ. ಮನೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ ವಿಡಿಯೋವನ್ನು ರಾಘಣ್ಣ ಹಂಚಿಕೊಂಡಿದ್ದಾರೆ ಅದು ಪುನೀತ್ ಅವರ ಕೊನೆಯ ವಿಡಿಯೋ ಆಗಿದೆ. ಇಂತಹ ಮಹಾನ್ ಪುರುಷನನ್ನು ನಾವು ಇಷ್ಟು ಬೇಗ ಕಳೆದುಕೊಂಡಿರುವುದು ವಿಷಾದನೀಯವಾಗಿದೆ.

Leave A Reply

Your email address will not be published.